X

ಕಾಂಗ್ರೆಸ್‍ನ ಹಿರಿಯ ಮುಖಂಡನನ್ನು ಮುಕ್ತಕಂಠದಿಂದ ಶ್ಲಾಘಿಸಿದ ಬಿಜೆಪಿ ಭೀಷ್ಮ! ಅಡ್ವಾಣಿ ಕಣ್ಣಿಗೆ ಕಂಡ ರಾಜಕೀಯ ಮುತ್ಸದ್ದಿ..!

ಅವರು ದೇಶ ಕಂಡ ಅತ್ಯಂತ ಶ್ರೇಷ್ಟ ರಾಜಕಾರಣಿ. ಭಾರತೀಯ ಜನತಾ ಪಕ್ಷದ ಭೀಷ್ಮ ಎಂದೇ ಪ್ರಖ್ಯಾತಿ ಪಡೆದವರು. ಒಂದು ಕಾಲದಲ್ಲಿ ದೇಶದಾದ್ಯಂತ ರಥಯಾತ್ರೆ ಮಾಡಿ ಭಾರತೀಯ ಜನತಾ ಪಕ್ಷವನ್ನು ಮೊಟ್ಟ ಮೊದಲ ಬಾರಿಗೆ ಅಧಿಕಾರಕ್ಕೇರುವಂತೆ ಮಾಡಿದ ಅಪ್ರತಿಮ ಹೋರಾಟಗರ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಭಾರತ-ಪಾಕಿಸ್ಥಾನ ವಿಭಜನೆಯ ಸಂದರ್ಭದಲ್ಲಿ ಅತ್ಯಂತ ನೋವನ್ನು ಅನುಭವಿಸಿದವರು ಇವರು. ಅವರು ಭಾರತದ ಮಾಜಿ ಉಪಪ್ರಧಾನ ಮಂತ್ರಿ ಲಾಲ್ ಕೃಷ್ಣ ಅಡ್ವಾಣಿ.

ಯೆಸ್… ಬಿಜೆಪಿ ಭೀಷ್ಮ ಪಕ್ಷವನ್ನು ಕಟ್ಟುವುದರೊಂದಿಗೆ ದೇಶವನ್ನು ಕಟ್ಟುವ ಕೆಲಸವನ್ನೂ ಮಾಡಿದವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಕಾರ್ಯಕರ್ತನಾಗಿ ದುಡಿದು ದೇಶಕ್ಕೆ ತನ್ನದೇ ಆದಂತಹಾ ಸೇವೆಯನ್ನು ಸಲ್ಲಿಸುತ್ತಾ ಬಂದವರು. ರಾಮ ಮಂದಿರ ವಿಚಾರದಲ್ಲೂ ತನ್ನ ದಿಟ್ಟ ಹೋರಾಟವನ್ನು ಮುಂದುವರೆಸುತ್ತಾ ಹಿಂದೂಗಳ ಪಾಲಿನ ಹೃದಯ ಸಾಮ್ರಾಟ್ ಆಗಿದ್ದವರು ಲಾಲ್ ಕೃಷ್ಣ ಅಡ್ವಾಣಿ. ಎಲ್ಲವೂ ಅಂದುಕೊಂಡಂತೆ ಆಗಿರುತ್ತಿದ್ದರೆ ಇಷ್ಟೊತ್ತಿಗೆ ಅಡ್ವಾಣಿಯವರು ರಾಷ್ಟ್ರಪತಿಯಾಗಿರುತ್ತಿದ್ದರು. ಆದರೆ ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಮೊಕದ್ದಮೆಯನ್ನು ಎದುರಿಸುತ್ತಿರುವ ಕಾರಣದಿಂದ ರಾಷ್ಟ್ರಪತಿ ಹುದ್ದೆ ಕೈತಪ್ಪಿ ಹೋಗಿತ್ತು.

ಇದೀಗ ಬಿಜೆಪಿ ಭೀಷ್ಮ ಅಡ್ವಾಣಿ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಮಾಜಿ ರಾಷ್ಟ್ರಪತಿ  ಹಾಗೂ ಕಾಂಗ್ರೆಸ್‍ನ ಹಿರಿಯ ಮುಖಂಡ ಪ್ರಣಬ್ ಮುಖರ್ಜಿಯವರ ಬಗ್ಗೆ. ಮಾಜಿ ರಾಷ್ಟ್ರಪತಿ ಹಾಗೂ ಕಾಂಗ್ರೆಸ್‍ನ ಹಿರಿಯ ನಾಯಕ ಪ್ರಣಬ್ ಮುಖರ್ಜಿಯವರು ಈ ಬಾರಿ ಒಂದು ಐತಿಹಾಸಿಕ ನಿರ್ಧಾರವೊಂದಕ್ಕೆ ಕಾರಣವಾಗಿದ್ದರು. ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮಕ್ಕೆ ಭಾಗಿಯಾದ ವಿಚಾರ.

ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಐತಿಹಾಸಿ ನಿರ್ಧಾರವೊಂದನ್ನು ತಳೆದಿದ್ದರು. ಕಾಂಗ್ರೆಸ್ ಪಕ್ಷ ಕಟುವಾಗಿ ವಿರೋಧಿಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದ ಆಹ್ವಾನವನ್ನು ಒಪ್ಪಿಕೊಂಡಿದ್ದರು. ಕಾಂಗ್ರೆಸ್ ಪಕ್ಷದಿಂದ ಟೀಕೆಗಳ ಸುರಿಮಳೆಗಳೇ ಬಂದರೂ ಜಗ್ಗದೆ ತನ್ನ ನಿಧಾರವನ್ನು ಸಮರ್ಥಿಸಿಕೊಂಡು ಆ ಕಾರ್ಯಕ್ರಮಕ್ಕೆ ತೆರಳಿದ್ದರು. ಸ್ವತಃ ತನ್ನ ಪುತ್ರಿ ಶರ್ಮಿಷ್ಠಾಳೇ ಆಕ್ಷೇಪ ವ್ಯಕ್ತಪಡಿಸಿದ್ದರೂ ಕಾರ್ಯಕ್ರಮವನ್ನು ರದ್ದು ಮಾಡದೆ “ನಾನು ಏನು ಹೇಳಬೇಕೋ ಅದನ್ನು ಅಲ್ಲೇ ಹೇಳುತ್ತೇನೆ. ಏನು ಮಾಡಬೇಕು ಎಂಬುವುದು ನನಗೆ ತಿಳಿದಿದೆ” ಎಂದು ಮಾರ್ಮಿಕ ಉತ್ತರವನ್ನು ನೀಡುತ್ತಲೇ ಸಂಘದ ಅಂಗಳಕ್ಕೆ ಧುಮುಕಿದ್ದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಹೆಡ್ಗೇವಾರ್ ಅವರಿಗೆ ನಮನ ಸಲ್ಲಿಸಿದ ಮಾಜಿ ರಾಷ್ಟ್ರಪತಿಗಳು ಅಲ್ಲಿನ ಸಂದರ್ಶಕರ ಪುಸ್ತಕವೊಂದರಲ್ಲಿ “ನಾನು ಇಂದು ಭಾರತ ಮಾತೆಯ ಹೆಮ್ಮೆಯ ಪುತ್ರನಿಗೆ ನಮನ ಸಲ್ಲಿಸಲು ಬಂದಿದ್ದೇನೆ. ಅವರು ಭಾರತದ ಹೆಮ್ಮೆಯ ಪುತ್ರ” ಎಂದು ಬರೆದುಕೊಂಡಿದ್ದರು. ಇದು ರಾಷ್ಟ್ರದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ದೇಶಕ್ಕೆ ದೇಶವೇ ಪ್ರಣಬ್ ಕಾರ್ಯಕ್ರಮವನ್ನು ವೀಕ್ಷಿಸುತ್ತಿತ್ತು. ಸಂಘಪರಿವಾರದ ಕಾರ್ಯಕರ್ತರು ಖುಷಿಯಿಂದ ಸಂಭ್ರಮಿಸುತ್ತಿದ್ದರೆ, ಕಾಂಗ್ರೆಸ್ಸಿಗರು ಹಾಗೂ ಎಡಪಂಥೀಯರು ಮಾತ್ರ ಆಕ್ಷೇಪಗಳ ಮೇಲೆ ಆಕ್ಷೇಪಗಳನ್ನು ಹಾಕುತ್ತಿದ್ದರು. ಸಂಘಪರಿವಾರದ ನಾಯಕರಿಂದ ಪ್ರಣಬ್ ನಡೆಗೆ ಭಾರೀ ಪ್ರಶಂಶೆಯೇ ಹರಿದು ಬಂದಿತ್ತು.

ಈ ಮಧ್ಯೆ ಮಾಜಿ ಉಪ ಪ್ರಧಾನಿ ಬಿಜೆಪಿ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿಯವರು ಕೂಡಾ ಪ್ರಣಬ್ ಮುಖರ್ಜಿಯವರನ್ನು ಹಾಡಿ ಹೊಗಳಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ತೆಗೆದುಕೊಂಡ ನಿರ್ಧಾರವನ್ನು ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ. “ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕ್ರಮಕ್ಕೆ ನೀಡಿದ್ದ ಹ್ವಾನವನ್ನು ಒಪ್ಪಿಕೊಳ್ಳುವಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ತೆಗೆದುಕೊಂಡ ನಿರ್ಧಾರ ಹಾಗೂ ದೂರಧೃಷ್ಟಿ ಪ್ರಶಂಸನೀಯ. ಇದೊಂದು ಉತ್ತಮ ನಿರ್ಧಾರವಾಗಿದೆ” ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯರೋರ್ವರು ಇಂತಹಾ ನಿರ್ಧಾರ ತೆಗೆದುಕೊಂಡಿದ್ದು ಸಹಬಾಳ್ವೆಯ ಜೀವನಕ್ಕೆ ಹಾದಿಯಾಗಲಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು ಪ್ರಣಬ್ ಮುಖರ್ಜಿಯವರನ್ನು ಓರ್ವ ಮಾಜಿ ರಾಷ್ಟ್ರಪತಿ ಎಂಬಂತೆ ನೋಡದೆ ಇನ್ನೂ ಕಾಂಗ್ರೆಸ್ ಕಾರ್ಯಕರ್ತರನ್ನು ಪ್ರಶ್ನಿಸುವ ರೀತಿಯಲ್ಲಿ ಪ್ರಶ್ನಿಸಿ ಅವಮಾನ ಮಾಡುತ್ತಿದ್ದರೆ ಭಾರತೀಯ ಜನತಾ ಪಕ್ಷದ ನಾಯಕ ಅವರನ್ನು ಮುತ್ಸದ್ದಿ ಎಂದು ಬಣ್ಣಿಸಿದ್ದಾರೆ. ಇದು ಧರ್ಮ ಮತ್ತು ಅಧರ್ಮಗಳ ನಡುವಿನ ಕಾಳಗ ಎಂದು ಕೆಲವರು ಬಣ್ಣಿಸುತ್ತಿದ್ದಾರೆ.

  • ಸುನಿಲ್ ಪಣಪಿಲ
Editor Postcard Kannada:
Related Post