X

ಬಡವರ ಹಸಿವು ತಣಿಸಲಿದೆ ಪ್ರಧಾನಿ ಮೋದಿ ಸರ್ಕಾರದ ಕಡಿಮೆ ದರದ ಭಾರತ್ ಬ್ರ್ಯಾಂಡ್ ಅಕ್ಕಿ

ಭಾರತದ ಬಡ ಜನರನ್ನು ಗಮನದಲ್ಲಿರಿಸಿಕೊಂಡು ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಲವಾರು ಜನಸ್ನೇಹಿ ಮತ್ತು ಅನುಕೂಲಕಾರಿ ಯೋಜನೆಗಳನ್ನು ಜಾರಿಗೆ ತಂದಿದೆ.

ದೇಶದ ಬಡ ಜನರು ಹಸಿವಿನಿಂದ ಬಳಲುವಂತಾಗಬಾರದು. ಎಲ್ಲರೂ ಆಹಾರದ ಹಕ್ಕನ್ನು ಸರಿಯಾಗಿ ಪಡೆಯುವ ಹಾಗೆ ಆಗಬೇಕು ಎನ್ನುವ ನಿಟ್ಟಿನಲ್ಲಿ ಕೆಲ ಸಮಯದ ಹಿಂದಷ್ಟೇ ಕೇಂದ್ರ ಸರ್ಕಾರ ಪಿ ಎಂ ಗರೀಬ್ ಕಲ್ಯಾಣ್ ಅನ್ನ ಯೋಜವಾವನ್ನು ಮುಂದಿನ ಐದು ವರ್ಷಗಳಿಗೆ ವಿಸ್ತರಣೆ ಮಾಡಿದೆ. ಇದರ ಬೆನ್ನಲ್ಲೇ ಜನರಿಗೆ ಮತ್ತಷ್ಟು ಅನುಕೂಲ ಒದಗಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ.

ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಬಡವರು ಮತ್ತು ಮಧ್ಯಮ ವರ್ಗದ ಜನರಿಗಾಗಿ ಮತ್ತೊಂದು ಕ್ರಮವನ್ನು ಜಾರಿಗೆ ತಂದಿದೆ. ಜನರಿಗೆ ಸುಲಭ ದರದಲ್ಲಿ ಅಕ್ಕಿ ದೊರೆಯುವ ಹಾಗೆ ಮಾಡಲು ಸರ್ಕಾರ ತೆಗೆದುಕೊಂಡ ದಿಟ್ಟ ಹೆಜ್ಜೆ ಇದಾಗಿದೆ. ಭಾರತ್ ಬ್ರ್ಯಾಂಡ್ ಯೋಜನೆಯ ಮೂಲಕ ಕಡಿಮೆ ದರಕ್ಕೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿರುವುದಾಗಿದೆ. ಪ್ರತಿ ಕೆ ಜಿ ಅಕ್ಕಿಗೆ 29 ರೂ. ಹಾಗೂ ತೊಗರಿಬೇಳೆ ಕೆ ಜಿ ಗೆ 60ರೂ. ಗಳಂತೆ ನಿಗದಿಪಡಿಸಲಾಗಿದ್ದು, ಅಡುಗೆ ಸಾಮಗ್ರಿಗಳನ್ನು ಕಡಿಮೆ ಬೆಲೆಗೆ ಜನರಿಗೆ ದೊರೆಯುವ ಹಾಗೆ ಮಾಡಲು ಸರ್ಕಾಕ ಕ್ರಮ ಕೈಗೊಂಡಿರುವುದಾಗಿದೆ.

ಭಾರತ್ ಬ್ರ್ಯಾಂಡ್ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮುಖೇನ ಕೆಲವೊಂದು ದಿನಸಿ ಸಾಮಗ್ರಿಗಳನ್ನು ಕೈಗೆಟುಕುವ ದರದಲ್ಲಿ ಮಾರುಕಟ್ಟೆಗೆ ತಂದಿರುವುದಾಗಿದೆ. ಕೆ.ಜಿ. ಅಕ್ಕಿಗೆ 29 ರೂ‌., ಗೋಧಿ 50 ರೂ., ಹೆಸರು ಕಾಳು 90 ರೂ. ಮತ್ತು ತೊಗರಿ ಬೇಳೆ 60 ರೂ. ಗಳಿಗೆ ಮಾರಾಟ ಮಾಡಲಾಗುತ್ತಿದೆ.

ಕರ್ನಾಟಕಕ್ಕೆ ಸಂಬಂಧಿಸಿದ ಹಾಗೆ ಈ ಯೋಜನೆಯನ್ನು ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಹಿ ಎಸ್ ಯಡಿಯೂರಪ್ಪ ಅವರು ಉದ್ಘಾಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ ಈ ಯೋಜನೆಗೆ ಜೀವ ನೀಡಲಾಗಿದೆ.

ಒಟ್ಟಿನಲ್ಲಿ ದೇಶದ ಬಡ‌ ಜನರ ಸಂಕಷ್ಟಕ್ಕೆ ಹೆಗಲಾಗುವ ಎಲ್ಲಾ ಕಾರ್ಯಗಳನ್ನು ಪ್ರಧಾನಿ ಮೋದಿ ಸರ್ಕಾರ ತನ್ನ ಮೊದಲ ಆದ್ಯತೆಯಾಗಿ ಮಾಡುತ್ತಿದೆ.

Post Card Balaga:
Related Post