X

ಜೈ ಶ್ರೀ ರಾಮ್ ಎನ್ನುವವರನ್ನು ಭಿಕಾರಿಗಳೆಂದ ಕಾಂಗ್ರೆಸ್

ಕಾಂಗ್ರೆಸ್ ಪಕ್ಷಕ್ಕೆ ಪ್ರಭು ಶ್ರೀರಾಮನ ಮೇಲೆ ಅದೇನು ದ್ವೇಷವೋ ಗೊತ್ತಿಲ್ಲ. ರಾಮನ ಹೆಸರು ಕೇಳಿದರೆ ಸಾಕು, ಮೈಯೆಲ್ಲಾ ಉರಿ ಬಂದವರ ಹಾಗಾಡುತ್ತಾರೆ. ಹಿಂದೂಗಳು, ಹಿಂದೂ ದೇವರುಗಳನ್ನು ಅವಗಣಿಸುತ್ತಾ, ಅವಮಾನಿಸುತ್ತಲೇ ಇಲ್ಲಿಯವರೆಗೆ ಬಂದಿರುವ ಕಾಂಗ್ರೆಸ್ ನಾಯಕರು ಮೂಲಕ ಬಹುಸಂಖ್ಯಾತರ ಭಾವನೆಗಳಿಗೆ ಕೊಳ್ಳಿ ಇಡುವ ಕೆಲಸದಲ್ಲೇ ತಲ್ಲೀನರಾಗಿರುವುದು ದುರಂತವಲ್ಲದೆ ಬೇರೇನಲ್ಲ.

ಸದ್ಯ ಶ್ರೀರಾಮನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ಸಾರ್ವಜನಿಕರ ಕೆಂಗಣ್ಣಿಗೆ ತುತ್ತಾಗಿರುವುದು ಕಾಂಗ್ರೆಸ್ ಶಾಸಕ ರಾಜು ಕಾಗೆ.

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಪ್ರತಿಯೊಂದು ಸಮಾವೇಶದಲ್ಲಿ, ರೋಡ್ ಶೋ ಗಳಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗುತ್ತಾರೆ. ಇದನ್ನೆಲ್ಲಾ ನಾನು ಸುಮಾರು ನಲವತ್ತು ವರ್ಷಗಳ ಹಿಂದೆಯೇ ಮಾಡಿದ್ದೇನೆ. ಜೈ ಶ್ರೀರಾಮ್ ಘೋಷಣೆ ಕೂಗುವವರಿಗೆ ಸಮರ್ಥವಾಗಿ ಉತ್ತರ ನೀಡಲು ನಾನು ಸಿದ್ಧ. ಜೈ ಶ್ರೀರಾಮ್ ಘೋಷಣೆ ಕೂಗುವವರು ಬಿಕಾರಿಗಳು. ನಾವು ಅವರ ಲೆವೆಲ್‌ಗೆ ತಿಳಿಯುವುದು ಸಾಧ್ಯವಿಲ್ಲ ಎಂದು ನಾಲಿಗೆ ಹರಿಯ ಬಿಟ್ಟಿದ್ದಾರೆ.

ಹಾಗೆಯೇ ಹಿಂದೂಗಳು ಮತ್ತು ಬಿಜೆಪಿಗರ ಬಗ್ಗೆ ಬೇಕಾಬಿಟ್ಟಿ ಮಾತನಾಡಿರುವ ಅವರು, ಪ್ರಧಾನಿ ಮೋದಿ ಅವರು ಸತ್ತರೆ ನಿಮ್ಮಲ್ಲಿ ಮತ್ತೆ ಯಾರು ಪ್ರಧಾನಿ ಅಭ್ಯರ್ಥಿ ಇದ್ದಾರೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿ ಮಾಡಿದ್ದಾರೆ. ಜೊತೆಗೆ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಹಿಂದಿನ ಆರ್ಥಿಕ ಶಕ್ತಿ ಕೋಟ್ಯಾಂತರ ರಾಮ ಭಕ್ತರು. ಹೀಗಿದ್ದರೂ ಇದನ್ನು ಬಿಜೆಪಿ ಸರ್ಕಾರದ ಹಣದಿಂದ ನಿರ್ಮಾಣ ಮಾಡಿರುವುದಾಗಿ ಸುಳ್ಳು ಸಂದೇಶ ರವಾನೆ ಮಾಡಿರುವ ರಾಜು ಕಾಗೆ, ದೇಶದ ಅಭಿವೃದ್ಧಿ ಮಾಡುವುದು ಬಿಟ್ಟು ಮಂದಿರ ಕಟ್ಟುತ್ತಾರೆ ಎಂದು ನಾಲಿಗೆ ಹರಿಯ ಬಿಟ್ಟಿದ್ದಾರೆ.

ಹಾಗೆಯೇ ಜೈ ಶ್ರೀರಾಮ್ ಕೂಗುವ ಭಿಕಾರಿಗಳಿಗೆ ನೀವು ಚುನಾವಣೆಯಲ್ಲಿ ಉತ್ತರ ನೀಡಬೇಕು. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಮೂಲಕ ಉತ್ತರಿಸಬೇಕು ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಭ್ರಷ್ಟಾಚಾರದ ಮೂಲಕವೇ ಹೆಸರುವಾಸಿಯಾದ, ಹಿಂದೂ ಧರ್ಮ, ದೇವರನ್ನು ವಿರೋಧಿಸುವ ಮೂಲಕವೇ ಓಟ್‌ಬ್ಯಾಂಕ್ ರಾಜಕಾರಣ ಮಾಡುವ ಕಾಂಗ್ರೆಸ್, ಶ್ರೀರಾಮನ ಹೆಸರು ಕೇಳಿದೊಡನೆಯೇ ಮೈಗೆ ಇರುವೆ ಬಿಟ್ಟಂತಾಡುವ ಕಾಂಗ್ರೆಸ್ ಈಗ ಮತ್ತೊಮ್ಮೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಗುರಿಯಾಗಿದೆ. ದೇಶದ ಪ್ರಧಾನಿಗಳಿಗೆ ಗೌರವ ನೀಡಲು ಬಾರದ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆಯಲ್ಲಿ ಮತದಾರರೇ ಕೊಬ್ಬಿಳಿಸಲಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

Post Card Balaga:
Related Post