X
    Categories: ಅಂಕಣ

500 ವರ್ಷಗಳ ಹಿಂದೆಯೇ ವಿಜಯನಗರ ಸಾಮ್ರಾಜ್ಯದಲ್ಲಿತ್ತು ಸ್ನಾನದ ಟಬ್, ಶೌಚಾಲಯ, ನೀರಿನ ಪೈಪ್ ಲೈನ್!! ದಾಖಲೆ ಸಮೇತ ಪತ್ತೆಯಾಯಿತು ರಾಜರ ಗತವೈಭವ!!

ಹೌದು… ಚೈನಾ ದೇಶದ ಬೌದ್ಧ ಬಿಕ್ಷು ತನ್ನ ವಿಜಯನಗರದ ಭೇಟಿಯ ಬಗ್ಗೆ, ” ವಿಜಯನಗರದ ಜನರು ಬಹಳ ಸಂತೋಷದಿಂದಿರುವರು, ಎಲ್ಲಿ ನೋಡಿದರೂ ಭವ್ಯವಾದ ಅರಮನೆಗಳೇ, ರಾಜ ಬೀದಿಗಳಲ್ಲಿ ಅಸಂಖ್ಯಾತ ಮೊತ್ತದ ಚಿನ್ನ, ವಜ್ರ, ವೈಡೂರ್ಯಗಳನ್ನು ರಾಶಿ ಹಾಕಿಕೊಂಡು ವರ್ತಕರು ವ್ಯಾಪಾರ ಮಾಡುತ್ತಾರೆ. ನಿಜವಾಗಿಯೂ ಇದೊಂದು ಸ್ವರ್ಗ ಭೂಮಿ” ಎಂದು ಬರೆದುಕೊಂಡಿದ್ದು, ಇತಿಹಾಸದ ಪುಸ್ತಕದಲ್ಲಿ ಉಲ್ಲೇಖವಾಗಿದೆ ಎಂದರೆ ವಿಜಯನಗರ ಸಾಮ್ರಾಜ್ಯವು ರೋಮ್ ಗಿಂತಲೂ ಶ್ರೀಮಂತ ಭರಿತವಾಗಿತ್ತು ಎನ್ನುವುದು ಇದರಿಂದಲೇ ತಿಳಿದು ಬರುತ್ತೆ!!

ಕೃಷ್ಣಾನದಿಯಿಂದ ಕನ್ಯಾಕುಮಾರಿಯವರೆಗೂ ಹಬ್ಬಿದ್ದ ವಿಜಯನಗರ ಸಾಮ್ರಾಜ್ಯವು ಸುಮಾರು 500 ವರ್ಷಗಳ ಹಿಂದೆ ಮುತ್ತು ರತ್ನ, ವಜ್ರ, ವಜ್ರ ವೈಢೂರ್ಯಗಳನ್ನು ರಸ್ತೆ ಬದಿಯಲ್ಲಿ ಹಾಕಿ ಮಾರುತ್ತಿದ್ದ ಈ ಸಾಮ್ರಾಜ್ಯ ಕರ್ನಾಟಕದ ನಾಗರಿಕತೆಯನ್ನು, ಶ್ರೀಮಂತಿಕೆಯನ್ನು, ಕಲಾ ವೈಭವವನ್ನು ಸಾರಿ ಹೇಳುತ್ತಿದೆ. ವಿದೇಶೀ ಯಾತ್ರಿಕರು ಮುಕ್ತ ಕಂಠದಿಂದ ವಿಜಯನಗರ ಸಾಮ್ರಾಜ್ಯವನ್ನು ಪ್ರಶಂಸೆ ಮಾಡಿದ್ದಾರೆ. 500 ವರ್ಷಗಳ ಹಿಂದೆ ಮುಸಲ್ಮಾನ ದೊರೆಗಳ ದಾಳಿಗೆ ಗುರಿಯಾದ ವೈಭವೋಪೇತ ಹಂಪೆ ಹಾಳು ಹಂಪೆಯೆಂದೇ ಹೆಸರುವಾಸಿಯಾಗಿದ್ದು ಮಾತ್ರ ನಿಜಕ್ಕೂ ಕೂಡ ಬೇಸರದ ವಿಚಾರ!!

ಆದರೂ ಹಾಳು ಹಂಪೆಯಲ್ಲಿ ಪಾಳು ಬಿದ್ದ ದೇವಾಲಯಗಳು, ಒಡೆದು ಹೋದ ವಿಗ್ರಹಗಳು ಮುಸಲ್ಮಾನ ದೊರೆಗಳ ದಾಳಿಗೆ ಮೂಕಸಾಕ್ಷಿಯಾಗಿ ನಿಂತಿವೆ. ಆದರೆ ಸಾಮ್ರಾಜ್ಯದ ಕುರುಹುಗಳು ಇಂದಿಗೂ ಸಾಕಷ್ಟು ಅಚ್ಚರಿ ಮೂಡಿಸುತ್ತಿವೆಯಲ್ಲದೇ ಉತ್ಖನನ ನಡೆದಂತೆಲ್ಲ ನಂಬಲಾಸಾಧ್ಯವಾದ ವಿಷಯಗಳು ಬೆಳಕಿಗೆ ಬರುತ್ತಿವೆ. ಇದೀಗ ಆಧುನಿಕ ಜಗತ್ತಿನಲ್ಲಿ ಬಳಸುವ ಟಬ್ ಮಾದರಿಯಲ್ಲಿ ಆಗಿನ ಕಾಲದಲ್ಲಿ ರಾಣಿಯರು ಸ್ನಾನ ಮಾಡುತ್ತಿದ್ದಂತೆ, ಶೌಚಾಲಯ, ಕುಡಿಯುವ ನೀರಿನ ಪೈಪ್ ಲೈನ್ ವ್ಯವಸ್ಥೆ ಇದ್ದ ವಿಷಯ ಇದೀಗ ಬೆಳಕಿಗೆ ಬಂದಿದೆ.

ಈ ನಾಡು ಶ್ರೀಮಂತಿಕೆಯಿಂದ, ಕಲಾ ವೈಭವದಿಂದ ಪ್ರಖ್ಯಾತಿ ಗಳಿಸಿದ್ದು ಕೃಷ್ಣದೇವರಾಯರ ಆಳ್ವಿಕೆಯಲ್ಲಿ!! ಕೃಷ್ಣದೇವರಾಯ ಈ ಸಾಮ್ರಾಜ್ಯವನ್ನು ಎಲ್ಲಾ ದಿಕ್ಕುಗಳಿಗೆ ವಿಸ್ತರಿಸಿ, ಸಂಪದಿಭಿವೃದ್ಧಿಗೊಳಿಸಿ ವಿಜಯನಗರ ಸಾಮ್ರಾಜ್ಯದ ಹೆಸರು ಅಜರಾಮರವಾಗಿ ಉಳಿಯುವಂತೆ ಮಾಡಿದ ಈ ನಾಡು ಇಂದು ಹಾಳು ಹಂಪೇ ಎಂದು ಹೆಸರು ಪಡೆದಿದೆ ಎಂದರೆ ಎಂತಹ ವಿಪರ್ಯಾಸ ನೋಡಿ!! ಈ ಸಾಮ್ರಾಜ್ಯದ ಕುರುಹುಗಳು ಇಂದಿಗೂ ಸಾಕಷ್ಟು ಅಚ್ಚರಿ ಮೂಡಿಸುತ್ತಿದ್ದು, ಉತ್ಖನನ ನಡೆದಂತೆಲ್ಲ ನಂಬಲಾಸಾಧ್ಯವಾದ ವಿಷಯಗಳು ಬೆಳಕಿಗೆ ಬರುತ್ತಿವೆ ಎಂದರೆ ವಿಜಯನಗರ ಸಾಮ್ರಾಜ್ಯ ಹೇಗಿತ್ತು ಎನ್ನುವುದನ್ನು ಇದು ಸಾರಿ ಸಾರಿ ಹೇಳುತ್ತಿದೆ.

ಹಾಗಾಗಿ ಇದೀಗ ಆಧುನಿಕ ಜಗತ್ತಿನಲ್ಲಿ ಬಳಸುವ ಟಬ್ ಮಾದರಿಯಲ್ಲಿ ಆಗಿನ ಕಾಲದಲ್ಲಿ ರಾಣಿಯರು ಸ್ನಾನ ಮಾಡುತ್ತಿದ್ದ ಬಾತ್ ಟಬ್, ಶೌಚಾಲಯ, ಕುಡಿಯುವ ನೀರಿನ ಪೈಪ್ ಲೈನ್ ವ್ಯವಸ್ಥೆ ಬೆಳಕಿಗೆ ಬಂದಿದೆ!! ಇದು ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ರಾಜರ ವಸತಿಗೃಹಗಳ ಸಂಕಿರಣವಾಗಿದೆ!! ಅಷ್ಟೇ ಅಲ್ಲದೇ ಐನೂರು ವರ್ಷಗಳ ಹಿಂದೆಯೇ ಜನರು, ಅದ್ರಲ್ಲೂ ವಿಶೇಷವಾಗಿ ರಾಜರು ಹೇಗೆ ತಮ್ಮ ಬದುಕನ್ನು ರೂಪಿಸಿಕೊಂಡಿದ್ದರು ಎನ್ನುವುದಕ್ಕೆ ಇದೇ ತಾಜ ನಿದರ್ಶನ.

ಕೇಂದ್ರ ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆಯು ಕಳೆದ ಹಲವು ವರುಷಗಳಿಂದ ಉತ್ಖನನ ಕಾರ್ಯ ಕೈಗೊಂಡಿರುವ ಇಚಾರ ತಿಳಿದೆ ಇದೆ!! ಆದರೆ ಇತ್ತೀಚೆಗೆ ಆರಂಭಿಸಿದ ಉತ್ಖನನದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹೊಂದಿದ್ದ ಅಂದಿನ ಜನರ ತಂತ್ರಜ್ಞಾನ ನಿಜಕ್ಕೂ ಬೆರಗು ಮೂಡಿಸುತ್ತಿದೆ. ಮಣ್ಣಿನಲ್ಲಿ ಪೈಪುಗಳನ್ನು ತಯಾರು ಮಾಡಿ ಕಾಲುವೆ ಮೂಲಕ ಜನವಸತಿ ಪ್ರದೇಶದಲ್ಲಿ ಪೈಪ್ ಲೈನ್ ವ್ಯವಸ್ಥೆ ಮಾಡಿಕೊಂಡಿದ್ದರು. ಇದೀಗ ಆ ಕಾಲುವೆ ಎಲ್ಲಿಂದ ಆರಂಭವಾಗಿ, ಎಲ್ಲೆಲ್ಲಿಗೆ ಸಂಪರ್ಕ ಕಲ್ಪಿಸಿತ್ತು ಎನ್ನುವುದನ್ನು ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಸಂಶೋಧನೆ ನಡೆಸುತ್ತಿದ್ದಾರೆ.

ಕಮಲಾಪುರ ಕೆರೆಯನ್ನು ನಿರ್ಮಿಸಿರುವ ವಿಜಯನಗರ ಕಾಲದ ಆಳರಸರು ಇದೇ ಕೆರೆಯಿಂದ ಕಾಲುವೆ ಮೂಲಕ ಜನವಸತಿ ತಾಣಗಳಿಗೆ ನೀರು ಪೂರೈಸುತ್ತಿದ್ದರು. ಅಂದೇ ಈ ತಂತ್ರಜ್ಞಾನ ಬಳಕೆಯಲ್ಲಿದ್ದದ್ದು ಗಮನಾರ್ಹ. ಇದಷ್ಟೇ ಅಲ್ಲ, ಜನವಸತಿ ಪ್ರದೇಶದಲ್ಲಿ ತೆರೆದ ಚರಂಡಿ ಮತ್ತು ಒಳಚರಂಡಿ ವ್ಯವಸ್ಥೆಯನ್ನೂ ಮಾಡಿದ್ದು ಕಂಡು ಬರುತ್ತದೆ. ವಿಜಯ ನಗರ ಆಳರಸ ಶ್ರೀಕೃಷ್ಣದೇವರಾಯನ ಅರಮನೆಯ ಎಡಭಾಗದಲ್ಲಿ ಚಿನ್ನಾದೇವಿ, ಬಲಭಾಗದಲ್ಲಿ ತಿರುಮಲಾಂಬಾ ದೇವಿ ಅರಮನೆಗಳಿವೆ.

ಈ ಅರಮನೆಯಲ್ಲಿ ರಾಣಿಯರಿಗೆ ಪ್ರತ್ಯೇಕವಾಗಿ ಸ್ನಾನ ಮಾಡಲು ಶಿಲ್ಪದಿಂದ ತಯಾರಿಸಿದ ವಿಶೇಷ ಟಬ್ ವ್ಯವಸ್ಥೆ ಕೂಡ ಇರೋದು ಅಚ್ಚರಿ ಮೂಡಿಸಿದೆ. ವೀರ ಹರಿಹರರಾಯನ ಅರಮನೆಯ ಬಳಿ ಶೌಚಾಲಯ ಮತ್ತು ಸ್ನಾನಗೃಹವೂ ಇದೆ. ಅಂದಿನ ದಿನಗಳಲ್ಲೇ ಸಮೃದ್ಧ ಜೀವನ ನಡೆಸಿದ್ದರು ಎನ್ನುವುದಕ್ಕೆ ಇವು ಪುಷ್ಠಿ ನೀಡುತ್ತಿವೆ. ಜಯ ನಗರ ಆಳರಸರ ಕಾಲದಲ್ಲಿ ಮಣ್ಣಿನ ಪೈಪ್ ಲೈನ್, ತೆರೆದ ಚರಂಡಿ ಮತ್ತು ಒಳ ಚರಂಡಿ, ಶೌಚಾಲಯ ಮತ್ತು ಟಬ್ ವ್ಯವಸ್ಥೆ ಇತ್ತು ಎನ್ನುವುದು ಬೆಳಕಿಗೆ ಬಂದಿದೆ!! ಇದಕ್ಕೆ ಪೂರಕವಾಗಿ ಇನ್ನೂ ಸಂಶೋಧನೆಗಳು ನಡೆಯಬೇಕಿದೆ.

ಆದರೆ ಈಗಾಗಲೂ ಕೂಡ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ವೈಭವದಿಂದ ಮೆರೆದ ಹಂಪೆಯಲ್ಲಿನ ಪ್ರತಿಯೊಂದು ಕಲ್ಲು, ಕಲ್ಲುಗಳೂ ಕೂಡ ಹಿಂದಿನ ಗತವೈಭವವನ್ನು ಸಾರಿ ಹೇಳುತ್ತಿವೆ. ಯುನೆಸ್ಕೊ ಹಂಪೆಯನ್ನು ವಿಶ್ವಪಾರಂಪರೆಯ ಪಟ್ಟಿಗೆ ಸೇರಿಸಿ ಅದರ ಗೌರವವನ್ನು ಮತ್ತಷ್ಟು ಹೆಚ್ಚಿಸಿದ್ದು, ಹಂಪೆ ಇಂದು ವಿಶ್ವವಿಖ್ಯಾತ ಪ್ರವಾಸಿ ತಾಣ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಅಂತೂ… ಉತ್ಖನನ ಕಾರ್ಯ ಹೀಗೆಯೇ ಮುಂದುವರಿದರೆ ಇನ್ನೂ ಅದೆಷ್ಟೋ ಅಚ್ಚರಿಯ ವಿಷಯಗಳು ಹೊರಜಗತ್ತಿಗೆ ತಿಳಿಯಲಿದೆ ಎನ್ನುವುದನ್ನು ಕಾದುನೋಡಬೇಕಾಗಿದೆ!!!

ಕೃಪೆ: ನ್ಯೂಸ್ 18

– ಅಲೋಖಾ

Editor Postcard Kannada:
Related Post