X

ಪ್ರಚಾರಕ್ಕೆ ತೆರಳಿದ ದೇವೇಗೌಡರಿಗೆ ಬಿತ್ತು ಛೀಮಾರಿ..! ಸೋಲೊಪ್ಪಿಕೊಂಡರೇ ದೊಡ್‌ಗೌಡ್ರು..?

ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಭರ್ಜರಿಯಾಗಿ ಪ್ರಚಾರದ ಕಣಕ್ಕಿಳಿದಿರುವ ರಾಜಕೀಯ ನಾಯಕರಿಗೆ ಕೆಲವು ಕಡೆ ಉತ್ತಮ ಬೆಂಬಲ ಸಿಗುತ್ತಿದ್ದರೆ, ಇನ್ನೂ ಕೆಲವೆಡೆ ತಲೆ ಎತ್ತಿ ನಡೆಯಲಾರದ ಸ್ಥಿತಿ ನಿರ್ಮಾಣವಾಗಿದೆ. ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಜನಸಾಮಾನ್ಯರ ಬಳಿ ತೆರಳುವ ಜನಪ್ರತಿನಿಧಿಗಳ ಮೈಚಳಿ ಬಿಡಿಸಿದ ರಾಜ್ಯದ ಜನರು , ಜೆಡಿಎಸ್ ವರಿಷ್ಠ ದೇವೇಗೌಡರನ್ನೂ ಬಿಡದೆ ಛೀಮಾರಿ ಹಾಕಿದ್ದಾರೆ.

ಚುನಾವಣೆಗೆ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಈಗಾಗಲೇ ಜೆಡಿಎಸ್ ಗೆ ಬಿಸಿ ಮುಟ್ಟಿಸಿದ್ದ ಮುಖಂಡರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸವಾಲೆಸೆದಿದ್ದರು. ಆದರೆ ದೇವೇಗೌಡರು ಯಾವುದನ್ನೂ ಲೆಕ್ಕಿಸದೆ ಪ್ರಚಾರದಲ್ಲಿ ತೊಡಗಿದ್ದರು. ಆದರೆ ದೊಡ್ಡಗೌಡರು ಅನುಭವಿಸಿದ್ದು ಮಾತ್ರ ಭಾರೀ ಹಿನ್ನಡೆ..!

ದೇವೇಗೌಡರ ಎದುರೇ ಪಕ್ಷೇತರ ಅಭ್ಯರ್ಥಿಗೆ ಜೈ ಎಂದ ಜನತೆ..!

ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯ ಆರಂಭಿಸಿರುವ ದೇವೇಗೌಡರು ಅರಮನೆ ನಗರಿಯಲ್ಲಿ ಮತಭೇಟೆ ಆರಂಭಿಸಿದ್ದರು. ದೇವೇಗೌಡರು ಚಾಮರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಂಗಪ್ಪ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದರು. ಇದೇ ವೇಳೆ ಇತ್ತ ಜೆಡಿಎಸ್‌ನಿಂದ ಟಿಕೆಟ್ ಕೈ ತಪ್ಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹರೀಶ್ ಗೌಡ ಅವರ ಬೆಂಬಲಿಗರೂ ಪ್ರಚಾರ ಮಾಡುತ್ತಿದ್ದು , ದೇವೇಗೌಡರು ಮತ್ತು ಹರೀಶ್ ಗೌಡರು ಮುಖಾಮುಖಿ ಆಗುತ್ತಿದ್ದಂತೆ ಹರೀಶ್ ಗೌಡ ಅವರ ಬೆಂಬಲಿಗರು ತಮ್ಮ ಮುಖಂಡನ ಪರವಾಗಿ ಜೈಕಾರ ಹಾಕಿದ್ದು, ದೇವೇಗೌಡರಿಗೆ ಛೀಮಾರಿ ಹಾಕಿದ್ದಾರೆ. ಇದರಿಂದ ಕ್ಯಾಂಪೇನ್ ನಡೆಸುತ್ತಿದ್ದ ದೇವೇಗೌಡರಿಗೆ ತೀವ್ರ ಮುಜುಗರ ಉಂಟಾಗಿದೆ.!

ಜೆಡಿಎಸ್ ಗೆ ತಟ್ಟಿದ ಬಂಡಾಯದ ಬಿಸಿ..!

ಟಿಕೆಟ್ ವಿಚಾರದಲ್ಲಿ ಎಲ್ಲಾ ಪಕ್ಷಗಳಿಗೂ ಬಂಡಾಯದ ಬಿಸಿ ತಟ್ಟಿದೆ ಆದರೂ , ಬಿಜೆಪಿ ಪಕ್ಷಕ್ಕೆ ಯಾವುದೇ ತೊಂದರೆಯಾಗದಂತೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಆದರೆ ಜೆಡಿಎಸ್ ಮಾತ್ರ ಈ ಸಮಸ್ಯೆಯಿಂದ ಇನ್ನೂ ಹೊರ ಬರಲಾಗಲಿಲ್ಲ. ಯಾಕೆಂದರೆ ಇನ್ನೇನು ಚುನಾವಣೆಗೆ ನಾಲ್ಕೇ ದಿನಗಳು ಬಾಕಿ ಇದ್ದೂ , ಚುನಾವಣಾ ಹೊಸ್ತಿಲಲ್ಲೇ ಜೆಡಿಎಸ್ ವರಿಷ್ಠ ದೇವೇಗೌಡರ ಮುಂದೆಯೇ ಪಕ್ಷದ ವಿರುದ್ಧ ಜನರು ಸಿಡಿದೆದ್ದಿದ್ದಾರೆ. ಇದರಿಂದಾಗಿ ಮೊದಲೇ ಸೋಲಿನ ಭೀತಿ ಅನುಭವಿಸುತ್ತಿರುವ ಜೆಡಿಎಸ್ ಗೆ ಮತ್ತಷ್ಟು ಹೊಡೆತ ಬಿದ್ದಿದೆ..!

ಒಂದೆಡೆ ಮಗ ಕುಮಾರಸ್ವಾಮಿ ತನ್ನ ಆಪ್ತರಿಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಅಪ್ಪನ ಮೇಲಿನ ಸಿಟ್ಟಿನಿಂದ ಸ್ವತಃ ತನ್ನ ಪಕ್ಷದ ಅಭ್ಯರ್ಥಿಗಳನ್ನೇ ಸೋಲಿಸಲು ಕರೆ ಕೊಟ್ಟಿದ್ದಾರೆ, ಇತ್ತ ಬಂಡಾಯ ಅಭ್ಯರ್ಥಿಗಳ ಸವಾಲಿಗೂ ದೇವೇಗೌಡರು ತತ್ತರಿಸಿರುವುದಂತೂ ಸತ್ಯ..!

–ಅರ್ಜುನ್

 

Editor Postcard Kannada:
Related Post