X

ಚಿದಂಬರಂ ಪುತ್ರನ ಬಂಧನಕ್ಕೆ ಹೊಸ ಟ್ವಿಸ್ಟ್.! ಹೊಸ ಸಿಬಿಐ ಅಧಿಕಾರಿಯ ನೇಮಕಕ್ಕೆ ಖರ್ಗೆ ಆಕ್ಷೇಪಿಸಿದ್ದೇಕೆ.?!

ಯಥಾ ರಾಜ ತಥಾ ಪ್ರಜಾ ಎಂಬಂತೆ ಇದ್ದ ಕಾಂಗ್ರೆಸ್ ನ ಎಲ್ಲಾ ನೀತಿಯನ್ನು ಬುಡಮೇಲು ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ , ದೇಶಕ್ಕೆ ದೇಶವೇ ನಿಬ್ಬೆರಗಾಗುವಂತಹ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ದೇಶದ ಸಂಪತ್ತನ್ನು ಅಕ್ರಮವಾಗಿ ಬಳಸುವ ಯಾವುದೇ ಶಕ್ತಿಯನ್ನು ಮೋದಿ ಸರಕಾರ ಸಹಿಸುತ್ತಿಲ್ಲ, ಎಲ್ಲಾ ಲೂಟಿಕೋರರನ್ನೂ ಮಟ್ಟ ಹಾಕುತ್ತಿರುವ ಮೋದಿ ಸದ್ಯ ಸರಕಾರಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವಂತೆ ಮಾಡಿದ್ದಾರೆ.!

ಅಪರಾಧ ಕೃತ್ಯ , ಸಮಾಜಘಾತುಕ ಕೃತ್ಯ ಮತ್ತು ಇತರೆ ಯಾವುದೇ ದೇಶದ್ರೋಹ ಘಟನೆಗಳನ್ನೂ ಮಟ್ಟಹಾಕಲು ಇರುವಂತಹ ಇಲಾಖೆಯೇ ಸಿಬಿಐ. ಇಂತಹ ಇಲಾಖೆಯಲ್ಲೂ ರಾಜಕೀಯ ಮಾಡುತ್ತಿದ್ದ ಕಾಂಗ್ರೆಸ್ , ತಮಗೆ ಬೇಕಾದ ರೀತಿಯಲ್ಲಿ ಆಡಿಸಿಕೊಂಡು ಬಂದಿದ್ದರು. ಆದರೆ ಮೋದಿ ಈ ಎಲ್ಲಾ ಇಲಾಖೆಗಳನ್ನು ಬಲಪಡಿಸುತ್ತಾ ಸ್ವತಂತ್ರವಾಗಿ ಕೆಲಸ ಮಾಡುವಂತಹ ವಾತಾವರಣ ಸೃಷ್ಟಿ ಮಾಡಿದ್ದಾರೆ. ಆದರೆ ಇದರಿಂದ ಆತಂಕಗೊಂಡಿರುವ ಲೂಟಿಕೋರರು ಪ್ರಧಾನಿ ವಿರುದ್ಧವೇ ಟೀಕೆ ಮಾಡುತ್ತಿದ್ದಾರೆ.

ಕೋಟಿ ಕೋಟಿ ಬ್ಯಾಂಕ್ ಸಾಲ ನೀಡಿ ಬೇಜವಾಬ್ದಾರಿಯಿಂದ ಸರಕಾರ ನಡೆಸುತ್ತಿದ್ದ ಕಾಂಗ್ರೆಸ್, ಸದ್ಯ ದೇಶದ ಸಂಪತ್ತನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿರುವ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರೆ ಲೂಟಿಕೋರರಿಗೆ ರಾಜ ಮರ್ಯಾದೆ ನೀಡಿ ಸಾಕುತ್ತಿದ್ದ ಕಾಂಗ್ರೆಸ್ ನ ಬಣ್ಣ ಇಂದು ನರೇಂದ್ರ ಮೋದಿಯಿಂದ ಬಯಲಾಗುತ್ತಿದೆ. ಕಾಂಗ್ರೆಸ್ ಮಾಡಿದ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಿರುವ ಮೋದಿ ಸದ್ಯ ನೀರವ್ ಮೋದಿ ಎಂಬ ಲೂಟಿಕೋರನ ಮೇಲೆ ಬೇಟೆ ಆರಂಭಿಸಿದ್ದಾರೆ.

ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿಯನ್ನು ಮೋಸ ಮಾಡಲು ಅವಕಾಶ ಮಾಡಿಕೊಟ್ಟವರನ್ನು ಮೋದಿ ಹಿಡಿದು ಒಳದಬ್ಬಬೇಕೆಂಬುದು 128 ಕೋಟಿ ಭಾರತೀಯರ ಅಪೇಕ್ಷೆಯಾಗಿತ್ತು. ಲಲಿತ್, ನೀರವ್, ಮಲ್ಯ ಇವರೆಲ್ಲ ಮೇಲ್ನೋಟಕ್ಕೆ ಕದ್ದು ಓಡಿದವರಷ್ಟೇ. ಅವರಿಗೆ ಸಹಕಾರ ಮಾಡಿದವರೆಲ್ಲ ಭಾರತದಲ್ಲಿಯೇ ಕೊಬ್ಬಿದ ಗೂಳಿಗಳಂತೆ ಮೆರೆಯುತ್ತಿದ್ದರು. ಅಂಥವರನ್ನು ವಿಚಾರಣೆ ನಡೆಸಿ ಮಟ್ಟ ಹಾಕುವಂತಹ ಸಮಯ ಈಗ ಬಂದಿತ್ತು. ಈ ನಿಟ್ಟಿನಲ್ಲಿಯೇ ದೇಶ ಮೋದಿಗೆ ಪೂರ್ಣ ಸ್ವಾತಂತ್ರ್ಯ ನೀಡಿತೆಂದರೆ ತಪ್ಪಾಗಲಾರದು.

ಕಳೆದ ತಿಂಗಳು ಹೊಸದಾಗಿ ನೇಮಕವಾಗುವ ಸಿಬಿಐ ನಿರ್ದೇಶಕರ ಕುರಿತಂತೆಯೂ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದ್ದರು. ಸಿಬಿಐ ನಿರ್ದೇಶಕರ ಆಯ್ಕೆಗೆ ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ಆಯ್ಕೆ ಸಮಿತಿ ಇದೆ. ಈ ಸಮಿತಿ ಹೊಸ ನಿರ್ದೇಶಕರ ಆಯ್ಕೆಗೆ ತುರ್ತು ಸಭೆ ಸೇರಿತ್ತು. ಸಿಬಿಐ ನಿರ್ದೇಶಕ ಅನಿಲ್ ಸಿನ್ಹಾ ನಂತರ ಆ ಜಾಗಕ್ಕೆ ಸಹಜವಾಗಿಯೇ ಆಯ್ಕೆಯಾಗಿದ್ದ ಆರ್.ಕೆ ದತ್ತ ಅವರನ್ನು ನಿವೃತ್ತಿಗೆ ಒಂದು ವರ್ಷ ಬಾಕಿ ಇರುವಾಗಲೇ ಕೇಂದ್ರ ಸರ್ಕಾರ ಎತ್ತಂಗಡಿಗೆ ಆದೇಶ ಹೊರಡಿಸಿತ್ತು.

ತಾತ್ಕಾಲಿಕವಾಗಿ ಐಪಿಎಸ್ ಅಧಿಕಾರಿ ರಾಕೇಶ್ ಅಸ್ಥಾನ ಅವರನ್ನು ನಿರ್ದೇಶಕರಾಗಿ ನೇಮಿಸಿತ್ತು. ಅದು ಸಹಜವೂ ಆಗಿತ್ತು. ಕಾಂಗ್ರೆಸ್ಸಿನ ಅಧಿಕಾರಾವಧಿಯಲ್ಲಿ ಸಾಕಷ್ಟು ಕೆಲಸ ಮಾಡಿ ಅನುಭವವಿದ್ದ ಆರ್.ಕೆ ದತ್ತ ಯಾವ ಕಠೋರ ನಿರ್ಣಯಗಳನ್ನೂ ತೆಗೆದುಕೊಳ್ಳುವಂತೆ ಕಾಣುತ್ತಿರಲಿಲ್ಲ. ಅವರ ಅವಧಿ ಪೂರ್ಣಗೊಳ್ಳುವ ವೇಳೆಗೆ ಮೋದಿಯವರ ಅಧಿಕಾರಾವಧಿ ಪೂರ್ಣಗೊಂಡು ಭ್ರಷ್ಟಾಚಾರಿಗಳೆಲ್ಲ ಬಚಾವಾಗಿಬಿಡುತ್ತಿದ್ದರಲ್ಲದೆ ಮೋದಿ ಇವರ ವಿರುದ್ಧ ಏನೂ ಮಾಡಲಿಲ್ಲವೆಂಬ ಕೊರಗು ಜನಸಾಮಾನ್ಯರಿಗೂ ಇದ್ದೇ ಇರುತ್ತಿತ್ತು.

ಇಂತಹ ಘಟನೆಗಳಿಗೆ ಪರಿಹಾರ ಕಂಡುಕೊಳ್ಳಲು ನಿರ್ಧಾರ ಕೈಗೊಂಡ ಮೋದಿ ದೆಹಲಿಯ ಕಮಿಷನರ್ ಆಗಿದ್ದ ಅಲೋಕ್ ಕುಮಾರ್ ವರ್ವ ಅವರನ್ನು ಸಿಬಿಐ ನಿರ್ದೇಶಕರಾಗಿ ನೇಮಿಸಿತು. ಆದರೆ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಸಮಿತಿಯಲ್ಲೇ ತಮ್ಮ ವಿರೋಧ ವ್ಯಕ್ತಪಡಿಸಿ ದತ್ತ ಅವರನ್ನೇ ಮುಂದುವರಿಸಬೇಕೆಂದು ಪಟ್ಟು ಹಿಡಿದರು. ಆದರೆ ಮೋದಿ ಸರಕಾರ ಇದ್ಯಾವುದಕ್ಕೂ ಕ್ಯಾರೇ ಎನ್ನಲಿಲ್ಲ.!

ಇತ್ತ ಕಾಂಗ್ರೆಸ್ ಗೆ ನಡುಕ ಉಂಟಾಗಿತ್ತು. ಯಾಕೆಂದರೆ ತಾವು ಅಂದುಕೊಂಡಂತೆ ಎಲ್ಲಾ ನಡೆಯುತ್ತಿದೆ ಎಂದು ತಿಳಿದಿದ್ದ ಕಾಂಗ್ರೆಸ್ ಗೆ ಮೋದಿ ಸರಕಾರ ಶಾಕ್ ಮೇಲೆ ಶಾಕ್ ನೀಡುತ್ತಲೇ ಬಂದಿದ್ದಾರೆ. ಯಾಕೆಂದರೆ ಕಾಂಗ್ರೆಸ್ ನ ಆಡಳಿತ ಅವಧಿಯಲ್ಲಿ ನೀರವ್ ಮೋದಿ ಮಾಡಿದ್ದ ಹನ್ನೊಂದು ಸಾವಿರ ಕಾಒಟಿ ಬ್ಯಾಂಕ್ ಸಾಲ ಬೆಳಕಿಗೆ ಬಂದಿದ್ದೇ ಮೋದಿ ಸರಕಾರದಿಂದಾಗಿ. ತಮ್ಮ ಬಣ್ಣ ಬಯಲಾಗುತ್ತಿದೆ ಎಂದು ಆತಂಕಗೊಂಡ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಎಲ್ಲರೂ ಸೇರಿ ಪ್ರಧಾನಿ ಮೋದಿ ಮತ್ತು ಸರಕಾರವನ್ನು ಟೀಕಿಸಲು ಆರಂಭಿಸಿದರು. ಮೋದಿಯವರ ಈ ಬೇಟೆಗೆ ಸಿಲುಕಿದ್ದು ಕಾಂಗ್ರೆಸ್ ನ ಮತ್ತೊಂದು ದೊಡ್ಡ ಹಗರಣ.

ಕಾಂಗ್ರೆಸ್ ನ ಹಣಕಾಸು ಸಚಿವನಾಗಿದ್ದ ಪಿ ಚಿದಂಬರಂ ಅವರ ಮಗ ಕಾರ್ತಿ ಮಾಡಿದ ಹಗರಣಗಳು ಬೆಳಕಿಗೆ ಬಂದಿದೆ. ಕಾರ್ತಿ ಮಿತ್ರರ ಹೆಸರಿನಲ್ಲಿ ಆಸ್ತಿ ಮಾಡಿ ಅವರ ಕೈಯಿಂದ ತನ್ನ ಮಗಳಿಗೆ ಕೊಡುಗೆಯಾಗಿ ಮರಳಿ ಅದೇ ಆಸ್ತಿಯನ್ನು ಬರೆಸಿಕೊಂಡಿದ್ದ. ಮೇಲ್ನೋಟಕ್ಕೆ ಕಾರ್ತಿಯ ಹೆಸರಲ್ಲಿ ಯಾವ ಆಸ್ತಿ ಇರದೇ ಹೋದರೂ ಅವನ ಎಲ್ಲ ಬೇನಾಮಿ ಆಸ್ತಿಯೂ ಪರೋಕ್ಷವಾಗಿ ಆತನ ಮಗಳ ಹೆಸರಿನಲ್ಲಿತ್ತು. ಸಿಬಿಐ ಕಾರ್ತಿಯ ಮನೆಯ ಮೇಲೆ ದಾಳಿ ಮಾಡಿದಾಗ ಈ ಬಗೆಯ ಅನೇಕ ಬೇನಾಮಿ ಆಸ್ತಿಯ ವಿವರಗಳು ಸಿಕ್ಕವು.

ಕಾಂಗ್ರೆಸ್ ನ ಒಂದೊಂದೇ ಹಗರಣವನ್ನು ಬಯಲಿಗೆಳೆಯುತ್ತಿರುವ ಮೋದಿ ಸರಕಾರದ ದಿಟ್ಟ ನಿರ್ಧಾರಗಳನ್ನು ಅರಿತಿರುವುದರಿಂಲೇ ಮಲ್ಲಿಕಾರ್ಜುನ ಖರ್ಗೆ ಸಿಬಿಐ ಅಧಿಕಾರಿಯ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹಗರಣದಲ್ಲಿ ಸಿಕ್ಕಿಬಿದ್ದ ಕಾರ್ತಿ ತಂದೆ ಸರ್ಕಾರದ ಬಲು ದೊಡ್ಡ ಹುದ್ದೆಯಲಿದ್ದುದರಿಂದ ಇಡಿಯ ಪರಿವಾರ ಸೋನಿಯಾ ಗಾಂಧಿಗೆ ಆಪ್ತವಾಗಿದ್ದುದರಿಂದ ಎಲ್ಲಕ್ಕೂ ಮಿಗಿಲಾಗಿ ಆಗಿನ ಪ್ರಧಾನಿ ಮನಮೋಹನ್ ಸಿಂಗರು ಸದಾ ಮೌನಿಯಾಗಿರುತ್ತಿದ್ದುದರಿಂದ ಕಾರ್ತಿ ಚಿದಂಬರಂ ಆಡಿದ್ದೇ ಆಟವಾಗಿತ್ತು. ಹ್ಯಾರಿಸ್​ನ ಮಗ ಬೀದಿಗೆ ಬಂದು ಹೊಡೆಯುವಷ್ಟು ಕೆಳ ಮಟ್ಟದ ಗೂಂಡಾ. ಕಾರ್ತಿ ಅಧಿಕಾರಿಗಳನ್ನೇ ಬೆದರಿಸಿ ತನ್ನ ಕೆಲಸ ಮಾಡಿಕೊಳ್ಳಬಲ್ಲಷ್ಟು ಪ್ರಭಾವಿ ಅಷ್ಟೇ.

ನಮ್ಮ ದೇಶದ ಕೆಲ ತನಿಖಾ ಸಂಸ್ಥೆಗಳು 50ಕ್ಕೂ ಹೆಚ್ಚು ವರ್ಷ ಆಳಿದ ಕಾಂಗ್ರೆಸ್ಸಿಗರ ಮಾತನ್ನು ಈಗಲೂ ಕೇಳುತ್ತವೆ. ನಾಲ್ಕು ವರ್ಷಗಳ ನಂತರ ಸಿಬಿಐ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಈಗ ದಕ್ಕಿದೆ. ತಮ್ಮಿಚ್ಛೆಗೆ ತಕ್ಕಂತೆ ನಡೆದುಕೊಳ್ಳಲು ಮೋದಿ ಬಿಡುತ್ತಿಲ್ಲವೆಂದು ಕೋಪಿಸಿಕೊಂಡ ನ್ಯಾಯಾಧೀಶರುಗಳು ಬೀದಿಗೆ ಬಂದದ್ದಂತೂ ನಿಮಗೆ ನೆನಪೇ ಇದೆ. ಆದರೆ ಹನ್ನೆರಡು ವರ್ಷಗಳ ಕಾಲ ಗುಜರಾತ್​ನಲ್ಲಿ ಈ ಬಗೆಯ ಎಲ್ಲ ಶೋಷಣೆಗಳನ್ನು ಎದುರಿಸಿ ನಿಂತ ನರೇಂದ್ರ ಮೋದಿ ಹಿಂದೆಂದಿಗಿಂತಲೂ ಅಚಲವಾಗಿದ್ದಾರೆ.

ನರೇಂದ್ರ ಮೋದಿಯವರ ಆಡಳಿತದಲ್ಲಿ ಈ ಹಿಂದೆ ಕಾಂಗ್ರೆಸ್ ಮಾಡಿದ್ದ ಎಲ್ಲಾ ಹಗರಣಗಳು ಬಯಲಾಗುತ್ತಿದ್ದು , ಇದನ್ನು ಅರಿತಿರುವ ಕಾಂಗ್ರೆಸ್ ನಾಯಕರು ಮೋದಿಯ ಎಲ್ಲಾ ನಡೆಯನ್ನು ವಿರೋಧಿಸುತ್ತಿದ್ದಾರೆ.!

–ಅರ್ಜುನ್

 

Editor Postcard Kannada:
Related Post