X

ಸಿಎಂಗೆ ಶಾಕ್ ನೀಡಿದ ಬಿಜೆಪಿ! ಸಂಬೀತ್ ಪಾತ್ರ ಕೇಳಿದ 5 ಪ್ರಶ್ನೆಗೆ ಬೆಚ್ಚಿಬಿದ್ದ ಸಿದ್ದರಾಮಯ್ಯ! ಬಯಲಾಯ್ತು ವಾಚ್ ಸೀಕ್ರೇಟ್…!

ಚುನಾವಣೆ ಹತ್ತಿರ ಬರುತ್ತಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿಗೆ ಭ್ರಷ್ಟಾಚಾರ ಪ್ರಕರಣಗಳು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಒಂದು ಕಡೆ ಕಳೆದ ಐದು ವರ್ಷದಲ್ಲಿ ಕಾಂಗ್ರೆಸ್ ಮಾಡಿದ ಭ್ರಷ್ಟಾಚಾರ ಪ್ರಕರಣಗಳು ಪಕ್ಷವನ್ನು ಕಿತ್ತು ತಿನ್ನುತ್ತಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಭಾರತೀಯ ಜನತಾ ಪಕ್ಷ ಮೇಲಿಂದ ಮೇಲೆ ನೀಡುತ್ತಿರುವ ಶಾಕ್ ಗೆ ಕಾಂಗ್ರೆಸ್ ಪಕ್ಷ ನೆಲಕಚ್ಚಿ ಹೋಗಿದೆ. ಇದೀಗ ಭಾರತೀಯ ಜನತಾ ಪಕ್ಷ ನೀಡಿರುವ ಮತ್ತೊಂದು ಏಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಖಾಡೆ ಮಲಗುವಂತಾಗಿದೆ.

ಸಂಬೀತ್ ಪಾತ್ರ ಸಿಡಿಸಿದರು ಹೊಸ ಬಾಂಬ್..!

ಭಾರತೀಯ ಜನತಾ ಪಕ್ಷದ ಮುಖಂಡ ಸಂಬೀತ್ ಪಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಭ್ರಷ್ಟಾಚಾರ ಆರೋಪದ ಸುರಿಮಳೆಯನ್ನೇ ಗೈದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ದುಬಾರಿ ವಾಚ್ ಬಗ್ಗೆ ಕೆಂಡಾಮಂಡಲರಾಗಿ ಪ್ರಶ್ನಿಸಿದ್ದಾರೆ. ಭಾರತೀಯ ಜನತಾ ಪಕ್ಷದ ನಾಯಕ ಸಂಬೀತ್ ಪಾತ್ರ ಕೇಳಿದ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಷರಷಃ ಬೆಚ್ಚಿ ಬಿದ್ದಿದ್ದಾರೆ.

ಮುಖ್ಯಮಂತ್ರಿಗಳೇ ವಾಚ್ ಬಗ್ಗೆ ಹೇಳುವಿರಾ..?

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರರಾಗಿರುವ ಸಂಬೀತ್ ಪಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯರ ಚಳಿ ಬಿಡಿಸಿದ್ದಾರೆ. ಭಾರೀ ಸುದ್ಧಿಯಾಗಿದ್ದ ಸಿದ್ದರಾಮಯ್ಯನವರ ಲಕ್ಷಾಂತರ ಮೌಲ್ಯದ ವಾಚ್ ಬಗೆಗಿನ ಅವ್ಯವಹಾರಗಳನ್ನು ಬಿಚ್ಚಿಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಕೈಯಲ್ಲಿ ಕಟ್ಟಿಕೊಂಡಿದ್ದ ಆ ದುಬಾರಿ ವಾಚ್ ವಂಚಕ ಹೂಡಿಕೆದಾರ ವಿಜಯ್ ಈಶ್ವರನ್ ನೀಡಿದ್ದಾರೆ..? ಈ ಅತಿದೊಡ್ಡ ಮೌಲ್ಯದ ಗಿಫ್ಟನ್ನು ವಿಜಯ್ ಈಶ್ವರನ್ ನಿಮಗೆ ಯಾಕೆ ನೀಡಿದ್ದಾರೆ..? ವಿಜಯ ಈಶ್ವರನ್ ಓರ್ವ ವಂಚಕ ಹೂಡಿಕೆದಾರ. ಆತನನ್ನು ನೀವು ಚೀನಾದಲ್ಲಿ ಭೇಟಿಯಾಗಿದ್ದೀರಾ. ಇದರ ಹಿಂದಿನ ಗುಟ್ಟೇನು. ಚೀನಾದಲ್ಲಿ ಕದ್ದುಮುಚ್ಚಿ ಆ ವಂಚಕನನ್ನು ಭೇಟಿಯಾಗಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ಸಿಎಂಗೆ ಬಿಜೆಪಿಯಿಂದ 5 ಪ್ರಶ್ನೆಗಳು…

1. ವಿಜಯ್ ಈಶ್ವರನ್‍ನ್ನ ಸಿದ್ದರಾಮಯ್ಯ ಚೀನಾದಲ್ಲಿ ಭೇಟಿ ಮಾಡಿದ್ದು ಏಕೆ?
2. ಭೇಟಿ ವೇಳೆ ನಿಮಗೆ ಈಶ್ವರನ್ ಗಿಫ್ಟ್ ನೀಡಿದ್ದಾರೆ ಅಲ್ವಾ?
3. ಅದು ಬೆಲೆ ಬಾಳುವ ಗಿಫ್ಟ್ ಎನ್ನಲಾಗಿದೆ. ಆ ದುಬಾರಿ ಗಿಫ್ಟ್ ಏನು?
4. ಆ ಗಿಫ್ಟ್ ಹ್ಯುಬ್ಲೊಟ್ ವಾಚ್ ಇರಬಹುದಾ…?
5. ಬಾದಾಮಿ ಮತ್ತು ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡುವಾಗ ಸಿಕ್ಕಿದ ಉಡುಗೊರೆಯನ್ನು ಏನೆಂದು ತಿಳಿಸಿದ್ದೀರಿ?

ಯಾರದು ವಿಜಯ್ ಈಶ್ವರನ್…?

ಇದೀಗ ಈ ಒಂದು ಪ್ರಶ್ನೆ ವ್ಯಾಪಕವಾಗಿ ಹರಡುತ್ತಿದೆ. ಈ ವಿಜಯ್ ಈಶ್ವರನ್ ಯಾರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಜಯ್ ಈಶ್ವರನ್ ಗೂ ಏನು ಸಂಬಂಧ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲೂ ಭಾರೀ ಸದ್ದು ಮಾಡುತ್ತಿದೆ.

ವಿಜಯ್ ಈಶ್ವರನ್ ಓರ್ವ ಕ್ಯೂ ಐ ಎಂಬ ಸಂಸ್ಥೆಯ ಅಧ್ಯಕ್ಷ. ಹೂಡಿಕೆಯಲ್ಲಿ ವಂಚನೆಯನ್ನೇ ನಡೆಸಿಕೊಂಡು ಬಂದ ಈತ ಹಲವಾರು ವಂಚನೆ ಆರೋಪಗಳನ್ನು ಎದುರಿಸುತ್ತಿದ್ದಾರೆ. ಕಳೆದ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಚೀನಾ ಭೇಟಿ ವೇಳೆ ಈ ವಂಚಕ ಹೂಡಿಕೆದಾರ ವಿಜಯ್ ಈಶ್ವರನ್ ರನ್ನು ಭೇಟಿಯಾಗಿದ್ದರು. ಈ ಚಿತ್ರಗಳನ್ನು ಇದೀಗ ಸಂಬೀತ್ ಪಾತ್ರ ಬಿಡುಗಡೆಗೊಳಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಆಘಾತವನ್ನೇ ತಂದಿಟ್ಟಿದೆ.

ತಮಿಳು ಮೂಲದ ಮಲೇಷ್ಯಾದ ಉದ್ಯಮಿಯಾಗಿರುವ ವಿಜಯ್ ಈಶ್ವರನ್ ಹಣವನ್ನು ದುಪ್ಪಟ್ಟುಗೊಳಿಸುವ ಚೈನ್ ಬಿಸಿನೆಸ್ ಅನ್ನು ಭಾರತದಲ್ಲಿ ಆರಂಭಿಸಿದ್ದ. ಕಡಿಮೆ ಸಮಯದಲ್ಲಿ ಹಣ ಸಿಗುತ್ತದೆ ಎನ್ನುವ ಕಾರಣಕ್ಕೆ ಬಹಳಷ್ಟು ಮಂದಿ ಈ ಯೋಜನೆಯಲ್ಲಿ ಹಣವನ್ನು ಹೂಡಿದ್ದರು. 2009ರಲ್ಲಿ ಈತ ಭಾರತದಿಂದ ನಾಪತ್ತೆಯಾಗಿದ್ದಾನೆ. ಈತನ ಅಕ್ರಮಕ್ಕೆ ಸಂಬಂಧಿಸಿದಂತೆ 1300ಕ್ಕೂ ಹೆಚ್ಚು ಸಾಕ್ಷ್ಯಗಳು ಸಿಕ್ಕಿದ್ದು, ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಬಿಜೆಪಿ ತಿಳಿಸಿದೆ.

ಬಿಜೆಪಿ ಆರೋಪ ಏನು?

ಆಗಸ್ಟ್ 13, 2013ರಂದು ಸಿಎಂ ಚೀನಾಕ್ಕೆ ತೆರಳಿದ್ದ ವೇಳೆ ವಿಜಯ್ ಈಶ್ವರನ್‍ನನ್ನು ಭೇಟಿ ಮಾಡಿ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದಾರೆ. ಪ್ರಸ್ತುತ ಮಲೇಷ್ಯಾದಲ್ಲಿರುವ ವಿಜಯ್ ಈಶ್ವರನ್ ತಮಿಳುನಾಡಿನಲ್ಲಿ 35 ಸಾವಿರಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದು, ದೇಶದೆಲ್ಲೆಡೆ 100ಕ್ಕೂ ಹೆಚ್ಚು ಕಡೆ ಎಫ್‍ಐಆರ್ ದಾಖಲಾಗಿದೆ. ಚೆನ್ನೈ ಮತ್ತು ಮುಂಬೈ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೊಳಪಟ್ಟಿದ್ದ ವಿಜಯ್ ಈಶ್ವರನ್ 2009ರಿಂದ ದೇಶವನ್ನು ತೊರೆದು ಪರಾರಿಯಾಗಿದ್ದು, ಈ ವ್ಯಕ್ತಿಯನ್ನು ಭೇಟಿ ಮಾಡಿದ್ದು ಯಾಕೆ? ಈ ಭೇಟಿ ವೇಳೆ ಈಶ್ವರನ್ ಗಿಫ್ಟ್ ನೀಡಿದ್ದು ಆ ಗಿಫ್ಟ್ ಹ್ಯುಬ್ಲೊಟ್ ವಾಚ್ ಇರಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ. ನಾವು ಈಶ್ವರನ್ ನೀಡಿದ್ದು ವಾಚ್ ಎಂದು ಹೇಳುತ್ತಿಲ್ಲ. ಆ ಗಿಫ್ಟ್ ವಾಚ್ ಇರಬಹುದಾ ಎಂದು ಸಿದ್ದರಾಮಯ್ಯಗೆ ಪ್ರಶ್ನೆ ಮಾಡುತ್ತಿದ್ದೇವೆ.

ದೇಶದೆಲ್ಲೆಡೆ ಎಫ್‍ಐಆರ್ ದಾಖಲಾದ ವಿಚಾರ ತಿಳಿದಿದ್ದರೂ ಅಕ್ರಮ ಎಸಗಿರುವ ಕಂಪೆನಿಯ ಜೊತೆ ಗುರುತಿಸಿಕೊಂಡಿದ್ದು ಯಾಕೆ ಎಂದು ಅವರು ಪ್ರಶ್ನಿಸಿದರು. ಸಿದ್ದರಾಮಯ್ಯ ಅಕ್ರಮ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಗಡಿಯಾರ ನಿಲ್ಲುವ ಕಾಲ ಬಂದಿದ್ದು, ಈ ಚುನಾವಣೆಯ ಬಳಿಕ ಗಡಿಯಾರದ ಮುಳ್ಳು ನಿಲ್ಲುತ್ತದೆ. ಯುಪಿಎ ಅವಧಿಯಲ್ಲೇ ಸಿಬಿಐ, ಸಿವಿಸಿ, ಎಸ್‍ಎಫ್‍ಐಒ ತನಿಖೆ ಆದೇಶ ನೀಡಿದೆ. ಹೀಗಾಗಿ ಕಾಂಗ್ರೆಸ್ ನಾವು ಮಾಡುತ್ತಿರುವ ಆರೋಪವನ್ನು ರಾಜಕೀಯ ಪ್ರೇರಿತ ಆರೋಪ ಎಂದು ಹೇಳಲು ಸಾಧ್ಯವಿಲ್ಲ. ಯುಪಿಎ ಸರ್ಕಾರ ಎರಡು ಬಾರಿ ಇದ್ದಾಗಲೂ ಈ ಉದ್ಯಮಿಯ ರಕ್ಷಿಸಿತ್ತು. ಈಗ ಸಿಎಂ ಸಿದ್ದರಾಮಯ್ಯ ಈ ವ್ಯಕ್ತಿಯನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಿಎಂ ಸಿದ್ದರಾಮಯ್ಯ ನಾನು ಕನ್ನಡಿಗರನ್ನು ರಕ್ಷಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಆದರೆ ತಮಿಳು ಉದ್ಯಮಿಯನ್ನು ರಕ್ಷಿಸುವ ಮೂಲಕ ಸಾವಿರಾರು ಕನ್ನಡಿಗರಿಗೆ ಮೋಸ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಒಟ್ಟಾರೆ ಚುನಾವಣೆ ಹತ್ತಿರ ಬರುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೇಚಿಗೆ ಸಿಲುಕಿದ್ದಾರೆ. ವಿಜಯ್ ಈಶ್ವರನ್ ಅಂದ್ರೆ ಯಾರುಂತನೇ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ವಿಜಯ್ ಈಶ್ವರನ್ ಜೊತೆ ತೆಗಿಸಿಕೊಂಡಿರುವ ಚಿತ್ರಗಳು ಮುಖ್ಯಮಂತ್ರಿಗಳ ಸುಳ್ಳಿಗೆ ಸಾಕ್ಷ್ಯ ನುಡಿಯುತ್ತಿದೆ.

-ಸುನಿಲ್ ಪಣಪಿಲ

Editor Postcard Kannada:
Related Post