X

ಆರ್ಯರ ಆಕ್ರಮಣ ದ್ರಾವಿಡರ ಪಲಾಯನವೆಂಬ ಬುದ್ಧಿ ಜೀವಿಗಳ ಲದ್ದಿ ಸಿಧ್ಧಾಂತವನ್ನು ಪಾಶ್ಚಿಮಾತ್ಯ ದೇಶಗಳೇ ತಿರಸ್ಕರಿಸಿದ್ದರೂ ಇವರಿನ್ನೂ ಸುಳ್ಳು ಹೇಳುವ ಚಾಳಿ ಬಿಟ್ಟಿಲ್ಲ!!

ಈಗಲ್ಲ, ಹಲವಾರು ಶತಮಾನಗಳಿಂದಲೂ ಭಾರತದ ಇತಿಹಾಸವನ್ನು ತಿರುಚುವ ಪ್ರಯತ್ನ ಅನೂಚಾನವಾಗಿ ನಡೆದುಕೊಂಡು ಬಂದಿದೆ. ವಿಶ್ವದ ದೇಶಗಳ ಮೇಲೆ ತನ್ನ ಹೆಚ್ಚುಗಾರಿಕೆಯನ್ನು ತೋರಿಸಿಕೊಳ್ಳಲು ಯೂರೋಪಿಯನ್ನರು ಕಟ್ಟಿದ ಕಾಗಕ್ಕ-ಗೂಬಕ್ಕ ಕಥೆಯೇ “ಆರ್ಯ-ದ್ರಾವಿಡ ಆಕ್ರಮಣ ಸಿಧ್ಧಾಂತ”. ಭಾರತಕ್ಕೆ ಆರ್ಯರು ದಂಡೆತ್ತಿ ಬಂದರಂತೆ, ಇಲ್ಲಿರುವ ದ್ರಾವಿಡರನ್ನು ಹೊಡೆದೋಡಿಸಿದರಂತೆ, ಆರ್ಯರು ಬಿಳಿಯಂತೆ, ದ್ರಾವಿಡರು ಕಪ್ಪಂತೆ, ಆರ್ಯರು ಸಂಸ್ಕೃತ ಮಾತಾಡುತ್ತಿದ್ದರಂತೆ…ಅಹಾಹಾ ಏನೆಲ್ಲಾ ಕಟ್ಟು ಕಥೆಗಳು! ನಿಜವೆಂದೇ ನಂಬಬೇಕು ಜನಗಳು.

ಈ ಬಿಳಿ ಚರ್ಮದವರು ಹರಿಬಿಟ್ಟ ಸುಳ್ಳಿಗೆ ಭಾರತದ “ಕಾಕ”(ಕಾಂಗ್ರೆಸ್-ಕಮ್ಯುನಿಷ್ಟ್) ಪ್ರೇರಿತ ಬುದ್ದಿ ಜೀವಿಗಳು ಮತ್ತಷ್ಟು ಬಣ್ಣ ತುಂಬಿ ಕಳೆದ ಎಪ್ಪತ್ತು ವರ್ಷಗಳಿಂದ ಹಾಡಿದ್ದನ್ನೇ ಹಾಡು ಕಿಸಬಾಯಿ ದಾಸ ಅನ್ನುವಂತೆ ಹೇಳುತ್ತಲೇ ಬಂದಿರುತ್ತಾರೆ. ಸ್ವತಃ ಯುರೋಪಿಯನ್ನರೇ ಆರ್ಯನರ ಆಕ್ರಮಣ ಸಿಧ್ಧಾಂತ ಸುಳ್ಳೆಂದು ಒಪ್ಪಿಕೊಂಡ ಮೇಲೂ ಇವರು ತಮ್ಮ ಮೊಂಡುವಾದವನ್ನು ಬಿಟ್ಟಿಲ್ಲ. ತಲೆ ತುಂಬ ಲದ್ದಿಯೆ ತುಂಬಿದ್ದರೆ ಬುದ್ದಿಗೆ ಜಾಗವೆಲ್ಲಿದೆ?

ಅನಾದಿ ಕಾಲದಲ್ಲಿ ಭೂಮಿಯ ಮೇಲೆ ಹಲವಾರು ದ್ವೀಪಗಳಿದ್ದವು. ಅದರಲ್ಲಿ ಒಂದು ಜಂಬೂದ್ವೀಪ, ಆ ಜಂಬೂದ್ವೀಪದಲ್ಲಿದ್ದ ಭೂಭಾಗವೇ “ಆರ್ಯಾವರ್ತ”. ಆರ್ಯ ಅಂದರೆ ಬುದ್ದಿವಂತರು, ಜ್ಞಾನಿಗಳು. ವರ್ತ ಎಂದರೆ ವಾಸಿಸುವ ಸ್ಥಳ. ಆರ್ಯಾವರ್ತವೆಂದರೆ ಜ್ಞಾನಿಗಳು ವಾಸಿಸುವ ಸ್ಥಳವೆಂದರ್ಥ. ವೇದ-ಉಪನಿಷತ್, ರಾಮಾಯಣ-ಮಹಾಭಾರತ ಮಹಾ ಕಾವ್ಯಗಳು ಇಲ್ಲೆ ಹುಟ್ಟಿದ್ದು. ಪ್ರಪಂಚಕ್ಕೇ ಭಾಷೆ, ನೃತ್ಯ, ಸಂಗೀತ, ಲಿಪಿ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕೊಟ್ಟಿದ್ದೇ ಆರ್ಯಾವರ್ತ.

ಇಂದಿನ ರಷ್ಯಾದಿಂದ ಹಿಡಿದು- ಇಂಡೋನೇಷಿಯಾ, ಕುಮಾರಿಕಾ ಖಂಡದಿಂದ ಹಿಡಿದು ಆಫ್ರಿಕಾದವರೆಗೂ ಆರ್ಯಾವರ್ತ ಹಬ್ಬಿತ್ತು ಎಂದರೆ ಅತಿಶಯವಲ್ಲ. ಜಗತ್ತಿನಲ್ಲಿ ಮೊತ್ತ ಮೊದಲು ಹುಟ್ಟಿದ ಭಾಷೆ ಸಂಸ್ಕೃತ ಮತ್ತು ತಮಿಳು. ಈ ಎರಡೂ ಭಾಷೆಗಳು ಶಿವನ ಢಮರುವಿನಿಂದ ಹುಟ್ಟಿದ್ದೆನ್ನಲಾಗುತ್ತದೆ. ಅಂದರೆ ಅನಾದಿ ಕಾಲದಲ್ಲಿ ಸಂಸ್ಕೃತ ಮತ್ತು ತಮಿಳು ಭಾಷೆಗಳು ಜನರ ಆಡು ಭಾಷೆಯಾಗಿರುತ್ತಿದ್ದವು. ನಮ್ಮ ವೇದ-ಪುರಾಣಗಳೆಲ್ಲವೂ ರಚಿಸಲ್ಪಟ್ಟದ್ದು ಸಂಸ್ಕೃತದಲ್ಲೇ.

ಇನ್ನು ಸಂಸ್ಕೃತವನ್ನು ಹೊರತುಪಡಿಸಿದರೆ ತಮಿಳು ಅತ್ಯಂತ ಪ್ರಾಚೀನ ಭಾಷೆ. ಜಗತ್ತಿನ ಬಹುತೇಕ ದ್ರಾವಿಡ ಭಾಷೆಗಳಿಗೆ ಸಂಸ್ಕೃತವೇ ತಾಯಿ. ತಮಿಳನ್ನು ದಕ್ಷಿಣ ಭಾರತಕ್ಕೆ ತಂದವರು ಅಗಸ್ತ್ಯ ಮುನಿಗಳೆನ್ನಲಾಗುತ್ತದೆ. ದೇವತೆಗಳ ಅನುರೋದನೆಯ ಮೇರೆಗೆ ಅಗಸ್ತ್ಯ ಮುನಿಗಳು ತಮಿಳನ್ನು ದಕ್ಷಿಣ ಭಾರತಕ್ಕೆ ತಂದು ಇಲ್ಲಿ ವೇದಗಳನ್ನು ರಚಿಸಿದರು ಮಾತ್ರವಲ್ಲದೆ ತಾವೂ ಇಲ್ಲೆಯೇ ನೆಲೆಸಿದರು. ಆರ್ಯ ಎಂಬುದು ಒಂದು ಸಂಬೋಧನೆಯ ಪದ. ಆರ್ಯ ರೆಂದರೆ ಜ್ಞಾನಿಗಳು. ಅನಾರ್ಯರೆಂದರೆ ಅಜ್ಞಾನಿಗಳು. ಸನಾತನಕಾಲದಲ್ಲಿ ಸುಸಂಸ್ಕೃತ ಪುರುಷರನ್ನು ‘ಆರ್ಯ’ ಮತ್ತು ಮಹಿಳೆಯರನ್ನು ‘ಆರ್ಯೆ’ ಎಂದೇ ಸಂಬೋಧಿಸಲಾಗುತ್ತಿತ್ತು.

ಇನ್ನು ದ್ರಾವಿಡ ಭಾಷೆಯನ್ನು ಮಾತನಾಡುವ ಜನರೇ ದ್ರಾವಿಡರು. ವಿಶ್ವದೆಲ್ಲೆಡೆ ದ್ರಾವಿಡ ಭಾಷೆ ಮಾತನಾಡುವ ಜನರಿದ್ದಾರೆ. ಇಲ್ಲಿ ಸಂದೇಹಕ್ಕೆ ಎಡೆಯೇ ಇಲ್ಲ. ಹಿಂದೂ ಮಹಾಸಾಗರದಲ್ಲಿ ಕುಮಾರಿಕಾ ಖಂಡವೆಂಬ ಭೂಭಾಗವಿತ್ತು. ಪ್ರಾಕೃತಿಕ ವಿಕೋಪದಿಂದಾಗಿ ಈ ಖಂಡವೇ ಸಮುದ್ರದೊಳಗಡೆ ವಿಲುಪ್ತವಾಯಿತು. ಈ ಖಂಡದಲ್ಲಿ ಇದ್ದ ಕುಮಾರಿನಾಡು ಎಂಬ ಪ್ರದೇಶದಲ್ಲಿ ಸಂಗಮ ಸಾಮ್ರಾಜ್ಯವಿತ್ತು ಎಂದೆನ್ನಲಾಗುತ್ತದೆ. ಈ ಖಂಡವು ಈಗಿನ ಆಫ್ರಿಕಾದ ಇಥಿಯೋಪಿಯಾ ಖಂಡವನ್ನು ಆರ್ಯಾವರ್ತದೊಂದಿಗೆ ಬೆಸೆಯುತ್ತಿತ್ತು.

ಸಂಗಮ ಸಾಮ್ರಾಜ್ಯವು ಒಂದು ಉತ್ಕೃಷ್ಠ ಸಂಸ್ಕೃತಿಯನ್ನು ಹೊಂದಿದ್ದು, ಕಲೆ, ಸಂಗೀತ ಮತ್ತು ಸಾಹಿತ್ಯಕ್ಕೆ ತುಂಬಾ ಪ್ರಾಮುಖ್ಯತೆಯನ್ನು ನೀಡಿದ್ದರೆನ್ನುವುದು ಇತಿಹಾಸದಿಂದ ತಿಳಿದು ಬರುತ್ತದೆ. ಆಗಿನ ಕಾಲದಲ್ಲಿ ಸಂಸ್ಕೃತಿ ಮತ್ತು ಕಲೆಗಳ ಆದಾನ ಪ್ರದಾನವಾಗುತ್ತಿದ್ದುದರಿಂದಲೇ ಸಂಸ್ಕೃತದಲ್ಲಿ ತಮಿಳು ಮಾತ್ತು ತಮಿಳಿನಲ್ಲಿ ಸಂಸ್ಕೃತದ ಕುರುಹುಗಳು ಕಾಣಸಿಗುತ್ತವೆ. ಜಗತ್ತಿನ ಯಾವುದೇ ಮೂಲೆಯಲ್ಲೂ ಆರ್ಯನ್ನರ ಆಕ್ರಮಣದ ಸಿಧ್ದಾಂತಕ್ಕೆ ಬಲನೀಡುವ ಕುರುಹುಗಳು ಸಿಕ್ಕಿಲ್ಲ, ಮುಂದೆ ಸಿಗುವುದೂ ಇಲ್ಲ. ಸುಳ್ಳಿಗೆ ಸಾಕ್ಷ್ಯ ಸಿಗಲು ಸಾಧ್ಯವೇ?

ಭಾರತದಲ್ಲಿ ನಡೆಸಿದ ಅಷ್ಟೂ ಉತ್ಖನನಗಳಲ್ಲಿ ಎಲ್ಲೂ ಆಕ್ರಮಣ ಇಲ್ಲವೇ ಆರ್ಯ-ದ್ರಾವಿಡರ ನಡುವೆ ನಡೆದಿರುವ ತಥಾಕಥಿತ ಯುದ್ದಕ್ಕೆ ಒಂದೇ ಒಂದು ಸಾಕ್ಷ್ಯ ಲಭಿಸಿಲ್ಲ. ಕಾಂಗ್ರೆಸ್ ಮತ್ತು ಕಮುನಿಷ್ಟ್ ಪ್ರಿಯ ಬುದ್ದಿಜೀವಿಗಳನ್ನು ಹೊರತುಪಡಿಸಿ ಪ್ರಪಂಚದಾದ್ಯಂತ ವಿಜ್ಞಾನಿಗಳು, ಇತಿಹಾಸಕಾರರು ಮತ್ತು ಸಂಶೋಧನಾ ನಿರತರು ಈ ಪೊಳ್ಳು ಸಿಧ್ಧಾಂತವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಭಾರತದ “ಬುದ್ದು”ಗಳು ಇನ್ನೂ ಈ ಸುಳ್ಳನ್ನು ಹಬ್ಬುತ್ತಾ ಉತ್ತರ ಭಾರತದವರು ಆರ್ಯರು, ದಕ್ಷಿಣ ಭಾರತದವರು ದ್ರಾವಿಡರು, ಆರ್ಯರು ದ್ರಾವಿಡರನ್ನ ಒದ್ದೋಡಿಸಿದರು, ದ್ರಾವಿಡರು ಮೂಲ ನಿವಾಸಿಗಳು, ಆರ್ಯರು ವಿದೇಶೀಗಳು, ದ್ರಾವಿಡರಲ್ಲೂ ಎರಡು ವಿಧ- ಆದಿ ದ್ರಾವಿಡ ಮತ್ತು ದ್ರಾವಿಡ ಎಂದು ಬುರುಡೇ ಬಿಡುತ್ತಾರೆ.

ಆರ್ಯಾವರ್ತಕ್ಕೆ ಭರತ ವರ್ಷ, ಭರತ ಖಂಡವೆಂಬ ಹೆಸರು ಬಂದದ್ದು ದುಶ್ಯಂತ-ಶಾಕುಂತಲೆಯ ಮಗ ಭರತ ಚಕ್ರವರ್ತಿಯಿಂದಾಗಿ. ತೀರ ಇತ್ತೀಚಿನವರೆಗೆ ಅಂದರೆ ಸಾಮ್ರಾಟ ಚಂದ್ರಗುಪ್ತ ಮೌರ್ಯನ ಆಳ್ವಿಕೆಯವೆರೂ ಭರತವರ್ಷವನ್ನು ಆರ್ಯಾವರ್ತವೆಂದು ಕರೆಯಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಭರತ ಖಂಡವನ್ನು ಸ್ವತಃ ಚಾಣಕ್ಯನೇ ಆರ್ಯಾವರ್ತವೆಂದು ಉಲ್ಲೇಖಿಸಿದ್ದನೆನ್ನಲಾಗುತ್ತದೆ. ಅಂದರೆ ಅಖಂಡ ಭಾರತವೇ ಆರ್ಯಾವರ್ತ. ಆರ್ಯಾವರ್ತದಲ್ಲಿ ನೆಲೆಸಿರುವರೆಲ್ಲರೂ ಆರ್ಯರೆ.

ತಮಿಳು, ತೆಲುಗು, ತುಳು, ಮಲೆಯಾಳಿ ಇವು ದ್ರಾವಿಡ ಭಾಷೆಗಳು ಅಷ್ಟೆ ವ್ಯತ್ಯಾಸ. ಸಂಸ್ಕೃತ ಹೇರಿಕೆ, ಹಿಂದಿ ಹೇರಿಕೆ, ಆರ್ಯ-ದ್ರಾವಿಡ ಆಕ್ರಮಣ ಇವೆಲ್ಲವೂ ಜನರ ಮನದಲ್ಲಿ ಭ್ರಮೆ ಹುಟ್ಟಿಸಿ ಭಾಷೆಯ ಆಧಾರದ ಮೇಲೆ ನಾವು-ನಾವುಗಳೆ ಜಗಳವಾಡಿಕೊಂಡಿರಲೆಂದು ಮಾಡಿದ ಹುನ್ನಾರಗಳು. ಇಬ್ಬರ ಜಗಳ ಮೂರನೆಯವನಿಗೆ ಆದಾಯ. ನಮ್ಮ-ನಮ್ಮಲ್ಲೇ ಜಗಳವಾಡಿ ಮನಸುಗಳ ಮಧ್ಯೆ ಕಂದಕ ಸೃಷ್ಠಿ ಮಾಡಿಕೊಳ್ಳದೆ, ಸತ್ಯವನ್ನು ಜನರಿಗೆ ತಲುಪಿಸುವ ಕೆಲಸ ಮಾಡೋಣ. ಭಾಷೆ, ಜಾತಿ, ಧರ್ಮದ ಆಧಾರದ ಮೇಲೆ ದೇಶ ಒಡೆಯುವ ಅಡಕಸಬಿಗಳನ್ನು ಹೊರದಬ್ಬೋಣ. ನಾವೆಲ್ಲರೂ ಭಾರತೀಯರು, ಭಾರತದ ಪ್ರತಿಯೊಂದು ಭಾಷೆಯೂ ನಮ್ಮದೇ. ಆರ್ಯನ್ನರ ಆಕ್ರಮಣ, ದ್ರಾವಿಡರ ಪಲಾಯನ ಇದು ನೂರಕ್ಕೆ ನೂರರಷ್ಟು ಸುಳ್ಳು ನೆನಪಿಡಿ.

ಶನ್ನು

Editor Postcard Kannada:
Related Post