X

ಕೈಮುಗಿದು ಬಂದ‌ ಪಾಕಿಸ್ತಾನಕ್ಕೆ ಭಾರತದ ಆಸರೆ: ಕಂಡಿಷನ್ಸ್ ಅಪ್ಲೈ!

ಒಂದು ಕಡೆಯಲ್ಲಿ ಆರ್ಥಿಕ, ಆಹಾರದ ವಿಷಯದಲ್ಲಿ ಬರ್ಬಾದ್ ಆಗಿರುವ ಪಾಕಿಸ್ತಾನ ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವ ರೀತಿಯಲ್ಲಿಯೇ ಅಥವಾ ಒಮ್ಮೆ ಈ ಕಷ್ಟದ ಪರಿಸ್ಥಿತಿಯಿಂದ ಪಾರಾಗೋಣ, ಆಮೇಲೆ ಮತ್ತೆ ಬಾಲ ಬಿಚ್ಚಿದರಾಯಿತು ಎನ್ನುವ ಯೋಚನೆ ಇರಿಸಿಕೊಂಡೋ, ಒಟ್ಟಿನಲ್ಲಿ ಭಾರತದ ನೆರವು ಬೇಕು ಎಂದು ಅಲವತ್ತುಕೊಂಡಿದೆ.

ಊಟಕ್ಕೂ ಗತಿ ಇಲ್ಲದ ಪಾಕಿಸ್ತಾನ ಕಳೆದ ವಾರವಷ್ಟೇ ಕಾಶ್ಮೀರದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿತ್ತು. ಇದಕ್ಕೆ ಭಾರತ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನದ ಜೊತೆಗೆ ಭಾರತ ಸಾಮಾನ್ಯ ನೆರೆಯ ಸಂಬಂಧಗಳನ್ನು ಬಯಸುತ್ತದೆ. ಆದರೆ ಅಂತಹ ಸಂಬಂಧಗಳನ್ನು ಸಾಧಿಸಬೇಕಾದರೆ ಉಗ್ರವಾದದಿಂದ ಹೊರತಾದ, ಹಿಂಸಾಚಾರ ಮುಕ್ತವಾದ ವಾತಾವರಣ ಇರಬೇಕು ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಭಾಗ್ಚಿ ಅವರು ಮಾಧ್ಯಮಗೋಷ್ಟಿಯಲ್ಲಿ ಪಾಕಿಸ್ತಾನದ ಜೊತೆಗಿನ ಸಂಬಂಧದ ಬಗ್ಗೆ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯವಾಗಿ ಭಾರತವು ತನ್ನ ನೆರೆಯ ರಾಷ್ಟ್ರ ‌ಗಳ ಜೊತೆಗಿನಂತೆ ಉತ್ತಮ ಬಾಂಧವ್ಯವನ್ನು ಸಾಧಿಸಬೇಕಾದರೆ, ಉಗ್ರವಾದ ಮತ್ತು ಹಿಂಸೆ ಮುಕ್ತ ವಾತಾವರಣ ಇರಬೇಕು. ಹಾಗಾದಲ್ಲಿ ಮಾತ್ರ ಸಾಮಾನ್ಯ ಸಂಬಂಧ ಸಾಧಿಸಲು ಸಾಧ್ಯವಾಗುತ್ತದೆ ಎಂದು ಬಾಗ್ಚಿ ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಯುಎಇ ಮೂಲದ ಸುದ್ದಿ ವಾಹಿನಿಗೆ ಪಾಕ್ ಅಧ್ಯಕ್ಷ ಷರೀಫ್ ನೀಡಿದ ಹೇಳಿಕೆಯಲ್ಲಿ, ‘ಭಾರತದ ಜೊತೆ ನಡೆದ ಮೂರು ಯುದ್ಧಗಳ ಬಳಿಕ ಪಾಕಿಸ್ತಾನ ಪಾಠವನ್ನು ಕಲಿತಿದೆ. ಈಗ ಭಾರತದ ಜೊತೆಗೆ ಶಾಂತಿಯಿಂದ ಬದುಕಲು ಬಯಸುತ್ತದೆ. ನಮ್ಮ ನೈಜ ಸಮಸ್ಯೆಗಳನ್ನು ಪರಿಹರಿಸಲು ನಾವೀಗ ಶಕ್ತರಿದ್ದೇವೆ’ ಎಂದು ಹೇಳಿದ್ದರು. ಈ ಹೇಳಿಕೆಗೆ ಭಾರತ ತನ್ನ ಅಭಿಪ್ರಾಯವನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದೆ.

Post Card Balaga:
Related Post