X

ಬ್ರೇಕಿಂಗ್!! ಬಹಿರಂಗವಾಯಿತು ಸಿದ್ಧರಾಮಯ್ಯ ಸರಕಾರದ ನಕಲಿ ಕನ್ನಡ ಪ್ರೇಮ! ಇಂದಿರಾ ಕ್ಯಾಂಟೀನ್ ನ ಮತ್ತೊಂದು ಹಗರಣ ಬಯಲು!!

ರಾಜ್ಯದಲ್ಲಿ ಚರ್ಚೆಗೀಡಾಗಿದ್ದ ಇಂದಿರಾ ಕ್ಯಾಂಟೀನ್ ಎಂಬ ಕಾಂಗ್ರೆಸ್ ನ ‘ಫೇಕ್ ಪ್ರಚಾರ’ವೊಂದು ಈಗ ಟುಸ್ಸೆಂದಿದೆ! ಹೌದು! ಆಗಸ್ಟ್ 16 ಕ್ಕೆ ಸ್ವತಃ ರಾಹುಲ್ ಗಾಂಧಿಯೇ ಉದ್ಘಾಟಿಸಿ ಸಿಕ್ಕಾಪಟ್ಟೆ ಹೈಪ್ ತೆಗೆದುಕೊಂಡಿದ್ದ ಸಿದ್ದರಾಮಯ್ಯ ಪ್ರೇರಿತ ಕ್ಯಾಂಟೀನ್ ನ ಗೌಪ್ಯತೆಯೊಂದು ಬಟಾಬಯಲಾಗಿದೆ!

ನೆಹರು ಮನೆತನವನ್ನು ಇನ್ನಷ್ಟು ಆಕರ್ಷಿಸಲು, ಸಿದ್ದರಾಮಯ್ಯ ಸರಕಾರ ಇಂದಿರಾ ಕ್ಯಾಂಟೀನ್ ಎಂದೆಲ್ಲ ಹೆಸರಿಟ್ಟು ‘ಮಕ್ಕಳ’ ಅನ್ನ ಕಸಿದು ‘ಬೆಂಗಳೂರಿಗರಿಗೆ’ ಅನ್ನ ದಾನ ಮಾಡ್ತೇನೆಂದ ಸಿದ್ಧರಾಮಯ್ಯ ‘ನೂರು ವರುಷ ಹಳೆಯದಾಗಿದ್ದ ಮರಗಳನ್ನೆಲ್ಲ ಕಡಿಸಿ ಇಂದಿರಾ ಕ್ಯಾಂಟೀನ್ ಮಾಡಿದ್ದೇ’ ಬಂತು!

ಕೇವಲ ಮೂರೇ ತಿಂಗಳಿನಲ್ಲಿ ಸರಕಾರ ರಾಜ್ಯ ಬೊಕ್ಕಸದಿಂದ, ಯಾವುದೇ ಮುಂಚಿತವಾದ ನಿರ್ಧಾರಗಳಿಲ್ಲದೆ, ಯೋಜನೆಗಳಿಲ್ಲದೇ, ಚುನಾವಣೆಗೊಂದು ಗೆಲ್ಲುವ ಅವಕಾಶ ಮಾಡಿಕೊಡಬಹುದೆಂಬ ಹುಸಿ ನಂಬಿಕೆಯಿಂದ ಹಣ ಸುರಿದು ಕ್ಯಾಂಟೀನ್ ಶುರು ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ!

ತಮಿಳುನಾಡಿನಲ್ಲಿ ‘ಜಯಲಲಿತಾ’ ರವರು ‘ಅಮ್ಮ ಕ್ಯಾಂಟೀನ್’ ಪ್ರಾರಂಭ ಮಾಡಿದ್ದನ್ನೇ ನಕಲು ಮಾಡಿದ ಸಿದ್ಧರಾಮಯ್ಯ ಪಕ್ಕಾ ಅವಿವೇಕಿ ಎಂದು ಸಾಬೀತಾಗಿದೆ! ಜಯಲಲಿತಾರವರು ಕೇವಲ ‘ಚುನಾವಣಾ’ ದೃಷ್ಟಿಯಿಂದ ‘ಅಮ್ಮ ಕ್ಯಾಂಟೀನ್ ‘ ಪ್ರಾರಂಭಿಸಿರಲಿಲ್ಲ. ಬದಲಾಗಿ, ಗಂಭೀರವಾಗಿಯೇ ಅನ್ನದಾನವನ್ನು ಪರಿಗಣಿಸಿ ಅದೆಷ್ಟೋ ಬಡವರಿಗೆ ‘ಅಮ್ಮ’ ನಾಗಿದ್ದರು. ಆದರೆ, ಸಿದ್ಧರಾಮಯ್ಯರಗರ ಬುದ್ಧಿಗೆ ಇದೆಲ್ಲ ಅರಿವಾಗದೇ ಸಂಪುಟ ಸಚಿವ ವಿಸ್ತರಣೆ ಜೊತೆ ಈ ಪ್ರಚಾರವೂ ಬದಿಗಿರಲಿ ಎಂದು ಪ್ರಾರಂಭ ಮಾಡೇ ಬಿಟ್ಟರಾ?

ಬಿಡಿ!! ಸಿದ್ಧರಾಮಯ್ಯ ಸರಕಾರವೊಂದು ಜನರನ್ನು ಮೂರ್ಖರಾನ್ನಾಗಿಸುತ್ತಿರುವುದು ಇದೇ ಮೊದಲಲ್ಲ! ಬದಲಾಗಿ, ಅದೆಷ್ಟೋ ಹಗರಣಗಳ ಮೂಲಕ, ಕರ್ನಾಟಕವನ್ನೇ ಮೂಲೆಗುಂಪು ಮಾಡಿದ್ದು ಕನ್ನಡಿಗರಿಗೆ ಅದ್ಯಾವಾಗ ಆಗುತ್ತದೆಯೋ ಗೊತ್ತಿಲ್ಲ!! ಆದರೆ, ಇನ್ನೂ ಸಹ ಕಾಂಗ್ರಸ್ಸನ್ನು ನೆಚ್ಚಿಕೊಂಡು ಕೂತಿರುವ ಕನ್ನಡಿಗರಿಕಗೆ ಕೆಲವೊಂದು ಅರ್ಥವಾಗಲೇ ಬೇಕಿದೆ!

ಹಾ!! ಕೇವಲ ಬಡಾಯಿ ಕೊಚ್ಚುವುದರಲ್ಲಿಯೇ ದಿನಕಳೆಯುವ ಸಿದ್ಧರಾಮಯ್ಯ ಸರಕಾರ ದೆಹಲಿಯ ಎರಡು ಖಾಸಗಿ ಕಂಪೆನಿಗಳಿಗೆ ಇಂದಿರಾ ಕ್ಯಾಂಟೀನ್ ಗುತ್ತಿಗೆ ನೀಡುವ ಮೂಲಕ ಕನ್ನಡ ಪ್ರೇಮ ಮೆರೆದಿದೆ! ಮೊದಲನೆಯದಾಗಿ, ಕರ್ನಾಟಕ ಕನ್ನಡ ತಾಯಿ ಭುವನೇಶ್ವರಿ ಎಂದು ಬಡಾಯಿ ಕೊಚ್ಚುವ ಸಿದ್ದರಾಮಯ್ಯ ಸರಕಾರಕ್ಕೆ,, ಕರ್ನಾಟಕದ ವೀರ ವನಿತೆಯರು ಕಣ್ಣಿಗೆರ ಕಾಣಲೇ ಇಲ್ಲ ಬಿಡಿ! ಬದಲಾಗಿ, ಕ್ಯಾಂಟೀನ್ ಗೆ ಕನ್ನಡತಿಯೇ ಅಲ್ಲದ, ಇಂದಿರಾ ಹೆಸರಿಟ್ಟಿದ್ದಲ್ಲದೇ, ಗುತ್ತಿಗೆಯನ್ನೂ ಹೊರರಾಜ್ಯದವರಿಗೆ ನೀಡಲಾಗಿದೆ! ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೂ ಸಹ, ತಮಿಳುನಾಡಿನಿಂದಲೇ ಸಾಮಗ್ರಿಗಳನ್ನು ತರಲಾಗಿತ್ತು!

ಹೋಟೆಲ್ ಉದ್ಯಮದಲ್ಲಿ,, ಕರ್ನಾಟಕವೇ ಮುಂದಿದೆ ಎಂಬುದು ಸರ್ವರಿಗೂ ತಿಳಿದಿದೆ! ಅದರಲ್ಲಿಯೂ ಕೂಡ, ಬೆಂಗಳೂರಿನಂತಹ ನಗರದಲ್ಲಿ, ಹೋಟೆಲ್ ಮ್ಯಾನೇಜ್ ಮೆಂಟ್ ಎನ್ನುವುದು ಮುಂದಿದೆ! ಅಷ್ಟಾದರೂ ಸಿದ್ಧರಾಮಯ್ಯ ಸರಕಾರಕ್ಕೆ, ಇದ್ಯಾವುದೂ ಕಾಣಿಸಿಲ್ಲ! ಅದರಲ್ಲಿಯೂ, ಕರ್ನಾಟಕದಲ್ಲಿ ಇರುವವರಿಗೆ ಗುತ್ತಿಗೆಯನ್ನು ಕೊಡುವುದು ಬಿಟ್ಟು, ದೂರದ ದೆಹಲಿ ಮೂಲದವರಿಗೆ ಇಂದಿರಾ ಕ್ಯಾಂಟೀನ್ ನ ಗುತ್ತಿಗೆ ಕೊಟ್ಟಿದ್ಯಾಕೆ?! ದೆಹಲಿ ಮೂಲದ ಚೆಫ್ ಟಾಕ್ ಹಾಸ್ಪಿಟಾಲಿಟಿ (ಪ್ರೈ) ಲಿಮಿಟೆಡ್ ಹಾಗೂ ರಿವಾರ್ಡ್ ಎಂಬ ಎರಡು ಸಂಸ್ಥೆಗಳು ಗುತ್ತಿಗೆ ತೆಗೆದುಕೊಂಡಿವೆ! ಮೂಲಗಳ ಪ್ರಕಾರ, ಆಹಾತ ತಯಾರಿಕೆ ಮತ್ತು ವಿತರಣೆಯ ಸಂಪೂರ್ಣ ಹೊಣೆಗಾರಿಕಾರಿಕೆಯನ್ನು, ಖಾಸಗಿ ಕಂಪೆನಿಗಳಿಗೆ ವಹಿಸಲಾಗಿದೆ! ಮೈಸೂರಿನಲ್ಲಿ ಸರಕಾರಿ ಸ್ವಾಮ್ಯದ ಸಿಎಫ್ ಟಿ ಆರ್ ಐ ಇದ್ದರೂ ಸಹ, ಯಾವುದೇ ಜವಾಬ್ದಾರಿಯನ್ನೂ ನೀಡದೇ, ಖಾಸಗಿ ಕಂಪೆನಿಗಳನ್ನು ಮಧ್ಯ ತಂದಿದ್ಯಾಕೆ?! ದೆಹಲಿ ಹೈಕಮಾಂಡ್ ನನ್ನು ನೆಚ್ಚಿಸಲೆಂದೇ?! ಅಥವಾ, ಮಾಡಿರುವ ಭ್ರಷ್ಟಾಚಾರ ಗೊತ್ತಾಗದಿರಲೆಂದೇ?!

ಖುದ್ದು ಮಾಹಿತಿ ನೀಡಿದ್ದು ಬೇರಾರೂ ಅಲ್ಲ! ಕಾಂಗ್ರೆಸ್ ಮುಖಂಡ!!

ಹಾ! ಟೆಂಡರ್ ಮೂಲಕ ದೆಹಲಿ ಮೂಲದ ಕಂಪೆನಿಗಳಿಗೆ ಇಂದಿರಾ ಕ್ಯಾಂಟೀನ್ ಗೆ ಗುತ್ತಿಗೆ ನೀಡಲಾಗಿದೆ ಎಂದು ಸ್ವತಃ ನಗರಾಭಿವೃದ್ಧಿ ಮತ್ತು ಹಜ್ ಮಂತ್ರಿ ರೋಷನ್ ಬೇಗ್ ಅವರೇ ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದಾರೆ!!

ಅಲ್ಲ ಸ್ವಾಮಿ?! ಇಡ್ಲಿ ಸಾಂಬಾರ್ ಮಾಡೋಕೆ ಗೊತ್ತಿಲ್ಲದವರಿಗೆ, ಕರ್ನಾಟಕದ ಇಂದಿರಾ ಕ್ಯಾಂಟೀನ್ ಗುತ್ತಿಗೆ ಕೊಟ್ಟಿದ್ದರ ಅರ್ಥವೇನು?! ಕ್ಯಾಂಟೀನ್ ಪ್ರಾರಂಭವಾದ, ಮೂರು ನಾಲ್ಕು ದಿನದೊಳಗೇ ಕನ್ನಡ ಮಾಧ್ಯಮಗಳು ತೀರಾ ಹೀನಾಯ’ಸ್ಥಿತಿಯಲ್ಲಿ ಅಡಿಗೆ ತಯಾರಿಸಿ, ಅದನ್ನು ಪ್ಲಸ್ಟಿಕ್ ಡ್ರಮ್ ಗಳ ಮೂಲಕ ಕ್ಯಾಂಟೀನ್ ಗೆ ಸಾಗಿಸುತ್ತಿದ್ದನ್ನು ಬಯಲು ಮಾಡಿದ್ದರ ಪರಿಣಾಮ ಕರ್ನಾಟಕದ ರಾಜ್ಯ ಕಾಂಗ್ರೆಸ್ ನ ಮುಖ್ಯಮಂತ್ರಿಯ ವಿಕೃತಿಯೊಂದು ಬಯಲಾಗಿ ಹೋಗಿತ್ತಷ್ಟೇ!! ಆದರೀಗ, ಇನ್ನೊಂದು ಹಗರಣ ಬಯಲಾಗಿದೆ! ಬಿಡಿ! ದೆಹಲಿಯವರಿಗೆ ಗುತ್ತಿಗೆ ಕೊಡುವಾಗ, ಟೆಂಡರ್ ಪ್ರಕ್ರಿಯೆ ವೇಳೆ ರಾಜ್ಯದ ಯಾವೊಬ್ಬ ಹೋಟೆಲ್ ಉದ್ದಿಮೆದಾರನೂ ಪಾಲ್ಗೊಳ್ಳಲಿಲ್ಲವೇ?! ಅಥವಾ ಅರ್ಜಿ ಸಲ್ಲಿಸಿದ್ದರೂ ಸಹ, ಕಸದ ಬುಟ್ಟಿಗೆ ಸೇರಿಸಿದರೆ?

ಮೊದಲು ಇಂದಿರಾ ಕ್ಯಾಂಟೀನ್ ಐದು ಹತ್ತು ರೂಗಳಿಗೆ ಆಹಾರವನ್ನು ಒದಗಿಸುತ್ತದೆ ಎಂದ ಸರಕಾರದ ಆಶಯಕ್ಕೆ ಎಲ್ಲರೂ ಸಂತಸ ಗೊಂಡಿದ್ದರು! ಜೊತೆಗೆ ನಮ್ಮದೇ ರಾಜ್ಯದವರ ಹತ್ತಿರ ಗುತ್ತಿಗೆ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಆಹಾರವನ್ನೂ ನೀಡಬೇಕಾದರೆ, ಅದನ್ನು ಬಿಟ್ಟು ಕಾಂಗ್ರೆಸ್ ಸರಕಾರ ದೆಹಲಿಯವರ ಕಾಲು ಹಿಡಿದದ್ದೇಕೆ?! ಇನ್ನು ಪ್ರತಿಷ್ಟಿತವಾದ ಕಂಪೆನಿಗಳು ಎಂದು ಹೇಳುವುದಕ್ಕೆ ದೆಹಲಿಯ ಈ ಎರಡು ಕಂಪೆನಿಗಳ ಬಗ್ಗೆ ಕೇಳಿದವರೇ ಗತಿಯಿಲ್ಲ! ಅದು ಯಾವ ರೀತಿಯಾದ ಗುಣಮಟ್ಟದ ಆಹಾರವನ್ನು ನೀಡುತ್ತದೆಂಬ ಅರಿವೂ ಇಲ್ಲದೆಯೇ, ಇಂದಿರಾ ಕ್ಯಾಂಟೀನ್ ನನ್ನು ನಡೆಸಲು ಅನುವು ಮಾಡಿಕೊಟ್ಟಿದ್ದು ಯಾವ ಕಾರಣಕ್ಕಾಗಿ?!

ತನ್ನ ೧೬೮ ಇಂದಿರಾ ಕ್ಯಾಂಟೀನ್ ಗಳಿಗೆ ತಿಂಗಳೂ ಮೂರು ಕೋಟಿ ರೂ ಖರ್ಚು ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿರುವ ಸರಕಾರ ನಿಜಕ್ಕೂ ಖರ್ಚು ಮಾಡುತ್ತಿದೆಯಾ!! ಯಾಕೆಂದರೆ, ಕೆಲ ಕ್ಯಾಂಟೀನುಗಳು ಮಧ್ಯಾಹ್ನಕ್ಕೇ ಬಂದ್ ಆಗಿರುತ್ತದೆ! ಹಾಗಿದ್ದಾಗಿಯೂ ಅದ್ಯಾವ ರೀತಿ ಖರ್ಚು ಮಾಡುತ್ತಿದೆ ಸರಕಾರ?! ಯೋಚಿಸಬೇಕಿದೆ!

Source : Hosadigantha

– ಪೃಥು ಅಗ್ನಿಹೋತ್ರಿ

Editor Postcard Kannada:
Related Post