X

ಬಂಧನದಲ್ಲಿರುವ ಚಿದಂಬರಂ ಪುತ್ರನ ಆಸ್ತಿ ಎಲ್ಲೆಲ್ಲಿದೆ ಎಷ್ಟೆಷ್ಟಿದೆ ಗೊತ್ತಾ?! ಬಯಲಾಯಿತು ಭ್ರಷ್ಟತೆಯ ಮಹಾ ಬೇರು!!

ಐಎನ್ ಎಕ್ಸ್ ಮೀಡಿಯಾ ಸಂಸ್ಥೆಯಲ್ಲಿ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣ ಸಂಬಂಧ ಕೇಂದ್ರ ಮಾಜಿ ಸಚಿವ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ನಿನ್ನೆ ಬಂಧಿಸಿದ್ದಾರೆ… ಲಂಡನ್ ನಿಂದ ವಾಪಸ್ ಆಗುತ್ತಿದ್ದರಂತೆ ಚೆನ್ನೈನ ವಿಮಾನ ನಿಲ್ದಾಣದಲ್ಲಿ ಕಾರ್ತಿ ಚಿದಂಬರ್ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.. ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರ ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಕಾರ್ತಿ ಚಿದಂಬರಂ ಅವರ ವಿರುದ್ಧ ಸಿಬಿಐ ಸಹ ಪ್ರಕರಣ ದಾಖಲಿಸಿಕೊಂಡಿತ್ತು. ಹಲವು ದಿನಗಳಿಂದ ಪ್ರಕರಣ ಸಂಬಂಧ ಕಾರ್ತಿ ಚಿದಂಬರಂ ಅವರ ವಿರುದ್ಧ ದಾಖಲಾಗಿದ್ದ ದೂರಿನ ಅನ್ವಯ ಹಲವು ಬಾರಿ ವಿಚಾರಣೆಗೆ ಒಳಗಾಗಿದ್ದರು.

ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಚಿದಂಬರಂ ಸಚಿವರಾಗಿದ್ದರು, ಈ ವೇಳೆ ಐಎನ್ ಎಕ್ಸ್ ಮೀಡಿಯಾ ಸಂಸ್ಥೆ ಹಗರಣ ನಡೆದಿತ್ತು. ಅಕ್ರಮ ಹಣ ವಹಿವಾಟು ತಡೆ ಕಾಯ್ದೆ ಅಡಿ ಕಾರ್ತಿ ಚಿದಂಬರಂ ವಿರುದ್ಧ ಇಡಿ ಮೇ, 2017ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಉಲ್ಲಂಘನೆ ಆರೋಪದಲ್ಲಿ ಕಾರ್ತಿ ಚಿದಂರಬರಂ ನನ್ನು ಬಂಧಿಸಲಾಗಿದೆ.

2007ರಲ್ಲಿ ಮಾರಿಷಸ್‍ನಿಂದ ಬಂಡವಾಳ ಪಡೆಯುವ ವೇಳೆ ಎಫ್‍ಐಪಿಬಿ ನಿಯಮಾವಳಿ ಉಲ್ಲಂಘನೆ ಮಾಡಲಾಗಿರುವುದು ಕಂಡು ಬಂದ ಹಿನ್ನಲೆಯಲ್ಲಿ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದೆ. ಅಕ್ರಮ ಹಣ ವರ್ಗಾವಣೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕಾರ್ತಿ ವಿರುದ್ಧ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

2008ರಲ್ಲಿ ಐಎನ್‍ಎಕ್ಸ್ ಮೀಡಿಯಾ ಕಾರ್ತಿ ಅವರ ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಸಂಸ್ಥೆ ಹಾಗೂ ಅದರ ಸಹ ಸಂಸ್ಥೆಗಳಿಗೆ ಹಣ ಪಾವತಿಸಿ ಶೇರ್ ಗಳನು ನೀಡಿತ್ತು. ಅಷ್ಟೇ ಅಲ್ಲದೇ, ಪೀಟರ್ ಮುಖರ್ಜಿ ಅವರ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆ ಹಲವು ಕಂತುಗಳಲ್ಲಿ ಹಣವನ್ನು ಪಾವತಿಸಿದ್ದು, 60 ಶೇರುಗಳನ್ನು ಲಂಡನ್ ಮೂಲದ ಆರ್ಟಿವಿಯಾ ಡಿಜಿಟಲ್ ಯುಕೆ ಲಿಮಿಟಡ್ ಕಂಪೆನಿಯಿಂದ ಕಾರ್ತಿ ಅವರ ಸಂಸ್ಥೆಗೆ ವರ್ಗಾಯಿಸಲಾಗಿತ್ತು ಎಂದು ವರದಿಯಾಗಿದೆ.

ಈ ಹಿಂದೆ ಕಾರ್ತಿ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಕಾರ್ತಿ ಅವರ ಸಂಸ್ಥೆಯ ಬಗ್ಗೆ ಮಾಹಿತಿವುಳ್ಳ ಹಾರ್ಡ್ ಡಿಸ್ಕ್‍ಗಳನ್ನ ಜಪ್ತಿ ಮಾಡಲಾಗಿತ್ತು. ಕಾರ್ತಿ ಅವರು ಐಎನ್‍ಎಕ್ಸ್ ಮೀಡಿಯಾದಿಂದ ಕಿಕ್ ಬ್ಯಾಕ್ ಪಡೆದಿದ್ದಾರೆಂಬುದು ತನಿಖೆಯಿಂದ ಬಹಿರಂಗವಾಗಿತ್ತು. 2008 ಸೆಪ್ಟೆಂಬರ್ 22ರಂದು ಎಫ್ ಐಪಿಬಿ(ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ) ನಿಂದ 220 ಮಿಲಿಯನ್ ಡಾಲರ್ ಕ್ಲಿಯರೆನ್ಸ್‍ಗಾಗಿ ಅರ್ಜಿ ಹಾಕಿದ್ದ ಐಎನ್‍ಎಕ್ಸ್ ಮೀಡಿಯಾ, ಕಾರ್ತಿ ಅವರ ಸಂಸ್ಥೆಗೆ 35 ಲಕ್ಷ ರೂಪಾಯಿ ನೀಡಿದೆ ಎನ್ನುವ ಆರೋಪ ಕೇಳಿ ಬಂಧಿಸಿತ್ತು.

ಪೀಟರ್ ಮುಖರ್ಜಿ ಹಾಗೂ ಇಂದ್ರಾಣಿ ಮುಖರ್ಜಿ ನೇತೃತ್ವದ ಐಎನ್ ಎಕ್ಸ್ ಮೀಡಿಯಾ ಸಂಸ್ಥೆಯಲ್ಲಿ ವಿದೇಶಿ ಹೂಡಿಕೆಗೆ 2007ರಲ್ಲಿ ಅಂದಿನ ಹಣಕಾಸು ಸಚಿವ ಪಿ. ಚಿದಂಬರಂ ಅನುಮತಿ ನೀಡಿದ್ದರು. ಇದಕ್ಕಾಗಿ ಸಂಸ್ಥೆಯಿಂದ ಕಾರ್ತಿ ಚಿದಂಬರಂಗೆ 10 ಲಕ್ಷ ರೂಪಾಯಿ ಕಿಕ್ ಬ್ಯಾಕ್ ದೊರೆತಿತ್ತು ಎನ್ನಲಾಗಿದೆ. ಅಲ್ಲದೇ, ವಿದೇಶಿ ಹೂಡಿಕೆ ಪೆÇತ್ಸಾಹ ಮಂಡಳಿ 4 ಕೋಟಿ ರೂಪಾಯಿ ಹೂಡಿಕೆಗೆ ಅನುಮತಿ ಕಲ್ಪಿಸಿದ್ದರೂ, ಇದನ್ನು ಮೀರಿ 305 ಕೋಟಿ ರೂಪಾಯಿ ವಿದೇಶಿ ಹೂಡಿಕೆ ಮಾಡಲಾಗಿತ್ತು. ಕಾರ್ತಿ ಚಿದಂಬರಂ ಹೆಸರಿನಲ್ಲಿರುವ ಚೆಸ್ ಮ್ಯಾನೇಜ್ ಮೆಂಟ್ ಸರ್ವಿಸಸ್ ಸಂಸ್ಥೆಗೆ 3.5 ಕೋಟಿ ರೂಪಾಯಿ ನೀಡಲಾಗಿತ್ತು.

ಹಾಗಾಗಿ, 2007ರಲ್ಲಿ ಮಾರಿಷಸ್‍ನಿಂದ ಬಂಡವಾಳ ಪಡೆಯುವ ವೇಳೆ ಎಫ್ ಐಪಿಬಿ ನಿಯಮಾವಳಿ ಉಲ್ಲಂಘನೆ ಮಾಡಲಾಗಿರುವುದು ಕಂಡು ಬಂದ ಹಿನ್ನಲೆಯಲ್ಲಿ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದೆ. ಅಕ್ರಮ ಹಣ ವರ್ಗಾವಣೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕಾರ್ತಿ ವಿರುದ್ಧ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆದರೆ ಇದೀಗ ಮತ್ತೊಂದು ಆಘಾತಕಾರ ಮಾಹಿತಿ ಹೊರಬಿದ್ದಿದ್ದು.. ಚಿದಂಬರಂಗೆ ದೊಡ್ಡ ಶಾಕ್ ಅಂತಾನೇ ಹೇಳಬಹುದು!! ಚಿದಂಬರಂ ಸಾಮ್ರಾಜ್ಯದ ಸಂಪೂರ್ಣ ಮಾಹಿತಿ ದೊರಕಿದೆ…

ಚಿದಂಬರಂ ಕುಟುಂಬದ ಸಾಮ್ರಾಜ್ಯ!!

* ಅಮೇರಿಕದಲ್ಲಿ 80 ಏಕರೆ ಜಾಗ, ಶ್ರೀಲಂಕಾದಲ್ಲಿ 3 ರೆಸಾರ್ಟ್‍ಗಳು ಪತ್ತೆ:

ಚಿದಂಬರಂ ಈ ಮೊದಲು ಹೇಳಿಕೆಯನ್ನು ಕೊಟ್ಟಿರುವ ಪ್ರಕಾರ ನಮ್ಮನ್ನು ಯಾವ ರೀತಿ ನಮ್ಮ ಆಸ್ತಿಯನ್ನು ಜಪ್ತಿ ಮಾಡಿದರೂ ಏನೂ ಸಿಗುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು… ಆದರೆ ಅಮೇರಿಕಾದಲ್ಲಿ 80 ಏಕರೆ ಜಗ ಪತ್ತೆಯಾಗಿದ್ದು.. ಶ್ರೀಲಂಕಾದಲ್ಲಿ 3 ರೆಸಾರ್ಟ್‍ಗಳು ಪತ್ತೆಯಾಗಿದ್ದು… ಇಲ್ಲಿ ಅಕ್ರಮ ವ್ಯವಹಾರಗಳನ್ನು ಮಾಡುತ್ತಿದ್ದರೂ ಎಂಬ ಮಾಹಿತಿಯೂ ಈಗ ಬಯಲಾಗಿದೆ…

* ಬಾರ್ಸಿಲೋನಾ ಹಾಗೂ ಆಫ್ರಿಕಾದಲ್ಲಿ 11 ಟೆನ್ನಿಸ್ ಅಕಾಡಮಿ!!

ಕಾರ್ತಿ ಚಿದಂಬರಂ ಮೇಲೆ ಈಗಾಗಲೇ ಹಲವಾರು ಆಪಾದನೆಗಳು ಇದ್ದರೂ ಸಹ ತಲೆ ಮರೆಸಿಕೊಂಡು ತಿರುಗುತ್ತಿದ್ದ ಕಾರ್ತಿ ಚಿದಂಬರಂ ಬಾರ್ಸಿಲೋನಾದಲ್ಲಿರುವ ಹಾಗೂ ಆಫ್ರಿಕಾದಲ್ಲಿರುವ 11 ಟೆನ್ನಿಸ್ ಅಕಾಡಮಿಗಳು ಪತ್ತೆಯಾಗಿವೆ!!..

* ಅದಲ್ಲದೆ ಮಲೇಷಿಯಾದ ಎಲ್ಲಾ ಭಾಗಗಳಲ್ಲೂ ಕೆಫೆ ಹೊಂದಿದ್ದು ಅಕ್ರಮ ವ್ಯಾಪಾರಗಳನ್ನೂ ಮಾಡುತ್ತಿದ್ದರು ಎಂಬ ಮಾಹಿತಿ ಕೂಡಾ ಬಿಡುಗಡೆಯಾಗಿದೆ…

* ಸಿಂಗಾಪುರ್ ಯೂನಿಯನ್ ಬ್ಯಾಂಕ್‍ನಲ್ಲಿ 10 ಮಿಲಿಯನ್ ಡಾಲರ್ ಹೂಡಿಕೆ!!

ಒಟ್ಟಿನಲ್ಲಿ ಪಿ. ಚಿದಂಬರಂ ಕುಟುಂಬವು ಒಟ್ಟು ಹತ್ತು ಹಗರಣಗಳನ್ನು ಎದುರಿಸುತ್ತಿದ್ದು, ಅದರಲ್ಲಿ ಈ ಹಗರಣ ಸಾಬಿತಾಗಿ ಪಿ. ಚಿದಂಬರಂ ಮಗಾ ಕಾರ್ತಿ ಚಿದಂಬರಂ ನಿನ್ನೆ ಪೆÇಲೀಸರ ಅಥಿತಿಯಾಗಿದ್ದಾರೆ… ಚಿದಂಬರಂ ಇದಕ್ಕಿಂತ ಮುಂಚೆ ನಮ್ಮನ್ನು ಯಾವ ರೀತಿ ಜಪ್ತಿ ಮಾಡಿದರೂ ಯಾವ ಆಸ್ತಿಯೂ ಸಿಗುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು ಆದರೆ ಇದೀಗ ಚಿದಂಬರಂ ಕುಟುಂಬದ ಸಾಮ್ರಾಜ್ಯದ ಆಸ್ತಿ ಬಯಾಲಾಗಿದ್ದು ಸುಳ್ಳು ಹೇಳಿದ ಚಿದಂಬರಂಗೆ ಈಗ ದೊಡ್ಡ ಶಾಕ್ ಆಗಿರಬಹುದು!! ಈ ಬಾರಿ ಕಾಂಗ್ರೆಸ್‍ನ ಹಿರಿಯ ಮುಖಂಡನ ಕರಾಳ ಮುಖ ಬಯಾಲಾಗಿದ್ದು ಹೀಗೆ ಒಂದೊಂದೇ ಮುಖ ಅನಾವರರಣಗೊಳ್ಳಲಿದೆ.

ಪವಿತ್ರ

Editor Postcard Kannada:
Related Post