X

ಮೃತಪಟ್ಟ ಮಗನಿಂದಲೇ ಮೊಮ್ಮಕ್ಕಳನ್ನು ಪಡೆದ ಹೆತ್ತಬ್ಬೆ!! ವಿಜ್ಞಾನ ಲೋಕಕದಿಂದ ಸೃಷ್ಟಿಯಾಯಿತು ಮತ್ತೊಂದು ಹೊಸ ಚರ್ಚೆ !!

ಆಧುನಿಕ ಜಗತ್ತು ಅದೆಷ್ಟು ಮುಂದುವರೆದಿದೆ ಎಂದರೆ ಯಂತ್ರಗಳು ಕೂಡ ಮನುಷ್ಯರಂತೆ ಕೆಲಸ ಮಾಡುತ್ತೆಯಲ್ಲದೇ ಮನುಷ್ಯರಂತೆ ಮಾತಾನಾಡುತ್ತೇ ಕೂಡ!! ಆದರೆ ಯಂತ್ರ ತಂತ್ರಗಳ ವಿಚಾರಗಳು ಒಂದು ಕಡೆಯಾದರೆ ಮೃತಪಟ್ಟ ವ್ಯಕ್ತಿಯಿಂದಲೇ ಮಕ್ಕಳನ್ನು ಪಡೆಯುವುದು ಅಸಾಧ್ಯ ಎಂದವರಿಗೆ ಈ ಒಂದು ವಿಚಾರ ಕೇಳಿದರೆ ನಿಜಕ್ಕೂ ಕೂಡ ಬೆರಗಾಗುತ್ತೀರಾ!!

ನಂಬಲಾಗದ ವಿಚಿತ್ರ ಪವಾಡಗಳನ್ನೇ ನಿಜ ಮಾಡಿಬಿಡುವ ಕಾಲದಲ್ಲಿ ಬಾಡಿಗೆಯ ಮುಖಾಂತರ ಮಕ್ಕಳನ್ನು ಪಡೆಯುವುದನ್ನು ಕೇಳಿದ್ದೇವೆ!! ಆದರೆ ತನ್ನ ವಂಶವನ್ನು ಬೆಳಗಲು ಯಾರು ಇಲ್ಲ ಎನ್ನುವ ಕಾರಣಕ್ಕಾಗಿ ಮೃತಪಟ್ಟ ವ್ಯಕ್ತಿಯಿಂದಲೇ ಮಕ್ಕಳನ್ನು ಪಡೆದಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ಅಚ್ಚರಿಯ ವಿಚಾರವೇ ಆಗಿದೆ!! ಅಷ್ಟೇ ಅಲ್ಲದೇ ಈ ಒಂದು ಪ್ರಕರಣ, ಐವಿಎಫ್ ತಂತ್ರಜ್ಞಾನದಿಂದ ಮಕ್ಕಳನ್ನಷ್ಟೇ ಪಡೆಯಬಹುದೋ ಅಥವಾ ಮೊಮ್ಮಕ್ಕಳನ್ನೂ ಪಡೆಯಬಹುದೋ ಎಂಬ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಹೌದು….. ಆತ ಜರ್ಮನಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರತಿಭಾನ್ವಿತ ವಿದ್ಯಾರ್ಥಿ. 27 ವರ್ಷಕ್ಕೇ ಬ್ರೈನ್ ಟ್ಯೂಮರ್ ಗೆ ತುತ್ತಾಗಿ ಮೃತಪಟ್ಟಿದ್ದ. ಒಬ್ಬನೇ ಮಗನನ್ನು ಕಳೆದುಕೊಂಡಿದ್ದ ಪೆÇೀಷಕರಿಗೆ ಆಶಾಕಿರಣವಾಗಿ ಕಂಡಿದ್ದು ಮೃತ ಪುತ್ರನಿಂದ ಸಂರಕ್ಷಿಸಲ್ಪಟ್ಟಿದ್ದ ವೀರ್ಯ, ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದ ದಂಪತಿಗಳು 2 ವರ್ಷಗಳ ನಂತರ ಮೃತ ಪುತ್ರನಿಂದ ಸಂರಕ್ಷಿಸಲಾಗಿದ್ದ ವೀರ್ಯವನ್ನು ಬಳಸಿ ಮೊಮ್ಮಕ್ಕಳನ್ನು ಪಡೆದಿದ್ದಾರೆ.

ಕ್ಯಾನ್ಸರ್ ನಿಂದ ಮೃತಪಟ್ಟ ಪುತ್ರನ ವೀರ್ಯಾಣು ಬಳಸಿ ಬಾಡಿಗೆ ತಾಯಿಯ ಮೂಲಕ ಪುಣೆ ಮೂಲದ ಮಹಿಳೆಯೊಬ್ಬರು ಅವಳಿ ಮೊಮ್ಮಕ್ಕಳನ್ನು ಪಡೆದಿದ್ದಾರೆ. ಪುತ್ರ ಅವಿವಾಹಿತನಾಗಿದ್ದು, ಕ್ಯಾನ್ಸರ್ ಗೆ ತುತ್ತಾಗಿ ಸಾವನ್ನಪ್ಪಿದ್ದ. ಆದರೆ ಅವರ ವಂಶ ಮುಂದುವರಿಸಲು ಯಾರೂ ಇಲ್ಲದಿದ್ದರಿಂದ ಆತನ ವೀರ್ಯಾಣು ಬಳಸಿ ಮೊಮ್ಮಕ್ಕಳನ್ನು ಪಡೆಯುವಲ್ಲಿ ತಾಯಿ ಯಶಸ್ವಿಯಾಗಿದ್ದಾರೆ.

ಪುಣೆಯ ಶಿಕ್ಷಕಿ ರಾಜಶ್ರೀ ಪಾಟೀಲ್ ಎಂಬುವರ ಪುತ್ರ ಪ್ರಥಮೇಶ್ ಜರ್ಮನಿಯಲ್ಲಿ ಓದುತ್ತಿದ್ದು, 2013 ರಲ್ಲಿ ಬ್ರೈನ್ ಟ್ಯೂಮರ್ ಕಾಣಿಸಿಕೊಂಡಿತ್ತು. ಕಿಮೋಥೆರೆಪಿ ಚಿಕಿತ್ಸೆಯಿಂದಾಗಿ ಆತನಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕುಗ್ಗಬಹುದೆಂಬ ಮುಂಜಾಗೃತೆಯಿಂದ ವೈದ್ಯರು ಆತನ ಅನುಮತಿ ಪಡೆದು ವೀರ್ಯವನ್ನು ಸಂಗ್ರಹಿಸಿಟ್ಟಿದ್ದರು. ಆದರೆ 2016 ರ ಸೆಪ್ಟೆಂಬರ್ ನಲ್ಲಿ ಆ ಯುವಕ ಮೃತಪಟ್ಟಿದ್ದ.

ಈ ಬೆನ್ನಲ್ಲೇ ಮೊಮ್ಮಕ್ಕಳನ್ನು ಪಡೆಯುವುದಕ್ಕೆ ನಿರ್ಧರಿಸಿದ್ದ ಪ್ರಥಮೇಶ್ ಪೆÇೀಷಕರು ಜರ್ಮನಿಯ ಸ್ಪರ್ಮ್ ಬ್ಯಾಂಕ್ ನಿಂದ ಮಗನ ಸಂರಕ್ಷಿಸಿದ ವೀರ್ಯವನ್ನು ತರಿಸಿಕೊಂಡು ಐವಿಎಫ್ ಗಾಗಿ ಪುಣೆಯ ಸಹ್ಯಾದ್ರಿ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು. ಅಲ್ಲಿನ ವೈದ್ಯರೂ ಸಹಕರಿಸಿ, ಎಲ್ಲವೂ ಅಂದುಕೊಂಡಂತೆಯೇ ನಡೆಯಿತು. ಆರಂಭದಲ್ಲಿ 49 ವರ್ಷದ ಆತನ ತಾಯಿಯೇ ಗರ್ಭಧರಿಸಲು ನಿರ್ಧರಿಸಿದ್ದರು.

ಆದರೆ ದೈಹಿಕವಾಗಿ ಸದೃಢವಾಗಿರದ ಕಾರಣ ಆಕೆಯ ಸೋದರ ಸಂಬಂಧಿಯೊಬ್ಬರು ಬಾಡಿಗೆ ತಾಯಿಯಾಗಲು ಒಪ್ಪಿಗೆ ಸೂಚಿಸಿದ್ದರು. ಎಲ್ಲವೂ ಅಂದುಕೊಂಡಂತೆಯೇ ನಡೆದಿದ್ದು, ಮಗನನ್ನು ಕಳೆದುಕೊಂಡ ಪೆÇೀಷಕರು ಈಗ ಬಾಡಿಗೆ ತಾಯಿಯ ಮೂಲಕ ಅವಳಿ ಮೊಮ್ಮಕ್ಕಳನ್ನು ಪಡೆದಿದ್ದಾರೆ.

ಹಾಗಾಗಿ ಮಗನ ವೀರ್ಯಾಣು ಪಡೆದು ಐವಿಎಫ್ ಮೂಲಕ ಸ್ವತಃ ರಾಜಶ್ರೀಯೇ ಮಗು ಪಡೆಯಲು ನಿರ್ಧರಿಸಿದ್ದರೂ, ಆರೋಗ್ಯ ಮತ್ತು ದೇಹಸ್ಥಿತಿ ಉತ್ತಮವಾಗಿಲ್ಲದ ಕಾರಣ ಬಾಡಿಗೆ ತಾಯಿಯ ಮೊರೆ ಹೋಗಿದ್ದರು. ಅದರಂತೆ ಬಾಡಿಗೆ ತಾಯಿಯ ಮೂಲಕ ಫೆ. 12ರಂದು ಒಂದು ಗಂಡು, ಒಂದು ಹೆಣ್ಣು ಮಗುವನ್ನು ಪಡೆದಿದ್ದಾರೆ. ಗಂಡು ಮಗುವಿಗೆ ಪ್ರಥಮೇಶ್ ಎಂದು ಹೆಸರು ಇರಿಸಿದ್ದು, ಹೆಣ್ಣು ಮಗುವಿಗೆ ಪ್ರಿಶಾ (ದೇವರ ಉಡುಗೊರೆ) ಎಂದು ಹೆಸರಿಟ್ಟಿದ್ದಾರೆ.

ಆದರೆ ಬಾಡಿಗೆ ತಾಯಿಯ ಮುಖಾಂತರ ಮಕ್ಕಳನ್ನು ಪಡೆಯುವ ಪದ್ದತಿಗೆ ಸಾಕಷ್ಟು ವಿವಾದದ ಅಲೆ ಬೀಸುತ್ತಲೇ ಇದ್ದರೂ ಕೂಡ ನಮ್ಮ ದೇಶದಲ್ಲಿ ಬಾಡಿಗೆ ತಾಯಿಯ ಸಂಖ್ಯೆಗೇನೂ ಕಡಿಮೆ ಇಲ್ಲ. ಆದರೆ, ಬಾಲಿವುಡ್‍ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್(ಸಿಂಗಲ್ ಪೇರೆಂಟ್) ಬಾಡಿಗೆ ತಾಯಿಯ ಮೂಲಕ ತಾನು ‘ಅವಳಿ ಮಕ್ಕಳ ಅಪ್ಪ’ನಾದೆ ಎಂದು ಘೋಷಿಸಿಕೊಂಡ ಬಳಿಕ ಮತ್ತೆ ಈ ವಿಷಯ ಮುನ್ನೆಲೆಗೆ ಬಂದಿತ್ತು. ಖ್ಯಾತ ನಟ ಜೀತೆಂದ್ರ ಅವರ ಪುತ್ರ ಹಾಗೂ ನಟ ತುಷಾರ್ ಕಪೂರ್ ಕೂಡ ಕಳೆದ ವರ್ಷ ಬಾಡಿಗೆ ತಾಯಿ ಮೂಲಕ ಅಪ್ಪನಾಗಿದ್ದೇನೆ ಎಂದು ಹೇಳಿಕೊಂಡಿದ್ದರು. ಇನ್ನೂ ಹಿಂದೆ ಹೋದರೆ, ಶಾರುಕ್ ಖಾನ್ ಮತ್ತು ಆಮೀರ್ ಖಾನ್ ಕೂಡ ಬಾಡಿಗೆ ತಾಯಿಯಿಂದ ಮಕ್ಕಳನ್ನು ಪಡೆದಿದ್ದಾರೆ.

‘ಹೈ ಸೊಸೈಟಿ’ ಎಂದು ಕರೆಯಿಸಿಕೊಳ್ಳುವ ಭಾರತದ ಒಂದು ವರ್ಗ ಹೀಗೆ ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆಯುವುದು ಭಾರಿ ವಿವಾದಕ್ಕೆ ಕಾರಣವಾಗುತ್ತಿದೆ. ಅನೇಕ ಭಾರಿ ಸಾರ್ವಜನಿಕ ಚರ್ಚೆಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಬಾಡಿಗೆ ತಾಯಿ ಹೆಸರಲ್ಲಿ ಬಡ ಹೆಣ್ಣು ಮಕ್ಕಳನ್ನು ಶೋಷಣೆ ಮಾಡಲಾಗುತ್ತಿದೆ ಮತ್ತು ಇದು ನಮ್ಮ ಸಂಸ್ಕೃತಿಗೆ ವಿರೋಧ ಎಂಬ ವಾದಗಳು ಹುಟ್ಟಿಕೊಂಡಿವೆ. ಆದರೆ, ಇದಕ್ಕೆ ಪ್ರತಿಯಾಗಿ ಬಂಜೆ ಸಮಸ್ಯೆ ಎದುರಿಸುತ್ತಿರುವ ಎಷ್ಟೋ ದಂಪತಿಗೆ ಮಕ್ಕಳನ್ನು ಪಡೆಯಲು ಇರುವ ಅತ್ಯುತ್ತಮ ಮಾರ್ಗ ಎಂದು ವಾದಿಸಲಾಗುತ್ತದೆ.

ಆದರೆ ಈ ನೈತಿಕತೆ, ಸಂಸ್ಕೃತಿಯ ಪಲ್ಲಟ, ಬಡ ಹೆಣ್ಣುಮಕ್ಕಳ ಶೋಷಣೆ, ಇದನ್ನೇ ಒಂದು ಉದ್ಯಮವಾಗಿ ನಡೆಸುವ ಹುನ್ನಾರ ಸೇರಿದಂತೆ ಅನೇಕ ಅಗೋಚರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ವಿಶ್ವದಾದ್ಯಂತ ಈ ಸರಗೊಸಿ ಮದರ್ ಕಲ್ಪನೆಗೆ ವಿರೋಧವಿದೆ. ಬಹಳಷ್ಟು ರಾಷ್ಟ್ರಗಳು ವಾಣಿಜ್ಯ ಉದ್ದೇಶದ ಸರೊಗಸಿಯನ್ನು ನಿಷೇಧಿಸಿವೆ. ಕೆಲವೊಂದು ರಾಷ್ಟ್ರಗಳಂತೂ ಯಾವುದೇ ಮಾದರಿಯ ಸರೊಗಸಿಗೆ ಅವಕಾಶ ಕಲ್ಪಿಸುವುದಿಲ್ಲ ಬೆರಳೆಣಿಕೆಯಷ್ಟು ರಾಷ್ಟ್ರಗಳ ಮಾತ್ರ ಎಲ್ಲ ಮಾದರಿಯ ಸರೊಗಸಿಗೆ ಅವಕಾಶ ಕಲ್ಪಿಸಿವೆ. ನಮ್ಮ ದೇಶದ ದೃಷ್ಟಿಯಿಂದ ನೋಡಿದರೆ, ಸರೊಗಸಿಯನ್ನು ತಡೆಯುವಂಥ ಬಲವಾದ ಕಾನೂನು ಇನ್ನೂ ಜಾರಿಯಾಗಿಲ್ಲ. ಪರಹಿತ ಬಾಡಿಗೆ ತಾಯಿಗೆ ಮಾತ್ರ ಅವಕಾಶ ಕಲ್ಪಿಸುವ ವಿಧೇಯಕವನ್ನು ಸರಕಾರ ಈಗಾಗಲೇ ಸಂಸತ್ತಿನಲ್ಲಿ ಮಂಡಿಸಿದ್ದು, ಇನ್ನೂ ಒಪ್ಪಿಗೆ ದೊರೆಯಬೇಕಿದೆ.

ಆದರೆ ಇದೀಗ ಮೃತಪಟ್ಟ ನಂತರವೂ ವ್ಯಕ್ತಿ ಮಕ್ಕಳನ್ನು ಪಡೆಯಬಹುದಾ? ಬಾಡಿಗೆ ತಾಯಿಯ ಮೂಲಕ ಮೊಮ್ಮಕ್ಕಳನ್ನು ಪಡೆದ ದಂಪತಿಗಳು ಆ ಮಕ್ಕಳ ಭವಿಷ್ಯವನ್ನು ಹೇಗೆ ರೂಪಿಸುತ್ತಾರೆ? ಪೆÇೀಷಕರಿಂದ ಸಹಜ ಪಾಲನೆಯನ್ನು ಪಡೆಯುವ ಆ ಮಕ್ಕಳ ಹಕ್ಕುಗಳ ಕಥೆಯೇನು ಎಂಬ ಒಂದಷ್ಟು ಪ್ರಶ್ನೆಗಳು ಹಾಗೂ ಚರ್ಚೆಗಳನ್ನು ಈ ಪ್ರಕರಣ ಹುಟ್ಟು ಹಾಕಿದೆ. ಅಷ್ಟೇ ಅಲ್ಲದೇ, 2016 ರ ಬಾಡಿಗೆ ತಾಯ್ತನದ ಮಸೂದೆ ಇನ್ನೂ ಅಂಗೀಕಾರವಾಗದೇ ಉಳಿದಿದ್ದು, ಮಕ್ಕಳನ್ನು ಪಡೆಯಲು ಸಾಧ್ಯವಾಗದವರು ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಬಹುದಾಗಿದೆ. ಆದರೆ ಮಗನ ಸಾವಿನ ನಂತರ ಮೊಮ್ಮಕ್ಕಳನ್ನು ಪಡೆಯಬಹುದಾ? ಎಂಬ ಬಗ್ಗೆಯೂ ಚರ್ಚೆ ನಡೆಯುವಂತೆ ಮಾಡಿದೆ.

– ಅಲೋಖಾ

Editor Postcard Kannada:
Related Post