X

ಉಗ್ರರನ್ನು ಸಹೋದರರೆನ್ನುವ ಕಾಂಗ್ರೆಸಿಗರೇ.. ಇದನ್ನೊಮ್ಮೆ ಓದಿ..

ಮಂಗಳೂರಿನಲ್ಲಿ ಉಗ್ರ ಶಾರಿಕ್ ನಡೆಸಿದ ಕುಕ್ಕರ್ ಬಾಂಬ್ ಸ್ಫೋಟದ ಹೊಣೆಯನ್ನು ಖೊರೋಸಾನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ಹೊತ್ತುಕೊಂಡಿದ್ದಾರೆ. ಕುಕ್ಕರ್ ಬಾಂಬ್ ಸ್ಫೋಟದ ಮೂರು ತಿಂಗಳ ಬಳಿಕ ಮತ್ತು ಕೊಯಮತ್ತೂರು ಕಾರ್ ಬಾಂಬ್ ಸ್ಫೋಟದ ನಾಲ್ಕು ತಿಂಗಳ ಬಳಿಕ ಈ ವಿದ್ವಂಸಕ ತಂತ್ರದ ರೂವಾರಿಗಳು ತಾವೇ ಎಂಬುದನ್ನು ಈ ಉಗ್ರ ಸಂಘಟನೆ ಒಪ್ಪಿಕೊಂಡಿದೆ.

ಐಎಸ್‌ಕೆಪಿಯು ತನ್ನ ಮುಖವಾಣಿ ‘ವಾಯ್ಸ್ ಆಫ್ ಖೊರೋಸಾನ್’ ನಲ್ಲಿ ಈ ವಿದ್ವಂಸಕ ಕೃತ್ಯವನ್ನು ತಾವೇ ನಡೆಸಿರುವುದಾಗಿ ತಿಳಿಸಿದೆ. ಈ ಸಂಘಟನೆಯ ಭಯೋತ್ಪಾದಕರು ದಕ್ಷಿಣ ಭಾರತದಲ್ಲಿ ಹೆಚ್ಚಿನ ಕಾರ್ಯಾಚರಣೆ ನಡೆಸುತ್ತಿದ್ದು, ಕಳೆದ ವರ್ಷ ನಡೆದ ಎರಡು ಸ್ಫೋಟ ಪ್ರಕರಣಗಳಲ್ಲಿ ಭಾಗಿಗಳಾಗಿದ್ದಾರೆ ಎಂದು ತಿಳಿಸಿದೆ. ತನ್ನ ಕುಕೃತ್ಯಗಳು ಮತ್ತು ಹಿಂಸಾತ್ಮಕ ಕೃತ್ಯಗಳ ಬಗ್ಗೆ ಆಂಗ್ಲ ಭಾಷೆಯಲ್ಲಿ ಸವಿಸ್ತಾರವಾಗಿ ಈ ಸಂಘಟನೆ ಬರೆದುಕೊಂಡಿದೆ.

ಕೇರಳದಲ್ಲಿ ಈ ಸಂಘಟನೆಗೆ ಸಂಬಂಧಿಸಿದ ಭಯೋತ್ಪಾದಕರ ಸಂಖ್ಯೆ ಹೆಚ್ಚಾಗಿದ್ದು, ಕರ್ನಾಟಕ, ತಮಿಳುನಾಡುಗಳಲ್ಲಿ ಇವರು ಕುಕೃತ್ಯ ನಡೆಸಲು ಸಂಚು ಹೂಡಿರುವುದಾಗಿಯೂ ಇದು ತಿಳಿಸಿದೆ. ಕೊಯಮತ್ತೂರು, ತಮಿಳುನಾಡು, ಮಂಗಳೂರಿನಲ್ಲಿ ನಡೆದ ದಾಳಿಯನ್ನು ನೀವು ಪರಿಗಣಿಸುವುದಿಲ್ಲವೇ?, ಈ ದಾಳಿಯನ್ನು ಮುಸ್ಲಿಮೇತರರು ಮತ್ತು ಇಸ್ಲಾಂನಲ್ಲಿ ನಂಬಿಕೆ ಇರಿಸದವರ ವಿರುದ್ಧ ನಡೆಸಲಾಗಿದೆ. ಇಸ್ಲಾಂ ವಿರೋಧಿ ಧರ್ಮಗಳ ಅನುಯಾಯಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲಾಗಿದೆ ಎಂದೂ ಈ ಮುಖವಾಣಿಯಲ್ಲಿ ಬರೆಯಲಾಗಿದೆ.

ಒಟ್ಟಿನಲ್ಲಿ ಈ ದಾಳಿಯ ಹಿಂದಿನ ರೂವಾರಿಗಳು ಉಗ್ರಗಾಮಿಗಳೇ ಎಂಬುದನ್ನು ಉಗ್ರ ಸಂಘಟನೆಯೇ ಒಪ್ಪಿಕೊಂಡಿದೆ. ಕುಕ್ಕರ್ ಬಾಂಬ್ ದಾಳಿ ಮಾಡಿದ ಉಗ್ರನನ್ನು ‘ಉಗ್ರ’ ಎಂದು ಕರೆದಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು ಈಗಲಾದರೂ ಇದೊಂದು ಉಗ್ರ ಪ್ರೇರಿತ ದಾಳಿ, ದಾಳಿ ನಡೆಸಿದವನೂ ಉಗ್ರ ಎಂಬುವುದನ್ನು ಒಪ್ಪಿಕೊಳ್ಳುವರೇ? ಎನ್ನುವುದು ಸದ್ಯದ ಪ್ರಶ್ನೆ. ಉಗ್ರರನ್ನು ಸಹೋದರರೆನ್ನುವವರಿಗೆ ಈ ದಾಳಿಯ ಹಿಂದಿನ ಕೈವಾಡದ ಅರಿವು ಇನ್ನಾದರೂ ಆಗಬಹುದೇ ಎನ್ನುವುದು ಸಾರ್ವಜನಿಕರ ಪ್ರಶ್ನೆ.

Post Card Balaga:
Related Post