X

80 ಜನರ ಸಾವಿನ ಬಗ್ಗೆ ಸಿದ್ಧರಾಮಯ್ಯನವರು ಮಾಡಿದ ಲೇವಡಿ ನೋಡಿದರೆ ದಂಗಾಗುವಿರಿ! ಕರ್ನಾಟಕದ ಮುಖ್ಯಮಂತ್ರಿಗೆ ಇಷ್ಟೊಂದು ಅಸಡ್ಡೆಯಾ?!

ಇಂತಹ ಪ್ರಶ್ನೆಯನ್ನು ಕೇಳಲೇಬೇಕಿದೆ! ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ, ರಾಜ್ಯದಾಳತಿದ ಗದ್ದುಗೆಯೇರಿರುವ ಸಿದ್ಧರಾಮಯ್ಯನವರು ಮಾತನಾಡಲು ಬರುತ್ತದೆಯೆಂದು ಮಾತನಾಡುವರೋ ಅಥವಾ ಅವಿವೇಕತನದ ಪರಮಾವಧಿಯೋ/?!

ಮೊನ್ನೆಯಿಂದ ಪ್ರಾರಂಭವಾಗಿರುವ ಕೆಪಿಎಮ್ ಇ ಕಾಯ್ದೆಯನ್ನು ವಿರೋಧಿಸಿ ಖಾಸಗೀ ವೈದ್ಯರೆಲ್ಲ ಮುಷ್ಕರ ಹೂಡಿದ್ದ ಪರಿಣಾಮ ರಾಜ್ಯದಲ್ಲಿ 80 ಕ್ಕೂ ಹೆಚ್ಚು ಸಾವಾಗಿದೆ! ಅದೂ ಕೇವಲ ಮೂರೇ ದಿನದಲ್ಲಿ! ವೈದ್ಯರು ವೃತ್ತಿಧರ್ಮವನ್ನು ಮರೆತರೇ ಎಂದು ಪ್ರಶ್ನಿಸುವ ಸಿದ್ಧರಾಮಯ್ಯನವರ ಸರಕಾರಕ್ಕೆ, ಧರ್ಮವನ್ನು ಮರೆತು ನಡೆಯುವಷ್ಟು ಯಾರು ವೈದ್ಯರಿಗೆ ಈ ಹಿಂದೆ ಬಲಿ ಬೀಳಿಸಿದ್ದೆನ್ನುವುದು ಅರಿವಿರಬೇಕಿತ್ತು!

ಸಂಸತ್ತಿನಲ್ಲಿ ಬಿಜೆಪಿ ಕೇಳಿದ್ದು ಒಂದೇ ಪ್ರಶ್ನೆ!!!

“ಇಷ್ಟು ಜನರ ಸಾವಿಗೆ ಪರಿಹಾರವೇನು ಮುಖ್ಯಮಂತ್ರಿಗಳೇ?! ಅಗರ ಸಾವಿಗೆ ಬೆಲೆಯೇ ಇಲ್ಲವೇ?!” ಎಂಬುದೊಂದೇ ಒಂದು ಪ್ರಶ್ನೆಗೆ ಕಣ್ಣಿಗೆ ಗ್ಲಿಸರಿನ್ ಹಾಕಿಯಾದರೂ ಅತ್ತುಬಿಡಬೇಕೆಂದುಕೊಂಡಿದ್ದ ಮುಖ್ಯಮಂತ್ರಿ ಅತ್ತು ಸಾಧಿಸಿದ್ದು, ಅವರ ಒಂದೇ ಉಡಾಫೆಯ ಮಾತಿಗೆ ಮಗುಚಿ ಮಕಾಡೆ ಮಲಗಿತು ನೋಡಿ!

“ಮೋದಿಯ ಡಿಮಾನಿಟೈಸೇಷನ್ ನಲ್ಲಿ ಜನ ಸತ್ತಿದ್ದಕ್ಕೆ ಸಾಕ್ಷಿಯಿದೆಯೇ?!” ಎಂಬ ತಿರುಗುಪ್ರಶ್ನೆಯ ಅರ್ಥವೇನು ?!

“ದೂರು ಕೊಟ್ಟರೆ ಮಾತ್ರ ಪರಿಹಾರ! ಈಗಲೂ ಜನ ಸತ್ತಿದ್ದಕ್ಕೆ ಸಾಕ್ಷಿಯಿದೆಯಾ?!” ಎಂಬ ಮಾತಿನ ಹಿಂದಿರುವ ವ್ಯಂಗ್ಯ ಜನತೆಗೆ ಅರ್ಥವಾಗದೇ ಇರುವುದಾ?!

ಅಯ್ಯೋ! ಬಿಡಿ! ಒಬ್ಬ ಜವಾಬ್ಧಾರಿಯುತ ಮುಖ್ಯಮಂತ್ರಿ ಎಂಬ ಪಟ್ಟವನ್ನು ಕಳೆದ ಐದು ವರುಷಗಳಲ್ಲಿ ಒಮ್ಮೆಯಾದರೂ ನಿಭಾಯಿಸಿದ್ದಾರೆಯೇ?! ಈಗಲೂ ಕೂಡ, ಜನರ ಸಾವಿಗೆ ಸಾಕ್ಷಿಯನ್ನು ಕೇಳುತ್ತಿರುವ ಸಿದ್ಧರಾಮಯ್ಯನವರಿಗೆ ಬಹುಷಃ ಮೂರು ದಿನದಿಂದ ಮಾಧ್ಯಮಗಳು ವರದಿ ಮಾಡುತ್ತಿರುವುದು ಗೋಚರಿಸಲಿಲ್ಲವೋ ಅಥವಾ ಜಾಣ ಕುರುಡೋ?!

ದೂರು ಕೊಟ್ಟರೆ ಮಾತ್ರ ಪರಿಹಾರವೆನ್ನುವ ಸಿದ್ಶರಾಮಯ್ಯನವರು ತಮ್ಮದೇ ಸಚಿವರ ಮೇಲೆ ಹತ್ಯೆಯಾರೋಪ ಮಾಡಿದಾಗ ಯಾವ ಕ್ರಮವನ್ನು ತೆಗೆದುಕೊಂಡಿದ್ದಾರೆ ಸ್ವಾಮಿ?! ಬದಲಿಗೆ, ದೂರು ಕೊಟ್ಟವರಿಗೇ ಬೆದರಿಕೆಯನ್ನೊಡ್ಡಿದ ಈ ಸರಕಾರದ ಘನವೆತ್ತ ಮುಖ್ಯಮಂತ್ರಿಗಳಿಗೆ ಇದ್ಯಾವುದೂ
ಅರಿವಾಗಲಿಲ್ಲವೇ?!

ಅನ್ಯಾಯದ ವಿರುದ್ಧ ದೂರು ಕೊಟ್ಟಾಗಲೆಲ್ಲ ಒಂದೋ ವರ್ಗಾವೇ ಭಾಗ್ಯ, ಆತ್ಮಹತ್ಯೆ ಭಾಗ್ಯ, ಬೆದರಿಕೆ ಭಾಗ್ಯವೆಂದು ಅದೆಷ್ಟು ಪರಿಹಾರ ಕೊಟ್ಟಿದ್ದಾರೆಂದರೆ ನೀವು ಅಚ್ಚರಿ ಪಡಬೇಕಾದುದು ಅನಿವಾರ್ಯ!! ಛೇ! ಎಂತಹ ಪರಿಹಾರ!! ಎಷ್ಟೊಂದು ಸಹಾನುಭೂತಿ!!

ಈಗಲೂ ಸಹ, ಜನರು ಪರಿಹಾರದ ನೆಪವೊಡ್ಡಿ ದುಡ್ಡಿಗೆ ಕೈ ಚಾಚಿದ್ದೆಂದುಕೊಂಡಿರುವ ಕಾಂಗ್ರೆಸ್ ಸರಕಾರಕ್ಕೆ ಬಹುಷಃ ಹೆತ್ತ ಕರುಳಿನ ನೋವಾಗಲಿ, ಕಳೆದುಕೊಂಡವರ ಆರ್ತನಾದವಾಗಲಿ ಕೇಳಿಸಲಿಕ್ಕಿಲ್ಲ ಬಿಡಿ! ಪ್ರಜೆಗಳು ಕೇಳುತ್ತಿರುವುದು ನ್ಯಾಯವನ್ನು! ವೈದ್ಯಕೀಯ ಸೇವೆಯನ್ನು ಅಷ್ಟೇ! ಇದನ್ನೂ ಅರ್ಥೈಸಲಾಗದ ಮತಿಗೆಟ್ಟ ರಾಜ್ಯ ಕಾಂಗ್ರೆಸ್ ಪ್ರಜೆಗಳ ಸಾವನ್ನು ಲೇವಡಿ ಮಾಡುವಷ್ಟು ಕೆಳ ಮಟ್ಟಕ್ಕಿಳಿದಿದೆಯೇ?!

ಛೇ! ಛೇ!

– ಪೃಥು ಅಗ್ನಿಹೋತ್ರಿ

Editor Postcard Kannada:
Related Post