X

ಕಾರ್ಯಕರ್ತರಿಗಾಗಿ ಪೊಲೀಸರನ್ನೇ ಹೊರದಬ್ಬಿದ ಕಾಂಗ್ರೆಸ್! ರಾಹುಲ್ ಸಮಾವೇಶದಲ್ಲಿ ಪೊಲೀಸರಿಗೆ ಅವಮಾನ!

ಈ ಕಾಂಗ್ರೆಸ್ ನ ಅವಾಂತರಕ್ಕೆ ಕೊನೆಯೇ ಇಲ್ಲವೇ.? ದಿನದಿಂದ ದಿನಕ್ಕೆ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಇಡೀ ರಾಜ್ಯವನ್ನು ತಮ್ಮ ಸ್ವಂತ ಆಸ್ತಿಯಂತೆ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಆಡಳಿತಕ್ಕೆ ಇಡೀ ರಾಜ್ಯವೇ ಛೀಮಾರಿ ಹಾಕುತ್ತಿದೆ ಎಂದರೆ ಊಹಿಸಿಕೊಳ್ಳಬಹುದು ಕರ್ನಾಟಕದಲ್ಲಿ ಯಾವ ರೀತಿಯ ಆಡಳಿತ ಇದೆ ಎಂಬುದು. ಈಗಾಗಲೇ ತಮ್ಮದೇ ಸರಕಾರ ರಾಜ್ಯದಲ್ಲಿ ಆಡಳಿತ ಎಂಬ ಅಹಂಕಾರದಿಂದ ವರ್ತಿಸುತ್ತಿರುವ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ತಮಗೆ ಬೇಕಾದ ರೀತಿಯಲ್ಲಿ ವರ್ತಿಸಿಕೊಂಡು ಗೂಂಡಾಗಿರಿ ಮೆರೆಯುತ್ತಿದ್ದಾರೆ.

ಸರಕಾರಿ ಇಲಾಖೆಗಳ ಮೇಲೆ ಕಾಂಗ್ರೆಸ್ ದಬ್ಬಾಳಿಕೆ..!

ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರಿ ಇಲಾಖೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲಾ. ಪ್ರತಿಯೊಂದು ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿ , ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸಿ , ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಬಿಡದ ಕಾಂಗ್ರೆಸಿಗರು ರಾಜ್ಯದಲ್ಲಿ ಕಾನೂನು ಕೈಗೆ ಎತ್ತಿಕೊಂಡು ತಮ್ಮದೇ ಅಟ್ಟಹಾಸ ಮೆರೆಯುತ್ತಿದ್ದಾರೆ. ಶಾಂತಿ ಕಾಪಾಡಬೇಕಿದ್ದ ಸರಕಾರವೇ ಅಶಾಂತಿ ಸೃಷ್ಟಿಸಿ ತನ್ನ ರಾಜಕೀಯ ಲಾಭಕ್ಕಾಗಿ ಇಡೀ ರಾಜ್ಯವನ್ನೇ ಬಲಿಕೊಡಲು ತುದಿಕಾಲಲ್ಲಿ ನಿಂತಿದೆ.

ಸಮಾವೇಶಕ್ಕೆ ಬಳಕೆಯಾಯ್ತು ಪೋಲೀಸ್ ಜೀಪ್..!

ಪೊಲೀಸರನ್ನು ತಮ್ಮ ಕೈಗೊಂಬೆಯಂತೆ ಆಡಿಸುತ್ತಿರುವ ಕಾಂಗ್ರೆಸ್, ರಾಜ್ಯದ ಕಾನೂನು ವ್ಯವಸ್ಥೆಯನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಿಬಿಟ್ಟಿದೆ. ಕರ್ತವ್ಯ ನಿರ್ವಹಿಸಬೇಕಾಗಿದ್ದ ಪೊಲೀಸರನ್ನು ತಮ್ಮ ಮನೆಯಾಳುಗಳಂತೆ ಆಟ ಆಡಿಸುತ್ತಿರುವ ಕಾಂಗ್ರೆಸ್ ಸರಕಾರ ಇದೀಗ ತಮ್ಮ ಪಕ್ಷದ ಸಮಾವೇಶಕ್ಕೆ ಕಾರ್ಯಕರ್ತರ ಮೋಜಿಗಾಗಿ ಪೊಲೀಸ್ ವಾಹನವನ್ನೇ ಬಳಸಿಕೊಂಡಿದೆ‌

ಇಂದು ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್ ನ ಜನಾಶಿರ್ವಾದ ಯಾತ್ರೆಯ ಪ್ರಯುಕ್ತ ಆಗಮಿಸಿದ ರಾಹುಲ್ ಗಾಂಧಿಯ ನೋಡಲು ಹೋಗಿದಗ್ದ ಕಾರ್ಯಕರ್ತರು ಸ್ವತಃ ಪೊಲೀಸರ ವಾಹನವನ್ನೇ ತಮ್ಮ ಸ್ವಂತ ವಾಹನದಂತೆ ಬಳಸಿಕೊಂಡ ಘಟನೆ ಇಂದು ಮಂಗಳೂರಿನಲ್ಲಿ ನಡೆಯಿತು. ಮಂಗಳೂರಿನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಅನೇಕ ಅಕ್ರಮಗಳು ಕಂಡುಬಂದಿತ್ತಾದರೂ , ಕರ್ತವ್ಯದಲ್ಲಿದ್ದ ಪೊಲೀಸರ ವಾಹನವನ್ನು ಬಳಸಿಕೊಂಡಿದ್ದು ಇದೀಗ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

‘ಜೀವ’ ಉಳಿಸಿಕೊಳ್ಳಲು ಪರದಾಟ..!

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳೂರಿಗೆ ಆಗಮಿಸುವುದಕ್ಕೂ ಮೊದಲೇ ನಗರದಾದ್ಯಂತ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್,
ರಸ್ತೆ ಮಧ್ಯೆ ಸಿಲುಕಿಕೊಂಡಿದ್ದ ಆಂಬುಲೆನ್ಸ್ ಗೆ ಕೂಡಾ ಹೋಗಲು ಬಿಡದ ಕಾಂಗ್ರೆಸಿಗರು ಸಾರ್ವಜನಿಕರಿಗೂ ತೊಂದರೆ ಪಡಿಸಿದರು. ಜನದಟ್ಟಣಿ ಇಲ್ಲದೇ ಇದ್ದರೂ ವಾಹನಗಳಿಗೆ ಸಂಚಾರ ಮಾಡದಂತೆ ಬ್ಯಾರಿಕೇಡ್ ಹಾಕಿ ರಸ್ತೆ ತಡೆ ಮಾಡಿದ್ದ ಸ್ಥಳೀಯ ಆಡಳಿತ ಕಾಂಗ್ರೆಸ್ ನ ಅಡಿಯಾಳಿನಂತೆ ವರ್ತಿಸಿದ್ದು ಇದೀಗ ಸಾರ್ವಜನಿಕ ವಯಲದಲ್ಲೂ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.!

ಬೀದಿ ಬದಿ ಕಂಬದಿಂದ ಕಾರ್ಯಕ್ರಮಕ್ಕೆ ವಿದ್ಯುತ್.. !

ಸರಕಾರದ ಖರ್ಚಿನಲ್ಲಿ ತಮ್ಮ ಪಕ್ಷದ ಪ್ರಚಾರ ಕಾರ್ಯ ಮಾಡುತ್ತಿರುವ ಕಾಂಗ್ರೆಸ್ ನ ಅಸಲಿ ಬಣ್ಣ ಈಗಾಗಲೇ ರಾಜ್ಯದ ಜನತೆಯ ಮುಂದೆ ಬಹಿರಂಗಗೊಂಡಿತ್ತು. ಇದೀಗ ತಮ್ಮ ಪಕ್ಷದ ಕಾರ್ಯಕ್ರಮಕ್ಕಾಗಿ ಮಂಗಳೂರಿನ ಸುರತ್ಕಲ್ ನಲ್ಲಿ ಸಾರ್ವಜನಿಕ ಬೀದಿಬದಿ ವಿದ್ಯುತ್ ಕಂಬಗಳಿಂದ ವಿದ್ಯುತ್ ಪಡೆದಿರುವ ಘಟನೆಯೂ ಬೆಳಕಿಗೆ ಬಂದಿದೆ. ರಸ್ತೆ ಮಧ್ಯೆಯೇ ವೇದಿಕೆ ನಿರ್ಮಿಸಿ ಸಮಾವೇಶ ನಡೆಸಿದ ಕಾಂಗ್ರೆಸ್ , ಇಡೀ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಾಡಿತ್ತು. ಇದೀಗ ಅದೇ ಸ್ಥಳದಲ್ಲಿ ಸಾರ್ವಜನಿಕರ ಬಳಕೆಗೆ ಇರುವ ವಿದ್ಯುತ್ ನ್ನು ತಮ್ಮ ಪಕ್ಷದ ಕಾರ್ಯಕ್ರಮಕ್ಕೆ ಬಳಸಿಕೊಂಡಿರುವುದು ಕಾಂಗ್ರೆಸ್ ನ ಜನವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ.!

ಪೊಲೀಸ್ ಇಲಾಖೆಗೆ ಸೇರಿದ ಬೊಲೆರೋ ಜೀಪ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷದ ಧ್ವಜದೊಂದಿಗೆ ತುಂಬಿಕೊಂಡಿದ್ದರು. ಅಲ್ಲದೆ ಜೀಪ್ ನ ಬೋನೆಟ್ ಮೇಲೆ ಮತ್ತು ಅಕ್ಕಪಕ್ಕ , ಹಿಂಬದಿ ಹೀಗೆ ಎಲ್ಲಾ ಕಡೆಗಳಲ್ಲಿ ಕಾರ್ಯಕರ್ತರು ನೇತಾಡಿಕೊಂಡಿದ್ದು, ಸ್ವತಃ ಮುಖ್ಯಮಂತ್ರಿಯವರೇ ಈ ರೋಡ್ ಶೋ ನಲ್ಲಿ ಭಾಗಿಯಾಗಿದ್ದರು.

ತಮ್ಮದೇ ಸರಕಾರ ಇದ್ದು , ಪೊಲೀಸ್ ಇಲಾಖೆಯನ್ನು ಯಾವ ರೀತಿಯಲ್ಲಿ ತಮ್ಮ ಆಟಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬುವುದಕ್ಕೆ ಮಂಗಳೂರಿನಲ್ಲಿ ನಡೆದ ಈ ಘಟನೆಯೇ ಪ್ರತ್ಯಕ್ಷ ಸಾಕ್ಷಿ. ಯಾಕೆಂದರೆ ತಮ್ಮ ಕಾರ್ಯಕರ್ತರನ್ನು ಕರೆತರಲು ಪೊಲೀಸ್ ವಾಹನವನ್ನು ಈ ರೀತಿ ಬಳಕೆ ಮಾಡಿಕೊಳ್ಳುತ್ತಿರುವುದು ಇದೇ ಮೊದಲು..!

-ಅರ್ಜುನ್

Editor Postcard Kannada:
Related Post