X

ಬಿಗ್ ಬ್ರೇಕಿಂಗ್: ನಲಪಾಡ್ ವಕೀಲರ ವಾದ ತಡೆದು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು! ನಲಪಾಡ್ ರಾದ್ಧಾಂತವನ್ನು ಒಪ್ಪಿಕೊಂಡ ಕೋರ್ಟ್!!

ನಲಪಾಡ್ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದ್ದಂತೆ ಇಂದು ಹೈಕೋರ್ಟ್ ನ್ಯಾಯಮೂರ್ತಿಗಳು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. 63ನೇ ಸೆಷನ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನಂತರ ಅಲ್ಲಿ ಜಾಮೀನು ಸಿಗದ ಹಿನ್ನೆಯಲ್ಲಿ ನಲಪಾಡ್ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು. ನಂತರ ಹೈಕೋರ್ಟ್‍ನಲ್ಲೂ ವಾದ ವಿವಾದಗಳು ನಡೆದು ಹಲವಾರು ಬಾರಿ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದಕ್ಕೆ ಹಾಕಿದ್ದರು.

ಇಂದು ಹೈಕೋರ್ಟ್‍ನಲ್ಲಿ ನಡೆಯಿತು ಭಾರೀ ಚರ್ಚೆ..!

ಇಂದು ಕೂಡಾ ಹೈಕೋರ್ಟ್‍ನಲ್ಲಿ ಭಾರೀ ಬಿಸಿಬಿಸಿ ಚರ್ಚೆಗಳೇ ನಡೆದಿತ್ತು. ವಾದ ಪ್ರತಿವಾದಗಳು ಭರ್ಜರಿಯಾಗಿಯೇ ನಡೆದಿತ್ತು. ಈ ಆರೋಪಿ ನಲಪಾಡ್ ಪರ ವಾದ ಮಂಡಿಸಿದ ಸಿ.ವಿ.ನಾಗೇಶ್ ವಿದ್ವತ್ ಮೇಲೆ ಹಲ್ಲೆ ಮಾಡಿಲ್ಲ ಎಂದು ಹೇಳಿದ್ದಾರೆ. “ವಿದ್ವತ್ ಮೇಲೆ ನಲಪಾಡ್ ಯಾವುದೇ ಹಲ್ಲೆಯನ್ನು ನಡೆಸಿಲ್ಲ. ಆತನ ಗ್ಯಾಂಗ್‍ನಲ್ಲೂ ಯಾವುದೇ ಆಯುಯಧಗಳು ಇರಲಿಲ್ಲ. ಹೀಗಾಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬುವುದು ಶುದ್ಧ ಸುಳ್ಳು” ಎಂದು ಹೇಳಿದ್ದಾರೆ.

ಮಧ್ಯಪ್ರವೇಶಿಸಿದ ನ್ಯಾಯಮೂರ್ತಿಗಳು…

ನಲಪಾಡ್ ಪರ ವಾದ ಮಂಡಿಸುತ್ತಿದ್ದ ವಕೀಲ ಸಿ.ವಿ.ನಾಗೇಶ್ ಅವರನ್ನು ತಕ್ಷಣ ತಡೆದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಹೇಳಿಕೆಯನ್ನು ಕೇಳಿದ ಸ್ವತಃ ನಲಪಾಡ್ ವಕೀಲ ಸಿವಿ ನಾಗೇಶ್ ಅವರೇ ದಂಗಾಗಿ ಹೋಗಿದ್ದಾರೆ. ಮಾತ್ರವಲ್ಲದೆ ಅವರು ತಮ್ಮ ಹೇಳಿಕೆಯನ್ನು ವಾಪಾಸು ಪಡೆಯುವುದೋ ಬೇಡವೋ ಎಂಬ ಗೊಂದಲಕ್ಕೆ ಸಿಲುಕಿದ್ದರು.

“ವಕೀಲರೇ, ನಲಪಾಡ್ ಹಲ್ಲೆ ನಡೆಸಿಲ್ಲ ಎಂಬ ವಾದವನ್ನು ಮಂಡಿಸಬೇಡಿ. ಆತ ಹಲ್ಲೆ ನಡೆಸಿರುವುದು ಸ್ವತಃ ನಾನೇ ಸಿಸಿಟಿವಿಯಲ್ಲಿ ವೀಕ್ಷಿಸಿದ್ದೇನೆ. ಹೀಗಾಗಿ ನಲಪಾಡ್ ವಿದ್ವತ್ ಮೇಲೆ ಹಲ್ಲೆ ನಡೆಸಿರುವುದು ಧೃಡ. ಹಲ್ಲೆ ನಡೆಸಿಲ್ಲ ಎಂಬ ವಿಚಾರವನ್ನು ಬಿಟ್ಟು ಉಳಿದ ವಿಚಾರಗಳ ಬಗ್ಗೆ ಮಾತನಾಡಿ. ಆತ ಯಾವ ರೀತಿ ಹಲ್ಲೆ ಮಾಡಿದ್ದಾನೆ ಎಂದು ನಾನೇ ನನ್ನ ಕಣ್ಣಾರೆ ನೋಡಿದ್ದೇನೆ. ವಿದ್ವತ್ ಅವರನ್ನು ನೋಡಿಕೊಳ್ಳುತ್ತಿರುವ ವೈಧ್ಯರ ರಿಪೋರ್ಟನ್ನೂ ನಾನು ನೋಡಿದ್ದೇನೆ. 3 ಬಾರಿ ರಿಪೋರ್ಟ್ ತರಿಸಿ ನೋಡಿದ್ದೇನೆ. ಯಾವ ರೀತಿಯ ಗಂಭೀರ ಗಾಯಗಳು ಇವೆ ಎಂದೆ ನಾನು ನೋಡಿದ್ದೇನೆ. ಹಲ್ಲೆ ಮಾಡಿಲ್ಲ ಎಂಬ ವಾದವನ್ನು ಬಿಟ್ಟು ಬೇರೆ ವಿಷಯವನ್ನು ಹಿಡಿದುಕೊಂಡು ವಾದ ಮಾಡಿ” ಎಂದು ಗದರಿಸುತ್ತಾರೆ.

ನ್ಯಾಯಮೂರ್ತಿಗಳ ಈ ಹೇಳಿಕೆಗಳಿಗೆ ಸ್ವತಃ ನಲಪಾಡ್ ವಕೀಲರಿಗೆ ಶಾಕ್ ಆಗಿತ್ತು. ಮುಂದೇನು ವಾದ ಮಾಡೋದು ಎಂದು ಕಸಿವಿಸಿಯಾಗಿತ್ತು. ಮಾತ್ರವಲ್ಲದೆ ಹಲ್ಲೆ ನಡೆಸಿಲ್ಲ ಎಂದೇ ವಾದ ಮಾಡಲು ತಯಾರಾಗಿ ಬಂದಿದ್ದ ನಲಪಾಡ್ ವಕೀಲರು ಮುಂದೇನು ಮಾಡೋದೆಂದು ಗೊಂದಲಕ್ಕೆ ಈಡಾಗುತ್ತಾರೆ. ನಂತರ ಮತ್ತೆ ವಾದ ಮಂಡಿಸಿದ ನಲಪಾಡ್ ವಕೀಲರು, “ನಲಪಾಡ್‍ಗೆ ವಿದ್ವತ್ ಮೇಲೆ ಹಲ್ಲೆ ಮಾಡುವ ಯಾವುದೇ ರೀತಿಯ ಉದ್ಧೇಶ ಇರಲಿಲ್ಲ. ಯಾವುದೇ ಪ್ರಿಪ್ಲಾನ್ ಇರಲಿಲ್ಲ. ಅಲ್ಲೇ ನಡೆದ ಸಣ್ಣ ಘಟನೆಯಿಂದ ಹಲ್ಲೆಗಳಾಗಿರಬಹುದು. ಮಾತ್ರವಲ್ಲದೆ ಆತನ ಗ್ಯಾಂಗ್ ಬಳಿ ಯಾವುದೇ ಆಯೂಧಗಳು ಇರಲಿಲ್ಲ. ಬಾಟಲಿ ಒಂದು ಆಯುಧವೇ ಅಲ್ಲ. ಅತಿ ದೊಡ್ಡ ಗಾಯಗಳೂ ಆತನಿಗೆ ಆಗಿಲ್ಲ. ಬೇಕಂತಲೇ ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಲ್ಲ. ಆತನ ಪೋಷಕರು ಡ್ರಾಮಾ ಮಡುತ್ತಿದ್ದಾರೆ. ಹೀಗಾಗಿ ತನ್ನ ಕಕ್ಷಿದಾರನಿಗೆ ಜಾಮೀನು ನೀಡಬೇಕಾಗಿ ವಿನಂತಿಸುತ್ತೇನೆ” ಎಂದು ತನ್ನ ವಾದ ಮಂಡಿಸಿದ್ದಾರೆ. ಆದರೆ ನಲಪಾಡ್ ಹಲ್ಲೆ ನಡೆಸಿಲ್ಲ ಎಂಬ ವಿಚಾರವನ್ನು ಮತ್ತೆ ನಲಪಾಡ್ ವಕೀಲರು ಹೇಳಲೇ ಇಲ್ಲ.

ಎತ್ತಂಗಡಿಯಾಗಿದ್ದ ಎಸಿಪಿ ವಾಪಾಸ್…

ಓರ್ವ ಆರೋಪಿಗೆ ರಕ್ಷಣೆ ನೀಡಿ ಆತನಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಕರುಣಿಸಿದ ಈ ಎಸಿಪಿ ಮಂಜುನಾಥ್‍ಗೆ ಸರ್ಕಾರ ಅಥವ ಪೊಲೀಸ್ ಇಲಾಖೆ ಯಾಕೆ ಕಠಿಣ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂಬ ಆಕ್ರೋಷವೂ ಹೊರಬಿದ್ದಿತ್ತು. ಇದರಿಂದ ಕಂಗಾಲಾದ ಪೊಲೀಸ್ ಇಲಾಖೆ ಗೂಂಡಾ ನಲಪಾಡ್‍ಗೆ ಸಹಕಾರ ನೀಡಿದ ಆ ಎಸಿಪಿ ಮಂಜುನಾಥ್‍ನನ್ನು ಅಲ್ಲಿಂದ ಎತ್ತಂಗಡಿ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ಈಗ ಮತ್ತೆ ಎಸಿಪಿ ಮಂಜುನಾಥ್‍ನನ್ನು ಕರ್ತವ್ಯಕ್ಕೆ ವಾಪಾಸ್ ಕರೆಸಿ ಮತ್ತೆ ಸಾಕ್ಷಿಗಳನ್ನು ನಾಶ ಪಡಿಸುವತ್ತ ಪ್ರಯ್ತನ ನಡೆಯುತ್ತಿದೆ. ಪ್ರಕರಣದ ತನಿಖೆ ಇನ್ನೂ ಹೈಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ. ಎಸಿಪಿ ಮಂಜುನಾಥ್ ಮೇಲೆ ಕರ್ತವ್ಯದ ಆರೋಪವಿದ್ದರೂ ಅವರನ್ನು ಮತ್ತೆ ಕರ್ತವ್ಯಕ್ಕೆ ಸೇರಿಸಿಕೊಂಡಿದ್ದು ಎಷ್ಟು ಸರಿ ಎಂಬ ಪ್ರಶ್ನೆಗಳು ಮೂಡುತ್ತಲೇ ಇದೆ.

ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಗೂಂಡಾ ನಲಪಾಡ್‍ಗೂ ಭಾರೀ ಮರ್ಯಾದೆಯನ್ನು ನೀಡುವ ಮೂಲಕ ಕಾನೂನನ್ನೇ ಮುರಿಯಲಾಗಿದೆ. ಪೊಲೀಸ್ ಠಾಣೆಯಲ್ಲಿ ಜ್ಯೂಸ್ ನೀಡಿ ಆರೈಕೆ ಮಾಡಿದ ಪೊಲೀಸರು ಜೈಲಿನಲ್ಲಿಯೂ ಭಾರೀ ರಾಜ ಮರ್ಯಾದೆಯನ್ನು ನೀಡಿ ಆತನನ್ನು ಮೆಚ್ಚಿಸಿಕೊಳ್ಳುವ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಹೀಗೆ ಅಧಿಕಾರದಲ್ಲಿ ಇಲ್ಲದಾಗಲೂ ಈ ರೀತಿಯ ಅನುಕೂಲವನ್ನು ನೀಡಿದ ಪೊಲೀಸರು ಇನ್ನು ಅಧಿಕಾರದಲ್ಲಿರುವಾಗ ಇನ್ಯಾವ ರೀತಿಯಲ್ಲಿ ನೀಡಬಹುದು ಎಂಬ ಪ್ರಶ್ನೆಗಳೂ ಎದುರಾಗಿದೆ.

ನಲಪಾಡ್‍ನಿಂದ ಹಲ್ಲೆಗೊಳಗಾದ ವಿದ್ವತ್‍ನ ಆರೋಗ್ಯ ತಪಾಸನೆಯ ವರದಿಯು ಸರ್ಕಾರದ ತನಿಖಾಧಿಕಾರಿಗಳು ಹಾಗೂ ಕೋರ್ಟ್ ತಲುಪುವ ಮುನ್ನವೇ ಅದು ಜೈಲಿನಲ್ಲಿದ್ದ ನಲಪಾಡ್‍ಗೆ ತಲುಪುತ್ತೆ ಎಂದರೆ ಪೊಲೀಸ್ ಇಲಾಖೆ ಯಾವ ರೀತಿ ಕಾನೂನು ಮೆರೆಯುತ್ತೆ ಎಂಬುವುದನ್ನು ಕಾಣಬಹುದಾಗಿದೆ. ಇದು ಕರ್ನಾಟಕ ಪೊಲೀಸ್ ಇಲಾಖೆಗೂ ಕಳಂಕ ತರುವ ವಿಚಾರವಾಗಿದೆ. ಪೊಲೀಸರೂ ಉಳ್ಳವರ ಪಾಲಾಗಿದ್ದು, ಕಾಂಗ್ರೆಸ್ ಸರ್ಕಾರದ ಹಾಗೂ ಶಾಸಕರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ.

ಒಟ್ಟಾರೆ ಇಂದು ನಡೆದ ಮಹತ್ವದ ವಾದಗಳಲ್ಲಿ ಗೂಂಡಾ ನಲಪಾಡ್ ಪರ ಆರೋಪಿಗಳಿಗೆ ಭಾರೀ ಹಿನ್ನೆಡೆಯಾಗಿದ್ದು, ಸ್ವತಃ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಅವರೇ ವಾದ ನಿಲ್ಲಿಸುವಂತೆ ನೀಡಿದ್ದಾರೆ. ಇದು ನಲಪಾಡ್ ಪರ ವಕೀಲ ಸಿವಿ ನಾಗೇಶ್‍ಗೆ ಮುಜುಗರವನ್ನು ತರಿಸಿದ್ದಲ್ಲದೆ ಇಕ್ಕಟ್ಟಿನ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದೆ.

-ಸುನಿಲ್ ಪಣಪಿಲ

Editor Postcard Kannada:
Related Post