X

ಅಮೃತ ವಾಟಿಕಾ ನಿರ್ಮಾಣಕ್ಕೆ ಬಂತು ದೇಶದೆಲ್ಲೆಡೆಯಿಂದ ಮಣ್ಣು

ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಗಳೇ ವಿಭಿನ್ನ. ಭಾರತದ ಅಭಿವೃದ್ಧಿ, ಭಾರತೀಯರನ್ನು ಒಗ್ಗೂಡಿಸುವ ದೃಷ್ಟಿಯಿಂದ ಅವರು ತೆಗೆದುಕೊಳ್ಳುವ ಒಂದೊಂದು ನಿರ್ಣಯಗಳು, ಪ್ರತಿಯೊಂದು ನಿರ್ಧಾರಗಳು ಬೇರಿನ್ಯಾರಿಗೂ ಹೊಳೆಯಲಾರದೇನೋ.

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಹಲವಾರು ಉಪಕ್ರಮಗಳ ಮೂಲಕ ಅವಿಸ್ಮರಣೀಯ ಗೊಳಿಸಲು ಚಿಂತನೆ ನಡೆಸಿದ್ದರು. ಈ ಎಲ್ಲಾ ಚಿಂತನೆಗಳಲ್ಲಿ ‘ಮೇರಿ ಮಾಟಿ, ಮೇರಾ ದೇಶ್’ ಉಪಕ್ರಮವೂ ಒಂದು. ದೇಶದ ಎಲ್ಲಾ ಪ್ರದೇಶಗಳನ್ನು, ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಇದು ಮಹತ್ವದ ವಿಷಯವಾಗಿದೆ.

ಮೇರಿ ಮಾಟಿ, ಮೇರಾ ದೇಶ್ ಅಭಿಯಾನದ ಹಿನ್ನೆಲೆಯಲ್ಲಿ ಕರ್ನಾಟಕದ ಹಲವು ಭಾಗಗಳಿಂದಲೂ ಸುಮಾರು ಇಪ್ಪತ್ತು ಸಾವಿರಕ್ಕೂ ಅಧಿಕ ಸ್ವಯಂಸೇವಕರ ಜೊತೆಗೆ ಮಣ್ಣು ಹೊಂದಿರುವ ಕಲಶಗಳನ್ನು ಹೊತ್ತ ವಿಶೇಷ ರೈಲುಗಳನ್ನು ರಾಷ್ಟ್ರ ರಾಜಧಾನಿ ನವ ದೆಹಲಿಯ ವಿವಿಧ ರೈಲು ನಿಲ್ದಾಣಗಳಲ್ಲಿ ಸ್ವಾಗತಿಸಲಾಯಿತು.

ಈ ಅಭಿಯಾನದಲ್ಲಿ ಸುಮಾರು ಎಪ್ಪತ್ತೈದು ಸಾವಿರ ಕಲಶಗಳಲ್ಲಿ, ದೇಶದ ಎಲ್ಲಾ ಮೂಲೆಗಳಿಂದ ಮಣ್ಣನ್ನು ಸಂಗ್ರಹ ಮಾಡಿ, ಅಮೃತ ಕಲಶ‌ ಯಾತ್ರೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಭಾಗಗಳಿಂದ ಮಣ್ಣನ್ನು ದೆಹಲಿಗೆ ಕೊಂಡೊಯ್ಯಲಾಗಿದೆ. ದೇಶಕ್ಕಾಗಿ ಪ್ರಾಣ ತೆತ್ತು ಹುತಾತ್ಮರಾದ ಧೈರ್ಯಶಾಲಿ ಸ್ವಾತಂತ್ರ್ಯ ಹೋರಾಟಗಾರರು, ವೀರರಿಗೆ ಗೌರವ ಸಲ್ಲಿಸುವ ನೆಲೆಯಲ್ಲಿ ನವದೆಹಲಿಯಲ್ಲಿ ಅಮೃತ ವಾಟಿಕಾ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ದೇಶದೆಲ್ಲೆಡೆಯಿಂದ ಮಣ್ಣು ಸಂಗ್ರಹ ಕಾರ್ಯ ನಡೆದಿತ್ತು.

ಉತ್ತರ ರೈಲ್ವೆಯ ದೆಹಲಿ ವಿಭಾಗ ಮತ್ತು ಸಂಸ್ಕೃತಿ ಸಚಿವಾಲಯವು ಮಣ್ಣು ಸಂಗ್ರಹಿಸಿ ಬರುತ್ತಿರುವ ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಲು ಕೇಂದ್ರಗಳನ್ನು ಸಹ ಸ್ಥಾಪಿಸಿವೆ.

Post Card Balaga:
Related Post