X

ಮೋದಿಯನ್ನು ಮುಗಿಸಲು ಕಾಂಗ್ರೆಸ್‌ನಿಂದ ಬಹಿರಂಗ ಕರೆ: ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ಇವರೇನಾ?

ಪ್ರಧಾನಿಯಾದ ವ್ಯಕ್ತಿಯ ಮೇಲೆ ಗೌರವ ಇದೆಯೋ ಇಲ್ಲವೋ, ಆದರೆ ಕೊನೇ ಪಕ್ಷ ಆ ಸ್ಥಾನದ ಮೇಲಾದರೂ ಗೌರವವನ್ನು ಹೊಂದುವುದು, ಆ ಸ್ಥಾನದಲ್ಲಿ ಕುಳಿತವರು ನಮ್ಮ ವಿರೋಧಿಗಳೇ ಆದರೂ, ಅವರು ಕುಳಿತ ಸ್ಥಾನಕ್ಕೆ ಮರ್ಯಾದೆ ನೀಡುವುದು ಸಂಸ್ಕೃತಿ.

ಆದರೆ ಕಾಂಗ್ರೆಸ್‌ನವರ ರಕ್ತದಲ್ಲಿ ಅವರ ಇಟಲಿ ದೇವತೆ ಅಂಟನಿಯೋ ಮೈನೋ (ಸೋನಿಯಾ ಗಾಂಧಿ) ಮತ್ತವರ ಕುಟುಂಬಕ್ಕೆ ಡೊಗ್ಗು ಸಲಾಂ ಹೊಡೆಯುವುದು ಮಾತ್ರ ಇದೆಯೇ ಹೊರತು, ಬೇರೆಯವರಿಗೆ ಅದೂ ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪದಂತಿರುವವರಿಗೆ ಗೌರವ ನೀಡಿ ಅಭ್ಯಾಸವೇ ಇಲ್ಲ.

ರಾಜಸ್ಥಾನದಲ್ಲಿಯೂ ವಿಧಾನಸಭಾ ಚುನಾವಣೆ ನಡೆಯಲಿದ್ದು, ಪ್ರಚಾರ ಕಾರ್ಯಗಳು ರಂಗೆದ್ದಿವೆ. ಜೈಪುರದಲ್ಲಿ ಕಾಂಗ್ರೆಸ್‌ನ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್ ಎಸ್ ರಾಂಧವ ಅವರು ಪ್ರಧಾನಿ ಮೋದಿ ಅವರ ವಿರುದ್ಧ ದ್ವೇಷ ಭಾಷಣ ಮಾಡಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಧಾನಿ ಮೋದಿ ಅವರನ್ನು ಮುಗಿಸಬೇಕು. ಅವರಿಂದ ಈ ದೇಶ ಸರ್ವನಾಶವಾಗಲಿದೆ. ಮೋದಿ ಅವರ ದೇಶಭಕ್ತಿಯ ಅಸಲಿಯತ್ತು ನಮಗೆ ತಿಳಿದಿದೆ. ಬಿಜೆಪಿ ಯವರು ಯಾರೂ ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಕಾಂಗ್ರೆಸ್ ನಾಯಕರು ಹೋರಾಟ ನಡೆಸಿ‌ ಪ್ರಾಣತ್ಯಾಗ ಮಾಡಿದ್ದಾರೆ ಎಂದು ಬಾಯಿಗೆ ಬಂದಂತೆ ಒದರಿ ಜನಾಕ್ರೋಶಕ್ಕೆ ತುತ್ತಾಗಿದ್ದಾರೆ.

ಹಾಗೆಯೇ ಉದ್ಯಮಿ ಅದಾನಿ ವಿಷಯದಲ್ಲಿ ಬಿಜೆಪಿ ಜಂಟಿ ಸಂಸದೀಯ ಸಮಿತಿ ರಚನೆಗೆ ಸಮ್ಮತಿಸುತ್ತಿಲ್ಲ. ಉದ್ಯಮಿಗಳು ಕೈಗೆ ಭಾರತವನ್ನು ನೀಡಿ ಬರ್ಬಾದ್ ಮಾಡುತ್ತಿದೆ. ಅದಾನಿ ಬಗ್ಗೆ ಮಾತನಾಡುವುದು ಬಿಡಿ, ಪ್ರಧಾನಿ ಮೋದಿ ಅವರನ್ನು ಮುಗಿಸುವ ಬಗ್ಗೆ ಮಾತನಾಡಿ. ಮೋದಿಯನ್ನು ಮುಗಿಸಿದರೆ ಉದ್ಯಮಿಗಳು ಕೈಯಿಂದ ದೇಶವನ್ನು ರಕ್ಷಿಸಬಹುದು. ಮೋದಿ ಇದ್ದರೆ ಹಿಂದೂಸ್ತಾನ ನಿರ್ನಾಮವಾಗಲಿದೆ ಎಂದು ಹೇಳಿದ್ದಾರೆ. ಹಾಗೆಯೇ ಪುಲ್ವಾಮಾ ದಾಳಿಯಲ್ಲಿ ಭಾರತದ ಯೋಧರು ಹೇಗೆ ಹುತಾತ್ಮರಾದರು ಎನ್ನುವ ಬಗೆಗೂ ಸ್ಪಷ್ಟವಾಗಿಲ್ಲ ಎನ್ನುವ ಮೂಲಕ ರಾಂಧವ್ ರಾದ್ಧಾಂತ ಎಬ್ಬಿಸಿದ್ದಾರೆ.

ಒಟ್ಟಿನಲ್ಲಿ ರೌಡಿಗಳ ಮನಸ್ಥಿತಿಯನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಸಾರ್ವಜನಿಕವಾಗಿ ಇಂತಹ ಬೆದರಿಕೆಗಳನ್ನು ಒಡ್ಡುವುದು, ತಮ್ಮ ಹಿಂಬಾಲಕರನ್ನು ಕೆ ಕಲಿಸುವ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕದಡುತ್ತಿರುವುದು ಖೇದಕರ. ಇಂತಹ ಕಾಂಗ್ರೆಸ್‌ನಿಂದ ಭಾರತದಲ್ಲಿ ಶಾಂತಿ ನೆಲೆಸಲು ಹೇಗೆ ಸಾಧ್ಯ?

Post Card Balaga:
Related Post