X

ಮೋದಿ ಸರಕಾರದಿಂದ ಮತ್ತೊಂದು ದಿಟ್ಟ ನಿರ್ಧಾರ!! ಮುಸ್ಲಿಂ ಹಾಗೂ ದಲಿತ ಪ್ರದೇಶಗಳಲ್ಲಿ ಶಾಲೆಗಳ ಸಂಖ್ಯೆ ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರ ಸರಕಾರದ ಸೂಚನೆ!!

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದಾಗಿನಿಂದ ನರೇಂದ್ರ ಮೋದಿಯವರು ಇಡೀ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತನೇ ಬರುತ್ತಿದ್ದಾರೆ!! ಆದರೂ ವಿರೋಧಿಗಳು ಮಾತ್ರ ಮೋದಿಜೀಯನ್ನು ಮುಸ್ಲಿಂ ವಿರೋಧಿ, ಮೋದಿ ಪ್ರಧಾನಿಯಾದರೆ ಭಾರತದಲ್ಲಿ ಮುಸ್ಲಿಮರಿಗೆ ಜೀವಿಸಲು ಅವಕಾಶವೇ ಇಲ್ಲ ಎಂಬಂತೆಲ್ಲಾ ಬಿಂಬಿಸುತ್ತನೇ ಬಂದಿದ್ದರು!! ಆದರೆ ಮೋದಿ ಅಧಿಕಾರ ವಹಿಸಿಕೊಂಡ ನಂತರ ವಿರೋಧಿಗಳ ಲೆಕ್ಕಾಚಾರ ತಲೆಕೆಳಗಾಗಿತ್ತು. ಯಾಕೆಂದರೆ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುತ್ತಲೇ “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಎಂದು ಹೇಳುವ ಮೂಲಕ ಇಡೀ ಭಾರತೀಯರ ಮನ ಗೆದ್ದಿದ್ದರು! ಕೇವಲ ಹೆಸರಿಗಾಗಿ ಯಾವತ್ತೂ ಮೋದಿಜೀ ಕೆಲಸ ಮಾಡುವವರಲ್ಲ!! ಮೋದೀಜೀಯ ಕನಸು ಕೇವಲ ದೇಶದ ಅಭಿವೃದ್ಧಿ ಅಷ್ಟೇ!! ತನಗೆ ವಿರೋಧಿಗಳು ಏನೇ ಅಂದರೂ ಅದಕ್ಕೆ ತಿರುಗಿ ಮಾತನಾಡದೆ ಮೋದೀಜೀ ಕೆಲಸದಲ್ಲಿಯೇ ಎಲ್ಲವನ್ನು ತೋರಿಸಿಕೊಡುವ ಚಾಣಾಕ್ಷ!! ಇದೀಗ ಮುಸ್ಲಿಂ ಹಾಗೂ ದಲಿತ ವಿರೋಧಿ ಎನ್ನುತ್ತಿದ್ದ ಮೋದೀಜಿಗೆ ದಲಿತರಿಗೆ ಮತ್ತು ಮುಸ್ಲಿಮರಿಗೆ ಯಾವ ರೀತಿ ಸೌಲಭ್ಯ ನೀಡುತ್ತಿದ್ದಾರೆ ಎಂದರೆ ಒಳಿತು!!

ಮುಸ್ಲಿಂ ದಲಿತ ಪ್ರದೇಶಗಳಲ್ಲಿ ಶಾಲೆಗಳ ಸಂಖ್ಯೆ ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರ ಸಲಹೆ!!

ಶಾಲೆಗಳಲ್ಲಿ ಮುಸ್ಲಿಂ ಮತ್ತು ದಲಿತ ಸಮುದಾಯದ ವಿದ್ಯಾರ್ಥಿಗಳು ಎದುರಿಸುತ್ತಿರುವ ತಾರತಮ್ಯಗಳನ್ನು ಹೋಗಲಾಡಿಸಲು ಕ್ರಮಗಳನ್ನು ಆಯೋಜನೆಗೊಳಿಸುವಂತೆ ಎಲ್ಲಾ ರಾಜ್ಯಗಳಿಗೂ ಮೋದಿ ಸರ್ಕಾರ ಸಲಹೆ ನೀಡಿದೆ!! ಅಲ್ಲದೇ ಹೆಚ್ಚು ದಲಿತ ಮತ್ತು ಮುಸ್ಲಿಂ ಸಮುದಾಯದವರಿರುವ ಪ್ರದೇಶಗಳಲ್ಲಿ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಸಲಹೆ ನೀಡಿದೆ!! ವರದಿ ಮಾಡಲು ಹೊಸ ವ್ಯವಸ್ಥೆಯ ರಚನೆ ಶಾಲಾ ಮಂಡಳಿಯಲ್ಲಿ ವೈವಿಧ್ಯತೆ ತರುವುದು ಸೂಕ್ಷ್ಮತೆ ತರುವ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸುವ ಮೂಲಕ ಮುಸ್ಲಿಂ ದಲಿತ ಸಮುದಾಯದ ವಿದ್ಯಾರ್ಧಿಗಳು ಎದುರಿಸುತ್ತಿರುವ ತಾರತಮ್ಯವನ್ನು ಹೋಗಲಾಡಿಸಲು ಸಾಧ್ಯ ಎಂದು ಕೇಂದ್ರ ಸರಕಾರ ಅಭಿಪ್ರಾಯಪಟ್ಟಿದೆ!!

ತನ್ನ ಸಮಗ್ರ ಶಿಕ್ಷಾ ಅಭಿಯಾನದ ಭಾಗವಾಗಿ ಈ ಶಿಫಾರಸ್ಸನ್ನು ಕೇಂದ್ರ ಮಾಡಿದೆ!! ದಲಿತ ವಿದ್ಯಾರ್ಥಿಗಳನ್ನು ಸಮಾರಂಭಗಳಿಂದ ದೂರ ಇಡುವುದು ಶಾಲೆಯ ಸೌಲಭ್ಯಗಳನ್ನು ಬಳಕೆ ಮಾಡದಂತೆ ತಡೆಯುವುದು ಕೆಲ ಮಟ್ಟದ ಕೆಲಸಗಳನ್ನು ಮಾಡಿಸುವುದು ಇತ್ಯಾದಿಗಳನ್ನು ಶಾಲೆಗಳು ಮಾಡಬಾರದು ಎಂದು ಕೇಂದ್ರ ಸರ್ಕಾರ ಪ್ರತೀ ಶಾಲೆಗಳಿಗಳಿಗೂ ಮಾಹಿತಿ ನೀಡಿದೆ!! ಇದರಿಂದನೇ ತಿಳಿಯುತ್ತದೆ ಮೋದಿಜೀ ಯಾವ ರೀತಿ ಮುಸ್ಲಿಂ ಮಕ್ಕಳಿಗೆ ಮತ್ತು ದಲಿತ ಮಕ್ಕಳಿಗೆ ಸೌಲಭ್ಯ ಒದಗಿಸುತ್ತಾರೆ ಎಂದು!!

ಕೇವಲ ರಾಜಕೀಯ ಲಾಭಕ್ಕಾಗಿ ತಾವು ದಲಿತರ ಪರ ಎಂದು ಬೊಗಳೆ ಬಿಡುತ್ತಿದ್ದ ಕಾಂಗ್ರೆಸ್ ಪಕ್ಷ ಸರಕಾರದ ಯಾವುದೇ ಉನ್ನತ ಹುದ್ದೆಗಳನ್ನು ದಲಿತರಿಗೆ ನೀಡಿರಲಿಲ್ಲ. ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಭಾರತದ ಪ್ರಥಮ ಪ್ರಜೆ ರಾಷ್ಟ್ರಪತಿ ಸ್ಥಾನಕ್ಕೆ ದಲಿತ ವ್ಯಕ್ತಿಯನ್ನು ಆರಿಸುವ ಮೂಲಕ ದಲಿತರ ಪರ ತಮಗಿರುವ ಒಲವನ್ನು ವ್ಯಕ್ತಪಡಿಸಿದ್ದರು!! ನರೇಂದ್ರ ಮೋದಿಯವರು ದಲಿತ ವಿರೋಧಿ ಎಂದು ಬಿಂಬಿಸುತ್ತಿದ್ದ ಎಲ್ಲಾ ವಿರೋಧಿ ಬಣಗಳು ಬಿಜೆಪಿಯ ಈ ನಿರ್ಧಾರದಿಂದ ಬಾಯಿ ಮುಚ್ಚುವಂತಾಗಿತ್ತು!!

2018 ರ ಬಜೆಟ್ ನಲ್ಲೂ ದಲಿತರಿಗೆ ಕೆಲವೊಂದು ಸವಲತ್ತುಗಳನ್ನು ವಿಶೇಷವಾಗಿ ಮೋದಿ ಸರಕಾರ ಒದಗಿಸಿತ್ತು! ದಲಿತರಿಗೆ “ಏಕಲವ್ಯ ಶಾಲೆ” ಯನ್ನು ಸರಕಾರದ ವತಿಯಿಂದ ಓದಗಿಸಲಾಗುವುದು ಎಂದು ಘೋಷಿಸಿದ ಮೋದಿ ಸರಕಾರ ಉತ್ತಮ ನಿರ್ಧಾರ ಕೈಗೊಂಡಿತ್ತು!! ದಲಿತರಿಗೆ ಈ ಶಾಲೆಯಲ್ಲಿ ಉಚಿತ ಶಿಕ್ಷಣ ಮತ್ತು ಉಚಿತ ಕೆಲ ಸವಲತ್ತುಗಳನ್ನು ಒದಗಿಸಲು ಮೂಲಕ ನರೇಂದ್ರ ಮೋದಿಯವರನ್ನು ಪದೇ ಪದೇ ದಲಿತ ವಿರೋಧಿ ಎಂದು ಬಿಂಬಿಸುವ ಮೂಲಕ ದೇಶದ ದಲಿತರನ್ನು ಮೋದಿ ಸರಕಾರದ ವಿರುದ್ದ ಪ್ರತಿಭಟಿಸುವಂತೆ ಮಾಡಿದ ಎಲ್ಲಾ ದೇಶವಿರೋಧಿ `ಕೈ’ ಗಳಿಗೂ ನರೇಂದ್ರ ಮೋದಿಯವರ ಈ ಯೋಜನೆಯಿಂದ ತಕ್ಕ ಉತ್ತರ ದೊರೆತಂತಾಗಿತ್ತು!! ಇದೀಗ ಮತ್ತೆ ದಲಿತ ಮಕ್ಕಳಿಗೆ ಮತ್ತು ಮುಸ್ಲಿಮ್ ಮಕ್ಕಳಿಗೆ ನೀಡಿರುವ ಈ ಸವಲತ್ತು ನಿಜವಾಗಿ ಗ್ರೇಟ್ ಅನ್ನಬಹುದು!! ಕೇವಲ ಸುಖಾಸುಮ್ಮನೆ ಮೋದಿಜೀಯನ್ನು ದೂರುವ ಮೊದಲು ದೇಶಕ್ಕಾಗಿ ಏನು ಮಾಡಿದ್ದಾರೆ ಎಂಬುವುದನ್ನು ಮೋದಿಜೀ ವಿರೋಧಿಗಳು ತಿಳಿದುಕೊಂಡರೆ ಒಳಿತು!!

  • ಪವಿತ್ರ
Editor Postcard Kannada:
Related Post