X

ಸಿಎಂ ಆಪ್ತನಿಗೆ ಐಟಿ ಶಾಕ್..! ಬಯಲಾಯ್ತು ಮುಖ್ಯಮಂತ್ರಿಗಳ ಮೋಸದ ಮುಖವಾಡ.!

ರಾಜ್ಯ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲೇ ರಾಜ್ಯ ನಾಯಕರ ಮೇಲೆ ದಾಳಿ ನಡೆಸುತ್ತಿರುವ ಐಟಿ ನಿಲಾಖೆ ಎಲ್ಲಾ ರೀತಿಯ ಅಕ್ರಮ ಆಸ್ತಿಗಳ ಮೇಲೆ ಮಾರಾಕಾಸ್ತ್ರ ಪ್ರಯೋಗಿಸಿದೆ. ಒಂದೆಡೆ ರಾಜ್ಯ ಕಾಂಗ್ರೆಸ್ ಗೆ ಈಗಾಗಲೇ ನಡೆಸಿದ ಐಟಿ ದಾಳಿಯಿಂದಲೇ ಹೊರಬಾರಲಾಗದ ರೀತಿಯ ಹೊಡೆತ ಬದ್ದಿದ್ದು, ಇದೀಗ ಚುನಾವಣೆಗೆ ಬೆರಳೆಣಿಕೆಯಷ್ಟು ದಿನಗಳು ಬಾಕಿ ಇರುವಾಗಲೇ ಮತ್ತೆ ಭಾರೀ ಹೊಡೆತ ಬಿದ್ದಿದೆ. ಯಾಕೆಂದರೆ ಇತ್ತೀಚೆಗೆ ನಡೆದ ದಾಳಿಯಲ್ಲಿ ಪವರ್ ಮಿನಿಸ್ಟರ್ ಡಿ‌.ಕೆ. ಶಿವಕುಮಾರ್ ಬಳಿ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಇದರಿಂದ ಕಾಂಗ್ರೆಸ್ ಗೆ ಭಾರೀ ಹಿನ್ನಡೆಯಾಗಿದ್ದು , ಇದೀಗ ಸಿದ್ದರಾಮಯ್ಯನವರ ಆಪ್ತನ ಮೇಲೆಯೇ ಐಟಿ ದಾಳಿ ನಡೆಸಿದೆ.!

ಸಿಎಂ ಸಂಬಂಧಿಕನನಿಗೆ ಬಿಗ್ ಶಾಕ್..!

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ದಿನದಿಂದಲೂ ಕರ್ನಾಟಕ ಭ್ರಷ್ಟರಿಗೆ ಸ್ವರ್ಗವಾಗಿತ್ತು. ಸ್ವತಃ ರಾಜ್ಯ ಸರಕಾರದ ಸಚಿವ, ಶಾಸಕರೇ ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದಿದ್ದರೂ ಕೂಡಾ ಸರಕಾರ ಯಾವುದೇ ಕ್ರಮ ಕೈಗೊಳ್ಳದೆ ಉಡಾಫೆ ತೋರಿತ್ತು. ಆದ್ದರಿಂದಲೇ ಭ್ರಷ್ಟಾಚಾರ ಮತ್ತಷ್ಟು ಹೆಚ್ಚುತ್ತಲೇ ಬಂದಿತ್ತು. ಇದೀಗ ಐಟಿ ಇಲಾಖೆ ನಡೆಸಿದ ದಾಳಿಯಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಮತ್ತು ಸಂಬಂಧಿಕರಾದ ಉಮೇಶ್ ಎಂಬಾತರ ಮನೆಯಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಉಮೇಶ್ ಸಿದ್ದರಾಮಯ್ಯನವರ ಸಂಬಂಧಿಕ ಮತ್ತು ಕಾಂಗ್ರೆಸ್ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರ ಆಪ್ತನಾಗಿದ್ದು , ಮೇಲ್ನೋಟಕ್ಕೆ ಕಾಂಗ್ರೆಸ್ ಕೂಡಾ ಈ ಅಕ್ರಮದಲ್ಲಿ ಕೈಜೋಡಿಸಿರುವುದಾಗಿ ಕಂಡುಬರುತ್ತಿದೆ.

ಹಣ ಹಂಚಿಕೆ ಆರೋಪ..!

ಉಮೇಶ್ ಮೇಲೆ ಈಗಾಗಲೇ ಹಣ ಹಂಚಿಕೆ ಮಾಡುತ್ತಿರುವ ಆರೋಪ ಕೇಳಿ ಬಂದಿತ್ತಾದರೂ, ಸಿದ್ದರಾಮಯ್ಯನವರ ಸಂಬಂಧಿಕ ಎಂಬ ಕಾರಣಕ್ಕೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ಇದೀಗ ಕೇಂದ್ರದ ಕಣ್ಣು ಅಕ್ರಮ ಆಸ್ತಿ ಹೊಂದಿರುವವರ ಮೇಲೆ ಬಿದ್ದಿರುವುದರಿಂದ ಸಾಲು ಸಾಲು ದಾಳಿ ನಡೆಸಿ ಎಲ್ಲಾ ಅಕ್ರಮಗಳನ್ನು ಬಯಲಿಗೆಳೆಯುತ್ತಿದ್ದಾರೆ. ಈಗಾಗಲೇ ಐಟಿ ಅಧಿಕಾರಿಗಳು ಉಮೇಶ್ ಅವರ ಮನೆಯಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ವರದಿ ನೀಡಲಿದ್ದಾರೆ. ಉಮೇಶ್ ರಾಜ್ಯ ಕನಿಷ್ಟ ಮೂಲ ವೇತನ ಆಯೋಗದ ಅಧ್ಯಕ್ಷ ಆಗಿದ್ದು, ರಾಜ್ಯ ಸರಕಾರದ ಕೃಪಾಕಟಾಕ್ಷದಿಂದ ಈ ರೀತಿ ಅಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಇದೀಗ ನಡೆದ ದಾಳಿಯಿಂದ ಸ್ವತಃ ಸಿದ್ದರಾಮಯ್ಯನವರ ಕಂಗಾಲಾಗಿದ್ದು, ಈ ಅಕ್ರಮಗಳ ಹಿಂದೆ ಸಿದ್ದರಾಮಯ್ಯನವರ ಕೈವಾಡ ಇದ್ದರೂ ಸಿಕ್ಕಿಬೀಳುವುದು ಖಂಡಿತ..!

ಐಟಿ ಅಧಿಕಾರಿಗಳ ದಾಳಿಗೆ ತತ್ತರಿಸಿರುವ ರಾಜ್ಯ ಸರಕಾರ ಏನೂ ಮಾಡಲಾಗದ ಸ್ಥಿತಿಗೆ ಬಂದು ತಲುಪಿದೆ. ಯಾಕೆಂದರೆ ರಾಜ್ಯ ಸರ್ಕಾರದ ಸಹಾಯದಿಂದ ಭ್ರಷ್ಟರು ಆರಾಮವಾಗಿ ಅಕ್ರಮ ಆಸ್ತಿ ಸಂಪಾದಿಸುತ್ತಿದ್ದು, ಇದೀಗ ಕೇಂದ್ರದ ಹದ್ದಿನ ಕಣ್ಣು ಕಪ್ಪು ಹುಳಗಳ ಮೇಲೆ ಬಿದ್ದಿದೆ. ಚುನಾವಣಾ ಹೊಸ್ತಿಲಲ್ಲೇ ಈ ರೀತಿ ಕಾಂಗ್ರೆಸ್ ಗೆ ಹೊಡೆತ ಬೀಳುತ್ತಿದ್ದು, ಚುನಾವಣೆ ಎದುರಿಸಲೂ ಪರದಾಡುವಂತಾಗಿದೆ..!

source: suvarna news

–ಅರ್ಜುನ್

Editor Postcard Kannada:
Related Post