X

ಡಿಜಿಟಲ್ ಫ್ಲಾಟ್‌ಫಾರ್ಮ್ ವೇದಿಕೆ ಬಳಕೆಯ ಹಾದಿಯಲ್ಲಿ ಬೆಳವಣಿಗೆ ಕಾಣುತ್ತಿದೆ ಭಾರತ

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕಳೆದ ಒಂಬತ್ತು ವರ್ಷಗಳಿಂದ ದೇಶದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಕ್ಕಂತಾಗಿದೆ.

ಹೇಳಿ ಕೇಳಿ ಈಗ ಡಿಜಿಟಲ್ ಯುಗ. ಭಾರತದಲ್ಲಿಯೂ ಈ ಹಿಂದೆ ಕಂಡು ಕೇಳರಿಯದ ರೀತಿಯಲ್ಲಿ ಡಿಜಿಟಲ್ ವ್ಯವಹಾರ ಬೆಳೆದಿದೆ. ದೊಡ್ಡ ದೊಡ್ಡ ವಹಿವಾಟುಗಳಿಂದ ಹಿಡಿದು, ಬೀದಿ ಬದಿಯಲ್ಲಿ ಪಾನಿಪುರಿ ಮಾರುವವರ ವರೆಗೆ, ಶ್ರೀಮಂತರಿಂದ ಹಿಡಿದು ದೇಶದ ಕಡು ಬಡವರು ಸಹ ಡಿಜಿಟಲ್ ಯುಗಕ್ಕೆ ತೆರೆದುಕೊಂಡಿದ್ದಾರೆ ಎನ್ನುವುದು ಸಂತಸದ ವಿಷಯ. ಅಂದ ಹಾಗೆ ಇವೆಲ್ಲವೂ ಸಾಧ್ಯವಾಗಿದ್ದು ಕಳೆದ ಕೇವಲ ಒಂಬತ್ತು ವರ್ಷಗಳಲ್ಲಿ. ಅಂದರೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಎನ್ನುವುದು ಮಹತ್ವದ ಸಂಗತಿ.

ಡಿಜಿಟಲ್ ವೇದಿಕೆಗಳಿಗೆ ಸಂಬಂಧಿಸಿದ ಹಾಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಮಾತನಾಡಿದ್ದು, ಪ್ರಸ್ತುತ ಭಾರತ ದೇಶವು ಡಿಜಿಟಲ್ ವೇದಿಕೆಗಳ ಬಳಕೆಯ ಹಾದಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಸುಮಾರು ಎಂಟುನೂರ ಐವತ್ತು ಮಿಲಿಯನ್ ಭಾರತೀಯರು ಅಂತರ್ಜಾಲ ಬಳಕೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಅವರು ದೆಹಲಿಯಲ್ಲಿ ಭಾರತ ಇಂಟರ್ನೆಟ್ ಆಡಳಿತ ವೇದಿಕೆ 2023ರ ಉದ್ಘಾಟನಾ ಸಮಾವೇಶದಲ್ಲಿ ಮಾತನಾಡಿ, ಮುಂದಿನ ಮೂರು ವರ್ಷಗಳಲ್ಲಿ ದೇಶದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ 1.2 ಬಿಲಿಯನ್ ತಲುಪುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಶೈಕ್ಷಣಿಕ ವಿಚಾರ, ಕೌಶಲಗಳು ಮೊದಲಾದವುಗಳನ್ನು ಒಳಗೊಂಡಂತೆ ಎಲ್ಲಾ ವಲಯಗಳಲ್ಲಿಯೂ, ದೈನಂದಿನ ಚಟುವಟಿಕೆಗಳಲ್ಲಿಯೂ ಇಂಟರ್ನೆಟ್ ಸಂಪರ್ಕ ವ್ಯವಸ್ಥೆಯನ್ನು ಜನರು ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಇಂಟರ್ನೆಟ್ ವೇದಿಕೆಗಳನ್ನು ಬಳಕೆ ಮಾಡುವ ಗ್ರಾಹಕರ ಸುರಕ್ಷತೆ, ವಿಶ್ವಾಸ ಬಹಳಷ್ಟು ಮುಖ್ಯ. ಆನ್‌ಲೈನ್ ಸೇವೆಗಳು ಮತ್ತು ಉತ್ಪನ್ನಗಳನ್ನು ತಲುಪಿಸುವ ವೇದಿಕೆಗಳು ಕಾನೂನುಬದ್ಧ ವ್ಯವಹಾರಗಳನ್ನು ನಡೆಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಭಾರತದಲ್ಲಿ ಡಿಜಿಟಲ್ ಫ್ಲಾಟ್‌ಫಾರ್ಮ್ ಗಳ ಬಳಕೆ ಹೆಚ್ಚಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿಯೂ ಅಂತರ್ಜಾಲ, ಡಿಜಿಟಲ್ ವೇದಿಕೆಗಳೇ ಪ್ರಾಮುಖ್ಯತೆ ಪಡೆಯುತ್ತಿವೆ. ಯಾವುದನ್ನು ಹೇಗೆ ಬಳಸಬೇಕು, ಎಷ್ಟು ಬಳಕೆ ಮಾಡಬೇಕು ಎನ್ನುವುದು ತಿಳಿದಲ್ಲಿ ಇವುಗಳ ಮೇಲೆ ನಮ್ಮ ಹಿಡಿತ ಸಾಧಿಸಿ,‌ ನಮ್ಮ ಸುರಕ್ಷತೆ‌ ಕಾಪಾಡಬಹುದು.

Post Card Balaga:
Related Post