X

ಪಾಕ್ ಕ್ರಿಕೆಟಿಗನಿಂದ ಭಾರತೀಯ ಯೋಧರಿಗೆ ಭಾರೀ ಅವಮಾನ!! ಮತ್ತೊಮ್ಮೆ ಬಯಲಾಯಿತು ಪಾಕಿಸ್ತಾನದ ಅಸಲೀ ಮುಖ!!

ಭಾರತ-ಪಾಕಿಸ್ತಾನ ಎಂದೂ ಮಿತ್ರರಾಗಲು ಸಾಧ್ಯವೇ ಇಲ್ಲ ಎಂಬುವುದನ್ನು ಪದೇ ಪದೇ ಸಾಬೀತಾಗುತ್ತಿದ್ದರು ಕೂಡ ಕೆಲ ಬುದ್ದಿಜೀವಿಗಳಿಗೆ ಪಾಕಿಸ್ತಾನ ಸ್ವರ್ಗದಂತೆ ಭಾಸವಾಗುತ್ತಿರುವುದೇ ಒಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿ ಕಾಡಿದೆ!! ಪ್ರತಿಯೊಂದು ವಿಚಾರದಲ್ಲೂ ಪಾಕಿಸ್ತಾನ ಭಾರತದ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದು, ಇದೀಗ ಕ್ರಿಕೆಟ್ ಮೈದಾನದಲ್ಲಿ ಮಿಂಚುತ್ತಿರುವ ಪಾಕಿಸ್ತಾನದ ಯುವ ಕ್ರಿಕೆಟರ್ ವಾಘಾಗಡಿಯಲ್ಲಿ ಭಾರತೀಯ ಸೈನಿಕರನ್ನು ಹಂಗಿಸಲು ಹೋಗಿ ಹೊಸ ವಿವಾದವನ್ನು ಎಳೆದುಕೊಂಡಿದ್ದಾರೆ.

ಹೌದು…. ಭಾರತ ಹಾಗೂ ಪಾಕಿಸ್ತಾನದ ನಡುವಿನ ವಾಘಾ ಗಡಿಯಲ್ಲಿ ಯೋಧರು ಸಾಂಪ್ರದಾಯಿಕವಾಗಿ ನಡೆಸುವ ಧ್ವಜ ವಂದನೆ ಕಾರ್ಯಕ್ರಮದ ವೇಳೆ ಪಾಕ್ ಕ್ರಿಕೆಟ್ ತಂಡದ ಆಟಗಾರ ಹಸನ್ ಅಲಿ ಅಗೌರವದಿಂದ ನಡೆದುಕೊಂಡಿದ್ದಾನೆ. ಅಷ್ಟೇ ಅಲ್ಲದೇ ಪಾಕ್ ಕ್ರಿಕೆಟ್ ತಂಡದ ಆಟಗಾರರು ವಾಘಾ ಗಡಿ ಪ್ರದೇಶದಲ್ಲಿ ನಡೆಯವ ಧ್ವಜ ವಂದನೆ ಕಾರ್ಯಕ್ರಮ ನೋಡಲು ಹಾಜರಾಗಿದ್ದ ವೇಳೆ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಭಾರತ ಹಾಗೂ ಪಾಕ್ ನ ಪ್ರತಿಷ್ಠೆಯ ಸ್ಥಳವಾಗಿರುವ ವಾಘಾ ಗಡಿಯಲ್ಲಿ ನಡೆಯುವ ಉಭಯ ದೇಶಗಳ ಸೈನಿಕರ ಧ್ವಜ ಗೌರವ ಕಾರ್ಯಕ್ರಮಕ್ಕೆ ಪಾಕ್ ಕ್ರಿಕೆಟ್ ತಂಡ ಪಾಲ್ಗೊಂಡಿತ್ತು. ಈ ವೇಳೆ ಹಸನ್ ಅಲಿ ವೀಕ್ಷಕರ ಗ್ಯಾಲರಿಯಿಂದ ಒಮ್ಮೆಲೆ ಸೈನಿಕರು ನಡೆಸುವ ಪೆರೇಡ್ ಸ್ಥಳಕ್ಕೆ ಓಡಿ ಬಂದಿದ್ದು, ಆ ಬಳಿಕ ಭಾರತೀಯ ಸೈನಿಕರನ್ನು ಉದ್ಧೇಶಿಸಿ ವಾಘಾ ಗಡಿಯಲ್ಲಿ ನಡೆಯುವ ಸೈನಿಕರ ನಡೆಯನ್ನು ನಕಲು ಮಾಡಿದ್ದಾರೆ. ಈ ಕುರಿತಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿದ್ದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ಸದಾ ಒಂದಲ್ಲ ಒಂದು ರೀತಿಯಾಗಿ ಭಾರತೀಯರನ್ನು ಕಾಡುತ್ತಿರುವ ಪಾಕಿಸ್ತಾನವು ಇದೀಗ ವಾಘಾ ಗಡಿಯಲ್ಲಿ ಧ್ವಜ ಅವರೋಹಣ ಸಮಾರಂಭದ ವೇಳೆ ಭಾರತೀಯ ಯೋಧರನ್ನು ಹಾಸ್ಯ ಮಾಡಿ ಪಾಕ್ ಪೇಸ್ ಬೌಲರ್ ಹಸನ್ ಅಲಿ ವಿವಾದಕ್ಕೀಡಾಗಿದ್ದಾರೆ. ಸಮಾರಂಭ ನೋಡಲು ಬಂದಿದ್ದ ಹಸನ್ ಕುಳಿತಲ್ಲಿಂದ ಎದ್ದು ಬಂದು ಯೋಧರನ್ನು ಅನುಕರಿಸಿ ತಮಾಷೆ ಮಾಡಿದ್ದಾರೆ. ಅನಂತರ ಸೊಂಟಕ್ಕೆ ಕೈಯಿಟ್ಟು ಮಂಗನಾಟ ಮಾಡಿ, ಮುಷ್ಠಿ ಬಿಗಿದು, ತೊಡೆ ತಟ್ಟಿ ದರ್ಪ ತೋರಿಸುತ್ತಿರುವುದು ವಿಡಿಯೊದಲ್ಲಿದೆ. ಹಸನ್ ಅಲಿ ಈ ಚೇಷ್ಟೆ ವಿಡಿಯೊ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು, ಹಸನ್ ಅಲಿ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.

ಹಸನ್ ಅಲಿ ಈ ರೀತಿ ಮಾಡಿದ್ದು ಸರಿಯಲ್ಲ, ಸೈನಿಕರನ್ನು ಆತ ಅವಮಾನಿಸುತ್ತಿದ್ದರೂ ಆತನನ್ನು ಯಾರೂ ತಡೆದಿಲ್ಲ. 40 ಸೆಕೆಂಡ್‍ಗಳ ಕಾಲ ಪಾಕಿಸ್ತಾನ್ ಜಿಂದಾಬಾದ್, ಜೀಯೇ ಜೀಯೇ ಪಾಕಿಸ್ತಾನ್ ಎಂಬ ಘೋಷಣೆಯನ್ನು ಕೂಗಿಕೊಂಡು ಈತ ಚೇಷ್ಟೆ ಮಾಡಿದ್ದಾನೆ ಎಂದು ನೆಟಿಜನ್‍ಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಕುರಿತಂತೆ ಬಿಎಸ್‍ಎಫ್ ಇನ್ಸ್ ಪೆಕ್ಟರ್ ಜನರಲ್ ಮುಕುಲ್ ಗೋಯಲ್ ಮಾತಾನಾಡಿ, ಯೋಧರು ಮಾತ್ರ ಭಾಗವಹಿಸುವ ಈ ಸಮಾರಂಭದಲ್ಲಿ ಈತ ಮಾಡಿದ ಚೇಷ್ಟೆ ಆ ಸಮಾರಂಭದ ಮಹತ್ವಕ್ಕೆ ಧಕ್ಕೆ ತಂದಿದೆ. ಇದರ ವಿರುದ್ಧ ಪಾಕಿಸ್ತಾನಕ್ಕೆ ನಮ್ಮ ಪ್ರತಿಭಟನೆಯನ್ನು ಸೂಚಿಸಿರುವುದಾಗಿ ಹೇಳಿದ್ದಾರೆ.

ಎಂದಿನಂತೆ ಉಭಯ ರಾಷ್ಟ್ರಗಳ ಯೋಧರು ಶಿಸ್ತಿನ ಕವಾಯತ್ತು ಪ್ರದರ್ಶಿಸಿ, ಧ್ವಜ ಇಳಿಸುವ ವೇಳೆ ಏಕಾಏಕಿ ಪಾಕ್ ಯೋಧರ ಮಧ್ಯೆ ಬಂದ ಅಲಿ ತೊಡೆ ತಟ್ಟಿದ್ದಾನೆ. ವಿಕೆಟ್ ಪಡೆದಾಗ ಮೈದಾನದಲ್ಲಿ ಸಂಭ್ರಮಿಸುವ ರೀತಿ ಕೈಗಳನ್ನು ಮೇಲೆತ್ತಿ ಭಾರತದತ್ತ ತೋರಿಸಿದ್ದಾರೆ. ಭಾರತೀಯ ಯೋಧರಿರುವ ಕಡೆ ಮುಖ ಮಾಡಿ ತೊಡೆ ತಟ್ಟಿಕೊಂಡಿರುವ ಅಲಿ ವರ್ತನೆ ಭಾರತೀಯ ಯೋಧರನ್ನು ಕೆರಳಿಸುವಂತಿದೆ.

ಘಟನೆ ನಡೆದ ಬಳಿಕ ಟ್ವಿಟ್ಟರ್‍ನಲ್ಲಿ ಬರೆದುಕೊಂಡಿರುವ ಅಲಿ ‘ಪಾಕ್ ಎಂದಿಗೂ ಚಂದ್ರನಷ್ಟು ಎತ್ತರಕ್ಕೆ ಇರುತ್ತೆ, ಧನ್ಯವಾದ ಪಾಕಿಸ್ತಾನ’ ಎಂದು ಬರೆದುಕೊಂಡಿದ್ದಾರೆ. ಶಿಷ್ಠಾಚಾರದ ಪ್ರಕಾರ ಉಭಯ ದೇಶಗಳ ಯೋಧರು ಧ್ವಜ ಇಳಿಸುವಾಗ ಯಾರೂ ಮಧ್ಯೆ ಪ್ರವೇಶಿಸುವಂತಿಲ್ಲ. ನಿಯಮ ಮೀರಿರುವ ಪಾಕ್ ಕ್ರಿಕೆಟಿಗ ಹಸನ್ ಅಲಿ ವಿರುದ್ಧ ಪಾಕ್‍ಗೆ ದೂರಲಾಗುವುದು ಎಂದು ಬಿಎಸ್‍ಎಫ್ ತಿಳಿಸಿದೆ.

ಪಾಕ್ ಕ್ರಿಕೆಟ್ ಆಟಗಾರರು ಭಾರತೀಯರ ಅಭಿಮಾನವನ್ನು ಕೆಣಕುಕುವುದು ಇದೇ ಮೊದಲೆನಲ್ಲ. ಕಳೆದ ಕೆಲ ದಿನಗಳ ಹಿಂದೆ ಪಾಕ್ ಮಾಜಿ ಆಟಗಾರ ಶಹೀದ್ ಅಫ್ರಿದಿ ಸಹ ಜಮ್ಮು ಕಾಶ್ಮೀರ ವಿಷಯನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿ ಟೀಕೆಗೆ ಗುರಿಯಾಗಿದ್ದರು. ಆದರೆ ಇದೀಗ ವಾಘಾ ಬಾರ್ಡರ್‍ನಲ್ಲಿ ಪಾಕಿಸ್ತಾನ-ಭಾರತ ಧ್ವಜ ಇಳಿಸುವ ಕಾರ್ಯಕ್ರಮದ ವೇಳೆ ಪಾಕ್ ಕ್ರಿಕೆಟಿಗ ಹಸನ್ ಅಲಿ ಶಿಷ್ಟಾಚಾರ ಉಲ್ಲಂಘಿಸಿ, ಆಕ್ಷೇಪಾರ್ಹ ವರ್ತನೆ ತೋರಿದ್ದಲ್ಲದೇ, ಹಸನ್ ಅಲಿ ಮಾಡಿದ್ದು ಸರಿಯಲ್ಲ, ಸೈನಿಕರನ್ನು ಆತ ಅವಮಾನಿಸುತ್ತಿದ್ದರೂ ಆತನನ್ನು ಯಾರೂ ತಡೆದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಅಂತೂ ಉಗ್ರರ ತಾಣವಾಗಿರುವ ಪಾಕಿಸ್ತಾನ ಪ್ರತೀ ವಿಚಾರದಲ್ಲೂ ಭಾರತೀಯರನ್ನು ಕೆರಳಿಸುವಂತೆ ಮಾಡುತ್ತಿದ್ದು, ಭಾರತದ ಗಡಿ ದಾಟಲು ನಾನಾ ಕುತಂತ್ರಗಳನ್ನು ಮಾಡುತ್ತಿರುವ ಪಾಕಿಸ್ತಾನ ವಿಶ್ವದಲ್ಲೇ ಭಯೋತ್ಪಾದನಾ ರಾಷ್ಟ್ರವಾಗಿ ಮಿಂಚುತ್ತಿರುವುದೇ ಇದಕ್ಕೆ ದಿಟ್ಟ ನಿದರ್ಶನವಾಗಿದೆ!!

ಮೂಲ: http://publictv.in/watch-did-pakistan-cricketer-hassan-ali-disrespect-flag-lowering-ceremony-at-wagah-border/

– ಅಲೋಖಾ

 

Editor Postcard Kannada:
Related Post