X

ಪ್ರಧಾನಿ ನರೇಂದ್ರ ಮೋದಿ ಸರಕಾರದ ಸಾಧನೆಗೆ ಮತ್ತೊಂದು ಗರಿ!! ಉಜ್ವಲ ಯೋಜನೆಯಿಂದ 4 ಕೋಟಿ ಜನರ ಮನೆಗೆ ಎಲ್‍ಪಿಜಿ!!

ಪ್ರಧಾನಿ ನರೇಂದ್ರ ಮೋದಿಯವರು ಬಡವರ ಏಳಿಗೆಗಾಗಿ ಈಗಾಗಲೇ ಹತ್ತು ಹಲವಾರು ಯೋಜನೆಗಳನ್ನು ಹೊರತಂದಿದ್ದು, ಬಡ ಕುಟುಂಬದ ಉಪಯುಕ್ತವಾಗಲಿ ಎಂದು `ಪ್ರಧಾನಮಂತ್ರಿ ಉಜ್ವಲ ಯೋಜನೆ’ಯನ್ನು ಜಾರಿ ಮಾಡುವುದರ ಮೂಲಕ ಕೋಟ್ಯಾಂತರ ಜನರಿಗೆ ಉಪಯೋಗಕಾರಿಯಾಗಿದ್ದಾರೆ!! ಇದರಿಂದ ಹಲವಾರು ಕುಟುಂಬಗಳು ಈಗಾಗಲೇ ಪ್ರಯೋಜನವನ್ನು ಪಡೆದಿದ್ದಾರೆ!! ಕೇವಲ ಒಂದು ಕ್ಷೇತ್ರದಲ್ಲಿ ಅಲ್ಲದೆ ಪ್ರತೀಯೊಂದು ಕ್ಷೇತ್ರದಲ್ಲೂ ಬಡವರ ಏಳಿಗೆಯನ್ನು ಮಾಡುತ್ತಾ ಬಂದಿದ್ದಾರೆ!!

ಆದರೆ ಕಾಂಗ್ರೆಸ್ ಮಾತ್ರ ಇಷ್ಟು ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿ  ದೇಶಕ್ಕಾಗಿ ಏನು ಮಾಡಿದ್ದಾರೆ ಎಂಬುವುದೇ ತಿಳಿಯುತ್ತಿಲ್ಲ!! ಕೇವಲ ಬಡ ಜನತೆಯ ಹಣದಿಂದ ತಮ್ಮ ಹೊಟ್ಟೆಯನ್ನು ತುಂಬಿಕೊಂಡಿದ್ದರು!! ಆದರೆ ನರೇಂದ್ರ ಮೋದೀಜೀ ಪ್ರಧಾನಿಯಾದ ಬಳಿಕ ಮೊದಲ ಕೆಲಸ ಮಾಡಿರುವುದು ಬಡ ಜನತೆಯನ್ನು ಉದ್ಧಾರ ಮಾಡುವುದಕ್ಕೆ ಪಣತೊಟ್ಟಿದ್ದಾರೆ!

 

4 ಕೋಟಿಗೂ ಅಧಿಕ ಜನರಿಗೆ ಗ್ಯಾಸ್ ಕನೆಕ್ಷನ್!!

ಕೇಂದ್ರ ಸರ್ಕಾರ ಆರಂಭಿಸಿರುವ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆ ಆರಂಭಗೊಂಡ ಎರಡು ವರ್ಷಗಳು ಮುಕ್ತಾಯವಾಗಿದೆ!! ಇದುವರೆಗೆ 4 ಕೋಟಿಗೂ ಅಧಿಕ ಜನರಿಗೆ ಈ ಯೋಜನೆಯಡಿ ಗ್ಯಾಸ್ ಕನೆಕ್ಷನ್ ನೀಡಲಾಗಿದೆ!! ಬಡ ಮಹಿಳೆಯರಿಗೆ ಈ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದ್ದು ಒಲೆಯಿಂದ ಗ್ಯಾಸ್‍ನತ್ತ ಅವರು ಮುಖ ಮಾಡಿದ್ದಾರೆ!! 4 ಕೋಟಿ ಜನರಿಗೆ ಈ ಯೋಜನೆ ತಲುಪಿದ್ದು ಒಂದು ಕ್ರಾಂತಿ ಎಂದೇ ಬಣ್ಣಿಸಲಾಗಿದೆ!! ನಾಲ್ಕು ವರ್ಷಗಳಲ್ಲಿ ಸುಮಾರು 9 ಕೋಟಿ ಜನರಿಗೆ ಎಲ್‍ಪಿಜಿ ನೀಡುವ ಮಹತ್ವದ ಟಾರ್ಗೆಟ್‍ನ್ನು ರೂಪಿಸಲಾಗಿದೆ!!

ಮಹಿಳೆಯರು ಮತ್ತು ಹೆಣ್ಣು ಮಕ್ಕಳ ದಿನಚರಿಯ ಬಹುಭಾಗ ಉರುವಲು ಸಂಗ್ರಹ ಮಾಡುವುದರಲ್ಲೇ ಕಳೆದುಹೋಗುತ್ತದೆ. ಮಳೆ, ಚಳಿಗಾಲದಲ್ಲಂತೂ ಕಟ್ಟಿಗೆಗಳನ್ನು ಉರಿಸಿದಾಗ ಅದರಿಂದ ಉಂಟಾಗುವ ಹೊಗೆ ಅದು ಮನೆಯನ್ನಷ್ಟೇ ಅಲ್ಲ, ಸುತ್ತಮುತ್ತಲ ಓಣಿಗಳಿಗೂ ವ್ಯಾಪಿಸುವುದು ಗ್ರಾಮೀಣ ಭಾರತದ ಸಾಮಾನ್ಯ ದೃಶ್ಯವಾಗಿದೆ!! ಇದೊಂದು ಬಹುಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂಬುದನ್ನು ಅನೇಕ ಅಧ್ಯಯನಗಳು ಸಾರಿ ಹೇಳಿದ್ದವು. ಒಂದು ಗಂಟೆ ಇಂಥ ಹೊಗೆಯಲ್ಲಿದ್ದರೆ ಅದು 400 ಸಿಗರೇಟ್ ಸೇವನೆಗೆ ಸಮ ಎಂದು ತಜ್ಞರು ಎಚ್ಚರಿಸಿದ್ದರು.

ಉರುವಲು ಆಧಾರಿತ ಒಲೆಗಳು ಮಹಿಳೆಯರ ಆಯುಷ್ಯವನ್ನೇ ಮುಕ್ಕುತ್ತಿತ್ತು. ಅವರ ಜೀವನ ಮಟ್ಟವನ್ನೇ ಶಿಥಿಲಗೊಳಿಸುತ್ತಿತ್ತು. ಉಜ್ವಲ ಯೋಜನೆ ಎಲ್ಲೆಡೆಪರಿಣಾಮಕಾರಿಯಾಗಿ ಜಾರಿಯಾದರೆ ಇದೊಂದು ದೊಡ್ಡ ಆರೋಗ್ಯ ರಕ್ಷೆ ನೀಡುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಕೇವಲ ಹೆಣ್ಣು ಮಕ್ಕಳಷ್ಟೇ ಅಲ್ಲ, ಇಡೀ ಕುಟುಂಬದ ಜೀವನ ಮಟ್ಟ ಸುಧಾರಣೆಯಲ್ಲೂ ಗಣನೀಯ ಕೊಡುಗೆ ನೀಡಬಲ್ಲದು. ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ಸಿಲಿಂಡರ್ ಪೂರೈಕೆಯ ಉದ್ಯೋಗ ಕೂಡ ಉಂಟಾಗುತ್ತದೆ.

ಗ್ಯಾಸ್ ಸಂಪರ್ಕ ಕೇವಲ ಶ್ರೀಮಂತರಿಗೆ ಮಾತ್ರ ಎನ್ನುವ ಭಾವನೆ ಹಿಂದೆ ಇತ್ತು. ಆದರೆ, ಇದೀಗ ಕಾಲ ಬದಲಾಗಿದ್ದು, ಮೋದಿ ಅವರಿಂದ ಬಡವರಿಗೆ, ಮಹಿಳೆಯರಿಗೆ ಗೌರವ ದೊರಕುತ್ತಿದೆ. ಇದೀಗಾಗಲೇ ದೇಶದ 4 ಕೋಟಿಗಿಂತಲು ಹೆಚ್ಚಿನ ಬಡ ಕುಟುಂಬಗಳಿಗೆ ಉಚಿತ ಎಲ್.ಪಿ.ಜಿ ಸಂಪರ್ಕ ಕಲ್ಪಿಸಿ ಅದನ್ನು ಅವರ ಮನೆ ಬಾಗಿಲಿಗೆ ಕೊಂಡೊಯ್ಯಲಾಗಿದ್ದು ಮೋದಿ ಅವರ ಯೋಜನೆಗಳು ಬಡವರ ಪಾಲಿಗೆ ವರದಾನವಾಗಿದ್ದಂತೂ ಖಂಡಿತ!!

source: news13.in

  • ಪವಿತ್ರ
Editor Postcard Kannada:
Related Post