X
    Categories: ದೇಶ

ದೆಹಲಿಯಲ್ಲಿ ಬಿಜೆಪಿ ಮ್ಯಾಜಿಕ್! ಸಂಭ್ರಮಿಸಿದ ಆಮ್ ಆದ್ಮಿಗೆ ಶಾಕ್ ನೀಡಿದ ಕೇಸರಿ ಪಡೆ!

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ‌ಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದಿದೆ. ಈ ಗೆಲುವಿನ ಹಿಂದೆ ಪಕ್ಷ ನಡೆಸಿದ, ಜನರಿಗೆ ಕಾಣದ ಅದೆಷ್ಟೋ ನಿಗೂಢಗಳಿವೆ ಎನ್ನುವುದು ಸಹ ಸತ್ಯ‌. ಏನೇ ಇರಲಿ ಆಪ್ ಪಕ್ಷ ಗೆದ್ದರೂ, ಮುನ್ಸಿಪಲ್ ಕಾರ್ಪೋರೇಷನ್ ದೆಹಲಿಯ ಆಡಳಿತ ಗದ್ದುಗೆ ಏರುವುದು ‘ಬಿಜೆಪಿ’ ಪಕ್ಷವೇ ಎನ್ನುವ ಮಾತು ಜನಮಾನಸದಲ್ಲಿ ಕೇಳಿ ಬರುತ್ತಿದೆ. ಗೆದ್ದ ಆಪ್ ಮೂಲೆ ಸೇರುವುದು ಹೇಗೆ..? ಬಿಜೆಪಿ ಪಕ್ಷ ಹೇಗೆ ಆಡಳಿತ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ ಎನ್ನುವುದಕ್ಕೆ ಉತ್ತರ ಇಲ್ಲಿದೆ.

ಹಾಗಾದರೆ ದೆಹಲಿ ಮಹಾನಗರ ಪಾಲಿಕೆ ಚುನಾವಣೆ‌ಯಲ್ಲಿ ಮೇಯರ್ ಸ್ಥಾನ ಖಾತೆ ಕಳೆದುಕೊಂಡ ಬಿಜೆಪಿ‌ಗೆ ಹೇಗೆ ಸಿಗುತ್ತದೆ ಎನ್ನುವ ಪ್ರಶ್ನೆ ಓಡಿದರೆ ಅದು ಸಹಜ. ಚಂಡೀಗಢದಲ್ಲಿ ಬಿಜೆಪಿ ಬಹುಮತ ಸಾಬೀತು ಮಾಡದೇ ಇದ್ದರೂ, ಅಲ್ಲಿ ಮೇಯರ್ ಪಟ್ಟ ಬಿಜೆಪಿ ಪಕ್ಷಕ್ಕೆ ಒಲಿದಿದೆ ಎಂದು ಬಿಜೆಪಿ ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಹೇಳಿದ್ದು, ಆ ಮೂಲಕ ದೆಹಲಿಯಲ್ಲಿಯೂ ಇದೇ ನಡೆಯಲಿದೆಯಾ ಎನ್ನುವ ಸಣ್ಣ ಸಂದೇಹವೊಂದನ್ನು ಸಾರ್ವಜನಿಕ ವಲಯದಲ್ಲಿ ಬಿತ್ತಿ ಹೋಗಿದ್ದಾರೆ.

ಎಂಸಿಡಿ ಎಲೆಕ್ಷನ್‌ನಲ್ಲಿ, ಪಾಲಿಕೆಯ 250 ಸದಸ್ಯರ ಜೊತೆಗೆ ದೆಹಲಿ ಲೋಕಸಭೆ, ರಾಜ್ಯಸಭೆಗಳ ಸದಸ್ಯರು, ವಿಧಾನಸಭಾ ದಿಂದ ಸ್ಪೀಕರ್ ಮೂಲಕ ಪಾಲಿಕೆಗೆ ನಾಮನಿರ್ದೇಶನ‌ವಾಗುವ ಸದಸ್ಯರು, ಲೆಫ್ಟಿನೆಂಟ್ ಗವರ್ನರ್ ನಾಮನಿರ್ದೇಶನ ಮಾಡುವ 10 ಸದಸ್ಯರು ಸಹ ಮತದಾನದ ಹಕ್ಕನ್ನು ಹೊಂದಿರುತ್ತಾರೆ. ಈ ಮತದಾನದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ. ಯಾವ ಪಕ್ಷದ ಅಭ್ಯರ್ಥಿ ಯೂ, ಬೇರೆ ಪಕ್ಷದ ಯಾವ ಅಭ್ಯರ್ಥಿ‌ಗೆ ಬೇಕಾದರೂ ಮತ ನೀಡುವ ಸ್ವತಂತ್ರ ಅವಕಾಶವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಅಮಿತ್ ಮಾಳವಿಯಾ ಅವರ ಹೇಳಿಕೆ ಸದ್ಯ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಈಗಾಗಲೇ ಚುನಾವಣೆ‌ಯಲ್ಲಿ ಜಯ ಗಳಿಸಿರುವ ಆಪ್ ಪಕ್ಷದ ಸದಸ್ಯರನ್ನು ತನ್ನತ್ತ ಸೆಳೆಯುವುದಕ್ಕೂ ಬಿಜೆಪಿ ಪ್ರಯತ್ನ ನಡೆಸುತ್ತಿರುವುದಾಗಿ ದೆಹಲಿ ಡಿಸಿಎಂ ಮನೀಸ್ ಸಿಸೋಡಿಯಾ ಸಹ ಹೇಳಿಕೆ ನೀಡಿದ್ದರು. ಈ ಎಲ್ಲ ಹೇಳಿಕೆಗಳಿಂದಾಗಿ ದೆಹಲಿ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯತ್ತ ಎಲ್ಲರ ಚಿತ್ತ ನೆಟ್ಟಿದ್ದು, ಬಿಜೆಪಿ‌ಗೆ ಒಲಿಯುತ್ತಾ ಮೇಯರ್ ಸ್ಥಾನ ಎಂಬ ಕುತೂಹಲಕ್ಕೂ ಕಾರಣವಾಗಿದೆ.

ಈ ಹಿಂದಿನ ಲೇಖನದಲ್ಲಿ ದೆಹಲಿ ಎಂಸಿಡಿ ಯನ್ನು ಆಪ್ ಪಕ್ಷ ತನ್ನ ತೆಕ್ಕೆಗೆ ಎಳೆದುಕೊಂಡಿದ್ದು ಹೇಗೆ, ಮತದಾರರ ಪಟ್ಟಿಯಲ್ಲಿ ವಿದ್ಯಾವಂತ ಮತದಾರರ ಹೆಸರು ಮಾಯವಾಗಿದ್ದು ಹೇಗೆ?, ಭ್ರಷ್ಟಾಚಾರ ವಿರೋಧಿಸುವುದಾಗಿ ಹೇಳಿಕೊಂಡು ಬಂದ ಪಕ್ಷ ಹೇಗೆ ಭ್ರಷ್ಟಾಚಾರ ಮಾಡುತ್ತಲೇ ಚುನಾವಣೆ ಗೆದ್ದುಕೊಂಡಿತು ಎನ್ನುವುದನ್ನು ವಿಮರ್ಶೆ ಮಾಡಲಾಗಿತ್ತು. ಜೊತೆಗೆ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ, ದೆಹಲಿ ಮಾದರಿ ಎಂಬ ಸುಳ್ಳುಗಳ ಮೂಲಕ ಜನರನ್ನು ನಂಬಿಸಿ (ದೆಹಲಿಯ ನೈಜ ಸ್ಥಿತಿ ಏನೆಂಬುದು ದೆಹಲಿಯಲ್ಲಿ‌ ನೆಲೆಸಿರುವವರು ಮತ್ತು ದೆಹಲಿಗೆ ಭೇಟಿ ನೀಡಿದವರಿಗಷ್ಟೇ ಗೊತ್ತು..), ರಾಷ್ಟ್ರ ರಾಜಧಾನಿ ದೆಹಲಿ ಎಂಬುದನ್ನು ಹೆಮ್ಮೆಯಿಂದ ಹೇಳುವುದಕ್ಕೂ ಹಿಂದೆ ಮುಂದೆ ನೋಡಬೇಕಾದ ಸ್ಥಿತಿಯನ್ನು ಆಪ್ ಸರ್ಕಾರ ದೆಹಲಿಗೆ ತಂದಿಟ್ಟಿದೆ. ಸ್ಕೂಲ್, ಕ್ರೈಮ್, ವೆದರ್ ಹೀಗೆ ಎಲ್ಲಾ ವಿಷಯದಲ್ಲಿ‌ಯೂ ‘ನರ ಸತ್ತ ಸರ್ಕಾರ’ ಎಂಬಂತೆ ಆಪೊ ಸರ್ಕಾರದ ಆಡಳಿತ ಇದೆ. ಇನ್ನು ಅಲ್ಲಿನ ಮುಖ್ಯಮಂತ್ರಿ ಕೇಜ್ರಿವಾಲ್‌ನ ಬಲಗೈ ಬಂಟನಾಗಿರುವ ಮಂತ್ರಿಯೊಬ್ಬ ಜೈಲಿನಲ್ಲಿದ್ದು, ಅವನಿಗೆ ಅಲ್ಲಿ ಐಷಾರಾಮಿ ಬದುಕನ್ನು ಒದಗಿಸಲಾಗುತ್ತಿದೆ. ಇದೆಲ್ಲವನ್ನೂ ನೋಡಿದ ದೆಹಲಿಯ ಜನರಿಗೂ ಆಪ್ ಆಪ್ತವಾಗುತ್ತಿಲ್ಲ.

ಒಂದು ವೇಳೆ ಬಿಜೆಪಿ‌ಗೆ ಮೇಯರ್ ಪಟ್ಟ ಒಲಿದಲ್ಲಿ, ಚುನಾವಣೆ‌ಯಲ್ಲಿ ಸೋಲಿಸುತ್ತಾರೆ ಎಂಬ ಭಯದಿಂದ ವಿದ್ಯಾವಂತ ಮತದಾರರ ಹೆಸರನ್ನೇ ಮಂಗ ಮಾಯ ಮಾಡಿ ಚುನಾವಣೆ ಎದುರಿಸಿದ ಆಪ್‌ಗೆ, ತಕ್ಕ ಪಾಠ ಕಲಿಯುವ ಸಮಯ ಸನ್ನಿಹಿತವಾದಂತಾಗುತ್ತದೆ.

Post Card Balaga:
Related Post