X

ಉನ್ನತ ಶಿಕ್ಷಣ ಸಂಸ್ಥೆಗಳ ಸುಧಾರಣೆಗಾಗಿ ಮೋದಿ ಸರ್ಕಾರ ನೀಡಿದೆ ಭರ್ಜರಿ ಗಿಫ್ಟ್!! ಶಿಕ್ಷಣ ಕ್ಷೇತ್ರದಲ್ಲೂ ಅಚ್ಛೇ ದಿನ್!!

ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರಕಾರವು ಈಗಾಗಲೇ ನಾನಾ ರೀತಿಯ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಯುವಜನತೆಯಲ್ಲಿ ಹೊಸ ಭರವಸೆ ಚಿಗುರೊಡೆಯುವಂತೆ ಮಾಡಿರುವ ವಿಚಾರ ಗೊತ್ತೇ ಇದೆ!! ಹಾಗಾಗಿ ಇದೀಗ ಹೊಸ ಭರವಸೆಯೊಂದಿಗೆ ನರೇಂದ್ರ ಮೋದಿ ಸರಕಾರವು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತರಲು ಭರ್ಜರಿ ಅನುದಾನವನ್ನು ನೀಡುವ ಮೂಲಕ ಮಹತ್ತರ ಸಂದೇಶವನ್ನು ನೀಡಲು ಮುಂದಾಗಿದೆ.

ಹೌದು…. ದೇಶದಲ್ಲಿ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಹೊಸ ರೂಪ ಕೊಡಲು ನಿರ್ಧರಿಸಿರುವ ಕೇಂದ್ರ ಸರಕಾರವು ಒಂದು ಲಕ್ಷ ಕೋಟಿ ರೂಪಾಯಿ ಅನುದಾನ ನೀಡುತ್ತಿದ್ದು, ಮುಂದಿನ ನಾಲ್ಕು ವರ್ಷದಲ್ಲಿ ಹೊಸ ರೂಪ ನೀಡುವ ಗುರಿ ಹೊಂದಲಾಗಿದೆ. ಈ ಯೋಜನೆಗಾಗಿ ಹೈಯರ್ ಎಜುಕೇಷನ್ ಫಂಡಿಗ್ ಎಜೆನ್ಸಿ (ಎಚ್‍ಇಎಫ್‍ಎ) ಮೂಲಕ ದೇಶದ ಉನ್ನತ ಶಿಕ್ಷಣದ ಕೇಂದ್ರಗಳಿಗೆ ಸಹಾಯ ಮಾಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೆಕರ್ ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ 2022 ವೇಳೆ ಮೂಲಸೌಕರ್ಯ ಕೊರತೆಗಳನ್ನು ನೀಗಿಸಲು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಲಭ್ಯವಾಗುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ!! ಈಗಾಗಲೇ ಕೇಂದ್ರ ಸರಕಾರವು ಒನ್ ರ್ಯಾಂಕ್, ಒನ್ ಪೆನ್ಶನ್ ಅನ್ವಯ ಕಳೆದ ಜುಲೈನಿಂದ ನೀಡುತ್ತಿದ್ದ 10 ಸಾವಿರ ರೂಪಾಯಿಯನ್ನು ರದ್ದುಗೊಳಿಸಿ, ಇದೇ ಹತ್ತು ಸಾವಿರ ರೂಪಾಯಿಯನ್ನು ಕೇಂದ್ರ ಸರಕಾರವು ವಿದ್ಯಾರ್ಥಿಗಳಿಗೇ ನೇರವಾಗಿ ನೀಡುವ ಮೂಲಕ ದೇಶದ ಸುಮಾರು 3500 ಮಕ್ಕಳಿಗೆ ಸಹಾಯವಾಗಲಿದೆ ಎಂದು ತಿಳಿದು ಬಂದಿತ್ತು!!

ಅಲ್ಲದೇ, ಸರ್ಕಾರಿ, ಸರ್ಕಾರಿ ಅನುದಾನಿತ, ಕೇಂದ್ರ ಸರಕಾರ ನಡೆಸುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಯೋಜನೆಯ ಅನುಕೂಲ ಸಿಗಲಿದ್ದು, ಇದಕ್ಕಾಗಿ ಸರಕಾರ ಪ್ರತಿ ವರ್ಷ 4 ಕೋಟಿ ರೂಪಾಯಿ ಖರ್ಚು ಮಾಡಲು ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ. ಆದರೆ ಇದೀಗ ದೇಶದಾದ್ಯಂತ ಇರುವ ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯಗಳನ್ನು ಸುಧಾರಣೆಗೊಳಿಸಲು ಕೇಂದ್ರ ನೂತನ ಯೋಜನೆ ರೂಪಿಸಿದೆ ಎಂದು ಎಚ್ ಆರ್ ಡಿ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ!!

ಈಗಾಗಲೇ ಕೇಂದ್ರ ಸರಕಾರದ ಅಡಿಯಲ್ಲಿನ ಶಾಲೆಗಳಲ್ಲಿ 1 ರಿಂದ 8ನೇ ತರಗತಿ ಶಿಕ್ಷಕರಾಗಿ ನೇಮಕವಾಗಲು ಸಿಟಿಇಟಿ ಪರೀಕ್ಷೆಯಲ್ಲಿ ಪಾಸ್ ಆಗಬೇಕಾಗಿರುವುದು ಕಡ್ದಾಯವಾಗಿರುವುದರಿಂದ ಇನ್ನು ಮುಂದೆ ಕೇಂದ್ರದ ತ್ರಿ ಭಾಷಾ ಸೂತ್ರವನ್ನು ರದ್ದುಗೊಳಿಸಿ ಪ್ರಾದೇಶಕ ಭಾಷೆಯಲ್ಲೇ ಪರೀಕ್ಷೆಗಳನ್ನು ಬರೆಯಲು ಸರಕಾರ ಅವಕಾಶ ನೀಡಿದೆ. ಈ ಮೊದಲು ದೇಶದ 20 ಭಾಷೆಗಳಲ್ಲೂ ಸಿಟಿಇಟಿ ಪರೀಕ್ಷಾರ್ಥ ಪರೀಕ್ಷೆಯನ್ನು ನಡೆಸಿತ್ತು. ಆದರೆ ಪ್ರಾದೇಶಿಕ ಭಾಷೆಗಳನ್ನು ರದ್ದು ಪಡಿಸಿ ಕೇವಲ 3 ಭಾಷೆಯಲ್ಲಿ ಪರೀಕ್ಷೆಯನ್ನು ನಡೆಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕಾರ್ ಅಭ್ಯರ್ಥಿಗಳು ಆಯಾ ಪ್ರಾದೇಶಿಕ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದ್ದ ಬೆನ್ನಲ್ಲೇ ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯಗಳನ್ನು ಸುಧಾರಣೆಗೊಳಿಸಲು ಕೇಂದ್ರ ಯೋಜನೆ ರೂಪಿಸಿದೆ.

2016-17ರ ಕೇಂದ್ರ ಬಜೆಟ್ ನಲ್ಲಿ ನರೇಂದ್ರ ಮೋದಿ ಸರಕಾರ ಎಚ್ ಇ ಎಫ್ ಎ ಸ್ಥಾಪನೆಯನ್ನು ಘೋಷಿಸಿತ್ತು!! ಹಾಗಾಗಿ ಇದೊಂದು ಆದಾಯೇತರ ಮಂಡಳಿಯಾಗಿದ್ದು, ವಿವಿಧ ವಲಯಗಳಿಂದ ಹಣ ಸಂಗ್ರಹಿಸಿ ಅದನ್ನು ಸಿ ಎಸ್ ಆರ್ ಫಂಡ್ಸ್ ಮತ್ತು ಅನುದಾನಗಳಿಗೆ ಪೂರೈಕೆ ಮಾಡುತ್ತದೆಯಲ್ಲದೇ ಸಂಸ್ಥೆಗಳಿಗೆ ಬಡ್ಡಿ ರಹಿತವಾಗಿ ಈ ಹಣವನ್ನು ಸಾಲದ ರೂಪದಲ್ಲಿ ನೀಡುತ್ತಿದೆ.

ಇನ್ನು, ಈ ಬಗ್ಗೆ ನರೇಂದ್ರ ಮೋದಿ ನೇತೃತ್ವದ ನಾಲ್ಕು ವರ್ಷದ ಆಡಳಿತದಲ್ಲಿ ಮಾನವಸಂಪನ್ಮೂಲ ಇಲಾಖೆಯಲ್ಲಿ ಆದ ಮಹತ್ತರ ಬದಲಾವಣೆಗಳ ಕುರಿತು ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್, ಹೈಯರ್ ಎಜುಕೇಷನ್ ಫಂಡಿಗ್ ಎಜೆನ್ಸಿ (ಎಚ್ ಇ ಎಫ್ ಎ) ಮುಂದಿನ ನಾಲ್ಕು ವರ್ಷಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ದಿಗೆ 1 ಲಕ್ಷ ಕೋಟಿಯಷ್ಟು ಹಣವನ್ನು ಹೊಂದಿಸಲಿದೆ ಎಂದಿದ್ದಾರೆ!! 

ಅಷ್ಟೇ ಅಲ್ಲದೇ, ನಾಲ್ಕು ವರ್ಷಗಳಲ್ಲಿಯೇ ದೇಶದಲ್ಲಿ 1414 ವಿಶ್ವವಿದ್ಯಾಲಯಗಳು, 14 ಐಐಐಟಿ, ಏಳು ಐಐಎಂ, ಏಳು ಐಐಟಿ ಮತ್ತು ಒಂದು ಎನ್ ಐಟಿಯನ್ನು ಸ್ಥಾಪಿಸಲಾಗಿದೆ. ಈ ಮೂಲಕ ದೇಶದ ಉನ್ನತ ಶಿಕ್ಷಣದಲ್ಲಿ ಹೊಸ ಕ್ರಾಂತಿಯನ್ನು ಕೇಂದ್ರ ಸರ್ಕಾರ ನಾಲ್ಕು ವರ್ಷದಲ್ಲಿ ಸೃಷ್ಟಿ ಮಾಡಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಅವರು ಅಧಿಕಾರ ವಹಿಸಿಕೊಂಡ ನಂತರ ಕಳೆದ ನಾಲ್ಕು ವರ್ಷದಲ್ಲಿ 103 ಕೇಂದ್ರಿಯ ವಿದ್ಯಾಲಯ, 62 ನವೋದಯ ವಿದ್ಯಾಲಯಗಳನ್ನು ಹೊಸದಾಗಿ ಆರಂಭಿಸಲಾಗಿದೆ ಎಂದು ತಿಳಿಸಿದರು!!

ಒಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರಕಾರವು ಅಧಿಕಾರದ ಗದ್ದುಗೆಯನ್ನೇರಿದಂದಿನಿಂದಲೂ ದೇಶ ಅಭಿವೃದ್ಧಿಯತ್ತ ಮುನ್ನುಗುತ್ತಿದ್ದು, ಇದೀಗ ದೇಶದಾದ್ಯಂತ ಇರುವ ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯಗಳನ್ನು ಸುಧಾರಣೆಗೊಳಿಸಲು ಕೇಂದ್ರ ಹೊಸ ಯೋಜನೆ ರೂಪಿಸಿದೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ!!

ಮೂಲ:
http://zeenews.india.com/india/centre-eyeing-rs-1-lakh-crore-push-for-higher-education-infrastructure-upgrades-hrd-minister-prakash-javadekar-2117834.html

http://news13.in/archives/104364

– ಅಲೋಖಾ

Editor Postcard Kannada:
Related Post