X

ಮೋದಿ ಭಯವನ್ನು ಬಹಿರಂಗ ಪಡಿಸಿದ ಚೀನಾ!! ಚೀನಾದ ಪ್ರತಿಷ್ಠಿತ ಸಂಸ್ಥೆ ಮೋದಿ ಬಗ್ಗೆ ಹೇಳಿದ್ದೇನು ಗೊತ್ತಾ?!

ಚೀನಾವು ಭಾರತದೊಂದಿಗೆ ಪದೇ ಪದೇ ಯುದ್ಧದ ವಿಚಾರವಾಗಿ ಕ್ಯಾತೆ ತೆಗೆಯುತ್ತಿದ್ದು, ಅದಕ್ಕೆ ಸಾಕ್ಷಿ ಎಂಬಂತೆ 73 ದಿನಗಳ ಕಾಲ ಶೀತಲ ಸಮರಕ್ಕೆ ಕಾರಣವಾಗಿದ್ದ ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಚೀನಾ ಮತ್ತೆ ದೊಡ್ಡ ಪ್ರಮಾಣದಲ್ಲಿ ತನ್ನ ಸೇನೆ ನಿಯೋಜಿಸಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ಪ್ರತಿ ಬಾರಿಯೂ ಭಾರತವನ್ನು ಕಂಡರೆ ಸಾಕು ಹುರಿದು ಬೀಳುತ್ತಿದ್ದ ರಾಷ್ಟ್ರವಾದ ಚೀನಾ ಇದೀಗ ನರೇಂದ್ರ ಮೋದಿಯವರ ನೀತಿಯನ್ನು ಮೆಚ್ಚಿ, ಭಾರತವನ್ನು ಹಾಡಿ ಹೊಗಳಿದೆ!! ಹಾಗಾದರೆ ಚೀನಾ ಮೆಚ್ಚಿರುವ ಮೋದಿಯ ನೀತಿಯಾದರು ಯಾವುದು?

ಈಗಾಗಲೇ ಡೋಕ್ಲಾಂನಲ್ಲಿ ಸೃಷ್ಟಿಯಾಗಿರುವ ಸೇನಾ ಬಿಕ್ಕಟ್ಟಿಗೆ ಸಂಬಂಧಿಸಿ, ಪದೇಪದೇ ಉದ್ರೇಕಕಾರಿ ಹೇಳಿಕೆ ನೀಡುತ್ತಾ ಬಂದಿರುವ ಚೀನಾ, ಭಾರತದ ಗಡಿಯೊಳಗೆ ನುಗ್ಗುವ ಗಂಭೀರ ಬೆದರಿಕೆಯೊಡ್ಡಿತ್ತು. ಅಷ್ಟೇ ಅಲ್ಲದೇ, ಗಡಿಯಲ್ಲಿನ ಬಿಕ್ಕಟ್ಟು ಬೀಜಿಂಗ್’ಗೆ ಬೆದರಿಕೆ ಎಂಬುದಾಗಿ ಪರಿಗಣಿಸಿ, ತಮ್ಮ ಸೇನೆ ಭಾರತದೊಳಗೆ ಪ್ರವೇಶಿಸಿದರೆ ಸಂಪೂರ್ಣ ಅಲ್ಲೋಲ ಕಲ್ಲೋಲವಾಗಲಿದೆ ಎಂದು ಚೀನಾ ಎಚ್ಚರಿಸಿತ್ತು!! ಹಾಗೆಯೇ, ಜಗತ್ತಿನ ಎಲ್ಲಾ ರಾಷ್ಟ್ರಗಳನ್ನು ತನ್ನ ಹಿಡಿತದಲ್ಲಿ ಇರಿಸಿಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿರುವ ಚೀನಾ, ತಂತ್ರಗಾರಿಕೆಯಿಂದ ತನ್ನ ಹಿತಾಸಕ್ತಿ ಸಾಧಿಸಲು ಹೊರಟಿತ್ತು.

ಹಾಗಾಗಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಚೀನಾ ಭಾರತದ ನೀತಿಯನ್ನು ಹಾಡಿ ಹೊಗಳಿದೆ ಎಂದರೆ ಅದು ಅಚ್ಚರಿಯ ವಿಚಾರವೇ ಸರಿ!! ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನು ಹಿಡಿದ ಕ್ಷಣದಿಂದಲೂ ಒಂದಲ್ಲ ಒಂದು ಕಿರಿಕ್ ಮಾಡುತ್ತಲೇ ಬರುತ್ತಿರುವ ಚೀನಾ, ನರೇಂದ್ರ ಮೋದಿ ವಿರುದ್ದ ಸಮರ ಸಾರಿದ್ದಂತೂ ಅಕ್ಷರಶಃ ನಿಜ. ಆದರೆ ಇದೀಗ ಮೋದಿ ಸರ್ಕಾರದ ಅಡಿಯಲ್ಲಿ ಭಾರತದ ವಿದೇಶಾಂಗ ನೀತಿ ಸ್ಪಂದನಶೀಲ ಮತ್ತು ಸಮರ್ಥನೀಯವಾಗಿದೆ ಎಂದು ಚೀನಾದ ಪ್ರಮುಖ ಚಿಂತಕರ ಚಾವಡಿಯೊಂದು ಬಣ್ಣಿಸಿದೆ.

ಹೌದು… “ಕಳೆದ ಮೂರು ವರ್ಷಗಳಿಂದ ಭಾರತದ ರಾಜತಾಂತ್ರಿಕತೆ, ಸ್ಪಂದನಶೀಲ ಮತ್ತು ಸಮರ್ಥವಾಗಿದೆ. ನೂತನ ಸನ್ನಿವೇಶದಲ್ಲಿ ಭಾರತವನ್ನು ಒಂದು ಶ್ರೇಷ್ಠ ಶಕ್ತಿಯಾಗಿ ರೂಪಿಸುವಲ್ಲಿನ ಕಾರ್ಯ ತಂತ್ರ- ಮೋದಿ ಸಿದ್ಧಾಂತ ಮತ್ತು ವೈಶಿಷ್ಟ್ಯತೆಯನ್ನು ವಿದೇಶಾಂಗ ನೀತಿಯಲ್ಲಿ ಕಾಣಬಹುದಾಗಿದೆ” ಎಂದು ಚೀನಾ ವಿದೇಶಾಂಗ ಸಚಿವಾಲಯದೊಂದಿಗೆ ಗುರುತಿಸಿಕೊಂಡಿರುವ ಚೀನಾ ಇನ್ಸ್‍ಟಿಟ್ಯೂಟ್ ಆಫ್ ಇಂಟರ್‍ನ್ಯಾಷನಲ್ ಸ್ಟಡೀಸ್ (ಸಿಐಐಎಸ್) ಉಪಾಧ್ಯಕ್ಷ ರೊಂಗ್ ಯಿಂಗ್ ಹೇಳಿದ್ದಾರೆ.

ಈಗಾಗಲೇ ಖ್ಯಾತ ತಜ್ಞ ಮೈಕಲ್ಯಾಂಜೆಲೊನ ಪಿಲ್ಸ್ಬರ್ ಅವರು ಚೀನಾದ ಕುರಿತು ಮಾತಾನಾಡುತ್ತಾ, ಚೀನಾಕ್ಕೆ ಸೆಡ್ಡು ಹೊಡೆಯಬಲ್ಲ ಏಕೈಕ ವ್ಯಕ್ತಿ ಎಂದರೆ ಅದು ನರೇಂದ್ರ ಮೋದಿ ಎಂದು ಹೇಳಿದ್ದರು. ಪ್ರತಿ ಬಾರಿಯೂ ಮೋದಿ ಏನೇ ಹೇಳಿದರೂ ಕೂಡ ಅದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಚೀನಾ ಇದೀಗ ಎರಡನೇಯ ಬಾರಿಗೆ, ಅಪರೂಪಕ್ಕೆ ಎಂಬಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದೆ.

ಈ ಮೊದಲು ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗದಲ್ಲಿ ಮೋದಿ ತಮ್ಮ ಭಾಷಣದಲ್ಲಿ ಆರ್ಥಿಕ ರಕ್ಷಣಾ ನೀತಿ ಭಯೋತ್ಪಾದನೆಯಷ್ಟೇ ಅಪಾಯಕಾರಿ ಎಂದು ಪ್ರತಿಪಾದಿಸಿದ್ದರು. ಈ ಕುರಿತಂತೆ ಅವರ ಈ ನಿಲುವನ್ನು ಚೀನಾ ಸ್ವಾಗತಿಸಿರುವುದು ಮಾತ್ರ ಅಚ್ಚರಿಯ ವಿಚಾರವಾಗಿತ್ತು. ಆದರೆ ಇದೀಗ, ನರೇಂದ್ರ ಮೋದಿಯವರು ಅಧಿಕಾರ ಗದ್ದುಗೆಯನ್ನು ಹಿಡಿದ ನಂತರ ಭಾರತದ ರಾಜತಾಂತ್ರಿಕತೆ, ಸ್ಪಂದನಶೀಲ ಮತ್ತು ಸಮರ್ಥವಾಗಿದೆ ಎಂದು ಹೇಳಿದೆಯಲ್ಲದೇ ಪ್ರಧಾನಿ ಮೋದಿಯವರ ನೀತಿಯನ್ನು ಚೀನಾ ಶ್ಲಾಘಿಸಿರುವುದು ಹೆಮ್ಮೆಯ ವಿಚಾರ.

ಈಗಾಗಲೇ ಜಾಗತೀಕರಣದ ಅತಿದೊಡ್ಡ ಪ್ರಯೋಜನವನ್ನು ಪಡೆದುಕೊಳ್ಳುತ್ತಿರುವ ಚೀನಾ, ಕಳೆದ ಮೂರು ದಶಕಗಳಿಂದ ವಿಶ್ವದ ಕಾರ್ಖಾನೆ ಎನಿಸಿಕೊಂಡಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಪ್ರತಿ ಬಾರಿಯೂ ಚೀನಾ ಭಾರತನ್ನು ತೆಗಳುತ್ತಲೇ ಬರುತ್ತಿದ್ದು, ಅದಕ್ಕೆ ಉದಾಹರಣೆಯಂತೆ ಪಾಕಿಸ್ತಾನದ ಜೈಶೆ ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಹಾಗೂ ಪಠಾಣ್ ಕೋಟ್ ವಾಯುನೆಲೆ ದಾಳಿಯ ಪ್ರಮುಖ ರೂವಾರಿ ಮಸೂದ್ ಅಝರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಪ್ರಕ್ರಿಯೆಗೆ ಚೀನಾ ತಡೆವೊಡ್ಡುವ ಮೂಲಕ ಪಾಕಿಸ್ತಾನಕ್ಕೆ ಬೆಂಬಲ ನೀಡಿತ್ತು. ಹಾಗಾಗಿ ಭಾರತದ ನೀತಿಯನ್ನೇ ಧಿಕ್ಕರಿಸಿ ಪಾಕಿಸ್ತಾನವನ್ನು ಬೆಂಬಲಿಸಿದ್ದ ಅದೇ ರಾಷ್ಟ್ರವು ನರೇಂದ್ರ ಮೋದಿಯವರ ರಾಜತಾಂತ್ರಿಕ ನೀತಿಯನ್ನು ಮೆಚ್ಚಿರುವುದು ಅಚ್ಚರಿಯ ವಿಚಾರ.

ಇನ್ನು….. ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಕುರಿತು, ವಿದೇಶಾಂಗ ನೀತಿಯ ಕುರಿತು ಚೀನಾದ ಚಿಂತಕರ ಚಾವಡಿ ಮೊದಲ ಬಾರಿಗೆ ಮೋದಿ ಸರ್ಕಾರದ ಬಗ್ಗೆ ಸಿಐಐಎಸ್ ಜರ್ನಲ್‍ನಲ್ಲಿ ಲೇಖನವೊಂದನ್ನು ಪ್ರಕಟಿಸಿದೆ. ಅಷ್ಟೇ ಅಲ್ಲದೇ, ಮೋದಿ ಪ್ರಧಾನಿಯಾದ ಬಳಿಕ ಭಾರತ ಮತ್ತು ಚೀನಾ ನಡುವಿನ ಸಂಬಂಧ ಸುಧಾರಣೆ ಸ್ಥಿರತೆ ಕಾಪಾಡಿಕೊಂಡಿದೆ ಎಂದು ರೊಂಗ್ ಯಿಂಗ್ ಹೇಳಿದ್ದಾರೆ.

ಭಾರತದ ಶತ್ರು ರಾಷ್ಟ್ರವಾದ ಪಾಕಿಸ್ತಾನವನ್ನು ತನ್ನ ಮಿತೃರಾಷ್ಟ್ರವೆಂದು ಘೋಷಿಸಿರುವ ಜೊತೆಗೆ ಭಯೋತ್ಪಾದನೆಗೂ ಕೈ ಜೋಡಿಸುತ್ತಲೇ ಬರುತ್ತಿರುವ ಚೀನಾ, ಪ್ರತಿಬಾರಿಯೂ ಮೋದಿಯವರ ಮಾತುಗಳಲ್ಲನ್ನೇ ಅಲ್ಲಗಳೆಯುತ್ತಿದ್ದು, ಇದೀಗ ಮೋದಿಯವರ ಭಾಷಣವನ್ನು, ರಾಜತಾಂತ್ರಿಕ ನೀತಿಯನ್ನು ಮೆಚ್ಚಿಸಿರುವುದು ಅಚ್ಚರಿಯ ವಿಚಾರ!!

– ಅಲೋಖಾ

Editor Postcard Kannada:
Related Post