X

ಬಿಗ್ ಬ್ರೇಕಿಂಗ್! ಪಕ್ಷದ ಹುದ್ದೆಗೆ ಗುಡ್ ಬೈ ಹೇಳಿದ ಕಾಂಗ್ರೆಸ್ ಶಾಸಕರು..! ಬೆಚ್ಚಿಬಿದ್ದ ಕಾಂಗ್ರೆಸ್ ಹೈಕಮಾಂಡ್..!

ಕಾಂಗ್ರೆಸ್ ಮತ್ತು ಜೆಡಿಎಸ್ ನ ಮೈತ್ರಿ ಸರಕಾರಕ್ಕೆ ಸೆಡ್ಡು ಹೊಡೆದಿರುವ ಶಾಸಕರು ತಮ್ಮ ಒಗ್ಗಟ್ಟು ಏನೆಂಬುದನ್ನು ನೇರವಾಗಿ ಕಾಂಗ್ರೆಸ್ ಹೈಕಮಾಂಡ್ ಗೆ ಮುಟ್ಟಿಸಿದ್ದಾರೆ. ಎರಡೂ ಪಕ್ಷಗಳಲ್ಲಿ ಅಸಮಧಾನಗೊಂಡ ಶಾಸಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಚಿವ ಸಂಪುಟ ರಚನೆಯ ಬಗ್ಗೆ ಅಸಮಧಾನಗೊಂಡ ಶಾಸಕರು ಈಗಾಗಲೇ ಬಹಿರಂಗವಾಗಿಯೇ ಪಕ್ಷದ ರಾಜ್ಯ ನಾಯಕರಿಗೆ ಮತ್ತು ಹೈಕಮಾಂಡ್‌ಗೆ ರಾಜೀನಾಮೇ ನೀಡುವ ಎಚ್ಚರಿಕೆ ನೀಡಿದ್ದು, ಇದೀಗ ರಾಜೀನಾಮೆ ಘೋಷಿಸಿ ಇಡೀ ಮೈತ್ರಿ ಸರಕಾರಕ್ಕೆ ದೊಡ್ಡ ಹೊಡೆತ ನೀಡಿದ್ದಾರೆ. ಸಚಿವ ಸ್ಥಾನ ವಂಚಿತ ಶಾಸಕರು ಈಗಾಗಲೇ ಪಕ್ಷದ ವಿರುದ್ಧ ಸೆಟೆದು ನಿಂತಿದ್ದು, ರಾಹುಲ್ ಗಾಂಧಿ ಭೇಟಿ ಮಾಡಿ ತಮ್ಮ ಮುಂದಿನ ನಿರ್ಧಾರ ಬಹಿರಂಗಪಡಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ.!

ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ ಜಾರಕಿಹೊಳಿ..!

ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ಅತೃಪ್ತ ಶಾಸಕರು ಬಹಿರಂಗವಾಗಿಯೇ ಸಭೆ ನಡೆಸಿದ್ದು, ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ಪಕ್ಷಕ್ಕಾಗಿ ದುಡಿದವರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ, ಹಾಗಾದರೆ ನಮಗೆ ಮರ್ಯಾದೆಯೇ ಇಲ್ಲವಾ? ಎಂದು ಪ್ರಶ್ನಿಸಿದ ಕಾಂಗ್ರೆಸ್ ಶಾಸಕ, ಎಐಸಿಸಿ ಕಾರ್ಯದರ್ಶಿ ಆಗಿರುವಂತಹ ಸತೀಶ್ ಜಾರಕಿಹೊಳಿ ಅವರು ಅಸಮಧಾನ ವ್ಯಕ್ತಪಡಿಸಿದ್ದು, ನೇರವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.!

ಮೈತ್ರಿ ಸರಕಾರ ರಚನೆಗೆ ಶಾಸಕರ ಅಗತ್ಯವಿತ್ತು, ಆದರೆ ಈಗ ನಮ್ಮ ಅಗತ್ಯ ಮೈತ್ರಿ ಸರಕಾರಕ್ಕಿಲ್ಲ. ಆದ್ದರಿಂದಲೇ ನಮ್ಮನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಕೂಡ ನಮಗೆ ಅನ್ಯಾಯ ಮಾಡಿದೆ, ನಮ್ಮ ಬೇಡಿಕೆ ಮುಂದಿಟ್ಟರೂ ಯಾವುದೇ ಸ್ಪಂದನೆ ಪಕ್ಷದ ಕಡೆಯಿಂದ ನಮಗೆ ಸಿಕ್ಕಿಲ್ಲ. ಆದ್ದರಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿಕೊಂಡಿದ್ದಾರೆ. ನಾಳೆ ಬೆಳಗಾವಿಯ ತಮ್ಮ ನಿವಾಸದಲ್ಲಿ ಅಧಿಕೃತವಾಗಿ ರಾಜೀನಾಮೆ ಘೋಷಿಸಲಿರುವ ಸತೀಶ್ ಅವರು ಇದೀಗ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.!

ಸಾಮೂಹಿಕ ರಾಜೀನಾಮೆಗೆ ಬೆಂಬಲಿಗರ ಚಿಂತನೆ..!

ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡುವುದಾಗಿ ಹೇಳಿಕೊಂಡ ಬೆನ್ನಲ್ಲೇ ಇದೀಗ ಅವರ ಬೆಂಬಲಿಗರೂ ಕೂಡ ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ. ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಬೆಂಬಲಿಗರು, ೧೪ ಜನ ಜಿಲ್ಲಾ ಪಂಚಾಯತ್ ಸದಸ್ಯರು, ೨೫ ತಾಲೂಕು ಪಂಚಾಯತ್ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.!

ಆದ್ದರಿಂದ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ಒಬ್ಬೊಬ್ಬರಾಗಿಯೇ ಪಕ್ಷದಿಂದ ಹೊರ ಬರುತ್ತಿದ್ದು, ಮೈತ್ರಿ ಸರಕಾರಕ್ಕೆ ಹೊಡೆತ ಬೀಳುವ ಸಾಧ್ಯತೆ ಹೆಚ್ಚಿದೆ. ಅತೃಪ್ತ ಶಾಸಕರ ಆಕ್ರೋಶಕ್ಕೆ ಸ್ವತಃ ಕಾಂಗ್ರೆಸ್ ಹೈಕಮಾಂಡ್ ಕೂಡ ಬೆಚ್ಚಿಬಿದ್ದಿದ್ದು, ಶಾಸಕರನ್ನು ಸಮಧಾನಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದೆ ಆದರೂ ಪ್ರಯೋಜನವಾಗಿಲ್ಲ..!

–ಅರ್ಜುನ್

Editor Postcard Kannada:
Related Post