X

ಬಿಗ್ ಬ್ರೇಕಿಂಗ್: ಮತ್ತೆ ಎಡವಿದ ರಾಹುಲ್ ಗಾಂಧಿ!! ಭ್ರಷ್ಟಾಚಾರ ಎನ್ನುವ ಬದಲು ರಾಗಾ ಹೇಳಿದ್ದೇನು ಗೊತ್ತಾ?! ಮರುಕಳಿಸಿತು ಗುಜರಾತ್ ಯಡವಟ್ಟು..!

ಪ್ರತೀ ಬಾರಿಯೂ ಒಂದಲ್ಲ ಒಂದು ವಿಷಯದಲ್ಲಿ ಎಡವಟ್ಟನ್ನು ಮಾಡಿ ನಗೆಪೀಡಲಿಗೀಡಾಗುತ್ತಾರೆ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ!!ಇಂದು ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಈ ಬಾರಿ ಮಾಡಿದ ಎವಟ್ಟುವೇನು ಗೊತ್ತಾ?

ಅತ್ಯಾಚಾರ ಎಂದ ರಾಗಾ..!

ಅದೇನೋ ಹೇಳಲು ಹೋಗಿ ಅತ್ಯಾಚಾರದಲ್ಲೂ ಹಗರಣ ಆಗಿದೆ. ಮೋದಿಯವರಿಗೆ ಟೀಕಿಸಲು ಹೋದ ರಾಹುಲ್ ಗಾಂಧಿ ಅತ್ಯಾಚಾರದಲ್ಲೂ ಹಗರಣ ಆಗಿದೆ ಎಂದು ಹೇಳಿದ್ದಾರೆ. ಅತ್ಯಾಚಾರದಲ್ಲೂ ಹಗರಣ ಆಗಿದೆ ಎಂದು ಹೇಳುವ ಮೂಲಕ ಭಾರೀ ಮುಜುಗರಕ್ಕೆ ಈಡಾಗಿದ್ದಾರೆ. ಹಗರಣ, ಯಾವುದು ಭ್ರಷ್ಟಾಚಾರ ಯಾವುದು ಎಂದು ತಿಳಿಯದ ರಾಹುಲ್ ಗಾಂಧಿ ಇನ್ನು ದೇಶವನ್ನು ಹೇಗೆ ಆಳುತ್ತಾರೆ ಎಂದು ವಾದ ವಿವಾದಗಳು ನಡೆಯುತ್ತಿವೆ. ಈ ಹಿಂದೆಯೂ ಇಂತಹ ಮಾತುಗಳಿಂದಲೇ ರಾಹುಲ್ ಗಾಂಧಿ ಹೆಸರಾಗಿದ್ದರು.

ಗುಜರಾತ್‍ನಲ್ಲಿಯೂ ಆಗಿತ್ತು ಮಹಾ ಯಡವಟ್ಟು..!!!

ಈ ಹಿಂದೆ ಗುಜರಾತ್‍ನಲ್ಲಿ ರಾಜ್ಯ ವಿಧಾನ ಸಭೆಯ ಚುನಾವಣೆಯ ವೇಳೆಯಲ್ಲಿಯೂ ರಾಹುಲ್ ಗಾಂಧಿ ಇಂತಹ ಮಾತುಗಳಿಂದಲೇ ಸುದ್ಧಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಭಾರೀ ಅತ್ಯಾಚಾರಗಳೇ ನಡೆಯುತ್ತಿವೆ. ಎಂದು ಹೇಳಿಯೂ ನಗೆಪಾಟೀಲಿಗೀಡಾಗಿದ್ದರು. ರಾಹುಲ್ ಗಾಂಧಿಗೆ ಭ್ರಷ್ಟಾಚಾರ ಯಾವುದು ಅತ್ಯಾಚಾರ ಯಾವುದು ಎಂದು ಗೊತ್ತಿಲ್ಲದ ಈ ನಾಯಕನಿಂದ ದೇಶ ಬಿಡಿ ಕನಿಷ್ಟ ಒಂದು ಗ್ರಾಮ ಪಂಚಾಯತ್‍ನ್ನೂ ಆಳಲು ಅರ್ಹನಲ್ಲ ಎಂಬ ಸುದ್ಧಿಯೇ ವ್ಯಾಪಕವಾಗಿ ಹರಡಿತ್ತು.

ಫೇಮಸ್ ಆಗಿತ್ತು ಆಲೂಗಡ್ಡೆ ಚಿನ್ನ…

ಈ ಹಿಂದೆ ಗುಜರಾತ್ ಚುನಾವಣೆಯಲ್ಲಿ ನನ್ನ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ ಆಲೂಗಡ್ಡೆಯಿಂದ ಚಿನ್ನ ತೆಗೆದು ಕೊಡುತ್ತೇವೆ ಎಂದು ಹೇಳಿದ್ದರು. ಆಲೂಗಡ್ಡೆಯಿಂದಲೂ ರಾಹುಲ್ ಗಾಂಧಿ ಚಿನ್ನ ತೆಗೆದು ಕೊಡುತ್ತಾರಾ ಎಂಬ ಟೀಕೆಯೂ ಹಾಸ್ಯವೂ ರಾಷ್ಟ್ರೀಯ ಮಟ್ಟದಲ್ಲಿ ಸುದ್ಧಿಯಾಗಿತ್ತು.

ಅದಲ್ಲದೆ ಇಂದು ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕಾಲಿಗೆ ಕಾಂಗ್ರೆಸ್‍ನ ಪ್ರಚಾರ ಸಮಿತಿಯ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಕಾಲಿಗೆ ಎರಗಿದ್ದಾರೆ. ನಿಜವಾಗಿಯೂ ಇಲ್ಲಿ ಗಮನಿಸಬೇಕಾದ ವಿಚಾರವೇನೆಂದರೆ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಗಿಂತ ರಾಜ್ಯ ಕಾಂಗ್ರೆಸ್‍ನ ಪವರ್ ಮಿನಿಸ್ಟರ್ ತುಂಬಾನೆ ಹಿರಿಯರು. ಬಹುಷಃ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ವಯಸ್ಸಿನ ಅಂತರವೂ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ವಯಸ್ಸಿನ ಅಂತರವೂ ಒಂದೇ ಸಮವಾಗಿ ಇರಬಹುದು. ಆದರೂ ಅವರು ರಾಹುಲ್ ಗಾಂಧಿಯವರ ಕಾಲಿಗೆ ಬಿದ್ದಿದ್ದು ಎಷ್ಟು ಸರಿ ಎಂಬ ವಾದಗಳೂ ಆರಂಭವಾಗಿದೆ.

ಯಡಿಯೂರಪ್ಪನವರು ಇಂತಹ ಆರೋಪಗಳನ್ನು ಅಲ್ಲಗಳೆದಿದ್ದಾರೆ. ತಾನು ಅಮಿತ್ ಶಾ ಅವರ ಕಾಲು ಹಿಡಿದಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ ಇಂದು ಬಳ್ಳಾರಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯ ಕಾಲಿಗೆ ಡಿಕೆ ಶಿವಕುಮಾರ್ ಎರಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಒಟ್ಟಾರೆ ರಾಹುಲ್ ಗಾಂಧಿಯವರ ಭಾಷಣವನ್ನು ಕೆಲವು ಟೀಕಿಸಲು ಉಪಯೋಗಿಸಿದರೆ ಮತ್ತೆ ಕೆಲವರು ಅದೊಂದು ಕಾರ್ಟೂನ್ ಛಾನೆಲ್ ನೋಡಿದ ಹಾಗೆ ಇರುತ್ತೆ ಎಂದು ಲೇವಡಿ ಮಾಡುತ್ತಿದ್ದಾರೆ. ಅಂತೂ ಇಂದಿನ ಬಳ್ಳಾರಿಯ ರಾಹುಲ್ ಗಾಂಧಿಯ ಸಮಾವೇಶದ ರಾಗಾ ಭಾಷಣ ಪೋಗೋ ಛಾನೆಲ್ ನೋಡಿದ ಅನುಭವವನ್ನು ನೀಡಿದ್ದಂತು ಸುಳ್ಳಲ್ಲ.

-ಸುನಿಲ್ ಪಣಪಿಲ

Editor Postcard Kannada:
Related Post