X

ಮತದಾರರಿಗೆ ಸಂತಸದ ಸುದ್ದಿ!! ದೇಶಾದ್ಯಂತ ಎಲೆಕ್ಟ್ರಾನಿಕ್ ವೋಟಿಂಗ್ ಮೆಶಿನ್`ಗಳ ಬಗ್ಗೆ ಕೇಳಿ ಬರುತ್ತಿದ್ದ ಅಪಸ್ವರಗಳಿಗೆ ಪೂರ್ಣವಿರಾಮವಿಟ್ಟ ಕೇಂದ್ರ !!

ಉತ್ತರಪ್ರದೇಶದ ಚುನಾವಣೆ ಬಳಿಕ ಮಾಯಾವತಿ, ಕೇಜ್ರಿವಾಲ್ ಸೇರಿದಂತೆ ಕೆಲ ಕಾಂಗ್ರೆಸ್ಸಿಗರೂ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಲ್ಲದೇ ಮುಂದಿನ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್`ನಲ್ಲಿ ಚುನಾವಣೆ ನಡೆಸುವಂತೆ ಒತ್ತಾಯಿಸುತ್ತಿದ್ದರು. ಅಷ್ಟೇ ಅಲ್ಲದೇ ಯುಪಿಎ ಸರ್ಕಾರದ ಅವಧಿಯಲ್ಲಿ ಇವಿಎಂ ಪರಿಚಯವಾಗಿದ್ದರೂ ಕೆಲ ಕಾಂಗ್ರೆಸ್ ನಾಯಕರೇ ಇವಿಎಂ ವಿರುದ್ಧ ಧ್ವನಿ ಎತ್ತಿದ್ದಂತೂ ಅಕ್ಷರಶಃ ನಿಜ!! ಆದರೆ ದೇಶಾದ್ಯಂತ ಎಲೆಕ್ಟ್ರಾನಿಕ್ ವೋಟಿಂಗ್ ಮೆಶಿನ್`ಗಳ ಬಗ್ಗೆ ಅಪಸ್ವರ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ವಿವಿಪ್ಯಾಟ್ ಅಳವಡಿಕೆಗೆ ಚುನಾವಣಾ ಆಯೋಗ ಮುಂದಾಗಿದ್ದು, ಇದಕ್ಕೆ ಕೇಂದ್ರ ಅಸ್ತು ಎಂದಿದೆ.

ಮತಯಂತ್ರ ಬೇಡ, ಮತಪತ್ರ ಬೇಕು ಎಂಬ ಆಗ್ರಹಗಳ ನಡುವೆಯೇ ಈ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಲು ಎಷ್ಟು ವಿದ್ಯುನ್ಮಾನ ಮತಯಂತ್ರ (ಇವಿಎಂ) ಹಾಗೂ ವಿವಿಪ್ಯಾಟ್ (ವೋಟರ್ -ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್) ಅಗತ್ಯವಿದೆ ಎಂಬ ಲೆಕ್ಕಾಚಾರವು ಕಳೆದ ವರ್ಷವೇ ನಡೆದಿದ್ದು, ಇದೀಗ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ವಿವಿಪ್ಯಾಟ್ ಬಳಕೆ ಮಾಡುವ ಕುರಿತು ಚುನಾವಣಾ ಆಯೋಗ ನಿರ್ಧರಿಸಿದೆ.

ಹೌದು…. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮತದಾನದ ವೇಳೆ ವಿವಿಪ್ಯಾಟ್ ಬಳಕೆ ಮಾಡುವ ಕುರಿತು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ದೆಹಲಿಯಲ್ಲಿ ಈ ಬಗ್ಗೆ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಚುನಾವಣಾ ಆಯೋಗದ ಮುಖ್ಯಸ್ಥ ಒಪಿ ರಾವತ್ ಅವರು, ಈ ಬಾರಿ ಇವಿಎಂ ಜತೆ ವಿವಿ ಪ್ಯಾಟ್ (ಮತ ಖಾತರಿ ಯಂತ್ರ) ಇರಲಿದೆಯಲ್ಲದೇ ಮತಗಟ್ಟೆಗಳಲ್ಲಿ ಅಂಗವಿಕಲರಿಗೆ ವಿಶೇಷ ಸೌಲಭ್ಯವಿರಲಿದೆ ಎಂದು ಹೇಳಿದ್ದಾರೆ.

ಮೇ 12ನೇ ತಾರೀಕಿನಂದು ನಡೆಯಲಿರುವ ಚುನಾವಣೆಯಲ್ಲಿ ಇವಿಎಂ ಜೊತೆಗೆ ವಿವಿಪ್ಯಾಟ್(ಮತ ಖಾತರಿ ಯಂತ್ರ) ಇರಲಿದೆ. ವಿವಿಪ್ಯಾಟ್ ಅಂತೆಯೇ ಮತದಾನದ ಅವಧಿಯನ್ನು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ವಿಸ್ತರಿಸಲಾಗಿದ್ದು, ಈ ಮೊದಲು ಬೆಳಗ್ಗೆ 7 ರಿಂದ ಸಂಜೆ 5ರ ವರೆಗೆ ಮಾತ್ರ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಬಾರಿ ಚುನಾವಣೆಯ ಅವಧಿಯನ್ನು ಕೊಂಚ ಮಟ್ಟಿಗೆ ವಿಸ್ತರಿಸಲಾಗಿದ್ದು, ಮತದಾರರು ಚಲಾಯಿಸಿದ ಮತವು ಯಾವ ಅಭ್ಯರ್ಥಿ ಮತ್ತು ಚಿಹ್ನೆಗೆ ಚಲಾವಣೆ ಆಗಿದೆ ಎಂಬುದು ವಿವಿಪ್ಯಾಟ್ ಮುದ್ರಿತ ಪತ್ರಿಕೆಯಲ್ಲಿ ಕಾಣಲಿದೆ. ಅಷ್ಟೇ ಅಲ್ಲದೇ 15 ಸೆಕೆಂಡುಗಳವರೆಗೆ ವೀಕ್ಷಣೆಗೆ ಲಭ್ಯವಿರಲಿದ್ದು, ಹೀಗಾಗಿ, ಮತದಾನದ ಅವಧಿಯನ್ನು ಒಂದು ಗಂಟೆ ಹೆಚ್ಚಿಸಲಾಗಿದೆ.

ಏನಿದು ವಿವಿ ಪ್ಯಾಟ್?

ವಿವಿಪ್ಯಾಟ್ ಎಂದರೆ ಮತ ಖಾತರಿಪಡಿಸುವ ವೋಟರ್ ವೆರಿಫೈಡ್ ಪೇಪರ್ ಆಡಿಟ್(ವಿವಿಪ್ಯಾಟ್). ಮತದಾರ ತಾನು ಆಯ್ಕೆ ಮಾಡಬೇಕಿರುವ ವ್ಯಕ್ತಿಯ ಹೆಸರಿನ ಮುಂದಿನ ಗುಂಡಿ ಒತ್ತಿದರೆ ಸಾಕು ಮತಯಂತ್ರದ ಪಕ್ಕದಲ್ಲಿಯೇ ಇಡಲಾಗುವ ಮತ ಖಾತರಿಪಡಿಸುವ ವೋಟರ್ ವೆರಿಫೈಡ್ ಪೇಪರ್ ಆಡಿಟ್ (ವಿವಿ ಪ್ಯಾಟ್) ಯಂತ್ರದಲ್ಲಿ ನಾವು ಮತ ಹಾಕಿದ ಅಭ್ಯರ್ಥಿಯ ಹೆಸರಿನಲ್ಲಿ ಪ್ರಿಂಟ್ ಆದ ಚೀಟಿ ಮತದಾನದ ಪೆಟ್ಟಿಗೆಯಲ್ಲಿ ಬೀಳುತ್ತದೆ. ಆಗ ಮತದಾರ ತಾನು ಚಲಾಯಿಸಿದ ಮತ ಸರಿಯಾಗಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬಹುದು.

ವಿದ್ಯುನ್ಮಾನ ಮತಯಂತ್ರಗಳ ಬಗೆಗಿನ ಸಂದೇಹ ನಿವಾರಿಸುವ ಸಲುವಾಗಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿವಿಪ್ಯಾಟ್ ಗಳನ್ನು ಬಳಸಲಾಗುತ್ತಿದೆ. ಇವಿಎಂ ನಲ್ಲಿ ಅಭ್ಯರ್ಥಿಗಳ ಭಾವಚಿತ್ರ ಇರಲಿದ್ದು, ಇದರ ಸಹಾಯದಿಂದ ಮತದಾರರು ಚಲಾಯಿಸಿದ ಮತವು ಯಾವ ಅಭ್ಯರ್ಥಿಗೆ ಮತ್ತು ಚಿಹ್ನೆಗೆ ಚಲಾವಣೆಯಾಗಿದೆ ಎಂದು ವಿವಿಪ್ಯಾಟ್ ಮುದ್ರಿತ ಪತ್ರಿಕೆಯ ಮೂಲಕ ತಿಳಿಯಬಹುದು.

ವಿದ್ಯುನ್ಮಾನ ಮತಯಂತ್ರಗಳ ಬಗೆಗಿನ ಸಂದೇಹ ನಿವಾರಿಸುವ ಸಲುವಾಗಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿವಿಪ್ಯಾಟ್ ಗಳನ್ನು ಮತಗಟ್ಟೆಗಳಲ್ಲಿ ಅಳವಡಿಸಲಾಗುತ್ತಿದೆ. ಇದರಿಂದ ಮತದಾರರು ಚಲಾಯಿಸಿದ ಮತವು ಯಾವ ಅಭ್ಯರ್ಥಿ ಮತ್ತು ಚಿಹ್ನೆಗೆ ಚಲಾವಣೆ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕಾಗಿದೆ. ಮತದಾರರು ಚಲಾಯಿಸಿದ ಮತವು ಯಾವ ಅಭ್ಯರ್ಥಿ ಮತ್ತು ಚಿಹ್ನೆಗೆ ಚಲಾವಣೆ ಆಗಿದೆ ಎಂಬುದು ವಿವಿಪ್ಯಾಟ್ ಮುದ್ರಿತ ಪತ್ರಿಕೆಯಲ್ಲಿ ಕಾಣಲಿದೆ. 15 ಸೆಕೆಂಡುಗಳವರೆಗೆ ವೀಕ್ಷಣೆಗೆ ಲಭ್ಯವಿರಲಿದೆ. ಹೀಗಾಗಿ, ಮತದಾನದ ಅವಧಿಯನ್ನು ಒಂದು ಗಂಟೆ ಹೆಚ್ಚಿಸಲಾಗಿದೆ. ಅಷ್ಟೇ ಅಲ್ಲದೇ ಮತದಾರರು ವಿವಿಪ್ಯಾಟ್ ನಲ್ಲಿ ಮುದ್ರಿತವಾಗುವ ಪ್ರತಿಯನ್ನು ಪಡೆಯಲು ಅವಕಾಶವಿರುವುದಿಲ್ಲ ಎಂದೂ ತಿಳಿದು ಬಂದಿದೆ.

ವಿವಿಪ್ಯಾಟ್ ಕಾರ್ಯನಿರ್ವಹಣೆ ಹೇಗೆ ಗೊತ್ತೇ?

ವಿವಿಪ್ಯಾಟ್ ಗಳನ್ನು ಮತಯಂತ್ರಗಳಿಗೆ ಜೋಡಿಸಲಾಗಿರುತ್ತದೆಯಲ್ಲದೇ ಇವಿಎಂನಲ್ಲಿ ಮತದಾನ ಮಾಡುತ್ತಿದ್ದಂತೆ ಯಾರಿಗೆ ಮತ ಹಾಕಿದ್ದೇವೆ ಎನ್ನುವುದನ್ನು ತೋರಿಸುವ ಚೀಟಿಯೊಂದು ವಿವಿಪ್ಯಾಟ್ ನಲ್ಲಿ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲದೇ ವಿವಿ ಪ್ಯಾಟ್ ನ ಗ್ಲಾಸಿನೊಳಗಿನಿಂದ ಮತದರಾರರು ಈ ಚೀಟಿಯನ್ನು 7 ಸೆಕೆಂಡ್ ಗಳ ಕಾಲ ನೋಡಬಹುದಾಗಿದೆ. ನಂತರ ಇದು ಬಾಕ್ಸಿನೊಳಗೆ ಬೀಳುತ್ತದೆ.

ಒಂದೊಮ್ಮೆ ಮತ ಎಣಿಕೆ ವೇಳೆ ಮತಯಂತ್ರದಲ್ಲಿ ದೋಷವುಂಟಾದಲ್ಲಿ, ಗೊಂದಲಗಳು ಕಂಡು ಬಂದಲ್ಲಿ ವಿವಿಪ್ಯಾಟ್ ಬಾಕ್ಸ್ ನಲ್ಲಿ ದಾಖಲಾದ ಮತಗಳನ್ನು ಚುನಾವಣಾಧಿಕಾರಿ ಅನುಮತಿಯೊಂದಿಗೆ ಸಿಬ್ಬಂದಿ ತಕ್ಷಣಕ್ಕೆ ಎಣಿಕೆ ಮಾಡಬಹುದಾಗಿದೆ. ಹೀಗಾಗಿ ಯಾವುದೇ ಗೊಂದಲಗಳಿಗೂ ಇಲ್ಲಿ ಅವಕಾಶವಿರುವುದಿಲ್ಲ. ಅಷ್ಟೇ ಅಲ್ಲದೇ ಕೆಲ ಸಮಯಗಳ ಹಿಂದೆ ಕರ್ನಾಟಕದಲ್ಲಿ ನಡೆದ ಉಪಚುನಾವಣೆಯಲ್ಲಿಯೂ ಇದೇ ವಿವಿಪ್ಯಾಟ್ ಒಳಗೊಂಡ ಮತಯಂತ್ರಗಳನ್ನು ಬಳಸಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿರುವುದೇ ಹೆಮ್ಮೆಯ ವಿಚಾರವಾಗಿದೆ!!

ಕರ್ನಾಟಕದಲ್ಲಿ ಸದ್ಯಕ್ಕೆ 56700 ಮತಗಟ್ಟೆಗಳಿದ್ದು, ಇವುಗಳಿಗೆ ತಲಾ ಒಂದು ಇವಿಎಂ ಮತ್ತು ವಿವಿಪ್ಯಾಟ್ ಬೇಕಾಗುತ್ತದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಶೇ. 30 ರಿಂದ 40 ರಷ್ಟು ಹೆಚ್ಚುವರಿ ಇವಿಎಂ ಅಂದರೆ ಸುಮಾರು 75 ಸಾವಿರ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್ ಸಂಗ್ರಹಿಸಿಟ್ಟುಕೊಳ್ಳಲು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಉದ್ದೇಶಿಸಿದೆ. ಹೆಚ್ಚುವರಿ ಇವಿಎಂಗಳನ್ನು ಚುನಾವಣಾ ತರಬೇತಿ, ತಾಂತ್ರಿಕ ತೊಂದರೆ ಕಾಣಿಸಿಕೊಂಡ ಸಂದರ್ಭದಲ್ಲಿ ಬದಲಿಯಾಗಿ ಬಳಸಲು ಹಾಗೂ ಮತದಾನ ಪೂರ್ವ ಎಲ್ಲ ಪಕ್ಷಗಳ ಏಜೆಂಟರ ಮುಂದೆ ನಡೆಯಲಿರುವ ಅಣಕು ಮತದಾನಕ್ಕೆ ಬಳಸಲು ಉದ್ದೇಶಿಸಲಾಗಿದೆ.

ಈ ಬಗ್ಗೆ ರಾಜ್ಯ ಜಂಟಿ ಮುಖ್ಯ ಚುನಾವಣಾಧಿಕಾರಿ ಕೆ.ಎನ್. ರಮೇಶ್ ಮಾತಾನಾಡಿ, “ಈಗಾಗಲೇ ಮತದಾನ ಪಟ್ಟಿಯ ಕರಡು ಪ್ರತಿ ಪ್ರಕಟಿಸಲಾಗಿದೆ. ಹೊಸದಾಗಿ ಸೇರ್ಪಡೆ, ಅಥವಾ ಮರಣ ಇತ್ಯಾದಿ ಕಾರಣದಿಂದ ಮತದಾರರ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಆಗಬಹುದು. ಪರಿಷ್ಕೃತ ಅಂತಿಮ ಪಟ್ಟಿ ಪ್ರಕಟವಾದ ನಂತರವೇ ಮತಗಟ್ಟೆಗಳ ಸಂಖ್ಯೆಯಲ್ಲಿ ಬದಲಾವಣೆ ಆಗಬಹುದು. ಹೀಗಿದ್ದರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಹೊಂದಲಾಗುವುದು” ಎಂದಿದ್ದಾರೆ.

ಅಷ್ಟೇ ಅಲ್ಲದೇ, ಚುನಾವಣಾ ಆಯೋಗದಿಂದ ಚುನಾವಣೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಸುದ್ದಿಗೊಷ್ಟಿ ನಡೆಸಿದ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಕಳೆದ ಬಾರಿ 3 ಕೋಟಿ 13 ಲಕ್ಷ 81 ಸಾವಿರ ಮತದಾನ ಮಾಡಿದ್ದರು. 7 ಲಕ್ಷ 18 ಸಾವಿರ ಯುವ ಮತದಾರರಿದ್ದರು. ಈ ಬಾರಿ 17 ಲಕ್ಷ 42 ಸಾವಿರ ಯುವ ಮತದಾರರಿದ್ದಾರೆ. ಈ ಬಾರಿ 56 ಸಾವಿರ 996 ಮತದಾನ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು, ವಿಶೇಷವಾಗಿ ಈ ಬಾರಿ ಇವಿಎಂಗಳ ಜತೆಗೆ ವಿವಿಪ್ಯಾಟ್ ಗಳ ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಅಷ್ಟೇ ಅಲ್ಲದೇ, ಒಟ್ಟು 46,110 ವಿವಿಪ್ಯಾಟ್ ಗಳನ್ನು ಬಳಸಲಾಗುತ್ತದೆಯಲ್ಲದೇ ಈ ಚುನಾವಣೆಯಲ್ಲಿ 3,56,562 ಚುನಾವಣಾ ಸಿಬ್ಬಂದಿ ಇರುತ್ತಾರೆ. ಅವರುಗಳಿಗೆ ಈಗಾಗಲೇ ತರಬೇತಿ ನೀಡಲಾಗುತ್ತಿದ್ದು, ನೀತಿ ಸಂಹಿತೆ ಈಗಿನಿಂದಲೇ ಜಾರಿಯಾಗುತ್ತದೆ. ಈ ಬಗ್ಗೆ ಸರ್ಕಾರ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಎಲ್ಲಾ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 1 ಸಾವಿರದ 96 ಚೆಕ್ ಪೆÇೀಸ್ಟ್ ಗಳನ್ನು ಸ್ಥಾಪಿಸಲು ಪೆÇಲೀಸ್ ಇಲಾಖೆಗೆ ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ!!

ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಬ್ಯಾಲೇಟ್ ಯುನಿಟ್, ಕಂಟ್ರೋಲ್ ಯುನಿಟ್ ಜೊತೆಗೆ ವಿವಿಪ್ಯಾಟ್ ಸಹ ಬಳಕೆ ಮಾಡಲಾಗುತ್ತಿರುವುದೇ ಹೆಮ್ಮೆಯ ವಿಚಾರವಾಗಿದೆ!! ಒಟ್ಟಿನಲ್ಲಿ ಮತದಾರನಿಗೆ ತಾನು ಯಾವ ಪಕ್ಷಕ್ಕೆ ಯಾವ ಅಭ್ಯರ್ಥಿಗೆ ಮತದಾನ ಮಾಡಿದ್ದೇನೆ ಎಂಬುದು ಸ್ಪಷ್ಟವಾಗಲಿದೆ. ದೇಶಾದ್ಯಂತ ಇವಿಎಂ ಜೊತೆ 16 ಲಕ್ಷ ವಿವಿಪ್ಯಾಟ್ ಮೆಶಿನ್ ಅಳವಡಿಕೆಗೆ ಚುನಾವಣಾ ಆಯೋಗ ಸಲ್ಲಿಸಿದ್ದ 3174 ಕೋಟಿ ರೂಪಾಯಿ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿರುವುದೇ ಹೆಮ್ಮೆಯ ವಿಚಾರವಾಗಿದೆ.

– ಅಲೋಖಾ

Editor Postcard Kannada:
Related Post