X

ಹಿಂದೂ ಕಾರ್ಯಕರ್ತರಿಗೆ ಸರ್ಕಾರದಿಂದ ಬಿಗ್ ಶಾಕ್!! ಓರ್ವ ನಲಪಾಡ್‍ಗಾಗಿ 200ಕ್ಕೂ ಅಧಿಕ ಮಂದಿ ಹಿಂದೂ ಕಾರ್ಯಕರ್ತರು ಅರೆಸ್ಟ್!

ಇನ್ನೇನು ರಾಜ್ಯ ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದೆ. ರಾಜ್ಯದಲ್ಲಿ ಕಳೆದ 5 ವರ್ಷದಿಂದ ರಾಜ್ಯದಲ್ಲಿ ಧ್ವೇಷದ ರಾಜಕಾರಣ ಮಾಡಿ ಸರ್ಕಾರ ನಡೆಸುತ್ತಿದ್ದ ಕೊಲೆಗಡುಕ ಕಾಂಗ್ರೆಸ್ ಪಕ್ಷಕ್ಕೆ ನಡುಕ ಆರಂಭವಾಗಿದೆ. ಒಂದು ಕಡೆ ಪ್ರಧಾನಿ ನರೇಂದ್ರ ಮೋದಿಯವರ ಅಬ್ಬರ ಹಾಗೂ ಮತ್ತೊಂದು ಕಡೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಚುನಾವಣಾ ರಣತಂತ್ರ ಕಾಂಗ್ರೆಸ್‍ಗೆ ಭಾರೀ ಇಕ್ಕಟ್ಟನ್ನೇ ಸೃಷ್ಟಿಸಿದೆ.

ಒಂದು ಕಡೆ ಭಾರತೀಯ ಜನತಾ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ದಂಡೇ ಚುನಾವಣಾ ಅಖಾಡಕ್ಕೆ ಧುಮುಕಿದರೆ ಮತ್ತೊಂದು ಕಡೆ ರಾಜ್ಯದ ಪ್ರಮುಖ ಹಿಂದೂ ಸಂಘಟನೆಗಳೇ ಚಾನಾವಣಾ ಅಖಾಡಕ್ಕೆ ಧುಮುಕಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಭಾರೀ ಸವಾಲನ್ನು ಒಡ್ಡಿದ್ದು, ಇದಕ್ಕೆ ಕಾಂಗ್ರೆಸ್ ಹೊಸ ರಣನೀತಿಯನ್ನು ಹೆಣೆದಿದೆ.

ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ…

ಈ ಮಾನಗೆಟ್ಟ ಸರ್ಕಾರ ಯಾವ ರೀತಿ ತನ್ನ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದರೆ ಚುನಾವಣೆ ಗೆಲ್ಲಲು ನೀಚ ರಾಜಕೀಯಕ್ಕೆ ಇಳಿದಿದೆ. ಚುನಾವಣಾ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಪ್ರತಿ ಗೆಲುವಿನ ಹಿಂದಿರುವ ಶಕ್ತಿ ಎಂದರೆ ಅದು ಹಿಂದೂ ಸಂಘಟನೆಗಳು. ಹೀಗಾಗಿ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ದಾಖಲಿಸಿ ಅವರನ್ನು 6 ತಿಂಗಳುಗಳ ಕಾಲ ಜಾಮೀನಿಲ್ಲದೆ ಜೈಲ್‍ನಲ್ಲಿಡುವುದು ಈ ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ. ಹೀಗಾಗಿ ಇಂತಹ ದುಷ್ಕøತ್ಯಕ್ಕೆ ಇಳಿದಿದೆ ರಾಜ್ಯ ಕಾಂಗ್ರೆಸ್ ಸರ್ಕಾರ.

200ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಮೇಲೆ ಕೇಸ್..!

ಈವರೆಗೆ ರಾಜ್ಯದ 200ಕ್ಕೂ ಅಧಿಕ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಗೂಂಡಾ ಕಾಯ್ದೆಯನ್ನು ದಾಖಲಿಸಿದೆ. ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆಧಾರವನ್ನು ಇಟ್ಟುಕೊಂಡು ಈ ಕಾರ್ಯತಂತ್ರ ಹೆಣೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಈ ರೀತಿಯ ನೀಚ ಕೆಲಸಕ್ಕೆ ಇಳಿದಿದೆ. ಮುಂದಿನ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಕೆಲಸ ಮಾಡಲು ಉತ್ಸಾಹಭರಿತವಾಗಿರುವ 200ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ದಾಖಲಿಸಿ ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಶಕ್ತಿಯನ್ನು ಕುಂದಿಸಲು ಬಲು ಪ್ರಯತ್ನವನ್ನು ಮಾಡುತ್ತಿದೆ.

ಅರೆಸ್ಟ್ ಮಾಡುತ್ತಿರುವ ಪೊಲೀಸ್ ಸ್ಕ್ವಾಡ್..!

ರಾಜ್ಯ ಕಾಂಗ್ರೆಸ್ ಸರ್ಕಾರದ ಇಂತಹ ಆದೇಶ ಹೊರಬೀಳುತ್ತಿದ್ದಂತೆ ಕಾರ್ಯಪ್ರವೃತ್ತರಾಗಿರುವ ರಾಜ್ಯ ಪೊಲೀಸರು ಒಬ್ಬೊಬ್ಬನಂತೆ ಹಿಂದೂ ಕಾರ್ಯಕರ್ತರನ್ನು ಬಂಧಿಸಲು ಆರಂಭಿಸಿದ್ದಾರೆ. ಇಂದು ದಕ್ಷಿಣ-ಕನ್ನಡ ಜಿಲ್ಲೆಯ ಮೂಡುಬಿದಿರೆಯ ಹಿಂದೂ ಸಂಘಟನೆಯ ಕಾರ್ಯಕರ್ತ ಸಮಿತ್ ರಾಜ್ ಎಂಬಾತನನ್ನು ಪೊಲೀಸರು ಬಂಧಿಸಿ ಆತನ ಮೇಲೆ ಗೂಂಡಾ ಕಾಯ್ದೆ ದಾಖಲಿಸಿ ಆತನನ್ನು ಜೈಲಿಗಟ್ಟಿದ್ದಾರೆ.

ಈ ಮೂಲಕ ಇನ್ನು 6 ತಿಂಗಳುಗಳ ಕಾಲ ಜಾಮೀನು ಸಿಗದಂತೆಯೂ ಹಾಗೂಮುಂದಿನ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಪರ ಪ್ರಚಾರ ಮಾಡದಂತೆಯೂ ಮಾಡುವ ಹುನ್ನಾರವನ್ನು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧೇಶನದಂತೆ ರಾಜ್ಯ ಪೊಲೀಸ್ ಇಲಾಖೆ ಮಾಡುತ್ತಿದ್ದಾರೆ. ಇಂದು ಹಿಂದೂ ಸಂಘಟನೆಯ ಕಾರ್ಯಕರ್ತ ಸಮಿತ್ ರಾಜ್‍ನನ್ನು ಬಂಧಿಸುವ ಮೂಲಕ ತಮ್ಮ ರಾಜ್ಯ ಕಾಂಗ್ರೆಸ್ ಸರ್ಕಾರದ ಅಹಾಯಕ ಬುದ್ಧಿಯನ್ನು ರಾಜ್ಯದ ಜನತೆಯ ಮುಂದೆ ಬೆತ್ತಲಾಗಿರಿಸಿದ್ದಾರೆ.

ನಲಪಾಡ್ ಪ್ರಕರಣವೇ ಈ ನಿರ್ಧಾರಕ್ಕೆ ಕಾರಣವಾಯಿತಾ..?

ಕಳೆದ ಎರಡು ವಾರದ ಹಿಂದೆ ಬೆಂಗಳೂರಿನ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಎಂಬ ಗೂಂಡಾನಿಂದ ನಡೆದ ಗೂಂಡಾ ವರ್ತನೆ ರಾಜ್ಯದಲ್ಲಿ ಮತರ್ರವಲ್ಲದೆ ರಾಷ್ಟ್ರದಲ್ಲೇ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಮಾಯಕ ವಿದ್ವತ್ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಹುಡುಗಿಯರ ಎದುರು ಹೀರೋ ಆಗಲು ಹೋದ ಈ ನಲಪಾಡ್ ಪರಿಸ್ಥಿತಿ ಇಂದು ನಾಯಿಪಾಡಾಗಿದೆ. ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ನ್ಯಾಯಾಲಯ ಕೂಡಾ ಆತನಿಗೆ ಜಾಮೀನು ನೀಡದೆ ಜೈಲು ಶಿಕ್ಷೆ ಖಾಯಂಗೊಳಿಸಿದೆ.

ಗೂಂಡಾ ನಲಪಾಡ್ ಮುಂದಿನ ರಾಜ್ಯ ವಿಧಾನ ಸಭಾ ಚುನಾವಣೆಗೆ ಭಾರೀ ಕೊಡುಗೆಯನ್ನು ನೀಡುವಂತಹ ವ್ಯಕ್ತಿಯಾಗಿದ್ದ. ತನ್ನ ಹಣದ ಹೊಳೆ ಹಾಗೂ ಅಧಿಕಾರ ಮತ್ತು ಗೂಂಡಾಗಿರಿಯ ಮದದಿಂದ ತನ್ನ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನಹು ಮತ್ತೆ ಅಧಿಕಾರಕ್ಕೇರಿಸುವಲ್ಲಿ ಭಾರೀ ಮುಂದಾಳತ್ವವನ್ನು ವಹಿಸಿಕೊಂಡವನಾಗಿದ್ದ. ಆದರೆ ಕಾಂಗ್ರೆಸ್‍ನ ಕೊನೇ ಘಳಿಗೆಯಲ್ಲಿ ಆತನ ಗೂಂಡಾ ಸಾಮ್ರಾಜ್ಯವೇ ಬೆಚ್ಚಿ ಬಿದ್ದಿತ್ತು. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದ ಈ ಗೂಂಡಾ ನಲಪಾಡ್ ಇಂದು ಜೈಲುವಾಸವನ್ನು ಅನುಭವಿಸುತ್ತಿದ್ದಾನೆ.

ಸದ್ಯ ಈ ಕಾಂಗ್ರೆಸ್ ಗೂಂಡಾಗಳ ಕೈಕಾಲು ಕಟ್ಟಿದಂತಾಗಿದ್ದು, ಈ ಸೇಡನ್ನು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಮೇಲೆ ತೋರಿಸಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಗುವಂತೆ ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಇದರ ಪ್ರಥಮ ಹಂತವೇ ಬಜರಂಗದಳದ ಸಹಿತ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ದಾಖಲಿಸುವುದು. ಈವರೆಗೂ ಬರೋಬ್ಬರಿ 200ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾಕಾಯ್ದೆ ದಾಖಲಿಸಿದ್ದು ಹಲವಾರು ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿ ಅಜ್ಞಾತವಾಸಕ್ಕೆ ಕೊಂಡೊಯ್ದಿದ್ದಾರೆ.

ಅಲ್ಪಸಂಖ್ಯಾತರ ಮೇಲಿನ ಕೇಸ್ ವಾಪಾಸ್…

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಧೋರಣೆಯನ್ನು ಅನುಸರಿಸಿಕೊಂಡು ಬರುತ್ತಿರುವುದು ಇದೇ ಮೊದಲಲ್ಲ. ತನ್ನ ಸರ್ಕಾರ ಬಂದೊಡನೆ ಮುಸ್ಲಿಮರ ಮೇಲಿನ ಕೇಸ್ ವಾಪಾಸ್ ಎಂಬ ಕಾನೂನನ್ನು ಜಾರಿಗೆ ತಂದಿತ್ತು. ಇದರಿಂದ ರಾಜ್ಯದಲ್ಲಿ ಅನೇಕ ಹಿಂದೂ ಕಾರ್ಯಕರ್ತರ ಕೊಲೆಗಳೇ ನಡೆದು ಹೋಯಿತು. ಈಗ ಮತ್ತೆ ಇತ್ತೀಚೆಗೆ ಮುಸಲ್ಮಾನರ ಮೇಲಿನ ಪ್ರಕರಣಗಳನ್ನು ವಾಪಾಸ್ ಪಡೆದಿತ್ತು. ಆದರೆ ಹಿಂದೂಗಳ ಮೇಲೆ ಮನಬಂತೆ ಕೇಸ್ ದಾಖಲಿಸಿ ಸದ್ಯ 200 ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆಯನ್ನೂ ದಾಖಲಿಸಿ ಅವರನ್ನು ಬಂಧಿಸುವ ಹೇಡಿ ಕೃತ್ಯವನ್ನು ತೋರಿಸುತ್ತಿದೆ.

ತನ್ನ ವಿಫಲತೆಗಳನ್ನೇ ಪ್ರದರ್ಶಿಸಿಕೊಂಡು ಬರುತ್ತಿರುವ ಕಾಂಗ್ರೆಸ್ ಸರ್ಕಾರ ಈಗ ಭಾರತೀಯ ಜನತಾ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಬೆಂಬಲವಾಗಿ ನಿಲ್ಲುತ್ತಾರೆ ಎನ್ನುವ ಕಾರಣಕ್ಕಾಗಿ ಕಾರ್ಯಕರ್ತರನ್ನು ಜೈಲಿಗೆ ತಳ್ಳಿ ಅವರ ಮೇಲೆ ಗೂಂಡಾ ಕಾಯ್ದೆ ಪ್ರಯೋಗಿಸುವ ಹುನ್ನಾರವನ್ನೂ ನಡೆಸಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಪುಕ್ಕಲುತನ ಹಾಗೂ ಹತಾಶ ಮನೋಭಾವದ ಕೈಗನ್ನಡಿಯಲ್ಲದೆ ಮತ್ತೇನೂ ಅಲ್ಲ…

  • ಸುನಿಲ್ ಪಣಪಿಲ
Editor Postcard Kannada:
Related Post