X

ಸೂರ್ಯನ ಮೊದಲ ಚಿತ್ರ ಸೆರೆಹಿಡಿದ ಆದಿತ್ಯ ಎಲ್-1

ನಮ್ಮ ದೇಶದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಒಂದಿಲ್ಲೊಂದು ಸಾಧನೆಗಳನ್ನು ಮೆರೆಯುವ ಮೂಲಕವೇ ಪ್ರಪಂಚದ ಅಚ್ಚರಿಗೆ ಸಾಕ್ಷಿಯಾಗಿದೆ. ಮಾತ್ರವಲ್ಲದೆ ಭಾರತದ ಕೀರ್ತಿ ಪತಾಕೆಯನ್ನು ವಿಶ್ವದೆಲ್ಲೆಡೆ ಹಬ್ಬಿಸುವುದಕ್ಕೆ, ಚಂದ್ರನಂಗಳದಲ್ಲಿ ಮಿನುಗುವ ಹಾಗೆ ಮಾಡುವುದಕ್ಕೂ ಕಾರಣವಾಗಿದೆ ಎಂದರೆ ತಪ್ಪಲ್ಲ.

ಇಸ್ರೋ ತನ್ನ ಚಂದ್ರಯಾನ -3 ರ ಯಶಸ್ಸಿನ ಬಳಿಕ ಸೂರ್ಯನ ಅಧ್ಯಯನಕ್ಕೆ ಆದಿತ್ಯ ಎಲ್-1 ನೌಕೆಯನ್ನು ರವಿಯತ್ತ ಕಳಿಹಿಸಿತ್ತು. ಆ ಮೂಲಕ ಮತ್ತೊಂದು ಸಾಹಸಕ್ಕೆ ಮುಂದಾಗಿತ್ತು. ಇದೀಗ ಆದಿತ್ಯ ಎಲ್-1 ನೌಕೆಯು ಸೂರ್ಯನ ಮೊದಲ ಪೂರ್ಣ ಚಿತ್ರವನ್ನು ಸೆರೆ ಹಿಡಿಯುವಲ್ಲಿ ಸಫಲವಾಗಿರುವುದಾಗಿ ಸಂಸ್ಥೆ ತಿಳಿಸಿದೆ.

ಈ ಬಗ್ಗೆ ಇಸ್ರೋ ಮಾಹಿತಿ ನೀಡಿದ್ದು, ಈ ಚಿತ್ರಗಳು ಹತ್ತಿರದ ನೇರಳಾತೀತ ತರಂಗಾಂತರಗಳಲ್ಲಿ ಸೂರ್ಯನ ದ್ಯುತಿ ಗೋಳ ಮತ್ತು ವರ್ಣಗೋಳದ ಸಂಪೂರ್ಣ ವಿವರಗಳಿಗೆ ಒಳನೋಟಗಳನ್ನು ಒದಗಿಸುವುದಾಗಿ ತಿಳಿಸಿದೆ.

ಈ ನೌಕೆಯಲ್ಲಿ ಅಳವಡಿಸಲಾಗಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ ಅಥವಾ SUIT ಉಪಕರಣವು ಇನ್ನೂರರಿಂದ ನಾನೂರು ಮೀಟರ್ ತರಂಗಾಂತರ ವ್ಯಾಪ್ತಿಯಲ್ಲಿ ಸೂರ್ಯನ ಚಿತ್ರಗಳನ್ನು ಸೆರೆ ಹಿಡಿದಿದೆ. ಇದನ್ನು ಬಗೆ ಬಗೆಯ ವೈಜ್ಞಾನಿಕ ಶೋಧಕಗಳನ್ನು ಬಳಕೆ ಮಾಡಿಕೊಂಡು ನೌಕೆ ಸೆರೆ ಹಿಡಿದಿರುವುದಾಗಿ ಇಸ್ರೋ ಸಂಸ್ಥೆ ಹೇಳಿದೆ.

ಕಳೆದ ನವೆಂಬರ್ ತಿಂಗಳ 20, 2023 ರಂದು, SUIT ಪೇ ಲೋಡ್ ಅನ್ನು ಚಾಲನೆ ಮಾಡಲಾಯಿತು. ಇದರ ಯಶಸ್ವಿ ನಿಯೋಜನೆ ನಂತರ, ಈ ದೂರದರ್ಶಕವು ಡಿಸೆಂಬರ್ 6 ರಂದು ತನ್ನ ಮೊದಲ ಬೆಳಕಿನ ವಿಜ್ಞಾನ ಚಿತ್ರಗಳನ್ನು ಸೆರೆ ಹಿಡಿಯಿತು ಎಂದು ಇಸ್ರೋ ಹೇಳಿದೆ. SUIT ಅವಲೋಕನಗಳು ವಿಜ್ಞಾನಿಗಳಿಗೆ ಕಾಂತೀಯ ಸೌರ ವಾತಾವರಣದ ಡೈನಾಮಿಕ್ ಜೋಡಣೆಯನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತದೆ.

ಭೂಮಿಯ ಹವಾಮಾನದ ಮೇಲೆ ಸೌರ ವಿಕಿರಣದ ಪರಿಣಾಮಗಳ ಮೇಲೆ ಬಿಗಿಯಾದ ನಿರ್ಬಂಧಗಳನ್ನು ಇಡುವಲ್ಲಿಯೂ ಇದು ಸಹಾಯ ಮಾಡಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

https://x.com/isro/status/1733104993668915365?s=20
Post Card Balaga:
Related Post