X

ಸೈನಿಕರ ದೇಹ ರಕ್ಷಣೆಗೆ ದೇಹರಕ್ಷಕ ಅಸ್ತ್ರ ನೀಡಲು ಮುಂದಾದ ಕೇಂದ್ರ!! ಶತ್ರುಗಳನ್ನು ಸೆದೆಬಡಿಯಲು ಮೋದಿಜೀಯಿಂದ ಮತ್ತೊಂದು ಮಾಸ್ಟರ್ ಸ್ಟ್ರೋಕ್!!

ಭಾರತದ ಶತ್ರು ರಾಷ್ಟ್ರಕ್ಕೆ ಅದೆಷ್ಟು ಬಾರಿ ನಮ್ಮ ಸಾಮಥ್ರ್ಯವನ್ನು ತೋರಿಸಿದರೂ ಒಳಗಿಂದೊಳಗೆ ಒಂದೊಂದೊಂದೇ ಕುತಂತ್ರವನ್ನು ಮಾಡುತ್ತಲೇ ಬಂದಿದೆ!! ಅದಕ್ಕೆ ಪ್ರತೀಕಾರ ತೀರಿಸಲು ನಮ್ಮ ಮೋದಿ ಸರಕಾರ ಸೈನಿಕರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನೂ ನೀಡುತ್ತಲೇ ಬಂದಿದೆ!! ಪ್ರಧಾನಿ ನರೇಂದ್ರ ಮೋದಿಯವರು ಯಾವಾಗ ಅಧಿಕಾರದ ಚುಕ್ಕಾಣಿಯನ್ನು ಹಿಡಿದರೋ ಅಂದಿನಿಂದ ಯಾವಾಗಲೂ ದೇಶದ ಗಡಿ ಕಾಯುವ ಯೋಧರ ಬಗ್ಗೆ ನೆನಪಿಸುತ್ತಾ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆಯೇ ಯಾವಾಗಲೂ ಶ್ರಮಿಸುತ್ತಿರುತ್ತಾರೆ!! ಒಂದಲ್ಲ ಒಂದು ವಿಷಯಗಳಲ್ಲಿ ಸೈನಿಕರ ಬಗ್ಗೆ ಕಾಳಜಿ ವಹಿಸಿ ಅವರಿಗೆ ಅವಶ್ಯ ವಸ್ತುಗಳನ್ನು ಪೂರೈಸುವಲ್ಲಿ ಶ್ರಮಿಸುತ್ತಿರುತ್ತಾರೆ!!

ಪದೇ ಪದೇ ಭಾರತೀಯ ಸೇನೆ ತನ್ನ ನೆರೆ ರಾಷ್ಟ್ರದ ಉಪಟಳದಿಂದ ಅದೆಷ್ಟೋ ಬಾರಿ ಶತ್ರುರಾಷ್ಟ್ರವನ್ನು ಹೀನಾಯವಾಗಿ ಸೋಲಿಸಿದರೂ ಕೂಡ ತಮ್ಮ ನರಿ ಬುದ್ದಿಯನ್ನು ಬಿಡುವಲ್ಲಿ ಮಾತ್ರ ತಯಾರಾಗಿಲ್ಲ ಎನ್ನುವುದು ವಿಪರ್ಯಾಸ!! ಆದರೆ ಈಗಾಗಲೇ ವಿಶ್ವದಲ್ಲೇ ಎರಡನೇ ಅತಿದೊಡ್ಡ ಸೇನಾಪಡೆಯನ್ನು ಹೊಂದಿರುವ ಭಾರತ ಇನ್ನಷ್ಟು ಬಲಿಷ್ಠ ರಾಷ್ಟ್ರವಾಗಲು ಸಿದ್ಧತೆಗಳನ್ನು ಕೂಡಾ ನಡೆಸುತ್ತಿದೆ!! ಪ್ರಧಾನಿ ನರೇಂದ್ರ ಮೋದಿ ಸರಕಾರ ತನ್ನ ಅಧಿಕಾರದ ಗದ್ದುಗೆಯನ್ನು ಹಿಡಿದ ನಂತರದಿಂದ ಭಾರತೀಯ ಸೇನೆ ನಾನಾ ರೀತಿಯಲ್ಲಿ ಮುಂದುವರೆದಿದೆ!! ಈಗಾಗಲೇ ಮೋದಿ ಸರಕಾರ ಭಾರತೀಯ ಸೈನಿಕರಿಗೆ ಬುಲೆಟ್ ಫ್ರೂಫ್ ಜಾಕೆಟ್, ಬುಲೆಟ್ ಫ್ರೂಫ್ ಹೆಲ್ಮೆಟ್, ಸಿಆರ್ಫಿಎಫ್ ಸೈನ್ಯಕ್ಕೆ 100 ನೂತನ ಬುಲೆಟ್ ಫ್ರೂಫ್ ವಾಹನಗಳನ್ನು ನೀಡಿದೆ!! ಇದೀಗ ಮತ್ತೆ ಸೈನ್ಯಕ್ಕೆ ಕೇಂದ್ರ ಸರಕಾರ ಹೊಸ ಸೌಲಭ್ಯವನ್ನು ಒದಗಿಸಲು ತಯಾರಾಗಿ ನಿಂತಿವೆ!! ಶತ್ರುಗಳನ್ನು ಎದುರಿಸಲು ಭಾರತೀಯ ಸೇನೆ ಸಮರ್ಥವಾಗಿದ್ದಲ್ಲದೇ, ಶತ್ರುರಾಷ್ಟ್ರವನ್ನು ಯುದ್ದಕ್ಕಾಗಿ ಆಹ್ವಾನ ನೀಡುವಷ್ಟರ ಮಟ್ಟಿಗೆ ಇದೀಗ ಭಾರತೀಯ ಸೇನೆ ಬೆಳೆದಿದೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಸರಕಾರ!!

ಶತ್ರುಗಳನ್ನು ಸೆದೆಬಡಿಯಲು ಕೇಂದ್ರ ಸರಕಾರದಿಂದ ದಿಟ್ಟ ನಿರ್ಧಾರ!!

ಇದೀಗ ಮೋದೀಜೀ ಸರಕಾರ ಮತ್ತೊಂದು ದಿಟ್ಟ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಸೈನಿಕರಿಗೆ ಮತ್ತೊಮ್ಮೆ ಆತ್ಮ ಸ್ಥೈರ್ಯವನ್ನು ತುಂಬುವಂತೆ ಮಾಡಿದ್ದಾರೆ!! ಕಣಿವೆ ರಾಜ್ಯ ಕಾಶ್ಮೀರದಲ್ಲಿ ಪ್ರತ್ಯೇಕತವಾದಿಗಳು, ಭಯೋತ್ಪಾಕರ ಕುತಂತ್ರದಿಂದ ಸೈನಿಕರ ಮೇಲೆ ಕಲ್ಲು ತೂರಾಟ ಪ್ರಕರಣಗಳು ಹೆಚ್ಚುತ್ತಿದ್ದು, ಸೈನಿಕರಿಗೆ ಹಾನಿಯಾಗುತ್ತಿರುವುದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಸೈನಿಕರ ರಕ್ಷಣೆಗಾಗಿ ಇಡೀ ದೇಹವನ್ನು ಕಲ್ಲುಗಳಿಂದ ರಕ್ಷಿಸುವ ದೇಹರಕ್ಷಕ ಧಿರಿಸುಗಳನ್ನು ಕೇಂದ್ರ ಸರ್ಕಾರ ನೀಡಲು ನಿರ್ಧರಿಸಿದೆ. ಈ ಮೂಲಕ ಜಮ್ಮು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುತ್ತಿರುವವ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದೆ ಬಂದಿದೆ!!. ಸೈನಿಕರ ರಕ್ಷಣೆಗಾಗಿ ಸಿದ್ಧಪಡಿಸಿರುವ ಈ ಧಿರಿಸುಗಳ ಮೇಲೆ `ಕಲ್ಲು ತೂರಾಟ, ಕೆರೋಸಿನ್ ದಾಳಿ, ಪೆಟ್ರೋಲ್ ಬಾಂಬ್ ದಾಳಿ, ಕೆಮಿಕಲ್ ದಾಳಿ ಸೇರಿ ನಾನಾ ತರಹದ ದಾಳಿಗಳಿಂದ ರಕ್ಷಣೆ ನೀಡುತ್ತವೆ. ಅಲ್ಲದೇ ಕಣಿವೆಯಲ್ಲಿರುವ ಮೈಕೊರೆಯುವ ಚಳಿಯಿಂದಲೂ ಈ ಧಿರಿಸುಗಳು ರಕ್ಷಣೆ ನೀಡಲಿದ್ದು, ಮೈನಸ್ 20 ಸೆಲ್ಸಿಯಸ್ ನಿಂದ 55 ಸೆಲ್ಸಿಯಸ್ ವರೆಗೆ ಚಳಿಯಿಂದ 5 ಗಂಟೆವರೆಗೆ ರಕ್ಷಣೆ ನೀಡಲಿದೆ.

ಕಾಶ್ಮೀರದ ಗಲಭೆ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಸಿಆರ್ ಫಿಎಫ್ ಸೈನಿಕರಿಗೆ ಇಡೀ ದೇಹವನ್ನು ರಕ್ಷಿಸುವ ಈ ಧಿರಿಸುಗಳನ್ನು ನೀಡಲು ನಿರ್ಧರಿಸಲಾಗಿದೆ. ಸಿಆರ್‍ಫಿಎಫ್ ಜಮ್ಮು ಕಾಶ್ಮೀರದಲ್ಲಿ ಗಲಭೆ ನಿಯಂತ್ರಿಸಲು ಮತ್ತು ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆಗೆ ಇಳಿಯುತ್ತಿದ್ದು, ಸಿಆರ್ ಫಿಎಫ್ ಪಡೆಗೆ ಆರಂಭದಲ್ಲಿ ನೀಡಲಾಗುತ್ತಿದೆ. ಅಲ್ಲದೇ ಜಮ್ಮು ಕಾಶ್ಮೀರದ ಪೆÇಲೀಸರು ಮತ್ತು ಬಿಎಸ್ ಎಫ್ ಯೋಧರಿಗೆ ವಿತರಿಸಲಾಗುವುದು ಎಂದು ಕೇಂದ್ರ ಗೃಹ ಇಲಾಖೆ ಮೂಲಗಳು ತಿಳಿಸಿವೆ. ಆರು ಕೆ.ಜಿ.ತೂಕದ ಈ ಧಿರಿಸುಗಳು ಮೂರು ಬೇರೆ ಬೇರೆ ರೀತಿಯ ಸೈಜ್ ಗಳನ್ನು ಹೊಂದಿವೆ. ಮುಖ, ಎದೆ, ತೋಳು, ಹೊಟ್ಟೆ, ತೊಡೆ ಸೇರಿ ದೇಹದ ಸೂಕ್ಷ್ಮ ಅಂಗಗಳನ್ನು ಈ ನೂತನ ಧಿರಿಸುಗಳು ರಕ್ಷಿಸುತ್ತವೆ ಎಂದು ಮೂಲಗಳು ತಿಳಿಸಿವೆ. ಪ್ರಸಕ್ತ 2018ರ ವರ್ಷದಲ್ಲಿ ಕಲ್ಲು ತೂರಾಟಗಾರರಿಂದ ಸುಮಾರು 3000 ಸಿಆರ್ ಫಿಎಫ್ ಸೈನಿಕರು ಗಾಯಗೊಂಡಿದ್ದಾರೆ. ಆದ್ದರಿಂದ ಸೈನಿಕರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರಿಗೆ ಇಡೀ ದೇಹವನ್ನು ರಕ್ಷಿಸುವ ಧಿರಿಸುಗಳನ್ನು ನೀಡಲು ಮುಂದಾಗಿದೆ.

ಇತ್ತೀಚೆಗಷ್ಟೇ ಕಾಂಗ್ರೆಸ್ಸಿನ ಅಧ್ಯಕ್ಷ ರಾಹುಲ್ ಗಾಂಧಿಯವರು ಸೈನಿಕರ ಸಮವಸ್ತ್ರ ಖರೀದಿಗೂ ಸರಕಾರದ ಬಳಿ ದುಡ್ಡಿಲ್ಲ, ಸೈನಿಕರೇ ತನಗೆ ಬೇಕಾದಂತಹ ಸಮವಸ್ತ್ರ, ಶೂಗಳನ್ನು ಖರೀದಿಸುತ್ತಿದ್ದಾರೆ ಎಂಬ ವದಂತಿಯನ್ನು ಹಬ್ಬಿಸಿ ತಾನೊಬ್ಬ ಮಹಾನ್ ಸುಳ್ಳುಗಾರನೆಂದು ವಿಶ್ವಕ್ಕೆ ತೋರಿಸಿಕೊಟ್ಟಿದ್ದರು!! ಅಷ್ಟೇ ಅಲ್ಲದೇ, ಮೇಕ್ ಇನ್ ಇಂಡಿಯಾ ಎಂಬುವುದೆಲ್ಲಾ ಸುಳ್ಳು, ಮೋದಿ ಸರಕಾರ ಸೈನಿಕರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದಿದ್ದ ರಾಹುಲ್ ಗಾಂಧಿಯವರಿಗೆ ಇದೆಲ್ಲಾ ಮೋದೀಜೀ ಸರಕಾರ ಯಾರಿಗಾಗಿ ಮಾಡುತ್ತಿದ್ದಾರೆ ಎಂಬುದು ತಿಳಿದರೆ ಒಳಿತು?!

source:
tulunad news

  • ಪವಿತ್ರ
Editor Postcard Kannada:
Related Post