X

ಸೌದಿ ಅರಬ್ಬಿನಲ್ಲಿ ಪ್ರವಾದಿ ಮಹಮ್ಮದರಿಗೆ ಸಂಬಂಧಪಟ್ಟ ಸ್ಮಾರಕಗಳ ಮೇಲೆ ಸರಕಾರ ಬುಲ್ಡೋಜ಼ರ್ ಚಲಾಯಿಸಿದರೂ ಜಗತ್ತಿನಾದ್ಯಂತ ಇರುವ ಮುಸ್ಲಿಮರು ಕಮಕ್ ಕಿಮಕ್ ಎನ್ನುವುದಿಲ್ಲ ಏಕೆ?

ಹಿಂದೂ ಮಂದಿರಗಳನ್ನು ಒಡೆದು, ಅದರ ಮೇಲೆ ಮಸೀದಿ-ಚರ್ಚುಗಳನ್ನು ಕಟ್ಟಿ ಅದು ತಮ್ಮ ಅಜ್ಜನ ಆಸ್ತಿ ಎಂದು ಹಕ್ಕು ಸಾಧಿಸುತ್ತಾ ಹಿಂದೂಗಳನ್ನು ಕೋಮುವಾದಿಗಳೆಂದು ಜರೆಯುತ್ತಾ, ಅವರನ್ನು ಎರಡನೆ ದರ್ಜೆ ನಾಗರಿಕರಂತೆ ಕಾಣಬಹುದಾದ ಒಂದೇ ಒಂದು ದೇಶವೆಂದರೆ ಅದು ಭಾರತ! ಇಲ್ಲಿ ರಾಮನ ಜನ್ಮ ಭೂಮಿಯಲ್ಲಿ  ಮಂದಿರವನ್ನು ಕೆಡವಿ ಬಾಬರ್ ತನ್ನ ಲೈಂಗಿಕ ಗುಲಾಮ “ಬಾಬ್ರಿ”ಯ ಸವಿ ನೆನಪಿಗೆ ಕಟ್ಟಿಸಿದ ಸ್ಮಾರಕವನ್ನು ಹಿಂದೂಗಳು ಕೆಡವಿದಾಗ ಪ್ರಪಂಚದಾದ್ಯಂತದ ಮುಸ್ಲಿಮರು ಎದೆ ಬಡಿದುಕೊಂಡು ಅತ್ತರು. ಆದರೆ ಅವರದೆ ನಾಡಾದ ಪ್ರವಾದಿಯ ಹುಟ್ಟೂರಾದ ಸೌದಿ ಅರೇಬಿಯಾದಲ್ಲಿ ಅಭಿವೃದ್ದಿಯ  ನೆಪವೊಡ್ಡಿ ಪೈಗಂಬರ್ ಮೊಹಮ್ಮದರಿಗೆ ಸಂಬಂಧ ಪಟ್ಟ ಸ್ಮಾರಕಗಳನ್ನು ಕೆಡವಿದಾಗ ಜಗತ್ತಿನ ಯಾವೊಬ್ಬ ಮುಸ್ಲಿಮನೂ ತುಟಿ ಬಿಚ್ಚಲಿಲ್ಲ.

ನಿಮಗೆ ಗೊತ್ತಿದೆಯೋ ಇಲ್ಲವೋ ಆದರೆ ಸೌದಿಯ ಸುಲ್ತಾನ ಸಲ್ಮಾನ್ ಬಿನ್ ಅಬ್ದುಲ್  ಅಜೀಜ್ ಅವರು ಸೌದಿಯಾದ್ಯಂತ ಐತಿಹಾಸಿಕ ಸ್ಮಾರಕಗಳ ಮೇಲೆ ಬುಲ್ಡೋಜ಼ರ್ ಚಲಾಯಿಸಿ ಕೆಡವಿದ್ದಾರೆ. ಇದರಲ್ಲಿ ಪ್ರವಾದಿ ಮಹಮ್ಮದರ ಜೀವನಕ್ಕೆ ಸಂಬಂಧ ಪಟ್ಟ ಹಲವಾರು ಕಟ್ಟಡಗಳಿದ್ದವು ಎನ್ನುವುದು ವಿಚಿತ್ರ. ಪ್ರವಾದಿ ಮಹಮ್ಮದರ ಬಾಲ್ಯದ ಮನೆ, ಆರಂಭದಲ್ಲಿ ಒಡನಾಡಿಯಾಗಿದ್ದ ಅವರ ಅನುಯಾಯಿಗಳ ಸಮಾಧಿ, ಮಹಮ್ಮದರ ಮೊದಲನೆ ಹಂಡತಿ ಬೇಗಮ್ ಖದೀಜಾರವರ ಮನೆ, ಮೊಹಮ್ಮದರ ಮೊಮ್ಮಗ ಹುಸೈನ್ ಇಬ್ನ್ ಅಲಿಯ ಸಮಾಧಿ ಮಾತ್ರವಲ್ಲ ಇನ್ನೂ ಹತ್ತು ಹಲವು ಕಟ್ಟಡಗಳನ್ನು ಕೆಡವಲಾಗಿದೆ.

ಸಮಾಧಿಗಳನ್ನು ಕೆಡವಿ ಅಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲು ಸ್ಥಳಾವಕಾಶ ನೀಡಲಾಗಿದ್ದರೆ, ಖದೀಜರವರ ಮನೆಯನ್ನು ಒಡೆದು ಅಲ್ಲಿ ಸಾರ್ವಜನಿಕ ಗ್ರಂಥಾಲಯ ಮಾಡಲಾಗಿದೆ. ಇಸ್ಲಾಮಿನ ಮೊದಲ ಖಲೀಫಾ, ಅಬೂಬಕರ್(ಆಯೇಶಾ ಬೇಗಮ್ ತಂದೆ) ಅವರ ಮನೆಯನ್ನು ಒಡೆದು ಆ ಜಾಗದಲ್ಲಿ ಹಿಲ್ಟನ್ ಹೋಟೆಲ್ ಕಟ್ಟಲಾಗಿದೆ! ಯಾವ ಬೆಟ್ಟದ ತುದಿಯಲ್ಲಿ ನಿಂತು ಮಹಮ್ಮದರು ತಾವು “ಪ್ರವಾದಿ”ಯೆಂದು ಘೋಷಿಸಿಕೊಂಡಿದ್ದರೋ ಆ ಜಾಗದಲ್ಲಿಂದು ಸೌದಿ ಶಾಹರ ಭವ್ಯ ಅರಮನೆ ತಲೆ ಎತ್ತಿ ನಿಂತಿದೆ. ನಾಲ್ಕು ವರ್ಷಗಳಲ್ಲಿ ಮಹಮ್ಮದ್ ಪೈಂಗಂಬರ್ ಅವರಿಗೆ ಸಂಬಂಧ ಪಟ್ಟ 98%  ಐತಿಹಾಸಿಕ ಸ್ಮಾರಕಗಳನ್ನು ಕೆಡವಲಾಗಿದೆ ಎನ್ನುವುದು ಅಲ್ಲಿರುವವರೇ ಹೇಳಿಕೊಂಡ ಸತ್ಯ.

Islamic Heritage Research Foundation in London ಅವರು ನಡೆಸಿದ ಸಮೀಕ್ಷೆಯ ಪ್ರಕಾರ ಸೌದಿ ರಾಜಮನೆತನವು 1985 ರಿಂದ ಈ ವರೆಗೆ ಇಸ್ಲಾಮಿನ ಪ್ರವಾದಿಗೆ ಸಂಬಂಧ ಪಟ್ಟ  98% ಐತಿಹಾಸಿಕ ಸ್ಮಾರಕಗಳನ್ನು ಕೆಡವಿ ಹಾಕಿದೆ. Institute for Gulf Affairs in Washington, D.C. ಯಲ್ಲಿರುವ ಅಲಿ ಅಹಮದ್ ಅವರ ಪ್ರಕಾರ ಸೌದಿ ರಾಜಮನೆತನವು ಮಹಮ್ಮದರಿಗೆ ಸಂಬಂಧ ಪಟ್ಟ ಸ್ಮಾರಕಗಳನ್ನು ಕೆಡವುದನ್ನು ನೋಡಿದರೆ ರಾಜಮನೆತನ ಪ್ರವಾದಿಗೆ ಸಂಬಂಧ ಪಟ್ಟ ಎಲ್ಲಾ ಕುರುಹುಗಳನ್ನು ಸ್ಮೃತಿಯಿಂದ ಅಳಿಸಲು ಪಣ ತೊಟ್ಟಂತೆ ಕಾಣುತ್ತಿದೆ. ಸೌದಿಯ ಕವಿಯಿತ್ರಿ ಮತ್ತು ಸಾಮಾಜಿಕ ಕಾರ್ಯಕರ್ತೆ ನಿಮಾಹ್ ಇಸ್ಮಾಯಿಲ್ ಅವರು ಹೇಳುತ್ತಾರೇನೆಂದರೆ ಮೊದಲು ಇಂತಹ ಐತಿಹಾಸಿಕ ಸ್ಮಾರಕಗಳನ್ನು ಗುರುತಿಸಲಾಗುತ್ತದೆ, ತದನಂತರ ಅವುಗಳ ಮೇಲೆ ನೀಲಿ ಗುರುತು ಹಾಕಲಾಗುತ್ತದೆ ಮತ್ತು ರಾತ್ರಿ ಬೆಳಗಾಗುವುದರೊಳಗೆ ಇಂತಹ ಕಟ್ಟಡಗಳು ಧರಾಶಾಯಿಯಾಗಿರುತ್ತವೆ!

“ಟೈಮ್” ಗೆ ಕೊಟ್ಟ ತನ್ನ ಸಂದರ್ಶನದಲ್ಲಿ ಆಕೆ, ರಾತ್ರಿ ಮಲಗುವಾಗ ಇದ್ದ ಸ್ಮಾರಕಗಳು ಬೆಳಗಾಗುವುದರೊಳಗೆ ಮಂಗಮಾಯವಾಗುತ್ತವೆ ಎಂದು ಹೇಳಿಕೊಂಡಿದ್ದಾರೆ. ಸೌದಿ ರಾಜವಂಶವು ಮಕ್ಕಾದಲ್ಲಿರುವ ಮಹಮ್ಮದರ ಮನೆಯ ಮೇಲೂ ಬುಲ್ಡೋಜ಼ರ್ ಚಲಾಯಿಸುವ ಇರಾದೆ ಇಟ್ಟುಕೊಂಡಿದೆಯೆಂದು ಗುಸು ಗುಸು ಕೇಳಿಬರುತ್ತದೆ. ಸೌದಿ ಅರಬ್ಬಿನ Royal Presidency ಎಂಬ ಜರ್ನಲ್ ನಲ್ಲಿ 61 ಪುಟಗಳ ರಿಪೋರ್ಟ್ ತಯಾರಿಸಲಾಗಿದೆ. ಅದರಲ್ಲಿ ಮದೀನಾಕ್ಕೆ ಬರುವ ಯಾತ್ರಿಗಳ ಅನುಕೂಲಕ್ಕಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಮದೀನಾದಲ್ಲಿರುವ ಮಹಮ್ಮದರ ಸಮಾಧಿ ಮತ್ತು ಅವರು ಜನ್ಮ ತಳೆದ ಮನೆಯನ್ನೂ ನೆಲಸಮ ಮಾಡುವ ಪ್ರಸ್ತಾಪ ಇದೆಯಂತೆ!! ಇಷ್ಟೆಲ್ಲ ಬೆಳವಣಿಗೆ ನಡೆದರೂ ಮುಸ್ಲಿಮರು ಏಕೆ ಸೊಲ್ಲೆತ್ತುತ್ತಿಲ್ಲ?

ಸೌದಿಯ ರಾಜಪರಿವಾರದ ವಿರುದ್ದ ಸೊಲ್ಲೆತ್ತುವ ತಾಕತ್ತು ಪ್ರಪಂಚದ ಯಾವ ಮುಸಲ್ಮಾನನಿಗೂ ಇಲ್ಲ. ರಾಜ ಪರಿವಾರದ ನಿರ್ಧಾರವೇ ಅಂತಿಮ. ಅಲ್ಲಿ ಸರಕಾರದ ವಿರುದ್ದ ಮಾತನಾಡಿದರೆ ತಲೆ ತೆಗೆಯಲಾಗುತ್ತದೆ. ಅಂತಹವರಿಗೆ ಸಾಕ್ಷಾತ್ “ನರಕ ದರ್ಶನ” ಭಾಗ್ಯ ಲಭಿಸುತ್ತದೆ.  ಸೌದಿ ನಿವಾಸಿಗಳು ಬಿಡಿ, ಪ್ರಪಂಚದಲ್ಲಿರುವ ಇಸ್ಲಾಂ ದೇಶಗಳ ಯಾವ ಮುಸಲ್ಮಾನನೂ ತುಟಿ ಪಿಟಕ್ ಎನ್ನುವುದಿಲ್ಲ. ಹಾಗೇನಾದರೂ ರಾಜಪರಿವಾರವನ್ನು ಅವನು ಎದುರು ಹಾಕಿಕೊಂಡರೆಂದರೆ ಆತ ತನ್ನ ಜೀವಮಾನದಲ್ಲಿ ಹಜ್ ಯಾತ್ರೆ ಮಾಡಲಾಗುವುದಿಲ್ಲ, ಮಾತ್ರವಲ್ಲ ಆತನ ಮುಂದಿನ ಯಾವ ಪೀಳಿಗೆಯೂ ಹಜ್ ಮುಖವನ್ನೂ ನೋಡದಂತೆ ಮಾಡಿಬಿಡುತ್ತದೆ ಸೌದಿ ರಾಜವಂಶ! ಒಬ್ಬ ಮುಸ್ಲಮಾನ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಮಾಡಬೇಕೆಂದು ಬಯಸುತ್ತಾನೆ ಆದರೆ ಆತನ ಆಸೆ ಯಾವತ್ತೂ ಕೈಗೂಡದಂತೆ ಮಾಡುತ್ತದೆ ಸೌದಿ ರಾಜ ಮನೆತನ!

ಭಾರತದಲ್ಲಿ ನೆಲೆಸಿರುವ ತಥಾಕಥಿತ ಪೈಂಗಬರನ ವಂಶಸ್ಥರು ಮತ್ತು ಜಾತ್ಯಾತೀತ ಸೋಗಲಾಡಿಗಳು ಇಂತಹ ವಿಷಯಗಳ ಬಗ್ಗೆ ತುಟಿ ಬಿಚ್ಚುವುದಿಲ್ಲ. ಸದಾ ಹಿಂದೂಗಳ ವಿರುದ್ದ ದ್ವೇಷ ಕಾರುವ ಮಾಧ್ಯಮಗಳು ಈ ವಿಷಯ ಪ್ರಪಂಚಕ್ಕೆ ಗೊತ್ತಾಗದಂತೆ ಗುಟ್ಟಾಗಿ ಇಡುತ್ತವೆ. ಉತ್ತರ ಕುಮಾರನ ಇವರ ಪೌರುಷ ಹಿಂದೂಗಳ ಮೇಲೆ ಮಾತ್ರ ನಡೆಯುವುದು. ಇವರ ಜರ್ಬು ಭಾರತದಲ್ಲಿ ಮಾತ್ರ.  ಇವರ ಪ್ರಕಾರ ಇಸ್ಲಾಂ ಮತ್ತು ಮುಸಲ್ಮಾನರಿಗೆ ಭಯ ಕೇವಲ ಭಾರತದಲ್ಲಿರುವುದು. ಭಾರತದಲ್ಲಿ ಇಸ್ಲಾಂ ಅಪಾಯದಲ್ಲಿದೆ, ಮುಸಲ್ಮಾನರು ಭಯದಿಂದ ನರಳುತ್ತಿದ್ದಾರೆ ಎನ್ನುವ ಸೋಗಲಾಡಿಗಳೆ ದಯವಿಟ್ಟು ಮಹಮ್ಮದರ ಊರು ಸೌದಿಯಲ್ಲೆ ಇದ್ದು ಬನ್ನಿ ಸತ್ಯ ಏನೆಂದು ನಿಮಗೇ ಗೊತ್ತಾಗುವುದು.

-ಶಾರ್ವರಿ

https://ipfs.io/ipfs/QmXoypizjW3WknFiJnKLwHCnL72vedxjQkDDP1mXWo6uco/wiki/Destruction_of_early_Islamic_heritage_sites_in_Saudi_Arabia.html

http://time.com/3584585/saudi-arabia-bulldozes-over-its-heritage/

 

Editor Postcard Kannada:
Related Post