X

ಜಗ್ಗೇಶ್‍ಗೆ ಬಿಗ್ ಗಿಫ್ಟ್ ನೀಡಿದ ಬಿಜೆಪಿ.! ಮತ್ತೆ ಹಾರಲಿದೆ ಕೇಸರೀ ಪತಾಕೆ..! ಮೋದಿ ಪ್ರೇಮಿಗೆ ಒಲಿದು ಬಂದ ಭಾಗ್ಯ…!

ಬೆಳ್ಳಿ ತೆರೆಯ ಮೇಲೆ ಅವರು ಬಂದರೆಂದರೆ ಸಾಕು ಸಿನಿ ರಸಿಕರು ನಗೆಗಡಲಲ್ಲಿ ತೇಲುತ್ತಿರುತ್ತಾರೆ. ಅವರು ಸಿಡಿಸುವ ಕಾಮಿಡಿ ಝಲಕ್‍ಗೆ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಾರೆ. ಚಲನ ಚಿತ್ರದೊಂದಿಗೆ ರಾಷ್ಟ್ರಪ್ರೇಮವನ್ನೂ ಮೈಗೂಡಿಸಿಕೊಂಡಿರುವ ನಟ ಅವರು. ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿ ಅವರು.

ಹೌದು. ಅವರು ಮತ್ಯಾರೂ ಅಲ್ಲ. ಅವರೇ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದಂತಹ ಸಾಧನೆಯನ್ನು ಮಾಡಿ ಇದೀಗ ಭಾರತೀಯ ಜನತಾ ಪಕ್ಷದಲ್ಲಿ ತನ್ನ ರಾಜಕೀಯ ಜೀವನವನ್ನು ಜೀವಿಸುತ್ತಿರುವ ದೇಶಪ್ರೇಮಿ, ನವರಸ ನಾಯಕ ಜಗ್ಗೇಶ್.

ಮೋದಿ ಪ್ರೇಮಿ ಜಗ್ಗೇಶ್‍ಗೆ ಒಲಿದುಬಂತು ಟಿಕೆಟ್…

ಚಲನಚಿತ್ರ ನಟ ಜಗ್ಗೇಶ್ ಅಪ್ಪಟ ಪ್ರಧಾನಿ ನರೇಂದ್ರ ಮೋದಿಯವರ ಪ್ರೇಮಿ. ನರೇಂದ್ರ ಮೋದಿಯವರೆಂದರೆ ನಟ ಜಗ್ಗೇಶ್‍ಗೆ ತುಂಬಾನೆ ಇಷ್ಟ. ಅಂತೆಯೇ ನಟ ಜಗ್ಗೇಶ್ ಭಾರತೀಯ ಜನತಾ ಪಕ್ಷದ ನಾಯಕರೂ ಹೌದು. ತಮ್ಮ ಸಿನಿ ರಂಗ ಹಾಗೂ ಸಾಮಾಜಿಕ ಚಟುವಟಿಕೆಯೊಂದಿಗೆ ರಾಜಕೀಯ ಚಟುವಟಿಯಲ್ಲಿಯೂ ನಿರತರಾಗಿಕೊಂಡಿರುತ್ತಿದ್ದಾರೆ.

ಅದೆಲ್ಲೇ ಹೋದರೂ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಗೂ ಹಿಂದೂ ಸಮಾಜವನ್ನು ಗೌರವಿಸುವ ಹೇಳಿಕೆಯನ್ನು ನೀಡೋದನ್ನು ಜಗ್ಗೇಶ್ ಮರೆಯೋದಿಲ್ಲ. ಹೀಗಾಗಿಯೇ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ನೆಚ್ಚಿನ ನಾಯಕರಲ್ಲಿ ಇವರೂ ಓರ್ವರಾಗಿದ್ದಾರೆ.

ಜಗ್ಗೇಶ್ ಪಾಲಾಯಿತು ಯಶವಂತಪುರ ಟಿಕೆಟ್..!

ಎಸ್… ಇದೀಗ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಟ ಜಗ್ಗೇಶ್ ಅವರನ್ನು ಆಯ್ಕೆ ಮಾಡಿ ಘೋಷಣೆ ಮಾಡಲಾಗಿದೆ. ಈ ಹಿಂದೆ ಭಾರತೀಯ ಜನತಾ ಪಕ್ಷದ ವಿಧಾನ ಪರಿಷತ್ ನ ಶಾಸಕರಾಗಿದ್ದ ನಟ ಜಗ್ಗೇಶ್ ಹಲವಾರು ಜನಪರ ಕೆಲಸಗಳನ್ನು ಮಾಡಿದ್ದರು. ಸರ್ಕಾರಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದ್ದಾಗ ಅದಕ್ಕೆ ಜೀವ ತುಂಬಿ ಸ್ಲೀಪರ್ ಬಸ್‍ಗಳನ್ನು ಜಾರಿಗೆ ತಂದು ಸರ್ಕಾರಿ ಸಾರಿಗೆ ಸಂಸ್ಥೆಗೆ ಆದಾಯ ಹೆಚ್ಚಿಸಿದವರು ಇದೇ ಜಗ್ಗೇಶ್.

ಇದೀಗ ರಾಜ್ಯ ಭಾರತೀಯ ಜನತಾ ಪಕ್ಷದ ಕಾರ್ಯಕಾರಣಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದ ಉದ್ದಗಲಕ್ಕೂ ಕಾಳಿಗೆ ಚಕ್ರ ಕಟ್ಟಿಕೊಂಡವರಂತೆ ಸಂಚರಿಸುವ ನಟ ಜಗ್ಗೇಶ್ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಭಾರತೀಯ ಜನತಾ ಪಕ್ಷದ ಶಿಸ್ತಿನ ಸಿಪಾಯಿ ಎಂಬುವುದನ್ನು ಅವರು ಸಾಭೀತುಪಡಿಸಿದ್ದಾರೆ.

ಟ್ವಿಟರ್‍ನಲ್ಲಿ ಸಕ್ರಿಯ…

ನಟ ಜಗ್ಗೇಶ್ ತಮ್ಮ ಅಭಿಮಾನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಭೇಟಿಯಾಗುತ್ತಲೇ ಇರುತ್ತಾರೆ. ಅದರಲ್ಲೂ ಟ್ವಿಟ್ಟರ್‍ನಲ್ಲಿ ನಟ ಜಗ್ಗೇಶ್ ಹೆಚ್ಚಾಗಿ ಮಿಂಚುತ್ತಿರುತ್ತಾರೆ. ಹಿಂದೂ ವಿರೋಧಿ ಹಾಗೂ ಮೋದಿ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ವಿರೋಧಿಗಳನ್ನು ತಮ್ಮ ಟ್ವಿಟರ್ ಖಾತೆಯ ಮೂಲಕ ಝಾಡಿಸುತ್ತಲೇ ಇರುತ್ತಾರೆ. ನಟಿ ರಮ್ಯಾ ಹಾಗೂ ರಾಹುಲ್ ಗಾಂಧಿಯನ್ನು ಝಾಡಿಸುವುದರಲ್ಲಿ ಜಗ್ಗೇಶ್ ಎತ್ತಿದ ಕೈ.

ಕೇವಲ ಸಿನಿಮಾ ಮಾತ್ರವಲ್ಲದೆ ರಾಜಕೀಯ ರಂಗದಲ್ಲೂ ತಮ್ಮ ಅದ್ಭುತ ಪರ್ಫಾಮೆಂಟ್ಸ್‍ನ್ನು ತೋರಿಸಿದ ಜಗ್ಗೇಶ್‍ಗೆ ಇದೀಗ ಬೆಂಗಳೂರಿನ ಯಶವಂತಪುರದಲ್ಲಿ ಟಿಕೆಟ್ ನೀಡಿ ರಾಜ್ಯ ವಿಧಾನ ಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದಿಂದ ಈ ಬಾರಿ ಅವಕಾಶವನ್ನು ನೀಡಲಾಗಿದೆ. ಸಂಸದೆ ಶೋಭಾ ಕರಂದ್ಲಾಜೆಯವರ ಹೆಸರು ಕೇಳಿ ಬರುತ್ತಿದ್ದರೂ ಯಡಿಯೂರಪ್ಪ ಹಾಗೂ ಶ್ರೀ ರಾಮುಲು ಅವರನ್ನು ಹೊರತುಪಡಿಸಿ ಮತ್ಯಾವ ಸಂಸದರಿಗೂ ಟಿಕೆಟ್ ಇಲ್ಲ ಎಂಬ ಕಟ್ಟಪ್ಪಣೆ ಈ ಹಿಂದೆಯೇ ಆಗಿದ್ದರಿಂದ ಶೋಭಾಗೆ ಟಿಕೆಟ್ ನಿರಾಕರಣೆಯಾಗಿದೆ.

ಒಟ್ಟಾರೆ ಈ ಬಾರಿ ಸಿನಿ ನಟರನ್ನೊಳಗೊಂಡ ಭಾರತೀಯ ಜನತಾ ಪಕ್ಷದ ಚುನಾವಣೆ ಮತ್ತಷ್ಟು ರಂಗೇರಲಿದೆ. ಈ ಬಾರಿ ಬಿಜೆಪಿ ಎಂಬ ಘೋಷವಾಕ್ಯ ಮತ್ತಷ್ಟು ಮೊಳಗಲಿದೆ. ಜಗ್ಗೇಶ್‍ಗೆ ಟಿಕೆಟ್ ನೀಡಿರುವ ಭಾರತೀಯ ಜನತಾ ಪಕ್ಷ ಈ ಬಾರಿ ಯಶವಂತಪುರದಲ್ಲಿ ಮತ್ತೆ ಕಮಲ ಅರಳಿಸುವ ದೆಸೆಯನ್ನು ಎದುರು ನೋಡುತ್ತಿದೆ.

-ಸುನಿಲ್ ಪಣಪಿಲ

Editor Postcard Kannada:
Related Post