X

ಕಾಂಗ್ರೆಸ್‌ಗೆ ಮುಗಿಯದ ಮೋದಿ ಬಿ(ಇ)ಕ್ಕಟ್ಟು

ಪ್ರಧಾನಿ ಮೋದಿ ಅವರನ್ನು ಟೀಕಿಸುವುದೇ ಕಾಂಗ್ರೆಸ್ ಪಕ್ಷದ ಮುಖ್ಯ ಜವಾಬ್ದಾರಿ ಎಂಬಂತಾಗಿದೆ. ಪ್ರತಿ ನಿತ್ಯ ಮೋದಿ ಅವರನ್ನು ಮೂದಲಿಸುವ ನೆಪದಲ್ಲಾದರೂ ನೆನಪಿಸಿಕೊಳ್ಳದೆ ಹೋದರೆ ಕಾಂಗ್ರೆಸಿಗರಿಗೆ ತಿಂದ ಅನ್ನ ಕರಗುವುದಿಲ್ಲ, ನಿದ್ರೆಯೂ ಬರುವುದಿಲ್ಲ ಎಂಬಂತೆ ವರ್ತಿಸುತ್ತಿರುವುದು ಹಾಸ್ಯಸ್ಪದ.

ಪ್ರಧಾನಿ ಮೋದಿ ಅವರಲ್ಲಿ ಯಾವುದೇ ಲೋಪಗಳು ಕಾಣದೇ ಇದ್ದಾಗ, ಉದ್ಯಮಿ ಅದಾನಿ ವಿಷಯವನ್ನು ಪ್ರಧಾನಿಗಳ ತಲೆಗೆ ಕಟ್ಟಿ, ವಿರೋಧಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಲೇ ಬಂದಿದೆ. ಸಂಸತ್ತಿನಲ್ಲಿಯೂ ಕಾಂಗ್ರೆಸ್ ಸೇರಿದಂತೆ ಇತರ ವಿಪಕ್ಷ ಬಣಗಳು ಈ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡಿದ್ದವು. ಆದರೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಇಂತಹ ಸುಳ್ಳು ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ, ದೇಶದ ಅಭಿವೃದ್ಧಿ ಕೆಲಸಗಳ ಬಗೆಗಿನ ಚರ್ಚೆಗೆ ತಮ್ಮ ಗಮನವನ್ನು ನೀಡಿದ್ದವು.

ಆದರೆ ಕಾಂಗ್ರೆಸ್ ಮಾತ್ರ ಅಧಾನಿ, ಪ್ರಧಾನಿಯವರನ್ನು ಸೇರಿಸಿ ಹೊಸ ಆರೋಪ ಹೊರಿಸಲು ಬೇಕಾದ ಎಲ್ಲಾ ಪ್ಲಾನ್‌ಗಳ ಮೂಲಕವೇ ಸಂಸತ್ ‌ಗೆ ಬಂದಿತ್ತು. ಯಾವಾಗ ಮೋದಿ ಸರ್ಕಾರ ಕಾಂಗ್ರೆಸ್‌ನ ಅಪ್ರಬುದ್ಧ ನಾಯಕ ರಾಹುಲ್ ಗಾಂಧಿ ಲಂಡನ್ನಿನಲ್ಲಿ ನಿಂತು ಭಾರತವನ್ನು, ಭಾರತ ಸರ್ಕಾರವನ್ನು ಟೀಕಿಸುವ ವಿಚಾರದಲ್ಲಿ ತರಾಟೆಗೆ ತೆಗೆದುಕೊಂಡಿತೋ, ಬೇರೆ ಯಾವುದೇ ವಿಷಯಗಳಲ್ಲಿ ಕೇಂದ್ರ ಸರ್ಕಾರದ ಲೋಪ ಪತ್ತೆಹಚ್ಚಲಾಗದ ಕಾಂಗ್ರೆಸಿಗರು ಅದಾನಿ ವಿಷಯಕ್ಕೆ ಪ್ರಧಾನಿ ಸಹಾಯ ಮಾಡುತ್ತಾರೆ. ಅದಾನಿಯನ್ನು ರಕ್ಷಿಸುವ ಕೆಲಸವನ್ನು ಪ್ರಧಾನಿ ಮಾಡುತ್ತಿದ್ದಾರೆ, ಈ ಬಗ್ಗೆ ಚರ್ಚೆ ನಡೆಯಬೇಕು. ಇದಕ್ಕೆ ಜಂಟಿ ಸಂಸದೀಯ ಸಮಿತಿ ರಚಿಸಿದ ಎಂದೆಲ್ಲಾ ಬೊಬ್ಬಿಟ್ಟಿತು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಕೇಂದ್ರ ಸರ್ಕಾರ ದೇಶಕ್ಕೆ ಯಾವುದು ಅಗತ್ಯವೋ ಆ ಬಗ್ಗೆ ಚರ್ಚೆ ನಡೆಸಲು ಮುಂದಾಯಿತು. ಈ ಅಂಶವನ್ನು ಟಿ ಟು ಕೊಂಡು ಕಾಂಗ್ರೆಸ್ ಸಂಸತ್ತಿನಲ್ಲಿ ಬಿಕ್ಕಟ್ಟಿಗೆ ಮೋದಿ ಸರ್ಕಾರ ವೇ ಕಾರಣ ಎಂದು ಹೊಸ ರಾಗ ಆರಂಭಿಸಿ, ಅವರನ್ನು ಟೀಕಿಸಲು ತೊಡಗಿಸಿಕೊಂಡಿದೆ.

ಒಟ್ಟಿನಲ್ಲಿ ದಿನಂಪ್ರತಿ ಕಾಂಗ್ರೆಸ್ ಪಕ್ಷ ತಮ್ಮ ನಾಯಕರನ್ನಾದರೂ ನೆನಪಿಸಿಕೊಳ್ಳುವುದನ್ನು ಮರೆಯಬಹುದು. ಆದರೆ ಪ್ರಧಾನಿ ಮೋದಿ ಅವರನ್ನು ನೆನಪಿಸಿಕೊಳ್ಳದೆ ಇರಲಾರರು. ಈ ಅಂಶವೇ ಕಾಂಗ್ರೆಸ್ ಪಕ್ಷದವರು ಪ್ರಧಾನಿ ಮೋದಿ ಅವರ ಮೇಲೆ, ಅವರು ಮಾಡುತ್ತಿರುವ ಅಭಿವೃದ್ಧಿಯ ಕೆಲಸಗಳಿಂದ ಎಷ್ಟು ಚಡಪಡಿಸುತ್ತಿದ್ದಾರೆ, ಎಷ್ಟು ಭಯಭೀತರಾಗಿದ್ದಾರೆ ಎನ್ನುವುದಕ್ಕೆ ಜ್ವಲಂತ ಸಾಕ್ಷಿ.

ಪ್ರತಿ ದಿನ ಮೋದಿ ಭಜನೆಯಲ್ಲಿ ತೊಡಗಿ – ಅವರನ್ನು ಕೊಲ್ಲುವ ಹೇಳಿಕೆಗಳ ವರೆಗೆ ಮುಂದುವರಿದಿರುವ ಕಾಂಗ್ರೆಸಿಗರಿಗೆ ಕೊನೆಗೆ ತಮ್ಮ ಪಕ್ಷಕ್ಕೂ ನಾಯಕರಿದ್ದಾರೆ, ಆ ನಾಯಕರು ಯಾರು? ಅವರ ಹೆಸರೇನು ಎಂಬುದೂ ಸಹ ಮರೆತು ಹೋದೀತು ಜೋಕೆ.

Post Card Balaga:
Related Post