X

ಭಾರತ ಯಶಸ್ಸಿನ ಅದ್ಭುತ ಯಶೋಗಾಥೆ: ಆ್ಯಂಟನಿ ಬ್ಲಿಂಕನ್

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಜಗತ್ತು ನಮ್ಮ ದೇಶವನ್ನು ನೋಡುವ ದೃಷ್ಟಿಕೋನ ಬದಲಾಗಿದೆ.

ಕಳೆದ ಕೆಲ ವರ್ಷಗಳ ಹಿಂದೆ ಅಮೆರಿಕಾದಂತಹ ವಿಶ್ವದಲ್ಲೇ ಹೆಸರು ಮಾಡಿದ್ದ ರಾಷ್ಟ್ರಗಳು ಭಾರತವನ್ನು ಭಿಕ್ಷುಕ ರಾಷ್ಟ್ರ ಎಂಬಂತೆ ಕಾಣುತ್ತಿದ್ದವು‌. ಆದರೆ ಕಳೆದ ಒಂಬತ್ತು ವರ್ಷಗಳ ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಜಗತ್ತು ಭಾರತವನ್ನು ಅಚ್ಚರಿಯಿಂದ ನೋಡುವಂತಾಗಿದೆ. ಭಾರತವನ್ನು ಕೀಳಾಗಿ ಕಾಣುತ್ತಿದ್ದ ಅಮೆರಿಕಾ ಭಾರತದ ಸ್ನೇಹ ಬಯಸಿ ಬರುವಷ್ಟು ಭಾರತ ಬದಲಾಗಿದೆ. ಇದಕ್ಕೆಲ್ಲಾ ಕಾರಣ ಭಾರತದ ಅಭಿವೃದ್ಧಿಯ ನಾಗಾಲೋಟ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರದ ದೂರದೃಷ್ಟಿ, ಮುಂದೈಲೋಚನೆ ಎನ್ನುವುದು ನಿಸ್ಸಂಶಯ.

ಈಗ ಅಮೆರಿಕಾ ಮತ್ತೊಮ್ಮೆ ಭಾರತವನ್ನು, ನಮ್ಮ ದೇಶದ ಹೆಮ್ಮೆ ಪ್ರಧಾನಿ ಮೋದಿ ಅವರನ್ನು ಬಣ್ಣಿಸಿದೆ.

ಅಮೆರಿಕಾದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್ ಅವರು ಭಾರತವನ್ನು ಯಶಸ್ಸಿನ ಅದ್ಭುತ ಯಶೋಗಾಥೆ ಎಂದು ಹೇಳಿದ್ದು, ಪ್ರಧಾನಿ ಮೋದಿ ಅವರ ನೀತಿ ಮತ್ತು ಯೋಜನೆಗಳು ಭಾರತೀಯರ ಪಾಲಿಗೆ ಅತ್ಯಂತ ಲಾಭದಾಯಕವಾಗಿ ಹೊರಹೊಮ್ಮಿದೆ ಎಂದು ಅವರು ಹೊಗಳಿದ್ದಾರೆ.

ವಿಶ್ವ ಆರ್ಥಿಕತೆಯ ವೇದಿಕೆಯ ವಾರ್ಷಿಕ ಶೃಂಗದಲ್ಲಿ ಮಾತನಾಡಿದ ಅವರು, ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಅವರು ಭಾರತದ ಪ್ರಧಾನಿ ಮೋದಿ ಅವರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ತಿಳಿಸಿದ್ದಾರೆ. ಈ ಇಬ್ಬರು ನಾಯಕರ ನಡುವಿನ ಸಂಬಂಧ ಎರಡೂ ದೇಶಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ. ಅಮೆರಿಕಾ ಮತ್ತು ಭಾರತದ ನಡುವಿನ ಸಂಬಂಧ ದಿನೇ ದಿನೇ ವೃದ್ಧಿಯಾಗುತ್ತಿದೆ ಎಂದು ಹೇಳಿದ್ದಾರೆ.

ಭಾರತ ಮತ್ತು ಅಮೆರಿಕಾ ದೇಶಗಳು ಮೂಲಸೌಕರ್ಯ, ಪ್ರಜಾಪ್ರಭುತ್ವ, ಮೂಲಭೂತ ಹಕ್ಕುಗಳ ಬಗ್ಗೆ ನಿರಂತರ ನಿಕಟ ಸಂಬಂಧ ಹೊಂದಿರಲಿವೆ ಎಂದೂ ಅವರು ನುಡಿದಿದ್ದಾರೆ.

Post Card Balaga:
Related Post