X

ಮೋದಿ ಹಾಗೂ ಪತ್ನಿಗೆ ಛಾಲೆಂಜ್ ಹಾಕಿದ ವಿರಾಟ್ ಕೋಹ್ಲಿ.!ಛಾಲೆಂಜ್ ಸ್ವೀಕರಿಸಿದ ನಮೋ..!

ಪ್ರಧಾನಿ ನರೇಂದ್ರ ಮೋದಿ ಅಂದರೆ ಸುಮ್ನೇನಾ. ಅವರು ವಿಶ್ವವನ್ನೇ ಗೆದ್ದ ನಾಯಕ. ಯಾವುದೇ ಸಮಸ್ಯೆ ಬಂದರೂ ಅದನ್ನು ನಾಜೂಕಾಗಿ, ಸಮಯೋಚಿತವಾಗಿ ಸರಿದೂಗಿಸುವ ಚಾಣಾಕ್ಯ. ದೇಶಪ್ರೇಮದ ವಿಚಾರದಲ್ಲಿ ಯಾವುದೇ ರಾಜಮಾಡಿಕೊಳ್ಳದ ಅಪ್ರತಿಮ ರಾಷ್ಟ್ರೀಯವಾದಿ. ಇದೀಗ ಅವರಿಗೆ ಮತ್ತೊಂದು ಛಾಲೆಂಜ್ ಎದುರಾಗಿದೆ. ಅದು ಕ್ರಿಕೆಟ್ ಮಾಂತ್ರಿಕ ವಿರಾಟ್ ಕೋಹ್ಲಿಯ ಛಾಲೆಂಜ್.

ಇತ್ತೀಚೆಗೆ ಭಾರತೀಯ ಜನತಾ ಪಕ್ಷದ ಸಂಸದರಾಗಿರುವ ರಾಜ್ಯವರ್ಧನ್ ರಾಥೋರ್ ಎಂಬವರು ಒಂದು ಛಾಲೆಂಜ್ ಹಾಕಿ ವೀಡೀಯೋವನ್ನು ತಮ್ಮ ಟ್ವಿಟ್ಟರ್‍ನಲ್ಲಿ ಹರಿಯ ಬಿಟ್ಟಿದ್ದರು. ಮಾಜಿ ಸೈನಿಕನಾಗಿರುವ ರಾಜ್ಯವರ್ಧನ್ ರಾಥೋರ್ ಅವರು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿಯೂ ಕೆಲಸ ಮಾಡಿದವರು. ಮಾತ್ರವಲ್ಲದೆ ಅವರು ಒಲಿಂಪಿಕ್ಸ್ ನಲ್ಲಿ ಮೆಡಲ್ ಪಡೆದು ಭಾರತ ದೇಶವನ್ನು ಪ್ರತಿನಿಧಿಸಿದವರು. ಇದೀಗ ಅವರು ಮತ್ತೊಂದು ಕುತೂಹಲಕಾರಿ ಹೆಜ್ಜೆಯನ್ನು ಇಟ್ಟಿದ್ದಾರೆ. ಎಲ್ಲರೂ ತಮ್ಮ ದೇಹದ ಫಿಟ್ ನೆಸ್ ಹಾಗೂ ಆರೋಗ್ಯಕ್ಕಾಗಿ ವ್ಯಾಯಾಮ ಮಾಡಿ ಎಂದು ಕರೆಕೊಟ್ಟಿದ್ದಾರೆ. ತಾನು ಈ ಮಾತನ್ನು ಹೇಳಿ ನಂತರ ತಾನೇ ವ್ಯಾಯಾಮ ಮಾಡಿರುವ ವೀಡಿಯೋವೊಂದನ್ನು ತಮ್ಮ ಟ್ವಟ್ಟರ್ ಅಕೌಂಟ್‍ನಲ್ಲಿ ಹರಿಯಬಿಟ್ಟಿದ್ದಾರೆ.

 ಕೇವಲ ಇಷ್ಟೇ ಮಾಡಿದ್ದಿದ್ದರೆ ಅಷ್ಟೊಂದು ದೊಡ್ಡ ಆಂದೋಲನವಾಗುತ್ತಿರಲಿಲ್ಲ. ಅವರು ಈ ವೀಡಿಯೋವನ್ನು ಹಾಕಿ 3 ಮಂದಿ ದಿಗ್ಗಜರಿಗೆ ಅದನ್ನು ಟ್ಯಾಗ್ ಮಾಡಿ ಅವರಿಗೆ “ನೀವೂ ಈ ತರಹ ಮಾಡಿ” ಎಂದು ಛಾಲೆಂಜ್ ಹಾಕಿದ್ದಾರೆ. ಕ್ರಿಕೆಟ್ ಮಾಂತ್ರಿಕ ವಿರಾಟ್ ಕೋಹ್ಲಿ, ಬಾಲಿವುಡ್ ದಿಗ್ಗಜ ಹೃತಿಕ್ ರೋಶನ್ ಹಾಗೂ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್‍ಗೆ ಛಾಲೆಂಜ್ ಹಾಕಿದ್ದಾರೆ. 

ಛಾಲೆಂಜ್ ಸ್ವೀಕರಿಸಿದ ಕ್ರಿಕೆಟ್ ದಿಗ್ಗಜ ವಿರಾಟ್ ಕೋಹ್ಲಿ ತಾನೂ ಇಂತಹ ವಿಡಿಯೋ ಮಾಡಿ ಅದನ್ನು ಟ್ವಿಟರ್‍ನಲ್ಲಿ ಹರಿಯ ಬಿಟ್ಟು ಅವರಿಂದ ಮತ್ತೆ ಛಾಲೆಂಜ್ ಹಾಕಿದ್ದಾರೆ. ಇದೀಗ ವಿರಾಟ್ ಕೋಹ್ಲಿ ಹಾಕಿರುವ ಛಾಲೆಂಜ್ ಬಗ್ಗೆಯೇ ವ್ಯಾಪಕವಾಗಿ ಚರ್ಚೆಗಳು ನಡೆಯುತ್ತಿವೆ. ಕಾರಣ ಅವರು ಛಾಲೆಂಜ್ ಹಾಕಿದ್ದು ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ.

ಹೌದು, ಸಂಸದ ರಾಜ್ಯವರ್ಧನ್ ರಾಥೋರ್ ಅವರ ಛಾಲೆಂಜನ್ನು ಸ್ವೀಕರಿಸಿದ ವಿರಾಟ್ ಕೊಹ್ಲಿ ತಾನೂ ವೀಡಿಯೋ ಮಾಡಿ ಮತ್ತೆ ತನ್ನಿಂದ ಮೂವರು ಪ್ರಮುಖ ವ್ಯಕ್ತಿಗಳಿಗೆ ಛಾಲೆಂಜ್ ಮಾಡಿದ್ದಾರೆ. ಆ ಮೂವರಲ್ಲಿ ಓರ್ವರು ಪ್ರಧಾನಿ ನರೇಂದ್ರ ಮೋದಿ. ನರೇಂದ್ರ ಮೋದಿಯೊಂದಿಗೆ ಮತ್ತಿಬ್ಬರು ಪ್ರಮುಖ ವ್ಯಕ್ತಿಗಳಿಗೆ ಕೊಹ್ಲಿ ಈ ಛಾಲೆಂಜ್ ಹಾಕಿದ್ದಾರೆ. ಅವರು ಮತ್ಯಾರೂ ಅಲ್ಲ ತನ್ನ ಪತ್ನಿ ಅನುಷ್ಕಾ ಶರ್ಮ ಹಾಗೂ ಭಾರತದ ಕ್ರಿಕೆಟ್ ತಂಡದ ಕ್ಯಾಪ್ಟನ್ ಕೂಲ್ ಎಂಬ ಖ್ಯಾತಿಯ ಎಮ್.ಎಸ್.ಧೋನಿ. ಹೀಗೆ ಒಟ್ಟು ಮೂವರು ವ್ಯಕ್ತಿಗಳಿಗೆ ವಿರಾಟ್ ಕೊಹ್ಲಿ ಛಾಲೆಂಜ್ ಹಾಕಿದ್ದಾರೆ.

ಸವಾಲು ಸ್ವೀಕರಿಸಿದ ನಮೋ..!

ನರೇಂದ್ರ ಮೋದಿಗೆ ಛಾಲೆಂಜ್ ಹಾಕಿದ್ರೆ ಅವರು ಬಿಡುವರೇ..! ಕೊಹ್ಲಿ ಹಾಕಿದ ಸವಾಲನ್ನು ಎಲ್ಲರಿಗಿಂತ ಮೊದಲಾಗಿಯೇ ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿಯೇ ಬಿಟ್ಟಿದ್ದಾರೆ. ಈ ಬಗ್ಗೆ ಟ್ವಿಟರ್‍ನಲ್ಲಿ ಹೇಳಿಕೊಂಡ ಅವರು, ಸವಾಲನ್ನು ಸ್ವೀಕರಿಸಿದ್ದೇನೆ, ನಾನು ಕೂಡಾ ವೀಡಿಯೋ ಮಾಡಿ ಟ್ವಿಟ್ಟರ್‍ನಲ್ಲಿ ಬಿತ್ತರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಎಲ್ಲರ ಚಿತ್ತ ನಮೋ ಟ್ವಿಟರ್‍ನತ್ತ..!

ಇದೀಗ ದೇಶದ ಎಲ್ಲರ ಚಿತ್ತ ಪ್ರಧಾನಿ ನರೇಂದ್ರ ಮೋದಿಯವರ ಟಿಟ್ಟರ್ ಖಾತೆಯತ್ತ ನೆಟ್ಟಿದೆ. ಪ್ರಧಾನಿ ಮೋದಿ ಯಾವ ತರಹದ ವ್ಯಾಮವನ್ನು ಟ್ವಟರ್‍ನಲ್ಲಿ ಬಿತ್ತರಿಸುತ್ತಾರೆ ಎಂಬ ಕುತೂಹಲ ದೇಶಾದ್ಯಂತ ಮನೆ ಮಾಡಿದೆ. ಈ ಬಗ್ಗೆ ಚರ್ಚೆಗಳೂ ನಡೆಯುತ್ತಿದ್ದು, ಮೋದಿಯವರು ಯೋಗ ಮಾಡುವ ವೀಡಿಯೋವನ್ನು ಹಾಕಬಹುದು ಎಂದೂ ಕೆಲವರು ಹೇಳುತ್ತಿದ್ದಾರೆ.

ಅದೇನೇ ಇರಲಿ, ಸಾಮಾಜಿಕ ಜಾಲತಾಣಗಳಲ್ಲಿ ಇಂತಹಾ ಆಂದೋಲನವೂ ನಡೆಯಬಹುದು ಎಂದು ರಾಜಕೀಯ, ಸಿನಿರಂಗ ಹಾಗೂ ಕ್ರಿಕೆಟ್ ರಂಗದ ದಿಗ್ಗಜರು ಮಾಡಿ ತೋರಿಸುತ್ತಿದ್ದಾರೆ.ನಾವುಫಿಟ್ ಆದ್ರೆ ದೇಶ ಫಿಟ್ ಆಗಿರುತ್ತೆ ಎಂಬ ಸಂದೇಶದೊಂದಿಗೆ, ದೇಶವಾಸಿಗಳ ಆರೋಗ್ಯ ಹಾಗೂ ದೇಹದ ಫಿಟ್ ನೆಸ್ ಬಗ್ಗೆ ಆಂದೋಲನವನ್ನು ಹುಟ್ಟುಹಾಕಿರುವುದು ವಿಶೇಷವೇ ಸರಿ.

Sunil panapila

Editor Postcard Kannada:
Related Post