X
    Categories: ದೇಶ

ಗುಜರಾತ್ ಮಾಡಲ್: ಕಾಂಗ್ರೆಸ್‌ ಸಂಪೂರ್ಣ ನೆಲಕಚ್ಚಿದ್ದೇಗೆ?

ದೇಶದಲ್ಲಿ ಮೋದಿ ಅಲೆ ಇದೆ. ಆ ಮೋಡಿಗೆ ಜನತೆ ಫಿದಾ ಆಗುತ್ತಿದ್ದಾರೆ. 2014 ರಿಂದೀಚೆಗೆ ಭಾರತದಲ್ಲಿ ಬೀಸುತ್ತಿರುವ ಅಭಿವೃದ್ಧಿ‌ಯ ಪರ್ವ, ಪ್ರಧಾನಿ ಮೋದಿ ಅವರ ಮೇಲೆ ಜನರು ಮತ್ತಷ್ಟು ಭರವಸೆ ಇರಿಸುವುದಕ್ಕೆ ಕಾರಣವಾಗಿದೆ. 2014 ರ ವರೆಗೆ ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರ ಮಟ್ಟದಲ್ಲಿ ಬೀಳುತ್ತಿದ್ದ ಅಷ್ಟೋ, ಇಷ್ಟೋ ಮತಗಳಲ್ಲಿಯೂ ಮತ್ತಷ್ಟು ಕಡಿತಗೊಂಡಿದೆ. ಈ ಹತಾಶೆ ಕಾಂಗ್ರೆಸ್ ನಾಯಕರನ್ನು ಪ್ರಧಾನಿ ಮೋದಿ ವಿರುದ್ಧ, ಕೇಂದ್ರ ಸರ್ಕಾರ‌ದ ವಿರುದ್ಧ, ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುವಂತೆ ಮಾಡುತ್ತಿದೆ.

ನಿನ್ನೆಯಷ್ಟೇ ಗುಜರಾತ್‌ನಲ್ಲಿ ಬಿಜೆಪಿ ಪಕ್ಷ ಅತ್ಯಧಿಕ ಬಹುಮತಗಳನ್ನು ಪಡೆಯುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವಿನ ನಗೆ ಬೀರಿದೆ. ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತಿದ್ದು, ಗುಜರಾತ್ ಎಲೆಕ್ಷನ್ ರಿಸಲ್ಟ್ ಕರ್ನಾಟಕದ ಮೇಲೆಯೂ ನಿರ್ಣಾಯಕ ಪಾತ್ರ ವಹಿಸಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಗುಜರಾತ್‌ನಲ್ಲಿ ಗೆಲುವು ‘ಕೈ’ ತಪ್ಪಿ ಹೋದ ಅಭ್ಯರ್ಥಿ‌ಗಳು ಬಿಜೆಪಿ ಗೆಲುವಿನ ಹಾದಿ ಹೇಗಿತ್ತು ಎಂಬುದರ ಪರಾಮರ್ಶೆ‌ಯಲ್ಲಿ ತೊಡಗಿದ್ದಾರೆ. ಕಳೆದ ಬಾರಿ ಗುಜರಾತ್‌ನ ವಿಧಾನಸಭಾ ಚುನಾವಣೆ‌ಯಲ್ಲಿ 77 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್, ಹೀಗೆಯೇ ಮುಂದುವರಿದರೆ ವಿರೋಧ ಪಕ್ಷದ ಸ್ಥಾನಕ್ಕೂ ಅರ್ಹತೆ ಇಲ್ಲ ಎಂಬ ಸ್ಥಿತಿಗೆ ಬಂದು ನಿಲ್ಲಲಿದೆ. ಅಥವಾ ಜನರೇ ಕಾಂಗ್ರೆಸ್ ಪಕ್ಷವನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ ಎಂದರೂ ಅತಿಶಯೋಕ್ತಿಯಲ್ಲ.

1995 ರಿಂದ ಈಚೆಗೆ ನಡೆದ ಎಲ್ಲಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಖಾತೆ ಕಳೆದುಕೊಂಡ ಇತಿಹಾಸ‌ವೇ ಇಲ್ಲ. ಸದ್ಯ ಈ ಚುನಾವಣೆಯಲ್ಲಿಯೂ ಗೆಲುವಿನ ನಗೆ ಬೀರಿರುವ ಬಿಜೆಪಿ ಸತತ 7 ನೇ ಬಾರಿಗೆ ಗದ್ದುಗೆ ಏರುತ್ತಿದೆ ಎನ್ನುವುದು, ಬಿಜೆಪಿ ಮೇಲೆ ಗುಜರಾತ್ ಜನತೆ ಇರಿಸಿರುವ ನಂಬಿಕೆಗೆ ಜೀವಂತ ಸಾಕ್ಷಿ. ಇನ್ನು ಪಕ್ಷದ ಗೆಲುವಿಗೆ ಬಿಜೆಪಿ ಪರ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ್ದ 30 ಕ್ಕೂ ಅಧಿಕ ರ್ಯಾಲಿ‌ಗಳು, ಪ್ರಚಾರ ಕಾರ್ಯಗಳು ಸಹ ಪ್ರಮುಖ ಕಾರಣ ಎಂದೆನ್ನಬಹುದು.

ಕಾಂಗ್ರೆಸ್ ಪಕ್ಷ ಪ್ರಧಾನಿ ಮೋದಿ ಅವರನ್ನು ರಾವಣನಿಗೆ ಹೋಲಿಸುವ ಮೂಲಕ ಒಬ್ಬ ಪ್ರಧಾನಿ‌ಗೆ ನೀಡಬೇಕಾದ ಗೌರವವನ್ನು ಸಹ ನೀಡದೆ, ಅವರನ್ನು ರಾವಣ ಎಂದು ಜರೆದಿದ್ದರು. ಪ್ರಧಾನಿ ಮೋದಿ ರಾವಣನಲ್ಲ ,ರಾಮ. ಅವರ ಆಡಳಿತದಲ್ಲಿ ಗುಜರಾತ್ ರಾಮರಾಜ್ಯವಾಗಿತ್ತು ಎಂಬುದಕ್ಕೆ, ಜನಸ್ನೇಹಿ ಆಡಳಿತ ನೀಡಿದ್ದರು ಎಂಬುದಕ್ಕೆ ಈ ಚುನಾವಣಾ ಫಲಿತಾಂಶ‌ವೇ ಉತ್ತರ.

ಗುಜರಾತ್‌ನಲ್ಲಿ ಬಿಜೆಪಿ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕರ್ನಾಟಕದ ಕಾಂಗ್ರೆಸ್ ಸಹ ಈ ಫಲಿತಾಂಶ‌ದಿಂದ ಎಚ್ಚೆತ್ತುಕೊಳ್ಳುವ ಸಿದ್ಧತೆ ನಡೆಸಿದೆ. ಓಲೈಕೆಯ ರಾಜಕಾರಣದಲ್ಲಿ ತೊಡಗಿಕೊಂಡಿದೆ. ಗುಜರಾತ್‌ನ ಬಿಜೆಪಿ ಫಲಿತಾಂಶ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರದು ಎನ್ನುವ ಮಾತುಗಳನ್ನಾಡುವ ಮೂಲಕ, ಪರೋಕ್ಷವಾಗ ತೋರಿಕೆಯ ಧೈರ್ಯ ಪ್ರದರ್ಶನ‌ದಲ್ಲಿ ತೊಡಗಿದ್ದಾರೆ.

ಯಾವುದೇ ಜನಸ್ನೇಹಿ ಕೆಲಸ ಮಾಡದಿದ್ದರೂ ಮುಂದಿನ ಚುನಾವಣೆಯಲ್ಲಿ ಜನತೆ ತಮ್ಮ ಪರ ಮತ ನೀಡುತ್ತಾರೆ ಎನ್ನುವ ಹುಚ್ಚು ನಂಬಿಕೆ ಕಾಂಗ್ರೆಸ್‌ನವರದ್ದು. ಈ ನಂಬಿಕೆ ಮುರಿದು ಬೀಳುವ ಕಾಲ ಸನ್ನಿಹಿತವಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ‌ಗೆ ಜನ ಮನ್ನಣೆ ನೀಡಲಿದ್ದು, ಖಾನ್‌ಗ್ರೇಸ್ ಕೈ ಕೈ ಹಿಸುಕಿಕೊಳ್ಳುವಂತಾಗಲಿದೆ. ಕಾದು ನೋಡಿ.

Post Card Balaga:
Related Post