X

ಬ್ರೇಕಿಂಗ್! ಬಹುಮತ ನೀಡದ ರಾಜ್ಯದ ಜನರಿಗಿಂತ ಕೈ ಹಿಡಿದ ಕಾಂಗ್ರೆಸ್ ಮುಖ್ಯ..! ಮಗನ ಮಾತಿಗೆ ಅಪ್ಪನ ಶಹಬ್ಬಾಷ್ ಗಿರಿ..!

ಜೆಡಿಎಸ್ ಎಂದರೆ ಸಾಕು ಅಪ್ಪ ಮಗನ ಪಕ್ಷ ಎಂದು ಇಡೀ ರಾಜ್ಯದ ಜನತೆಗೆ ಗೊತ್ತಿರುವ ವಿಚಾರ. ಅಧಿಕಾರವನ್ನು ಕೇವಲ ಅಪ್ಪನಿಂದ ಮಗನಿಗೆ, ಮಗನಿಂದ ಮೊಮ್ಮಗನಿಗೆ ನೀಡಿ ರಾಜ್ಯದ ಅಭಿವೃದ್ಧಿ ಮಾಡುತ್ತೇವೆ ಎಂದು ಹೋದಲ್ಲೆಲ್ಲಾ ಹೇಳಿಕೊಂಡು ತಿರುಗಾಡುವ ಕುಮಾರಸ್ವಾಮಿ ಅವರು ಈಗಾಗಲೇ ಕಾಂಗ್ರೆಸ್ ಸಹಾಯದಿಂದ ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರದ ಅವಕಾಶಕ್ಕಾಗಿಯೇ ಕಾಯುತ್ತಿದ್ದ ಕುಮಾರಸ್ವಾಮಿ ಅವರಿಗೆ ಕೊನೆ ಕ್ಷಣದಲ್ಲಿ ಕೈ ಹಿಡಿದು ಮೇಲೆತ್ತಿದ ಕಾಂಗ್ರೆಸ್ ತಾನೂ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಿಂದ ಮೈತ್ರಿ ಮಾಡಿಕೊಂಡು ಇದೀಗ ಆಡಳಿತ ನಡೆಸುತ್ತಿದೆ. ಆದರೆ ಮುಖ್ಯಮಂತ್ರಿಯಾಗಿ ಜನರ ಕಡೆ ಗಮನಹರಸಿಬೇಕಾಗಿದ್ದ ಸಿಎಂ ಸಾಹೇಬ್ರು ಕೇವಲ ಕಾಂಗ್ರೆಸ್‌ಗಷ್ಟೇ ಮುಖ್ಯಮಂತ್ರಿ ಎಂಬುದಾಗಿ ಹೇಳಿಕೆ ನೀಡಿದ್ದು , ಮಗನ ಮಾತಿಗೆ ಅಪ್ಪ ದೇವೇಗೌಡರು ಕೂಡ ತಲೆ ಅಲ್ಲಾಡಿಸಿದ್ದಾರೆ..!

ಎಚ್‌ಡಿಕೆ ಸನ್ನಿವೇಶದ ಶಿಶು..!

ಕಾಲಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಗುಣ ಹೊಂದಿರುವುದು ಊಸರವಳ್ಳಿ ಮಾತ್ರ ಎಂಬುದು ಎಲ್ಲರೂ ತಿಳಿದಿರುವ ವಿಚಾರ. ಆದರೆ ಇದೀಗ ಕುಮಾರಸ್ವಾಮಿ ಅವರೂ ಕೂಡ ಅದೇ ಜಾತಿಗೆ ಸೇರಿರುವುದು ಸ್ಪಷ್ಟ. ಯಾಕೆಂದರೆ ಚುನಾವಣೆಗೂ ಮೊದಲು ಕಿತ್ತಾಡಿಕೊಂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್‌ ಇದೀಗ ಮೈತ್ರಿ ಮಾಡಿಕೊಂಡು ದೋಸ್ತಿಗಳಂತೆ ವರ್ತಿಸುತ್ತಿದ್ದಾರೆ. ಜೆಡಿಎಸ್‌ ನ್ನು ಚುನಾವಣೆಯಲ್ಲಿ ರಾಜ್ಯದ ಜನರು ಮೂಲೆಗುಂಪು ಮಾಡಿದ್ದಾರೆ, ಆದರೂ ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಜೊತೆ ಕೈಜೋಡಿಸಿಕೊಂಡ ಕುಮಾರಸ್ವಾಮಿ ಅವರು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ ಎಂಬುವುದನ್ನು ನೆನಪಿಟ್ಟುಕೊಂಡರೆ ಉತ್ತಮ.

ಯಾಕೆಂದರೆ ನಿನ್ನೆಯಷ್ಟೇ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ನಾನು ಕಾಂಗ್ರೆಸ್ ಮುಲಾಜಿನಲ್ಲಿದ್ದೇನೇಯೆ ಹೊರತು ರಾಜ್ಯದ ಆರು ಕೋಟಿ ಕನ್ನಡಿಗರ ಮುಲಾಜಿನಲ್ಲಿಲ್ಲ ಎಂದಿದ್ದರು. ಕೇವಲ ಮೈತ್ರಿ ಮಾಡಿಕೊಂಡಿರುವ ಒಂದೇ ವಿಚಾರಕ್ಕಾಗಿ ರಾಜ್ಯದ ಜನರ ಅವಶ್ಯಕತೆಯೇ ಇಲ್ಲ ಎಂದು ಹೇಳಿಕೊಂಡ ಕುಮಾರಸ್ವಾಮಿ ಅಂತವರನ್ನು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿ ಪಡೆದಿರುವುದು ನಮ್ಮ ದೌರ್ಭಾಗ್ಯ..!

ಇಂದು ಕುಮಾರಸ್ವಾಮಿ ಅವರ ಹೇಳಿಕೆಗೆ ಬೆಂಬಲ ಸೂಚಿಸಿದ ಜೆಡಿಎಸ್‌ ವರಿಷ್ಠ ದೇವೇಗೌಡರು , ಎಚ್‌ಡಿಕೆ ಸನ್ನಿವೇಶದ ಶಿಶು ಆತ ಕಾಂಗ್ರೆಸ್ ನ ಮುಲಾಜಿನಲ್ಲಿರುವುದು ನಿಜ, ನಮ್ಮ ಜೊತೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ನ ಒಪ್ಪಿಗೆ ಇಲ್ಲದೆ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಆದ್ದರಿಂದ ಕುಮಾರಸ್ವಾಮಿ ಅವರು ಹೇಳಿರುವುದು ನಿಜ ಎಂದು ದೇವೇಗೌಡರು ಕೂಡ ಹೇಳಿಕೊಂಡಿದ್ದಾರೆ.!

ಬೆಂಬಲ ನೀಡದ ಜನರಿಗಿಂತ ಕಾಂಗ್ರೆಸ್ಸೇ ಮುಖ್ಯ..!

ಚುನಾವಣೆಗೂ ಮೊದಲು , ಅಧಿಕಾರಕ್ಕೆ ಬಂದರೆ ಇಪ್ಪತ್ತ ನಾಲ್ಕು ಗಂಟೆಗಳ ಒಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿಕೊಂಡಿದ್ದ ಕುಮಾರಸ್ವಾಮಿ ಅವರು ಇದೀಗ ಮುಖ್ಯಮಂತ್ರಿಯಾಗಿ ನಾಲ್ಕು ದಿನ ಕಳೆದರೂ ಕೂಡ ಸಾಲ ಮನ್ನಾದ ಬಗ್ಗೆ ಯಾವುದೇ ಚಕಾರ ಎತ್ತುತ್ತಿಲ್ಲ. ಬಿಜೆಪಿಯವರು ಇದರ ಬಗ್ಗೆ ಪ್ರಶ್ನಿಸಿದರೆ ಜೆಡಿಎಸ್‌ ನಿಂದ ಬರುವ ಉತ್ತರ ಮಾತ್ರ ಉಡಾಫೆಯಿಂದ ಕೂಡಿದೆ. ರಾಜ್ಯದ ಆರೂವರೆ ಕೋಟಿ ಜನ ನಮಗೆ ಬೆಂಬಲ ನೀಡಲಿಲ್ಲ, ಕೇವಲ ೩೮ ಶಾಸಕರನ್ನು ಹಿಡಿದುಕೊಂಡು ನಾವೇನು ಮಾಡುವುದು? ಎಂದು ದೇವೇಗೌಡರು ಕೂಡಾ ಪ್ರತಿಕ್ರಿಯಿಸಿದ್ದಾರೆ. ನಮಗೆ ಬೆಂಬಲ ನೀಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿರುವ ಕಾಂಗ್ರೆಸ್ ಗೆ ನಾವು ತಲೆಬಾಗುತ್ತೇವೆ ಎಂದು ಹೇಳುವ ಮೂಲಕ ದೇವೇಗೌಡರು ಕೂಡ ರಾಜ್ಯದ ಜನರಿಗೆ ಅವಮಾನ ಮಾಡಿದ್ದಾರೆ..!

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರೆ ರೈತರ ಪಾಲಿಗೆ ಸಂತಸವಾಗಬಹುದು ಎಂಬ ಆಸೆಯೊಂದಿತ್ತು. ಆದರೆ ಕುಮಾರಸ್ವಾಮಿ ಅವರೂ ಕೂಡ ಕಾಂಗ್ರೆಸ್ ಜೊತೆ ಸೇರಿಕೊಂಡು ಅವರು ತೋರಿಸಿದ ದಾರಿಯಲ್ಲೇ ನಡೆಯುತ್ತಿರುವುದು ಮಾತ್ರ ಖೇದಕರ ಸಂಗತಿ..!

–ಅರ್ಜುನ್

Editor Postcard Kannada:
Related Post