X

ಅಜಾನ್ ವಿರುದ್ಧವೂ ಹೊರಡಿಸುತ್ತಾರಾ ಪತ್ವಾ?? ಮದುವೆಯಲ್ಲಿ ಸಂಗೀತಕ್ಕೂ ಬಿತ್ತು ಬ್ರೇಕ್!!

ಮುಸ್ಲಿಂ ಮಹಿಳೆಯರು ತಲೆಗೂದಲನ್ನು ಕತ್ತರಿಸಿಕೊಳ್ಳುವುದು, ಹುಬ್ಬನ್ನು ಆಕಾರಗೊಳಿಸುವುದು, ಮುಸ್ಲಿಂ ಮಹಿಳೆಯರಾಗಲಿ ಪುರುಷರಾಗಲಿ ಅಲ್ಲಾ ಹೊರತು ಬೇರೆ ದೇವರನ್ನು ಪೂಜಿಸಕೂಡದು ಎಂಬಿತ್ಯಾದಿ ವಿಚಾರಗಳ ಬಗ್ಗೆ ಹೊಸ ಹೊಸ ಫತ್ವಾ ಹೊರಡಿಸುತ್ತಿರುವ ಮುಸ್ಲಿಂ ಸಂಘಟನೆಗಳು ಇದೀಗ ಹೊಸದೊಂದು ರೀತಿಯ ಫತ್ವಾ ವನ್ನು ಹೊರಡಿಸುವ ಮೂಲಕ ಮುಸ್ಲಿಂ ಸಂಘಟನೆ ಸುದ್ದಿಯಾಗಿದೆ!! ಹಾಗಾಗಿ ಯಾವುದೇ ಮಸೀದಿಯಿಂದ ಕೇಳಿ ಬರುವ ಅಜಾನ್ ಪ್ರಾರ್ಥನೆಗೂ ಇನ್ನು ಮುಂದೆ ಬ್ರೇಕ್ ಬೀಳಲಿದೆಯೇ ಎನ್ನುವ ಪ್ರಶ್ನೆಯೂ ಇದೀಗ ಉದ್ಭವಿಸಿದೆ!!

ಹೌದು… ಈ ಹಿಂದೆ ಮುಸ್ಲಿಮರು ಬ್ಯಾಂಕಿಂಗ್ ಉದ್ಯೋಗಿಗಳನ್ನು ಮದುವೆಯಾಗಬಾರದು ಎಂದು ಉತ್ತರ ಪ್ರದೇಶದ ಇಸ್ಲಾಮಿಕ್ ಧಾರ್ಮಿಕ ಸಂಸ್ಥೆ ದರೂಲ್ ಉಲೂಮ್ ಫತ್ವಾ ಹೊರಡಿಸಿತ್ತು!! ಅಷ್ಟೇ ಅಲ್ಲದೇ ಬ್ಯಾಂಕಿಂಗ್ ಉದ್ಯೋಗಿಗಳು ಅಕ್ರಮದಿಂದ(ಹರಾಮ್) ಹಣ ಸಂಪಾದಿಸುತ್ತಾರೆ. ಅವರ ಕುಟುಂಬದವರನ್ನು ಮದುವೆಯಾಗಬಾರದು ಎಂದು ಫತ್ವಾ ಹೊರಡಿಸಲಾಗಿದೆ. ಇನ್ನು ‘ಬ್ಯಾಂಕ್ ಉದ್ಯೋಗಿಗಳು ನಿಸ್ಸಂಶಯವಾಗಿ ಅಕ್ರಮವಾಗಿ ಹಣ ಸಂಪಾದಿಸುತ್ತಾರೆ. ಇಂತಹ ಕುಟುಂಬಗಳಿಗೆ ಪ್ರಾಮುಖ್ಯ ಕೊಡಬೇಕಾ?’ ಎಂದು ಸಂಸ್ಥೆಯು ಪ್ರಶ್ನಿಸಿತ್ತು!!

ಆದರೆ ಇದೀಗ ಮದುವೆ ಸಮಾರಂಭಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದು ಇಸ್ಲಾಮಿಕ್ ನಂಬಿಕೆಗಳಿಗೆ ವಿರುದ್ಧವಾದುದು, ಆದ್ದರಿಂದ ಸಂಗೀತ ಕಾರ್ಯಕ್ರಮಗಳಿರುವ ಮದುವೆಗಳಿಗೆ ನಾವು ಬಹಿಷ್ಕಾರ ಹಾಕುತ್ತೇವೆ’ ಎಂದು ದಾರುಲ್ ಉಲೂಮ್ ದಿಯೋಬಂದ್ ಮುಸ್ಲಿಂ ಸಂಘಟನೆ ಫತ್ವಾ ಹೊರಡಿಸಿದೆ ಎಂದರೆ ನಂಬ್ತೀರಾ?? ಆದರೆ ಅದನ್ನು ನಂಬಲೇಬಬೇಕು!! ಇನ್ನುಮುಂದೆ ಮುಸಲ್ಮಾನರ ಯಾವುದೇ ಕಾರ್ಯಕ್ರಮಗಳಲ್ಲಿ ಸಂಗೀತಾವನ್ನು ಕೇಳುವಂತಿಲ್ಲ, ಹಾಡುವಂತಿಲ್ಲ!! ಅದಕ್ಕಾಗಿ ಅದನ್ನು ನಿಷೇಧಿಸುವಂತೆ ಮುಸ್ಲಿಂ ಸಂಘಟನೆ ಮುಸಲ್ಮಾನರಿಗೆ ಹೊಸದೊಂದು ಫತ್ವಾ ಹೊರಡಿಸಿದೆ.

ಇತ್ತೀಚೆಗೆ ಹಲವು ಮುಸ್ಲಿಮರು ರಾಜ್ಯದಲ್ಲಿ ಮದುವೆಯಾಗುವ ವೇಳೆ ಮನೋರಂಜನೆ ಉದ್ದೇಶಕ್ಕಾಗಿ ಸಂಗೀತ ಕಾರ್ಯಕ್ರಮ ಆಯೋಜಿಸುವ ಸಂಪ್ರದಾಯ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ದಿಯೋಬಂದ್ ಸಂಸ್ಥೆ ಈ ಫತ್ವಾ ಹೊರಡಿಸಿದೆ ಎಂದು ತಿಳಿದುಬಂದಿದೆ. ಆದರೆ ಮುಸ್ಲಿಮರು ಸಂಗೀತವನ್ನೇ ವಿರೋಧಿಸುತ್ತಾರೆ ಎಂದರೆ ನಮಾಜ್ ಹೊತ್ತಿನಲ್ಲಿ ಕೇಳಿ ಬರುವ ಅಜಾನ್ ಕೂಗಿಗೂ ಇನ್ನುಮುಂದೆ ಬ್ರೇಕ್ ಬೀಳಲಿದೆಯೇ ಎನ್ನುವ ಪ್ರಶ್ನೆಯೂ ಇದೀಗ ಕೇಳಲಾರಂಭಿಸಿದೆ!!

ಯಾಕೆಂದರೆ, ಉತ್ತರ ಪ್ರದೇಶದ ಈ ಇಸ್ಲಾಮಿಕ್ ಸಂಸ್ಥೆ ಇತ್ತೀಚಿಗಷ್ಟೇ ಮುಸ್ಲಿಂ ಯುವತಿ ಹುಬ್ಬು ಟ್ರಿಮ್ ಮಾಡಿಸಿದ್ದಕ್ಕೆ ಆಕೆಯ ವಿರುದ್ಧ ಫತ್ವಾ ಹೊರಡಿಸಿ ಸುದ್ದಿಯಾಗಿತ್ತು!! ತದನಂತರದಲ್ಲಿ ಮುಸ್ಲಿಂ ಯುವಕ/ಯುವತಿಯರು ಫೇಸ್ ಬುಕ್, ವಾಟ್ಸ್ ಆ್ಯಪ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೆÇೀಟೊ ಅಪ್ ಲೋಡ್ ಮಾಡುವಂತಿಲ್ಲ ಎಂದು ಫತ್ವಾ ಹೊರಡಿಸಿ ಸುದ್ದಿಯಾಗಿತ್ತು!! ಸಾಮಾಜಿಕ ಜಾಲತಾಣಗಳಲ್ಲಿ ಫೆÇೀಟೊ ಹಾಕುವ ಕುರಿತು ಸಂಸ್ಥೆಯ ಧರ್ಮಗುರುಗಳಿಗೆ ಮುಸ್ಲಿಂ ಯುವಕನೊಬ್ಬ ಪ್ರಶ್ನೆ ಕೇಳಿದ್ದ. ಈ ಹಿನ್ನೆಲೆಯಲ್ಲಿ ಉತ್ತರಿಸಿರುವ ದಿಯೋಬಂದ್, ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಮರು ಫೆÇೀಟೊ ಹಾಕುವುದು ಇಸ್ಲಾಂಗೆ ವಿರೋಧ ಹಾಗೂ ಇದು ಇಸ್ಲಾಮೇತರ ಕೃತ್ಯ ಎಂದು ಹೇಳಿದ್ದರು!!

ಆದರೆ ಈಗ ಯಾವುದೇ ಮದುವೆಗಳಲ್ಲಿ ಸಂಗೀತ, ನೃತ್ಯ ಅಥವಾ ಡಿಜೆ ಕಾರ್ಯಕ್ರಮಗಳಿದ್ದರೆ ಅಂಥ ಮದುವೆಗೆ ನಾವು ಅವಕಾಶ ಮಾಡಿಕೊಂಡುವುದಿಲ್ಲ ಎಂದು ಮುಫ್ತಿ ಅಜರ್ ಹುಸೇನ್ ಎಂಬ ಸಿಟಿ ಕ್ವಾಜಿ ಹೇಳಿದ್ದಾರೆ. ಈ ರೀತಿಯ ಕಾರ್ಯಕ್ರಮಗಳು ಇಸ್ಲಾಮಿಗೆ ವಿರುದ್ಧವಾಗಿವೆಯಲ್ಲದೇ ಸಂಗೀತ ಇಸ್ಲಾಮಿನಲ್ಲಿ ನಿಷಿದ್ಧವಾಗಿದ್ದು, ಈಗಾಗಲೇ ರಾಜಸ್ಥಾನದ ಕೋಟಾದಲ್ಲಿ ನಿಷೇಧ ಹೇರಲಾಗಿದೆ ಎಂದು ಹೇಳಿದ್ದಾರೆ!! ಹಾಗಾದರೆ ಇಸ್ಲಾಂನಲ್ಲಿ ಸಂಗೀತವೇ ನಿಷಿದ್ಧವಾಗಿದ್ದರೂ ಅಜಾನ್ ಅದೆಲ್ಲಿಂದ ಶುರುವಾಯಿತೋ ನಾ ಕಾಣೆ!!

ಈಗಾಗಲೇ ರಾಜಸ್ಥಾನದ ಕೊಟಾ ಎಂಬಲ್ಲಿ ಮದುವೆಗಳಲ್ಲಿ ಸಂಗೀತ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಲಾಗಿದೆ. ಅದೇ ರೀತಿ ಲಖನೌನಲ್ಲಿಯೂ ಮುಸ್ಲಿಮರು ಮದುವೆ ವೇಳೆ ಯಾವುದೇ ಸಂಗೀತಕ್ಕೂ ಅವಕಾಶ ಮಾಡಿಕೊಡಬಾರದು. ಒಂದು ವೇಳೆ ಆಯೋಜಿಸಿದರೆ ಅದು ಧರ್ಮದ ವಿರುದ್ಧ ಹೋದಂತೆ ಎಂದು ಹೇಳಿದ್ದಾರೆ. ಆದರೆ ಮುಸಲ್ಮಾನರ ಇಂತಹ ಸಮಾರಂಭಗಳಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸುವುದು ಇಸ್ಲಾಂಗೆ ಹೇಗೆ ವಿರುದ್ಧವಾದುದು ಎಂಬ ಬಗ್ಗೆ ಮಾತ್ರ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

ವಿಪರ್ಯಾಸ ಏನೆಂದರೆ ಮನಬಂದಂತೆ ಫತ್ವಾವನ್ನು ಹೊರಡಿಸುವ ಮುಸ್ಲಿಂ ಸಂಘಟನೆಗಳು ವಂದೇ ಮಾತರಂ ಗೀತೆಗೂ ಈ ಹಿಂದೆ ಫತ್ವಾ ಹೊರಡಿಸಿದ್ದರು!! ಅಷ್ಟೇ ಅಲ್ಲದೇ ಮುಸಲ್ಮಾನರು ಸಂಗೀತವನ್ನೇ ನಿಷೇಧಿಸುವಂತೆ ಫತ್ವಾ ಹೊರಡಿಸಿದ್ದಾರೆ ಎಂದರೆ ಇನ್ನು ಮುಂದೆ ಯಾವುದೇ ಮಸೀದಿಯಿಂದ ಅಜಾನ್ ಕೂಗು ಕೇಳಿ ಬರುವುದಿಲ್ಲವೇ?? ಆದರೆ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡೋರು, ರಾಮ ದೇವರೇ ಅಲ್ಲ ಅನ್ನೋರು, ಮೌಢ್ಯ ನಿಷೇಧದ ಹೆಸರಲ್ಲಿ ಹಿಂದೂಗಳ ನಂಬಿಕೆಗೆ ಪೆಟ್ಟುಕೊಡಲು ಹೊರಟಿರೋ, ಇಸ್ಲಾಂ ಧರ್ಮಗುರುಗಳ ಮನಬಂದಂತಹ ಮೌಢ್ಯಗಳನ್ನೇಕೆ ಪ್ರಶ್ನಿಸುವುದಿಲ್ಲ ಎಂಬುದೇ ಇದೀಗ ಉಳಿದಿರೋ ಪ್ರಶ್ನೆಯಾಗಿದೆ!!

source:https://www.ndtv.com/india-news/wont-conduct-muslim-marriages-where-music-part-of-weddings-deoband-qazi-1831722

http://www.business-standard.com/article/news-ani/won-t-conduct-muslim-marriages-where-music-part-of-weddings-deoband-qazi-118040200225_1.html

– ಅಲೋಖಾ

Editor Postcard Kannada:
Related Post