X

ಈ ಸರಕಾರಿ ಶಾಲೆಗಳಲ್ಲಿ ಗಾಯತ್ರಿ ಮಂತ್ರ ಕಡ್ಡಾಯ!! ಸನಾತನ ಸಂಸ್ಕೃತಿಗೆ ಮಾರು ಹೋದ ಆ ಸರಕಾರಿ ಶಾಲೆಗಳು ಎಲ್ಲಿಯವು ಗೊತ್ತಾ?!

ಭಾರತದ ಜನಜೀವನದಲ್ಲಿ ಕಂಡುಬರುವ ಜಾತಿ, ಮತ, ಪಂಥಗಳ ನಡುವಣ ಜಾತಿ, ಕಲಹ-ಮೇಲಾಟಗಳನ್ನು ಸಮತೋಲನಕ್ಕೆ ತರುವ ಕಾಯಕದಲ್ಲಿ ನೆರವಾಗಬಲ್ಲ ಏಕೈಕ ಮಂತ್ರ ಗಾಯತ್ರಿ ಮಂತ್ರ ಎಂದರೆ ತಪ್ಪಾಗಲಾರದು!! ಈ ಮಂತ್ರದ ಉಚ್ಚಾರ ಹೆಚ್ಚಾದಷ್ಟೂ ಸರ್ವಸಮಾನತೆಯ, ಪ್ರಭಾವ ಹೆಚ್ಚಾಗುತ್ತದೆಯಲ್ಲದೇ ಅದೊಂದು ದೈವಿಕ ಅನುಭವವೂ ಆಗಿರುವುದಂತೂ ಅಕ್ಷರಶಃ ನಿಜ!! ಹಾಗಾಗಿಯೇ ಇರಬೇಕು, ಇಂಡೋನೇಷ್ಯಾದ ಬಾಲಿಯಲ್ಲಿರುವ ಪ್ರತಿಯೊಬ್ಬ ಮಗುವೂ ದಿನಕ್ಕೆ ಮೂರು ಬಾರಿ ಗಾಯತ್ರಿ ಮಂತ್ರವನ್ನು ಪಠಿಸುತ್ತಿರುವುದು!!

ಹೌದು… ಆಧುನಿಕ ಯುಗದಲ್ಲಿ ವೇದ ಪುರಾಣಗಳನ್ನೇ ಧಿಕ್ಕರಿಸಿ ನಡೆಯುತ್ತಿರುವ ಅದೆಷ್ಟೋ ಮಂದಿಯಿಂದ ಭಾರತದ ಸಂಸ್ಕøತಿ ಆಚಾರ- ವಿಚಾರಗಳು ಮರೆಯಾಗುತ್ತಿದೆ. ಆದರೆ ಇಂಡೋನೇಷ್ಯಾದ ಬಾಲಿಯಂತೆಯೇ ಭಾರತದಲ್ಲೂ ಶಾಲಾ ಮಕ್ಕಳಿಗೆ ಬೆಳಿಗ್ಗೆ ನಡೆಯುವ ಪ್ರಾರ್ಥನೆ ಜೊತೆಗೆ ಗಾಯತ್ರಿ ಮಂತ್ರವನ್ನು ಪಠಿಸುವ ಯೋಜನೆಯನ್ನು ರೂಪಿಸುತ್ತಾರೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರ!! ಯಾಕೆಂದರೆ ಗಾಯತ್ರಿ ಮಂತ್ರವು ಮನಸ್ಸು, ಬುದ್ಧಿ ಮತ್ತು ಆತ್ಮಕ್ಕೆ ಚೈತನ್ಯಕಾರಿಯಾಗಿರುವುದರ ಜೊತೆಗೆ ಜೀವನದ ಎಲ್ಲ ಅವಸ್ಥೆಗಳಲ್ಲೂ, ಅದು ಮೇಲ್ಪಂಕ್ತಿಯಲ್ಲಿರುತ್ತದೆ.

ಆದರೆ ದೇಶದಲ್ಲಿ ಯಾವುದೇ ರಾಜ್ಯ ಸರ್ಕಾರಗಳು ಯೋಚನೆ ಮಾಡದಂತಹ ವಿಚಾರವನ್ನು ಹರಿಯಾಣ ಸರ್ಕಾರವು ಶಾಲಾ ಮಕ್ಕಳಿಗೆ ಬೆಳಗ್ಗಿನ ಪ್ರಾರ್ಥನೆಯ ಜೊತೆಗೆ ಪವಿತ್ರವಾದ ಗಾಯತ್ರಿ ಮಂತ್ರವನ್ನೂ ಪಠಿಸುವ ಯೋಜನೆಯನ್ನು ಹಾಕಿದೆ ಎಂದರೆ ಅದು ನಿಜಕ್ಕೂ ಕೂಡ ಗ್ರೇಟ್!!

ಹೌದು…. ಹರಿಯಾಣ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಬೆಳಗ್ಗಿನ ಪ್ರಾರ್ಥನೆಯ ಸಂದರ್ಭ ಗಾಯತ್ರಿ ಮಂತ್ರ ಪಠಿಸಬೇಕೆಂಬ ನಿರ್ಧಾರವನ್ನು ಮನೋಹರಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ನಿರ್ಧಾರ ಕೈಗೊಂಡಿದೆ. ಅಷ್ಟೇ ಅಲ್ಲದೇ, ಶಾಲಾ ಪಠ್ಯ ಪುಸ್ತಕಗಳಲ್ಲಿ ಈಗಾಗಲೇ ಭಗವದ್ಗೀತೆಯ ಶ್ಲೋಕಗಳನ್ನು ಸರ್ಕಾರ ಸೇರಿಸಿದ್ದು, ಇದೀಗ ಗಾಯತ್ರಿ ಮಂತ್ರವನ್ನು ಜಾರಿಗೊಳಿಸಲು ನಿರ್ಧರಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹರಿಯಾಣದ ಶಿಕ್ಷಣ ಸಚಿವ ರಾಮ್ ವಿಲಾಸ್ ಶರ್ಮ, ”ಶಾಲೆಗಳ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಆಡಳಿತ ಸಿಬ್ಬಂದಿ ಜತೆ ಸಭೆ ನಡೆಸಿದ ಬಳಿಕ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ಈ ಬಗ್ಗೆ ಮಂಗಳವಾರ ಅಧಿಕೃತ ಆದೇಶ ಹೊರಡಿಸಲಾಗುವುದು,” ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, “ದೇವರ ಪ್ರಾರ್ಥನೆಗಳ ಪೈಕಿ ಗಾಯತ್ರಿ ಮಂತ್ರ ಪರಮೋಚ್ಚ ಮಂತ್ರವಾಗಿದೆ. ಹೀಗಾಗಿ ಶಾಲೆಗಳ ಬೆಳಗಿನ ಪ್ರಾರ್ಥನೆಯಲ್ಲಿ ಗಾಯತ್ರಿ ಮಂತ್ರ ಸೇರ್ಪಡೆಗೊಳಿಸಲು ನಾವು ತೀರ್ಮಾನಿಸಿದ್ದೇವೆ,” ಎಂದು ಹೇಳಿದ್ದಾರಲ್ಲದೇ, ಗಾಯತ್ರಿ ಮಂತ್ರವನ್ನು ಹರಿಯಾಣದಲ್ಲಿ ಗೀತಾ, ಗೋವು ಮತ್ತು ಸರಸ್ವತಿಗಳಂತೆ ಸ್ವಾಗತಿಸಲಾಗುವುದು ಎಂದು ಶರ್ಮಾ ಹೇಳಿದ್ದಾರೆ.

ಇನ್ನು, ಹರಿಯಾಣ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಝೀರ್ ಸಿಂಗ್ ಈ ಬಗ್ಗೆ ಮಾತಾನಾಡಿ, “ಬಹುತೇಕ ಹಿಂದೆ ಶಾಲೆಗಳಲ್ಲಿ ಗಾಯತ್ರಿ ಮಂತ್ರ ಬೆಳಿಗ್ಗೆ ಪ್ರಾರ್ಥನೆ ಸಭೆಯ ಭಾಗವಾಗಿತ್ತು, ನಾವು ಜಾತ್ಯತೀತ ದೇಶದಲ್ಲಿ ವಾಸಿಸುತ್ತಿದ್ದೇವೆ. ಇಲ್ಲಿ ಎಲ್ಲಾ ಧರ್ಮಗಳ ಅಭ್ಯಾಸವೂ ಸಮಾನ ಪ್ರಾಮುಖ್ಯತೆಯನ್ನು ನೀಡಬೇಕು” ಎಂದು ಹೇಳಿದ್ದಾರಲ್ಲದೇ, ಶಿಕ್ಷಕರು ಶಿಕ್ಷಕರ ನೇಮಕಾತಿಗೆ ಹೆಚ್ಚು ಗಮನ ನೀಡಬೇಕು ಮತ್ತು ಶಾಲೆಗಳ ಮೂಲಸೌಕರ್ಯವನ್ನು ಬಲಪಡಿಸಬೇಕು ಎಂದು ಹೇಳಿದ್ದಾರೆ!!!

ಗಾಯತ್ರಿ ಮಂತ್ರವನ್ನು ಶಾಲೆಗಳಲ್ಲಿ ಪ್ರಾರಂಭಿಸುವುದರಿಂದ ವಾತಾವರಣವು ಉತ್ತಮವಾಗಲಿದೆ ಮತ್ತು ಮಕ್ಕಳ ಮನಸ್ಸು ಅಧ್ಯಯನ ಮಾಡುವಲ್ಲಿ ಹೆಚ್ಚು ಆಸಕ್ತಿ ಹೊಂದುತ್ತದೆ ಎಂದು ಹರಿಯಾಣ ಸರ್ಕಾರ ನಂಬುತ್ತದೆ. ಗಾಯತ್ರಿ ಮಂತ್ರವನ್ನು ಅನುಷ್ಠಾನಗೊಳಿಸುವ ಬಗ್ಗೆ ನಿರ್ದೇಶನಾಲಯವು ಸೂಚನೆಗಳನ್ನು ನೀಡಿದ್ದು, ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಬೆಳಿಗ್ಗೆ ಪ್ರಾರ್ಥನೆ ಗಾಯತ್ರಿ ಮಂತ್ರದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ರಾಷ್ಟ್ರೀಯ ಗೀತೆಯೊಂದಿಗೆ ಪ್ರಾರ್ಥನೆ ಕೊನೆಗೊಳ್ಳುತ್ತದೆ. ಅಷ್ಟೇ ಅಲ್ಲದೇ, ಸರ್ಕಾರಿ ಶಾಲೆಗಳಲ್ಲಿ ಪ್ರತಿದಿನ 20 ನಿಮಿಷಗಳ ಪ್ರಾರ್ಥನೆ ದಿನನಿತ್ಯ ಮಾಡಲು ನಿರ್ದೇಶನಾಲಯವು ಆದೇಶವನ್ನು ಜಾರಿಗೊಳಿಸಿದೆ.

ಸರ್ಕಾರದ ನಿರ್ಧಾರವನ್ನು ಟೀಕಿಸಿರುವ ಕಾಂಗ್ರೆಸ್!!

ರಾಜ್ಯದ ಶಾಲೆಗಳ ಪ್ರಾಂಶುಪಾಲರು, ಶಿಕ್ಷಕರು ಮತ್ತು ಇತರರೊಂದಿಗೆ ಇತ್ತೀಚೆಗಷ್ಟೇ ನಡೆಸಿದ ಸಭೆಯಲ್ಲಿ ಹಿಂದೂ ಧರ್ಮದ ಮಹಾಗ್ರಂಥಗಳಲ್ಲಿ ಒಂದಾದ ಋಗ್ವೇದದಲ್ಲಿರುವ ಗಾಯತ್ರಿ ಮಂತ್ರ ಪಠಣ ಜಾರಿಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ಫೆಬ್ರವರಿ 27ರಂದು ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಇಲ್ಲಿ ಶಿಕ್ಷಣ ಸಚಿವ ರಾಮ್ ಬಿಲಾಸ್ ಶರ್ಮಾ ತಿಳಿಸಿದ್ದಾರೆ.

ಆದರೆ ಈ ಬಗ್ಗೆ ಟಾಂಗ್ ನೀಡಿರುವ ಕಾಂಗ್ರೆಸ್ ಸರ್ಕಾರವು, ”ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತನ್ನ ಧರ್ಮೋದೇಶಗಳನ್ನು ಕಲಿಸುವ ಮೊದಲು ಖಟ್ಟರ್ ಸರ್ಕಾರವು ಕರ್ಮ(ನಿಸ್ವಾರ್ಥ ಪರಕೀಯ ಸೇವೆ) ಪಾಠ ‘ಗೀತಾ’ದಿಂದ ಪಾಠ ಕಲಿಯಬೇಕಿದೆ,” ಎಂದು ಹೇಳಿದೆ. ಅಷ್ಟೇ ಅಲ್ಲದೇ, ಇದು ಶಿಕ್ಷóಣವನ್ನು ಕೇಸರೀಕರಣಗೊಳಿಸುವ ಉದ್ದೇಶ ಹೊಂದಿದೆ ಎಂದೂ ಆರೋಪಿಸಿವೆ.

ಅಲ್ಲದೇ, ಈ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರೆ, ಇತ್ತ ರಾಜ್ಯದಲ್ಲಿರುವ ದುರಾಡಳಿತ, ಶಿಕ್ಷಣ, ಆರೋಗ್ಯ ಮತ್ತು ಕೃಷಿ ವಲಯಗಳ ಸಮಸ್ಯೆಗಳನ್ನು ಮುಚ್ಚಿಹಾಕಲು ಸರ್ಕಾರ ಜನರ ದೃಷ್ಟಿಯನ್ನು ಬೇರೆಡೆ ಸೆಳೆಯುವ ಸರ್ಕಾರದ ಯತ್ನವಿದು ಎಂದು ಕಾಂಗ್ರೆಸ್ ಮುಖಂಡ ಅಫ್ತಾಬ್ ಅಹ್ಮದ್ ದೂರಿದ್ದಾರೆ.

ಆದರೆ ಸರ್ಕಾರದ ನಡೆಯನ್ನು ವಿರೋಸುವವರನ್ನು ತರಾಟೆಗೆ ತೆಗೆದುಕೊಂಡಿರುವ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ”3-ಆರ್ (ರೀಡಿಂಗ್, ರೈಟಿಂಗ್ ಅಂಡ್ ಅರ್ತ್‍ಮೆಟಿಕ್) ಪರಿಕಲ್ಪನೆ ಮುಖ್ಯವಾಗಿರಬಹುದು. ಆದರೆ, ಇವಿಷ್ಟೇ ಸಾಕಾಗುವುದಿಲ್ಲ. ಮಕ್ಕಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿಸಿ ಸಮಾಜದ ಆಸ್ತಿಯನ್ನಾಗಿಸಲು ಅವರಲ್ಲಿ ನೀತಿ ಬೋಧನೆಗಳನ್ನು ತುಂಬಬೇಕು. ಯಾವುದು ಸರಿ ಅಥವಾ ಯಾವುದು ತಪ್ಪು , ಯಾವುದು ನ್ಯಾಯ ಅಥವಾ ಯಾವುದು ಅನ್ಯಾಯ ಎಂಬುದನ್ನರಿಯುವುದಕ್ಕಾಗಿ ಮಕ್ಕಳಲ್ಲಿ ನೀತಿ ಬೋಧನೆಗಳನ್ನು ಬಿತ್ತುವುದು ಅಗತ್ಯ,” ಎಂದು ಪ್ರತಿಪಾದಿಸಿದ್ದಾರೆ.

ಶಿಕ್ಷಣ ವ್ಯವಸ್ಥೆಯಲ್ಲಿ ಕೇಸರೀಕರಣದ ಯತ್ನವೇ ಇದು ಎಂಬ ಪ್ರಶ್ನೆಗೆ ಉತ್ತರಿಸಿರುವ ಸಚಿವ ರಾಮ್ ಬಿಲಾಸ್ ಶರ್ಮಾ, “ಮುಂಜಾನೆ ಸೂರ್ಯನ ಕಿರಣಗಳು ಕೇಸರಿಮಯವಾಗಿಯೇ ಇರುತ್ತವೆ. ತ್ರಿವರ್ಣ ಧ್ವಜದಲ್ಲಿ ಮೊದಲಿಗೆ ಕೇಸರಿಯೇ ಇದೆ. ಇದರಲ್ಲಿ ತಪ್ಪೇನಿದೆ ಎಂದು ಮರು ಪ್ರಶ್ನಿಸಿದ್ದಾರೆ.

ಗಾಯಂತ್ರಿ ಮಂತ್ರ ಹಾಗೂ ಅದರ ಅರ್ಥ!!

ಓಂ ಭೂರ್ಭುವಃ ಸ್ವಃ ತತ್ಸವಿತುರ್ ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ, ಧಿಯೋ ಯೋ ನ ಪ್ರಚೋದಯಾತ್!!

ಇದರ ಅರ್ಥ: ಓ ದೇವರೇ, ರಕ್ಷಕನೇ, ಎಲ್ಲದರ ಮೂಲನೇ, ಅವನು ಸ್ವಯಂಭೂತನಾದಂತವನು, ಎಲ್ಲಾ ನೋವುಗಳಿಂದ ಮುಕ್ತನಾದವನು, ಆತನ ಸಂಪರ್ಕದಿಂದ ಎಲ್ಲಾ ಕಷ್ಟ ಕಾರ್ಪಣ್ಯಗಳು ದೂರವಾಗುವುದು, ಆತ ಪರಿಶುದ್ಧನು, ಆ ದೇವನನ್ನು ಪೂಜಿಸೋಣ, ಇದರಿಂದ ಆತ ನಮ್ಮ ಮನಸ್ಸನ್ನು ಸರಿಯಾದ ದಿಕ್ಕಿನತ್ತ ನಡೆಸಿಯಾನು ಎಂದು!!

ಗಾಯತ್ರಿ ಮಂತ್ರವು ಸಾರ್ವತ್ರಿಕ ಪ್ರಜ್ಞೆಯ ಸಾಧನೆಗಾಗಿ ಮತ್ತು ಒಬ್ಬರ ಅಂತರ್ಬೋಧೆಯ ಶಕ್ತಿಯನ್ನು ಜಾಗೃತಗೊಳಿಸುವ ಉದ್ದೇಶವನ್ನು ಹೊಂದಿದೆ. ಗಾಯತ್ರಿ ಮಂತ್ರದ ನಿಯಮಿತ ವಾಚನ (ಜಪ) ಪ್ರಾಣ ಶಕ್ತಿಯನ್ನು ಶಕ್ತಿಯನ್ನು ತುಂಬಿಸುತ್ತದೆ, ಒಳ್ಳೆಯ ಆರೋಗ್ಯ, ಬುದ್ಧಿವಂತಿಕೆ, ಮಾನಸಿಕ ಶಕ್ತಿ, ಸಮೃದ್ಧಿಯೊಂದನ್ನು ನೀಡುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲದೇ, ಇದು ಜಾತಿ, ಮತ, ಪಂಥಗಳ ನಡುವಣ ಜಾತಿ, ಕಲಹ-ಮೇಲಾಟಗಳನ್ನು ಸಮತೋಲನಕ್ಕೆ ತರುವ ಕಾಯಕದಲ್ಲಿ ನೆರವಾಗುತ್ತದೆ ಕೂಡ!!

ಹಾಗಾಗಿ ಹರಿಯಾಣ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಪ್ರಾರ್ಥನೆ ಸಂದರ್ಭದಲ್ಲಿ ಹಿಂದೂ ಧರ್ಮದ ಮಹಾಗ್ರಂಥಗಳಲ್ಲಿ ಒಂದಾದ ಋಗ್ವೇದದಲ್ಲಿರುವ ಗಾಯತ್ರಿ ಮಂತ್ರ ಪಠಣವನ್ನು ಜಾರಿಗೊಳಿಸುವ ಬಗ್ಗೆ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ನಿರ್ಧರಿಸಿದ್ದು ಈ ಬಗ್ಗೆ ದೇಶದಲ್ಲೆಡೆ ಬಾರಿ ಸಂಚಲನ ಸೃಷ್ಟಿ ಆಗಿದೆ.

– ಅಲೋಖಾ

Editor Postcard Kannada:
Related Post