X
    Categories: ಅಂಕಣ

ಪ್ರಧಾನಿಯವರ ಒಂದು ದೂರವಾಣಿ ಕರೆಗೂ ವಿದೇಶದಲ್ಲಿ ಗೌರವ ಸಿಗುತ್ತೆ ಎಂದರೆ ಮೋದಿ ಎಷ್ಟು ಪವರ್‍ಫುಲ್ ವ್ಯಕ್ತಿ ಗೊತ್ತೆ?!

ನರೇಂದ್ರ ಮೋದಿ ಪ್ರಧಾನಿ ಪಟ್ಟ ಅಲಂಕರಿಸಿದ ಸಮಯದಿಂದಲೂ ತನ್ನ ದೇಶವು ಸದೃಢತೆ ಹಾಗೂ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲು ಅದೆಷ್ಟೋ ಕೆಲಸ ಕಾರ್ಯಗಳನ್ನು ಮಾಡುತ್ತಲೇ ಸಾಗುತ್ತಿದ್ದಾರೆ. ಅಲ್ಲದೇ ತಾನು ದೇಶಕ್ಕೋಸ್ಕರ, ದೇಶದ ಜನತೆಗೋಸ್ಕರ ಮಾಡಿದ ಕೆಲಸಗಳ ಬಗ್ಗೆ ಯಾವತ್ತೂ, ಎಲ್ಲಿಯೂ ಕೂಡ ಹೇಳಿಕೊಳ್ಳದೆ ಇರುವ ವ್ಯಕ್ತಿ!! ಇನ್ನು ಪ್ರಚಾರ ಗಿಟ್ಟಿಸಿಕೊಳ್ಳಬೇಕೆಂಬ ಆಸೆಯಿಂದ ಯಾವುದೇ ಕೆಲಸವನ್ನು ಮಾಡಿಲ್ಲ ಅಷ್ಟೇಅಲ್ಲದೇ ತಾವು ಮಾಡಿದ ಅಭಿವೃದ್ದಿ ಕೆಲಸಗಳ ಬಗ್ಗೆ ಎಲ್ಲಿಯೂ ಕೂಡ ಹೇಳಿದ್ದೇ ಇಲ್ಲ!! ಇತ್ತೀಚೆಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಧೋಕ್ಲಂ ಬಿಕ್ಕಟ್ಟಿನ ಬಗ್ಗೆ ಸಂಸತ್ತಿನಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ, ಪ್ರಧಾನಿ ಮೋದಿಯವರು ನಿಭಾಯಿಸಿರುವ ಅತೀದೊಡ್ಡ ವಿಚಾರವನ್ನು ಬಿಚ್ಚಿಟ್ಟಿದ್ದರು.

ಹೌದು.. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ಯಾಕೆಂದರೆ ನರೇಂದ್ರ ಮೋದಿ ಒಬ್ಬ ಮಹಾನ್ ಕನಸುಗಾರ. ಕನಸನ್ನು ನನಸಾಗಿ ಪರಿವರ್ತಿಸುವ ಸಾಮರ್ಥ್ಯವುಳ್ಳ ಧೀಮಂತ. ಗುಜರಾತನ್ನು ಮರುಕಟ್ಟುವುದು ಮತ್ತು ಅಭಿವೃದ್ಧಿ ಪಥದತ್ತ ಸಾಗುತ್ತಿರುವ ರಾಜ್ಯವನ್ನಾಗಿಸುವುದು ಹಾಗೂ ತನ್ಮೂಲಕ ತಾಯ್ನಾಡನ್ನು ಅಭಿವೃದ್ಧಿಶೀಲ ಹಾಗೂ ಶಕ್ತಿಯುತ ರಾಷ್ಟ್ರವನ್ನಾಗಿಸುವ ಕನಸು ಕಂಡಿದ್ದಾರೆ. ಭಾರತದ ಔನ್ನತ್ಯದ ಬಗ್ಗೆ ಮೋದಿ ಕಂಡಿರುವ ಕನಸುಗಳಲ್ಲಿ ಕೃಷಿ ಸಂಶೋಧನೆ, ಪರಿಸರದ ರಕ್ಷಣೆ, ಉದ್ಯಮಕ್ಕೆ ಪೂರಕ ಮೂಲಸೌಕರ್ಯ ಮತ್ತು ಜಾಗತಿಕ ಹಣ ಹೂಡಿಕೆ ಪ್ರಮುಖವಾಗಿದೆ. ಸಂಕ್ಷಿಪ್ತವಾಗಿ ಹೇಳಬೇಕಾದರೆ ಜೀವನದಲ್ಲಿ ಅನಂತ ಆನಂದವನ್ನು ಹೊಂದಿರುವ ಸಂಪದ್ಭರಿತ ಸಮಾಜದ ಕನಸು ಹೊತ್ತಿದ್ದಾರೆ!!! ಅತ್ಯಂತ ಶಿಸ್ತಿನ ಸಿಪಾಯಿ ಆಗಿರುವ ನರೇಂದ್ರ ಮೋದಿ ಅವರು ಅದ್ಭುತ ಶಕ್ತಿ ಮತ್ತು ಕಾರುಣ್ಯದ ಪ್ರತೀಕವೂ ಆಗಿದ್ದಾರೆ.

ತಾವು ಮಾಡಿರುವ ಕೆಲಸಗಳ ಬಗ್ಗೆ ಎಳ್ಳಷ್ಟು ಜಂಭವನ್ನು ತೋರ್ಪಡಿಸದ ಇವರ ಬಗ್ಗೆ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಚೀನಾದೊಂದಿಗಿನ ಧೋಕ್ಲಂ ಬಿಕ್ಕಟ್ಟಿನ ಬಗ್ಗೆ ಸಂಸತ್ತಿನಲ್ಲಿ ಮಾತನಾಡುತ್ತಿರುವಾಗ ಅಚ್ಚರಿಯ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ!! ಹೌದು.. ಇವರು ಮಾಡಿರುವ ಸಾಧನೆಯ ಬಗ್ಗೆ ಅಥವಾ ಯಾವುದೇ ವಿಚಾರದ ಬಗ್ಗೆ ಹೇಳದ ಇವರು ಇನ್ನೂ ಯೆಮನ್ ನಿಂದ ಸಾವಿರಾರು ಭಾರತೀಯರನ್ನು ಸ್ಥಳಾಂತರಿಸುವಲ್ಲಿ ಪ್ರಧಾನಿ ವಹಿಸಿದ ಅತಿದೊಡ್ಡ ಪಾತ್ರದ ಬಗ್ಗೆ ಹೇಳಲು ಸಾಧ್ಯವೇ?? ಆದರೆ ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಧೋಕ್ಲಂ ಬಿಕ್ಕಟ್ಟಿನ ಬಗ್ಗೆ ಸಂಸತ್ತಿನಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಯೆಮೆನ್‍ನಿಂದ ಸಾವಿರಾರು ಭಾರತೀಯರನ್ನು ಸ್ಥಳಾಂತರಿಸುವಲ್ಲಿ ಪ್ರಧಾನಿ ಮೋದಿ ಯಾವ ರೀತಿ ಅತಿದೊಡ್ಡ ಪಾತ್ರ ವಹಿಸಿದ್ದಾರೆಂದು ಬಹಿರಂಗಪಡಿಸಿದ್ದಾರೆ.

ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಕೆಲವೇ ದಿನಗಳಲ್ಲಿ ದೇಶವನ್ನು ಕಾಯುವ ಸೈನಿಕರಿಗೆ ಬುಲೆಟ್ ಪ್ರೊಫ್ ಜಾಕೆಟ್‍ನ್ನು ನೀಡಿರುವ ಇವರು ತದ ನಂತರದಲ್ಲಿ ಬುಲೆಟ್ ಪ್ರೂಫ್ ಹೆಲ್ಮೆಟ್ ಹೀಗೆ ಸಾಲು ಸಾಲಾಗಿ ಒಂದೊಂದು ಯೋಜನೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಇವಿಷ್ಟೇ ಅಲ್ಲದೇ ಹಿಂದೆ ಶತ್ರುರಾಷ್ಟ್ರಗಳು ನಮ್ಮ ದೇಶದ ಒಳ ನುಗ್ಗಿ ನಮ್ಮ ಸೈನಿಕರ ಮೇಲೆ ದಾಳಿ ಮಾಡಿದರೂ ಕೂಡ ತನ್ನ ಕೈಯಲ್ಲಿದ್ದ ಬಂದೂಕಿನಿಂದ ಒಂದು ಗುಂಡು ಹಾರಿಸಲು ಮೇಲಿನಿಂದ ಬರುವ ಆಜ್ಞೆಗಾಗಿ ಕಾಯಬೇಕಿತ್ತು. ಆದರೆ ಮೋದಿ ಸರಕಾರ ಸೈನಿಕರಿಗೆ ಸ್ವತಂತ್ರ್ಯವನ್ನು ನೀಡಿದ್ದು, ಶತ್ರುರಾಷ್ಟ್ರಗಳನ್ನು ಆಹ್ವಾನಿಸುವಷ್ಟರ ಮಟ್ಟಿಗೆ ನಮ್ಮ ಸೇನೆ ಸದೃಢವಾಗಿದೆ ಎಂದರೆ ಅದಕ್ಕೆ ಕಾರಣ ನರೇಂದ್ರ ಮೋದಿ ಸರಕಾರ ಎಂದರೆ ತಪ್ಪಾಗಲಾರದು!!

ಧೋಕ್ಲಂ ಬಿಕ್ಕಟ್ಟಿನ ಬಗ್ಗೆ ಸಂಸತ್ತಿನಲ್ಲಿ ಮಾತಾನಾಡುತ್ತಿರುವ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಯೆಮೆನ್‍ನಿಂದ ಸಾವಿರಾರು ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಹೇಗೆ ಸಾಧ್ಯವಾಯಿತು ಎಂಬುವುದರ ಬಗ್ಗೆ ಹೇಳಿದ್ದಾರೆ!!! ಹೌದು, ಯೆಮೆನ್ ದೇಶದಲ್ಲಿ ಗುಂಡಿನ ಸುರಿಮಳೆ ನಡೆಯುತ್ತಿದ್ದಾಗ ಸ್ವಲ್ಪ ಸಮಯದವರೆಗೆ ಯೆಮೆನ್ ದೇಶಕ್ಕೆ ಗುಂಡು ಹಾರಿಸುವುದನ್ನು ನಿಲ್ಲಿಸಲು ಸೌದಿ ಕಿಂಗ್ ಆದೇಶ ನೀಡಿದ್ದರು. ಆದರೆ ಗುಂಡು ಹಾರಿಸುವುದನ್ನು ನಿಲ್ಲಿಸಿ ಎಂದು ಹೇಳುವುದು “ಅದು ಸುಲಭವಾದ ಕೆಲಸವಾಗಿರಲಿಲ್ಲ”!! ಆದರೆ ಈ ಗುಂಡು ಹಾರಿಸುವುದನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಿರುವುದರಿಂದ ಒಟ್ಟು 48 ದೇಶಗಳ ಅಂದರೆ 4000 ಭಾರತೀಯರು ಹಾಗೂ 2000 ವಿದೇಶಿಯರನ್ನು ಭಾರತ ಯೆಮೆನ್‍ನಿಂದ ತಕ್ಷಣ ತೆರವುಗೊಳಿಸಿತು.

ಗುಂಡಿನ ಚಕಮಕಿ ನಡೆಯುತ್ತಿದ್ದಾಗ ಗುಂಡು ಹಾರಿಸುವುದನ್ನು ನಿಲ್ಲಿಸಲು ಹೇಳುವುದು ಸುಲಭದ ಕೆಲಸವೇ?? ಆದರೆ ಇದೆಲ್ಲಾ ಸಾಧ್ಯವಾಗಿದ್ದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರಿಂದ!! ಹೌದು…ಇದಕ್ಕಾಗಿ ಸೌದಿ ಅರೇಬಿಯಾ ದೊರೆ ಸಲ್ಮಾನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿದ್ದರು. ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ ಸಲ್ಮಾನ್ ತನ್ನ ಸೇನೆಗೆ ಯೆಮೆನ್ ದೇಶಕ್ಕೆ ಗುಂಡು ಹಾರಿಸುವುದನ್ನು ನಿಲ್ಲಿಸಲು ಆದೇಶ ನೀಡಿದರು. ಇದು ಸಾಧ್ಯವಾಗಿದ್ದು “ಕೇವಲ ಪ್ರಧಾನಿ ಮೋದಿಯವರ ಒಂದು ದೂರವಾಣಿ ಕರೆಯಿಂದ. ಇದರಿಂದಾಗಿ ಸಾವಿರಾರು ಮುಗ್ಧ ಜನರ ಪ್ರಾಣವನ್ನು ರಕ್ಷಣೆಮಾಡಲಾಯಿತು!!”

ಈಡೀ ವಿಶ್ವವೇ ನರೇಂದ್ರ ಮೋದಿಯವರನ್ನು ಗೌರವಿಸುತ್ತಿರುವಾಗ ಕೆಲ ಬುದ್ದಿಜೀವಿಗಳು ಪ್ರಧಾನಿಯನ್ನು ತೆಗಳುತ್ತಿರುವುದು ಮಾತ್ರ ವಿಪರ್ಯಾಸ!! ಯಾರೇ ಆಗಲಿ ಹೊಸ ಹೊಸ ಯೋಜನೆ ಮತ್ತು ನಾಯಕತ್ವದಲ್ಲಿರಬೇಕಾದ ಆದರ್ಶಗಳತ್ತ ನೋಡುತ್ತಿದ್ದರೆ ನರೇಂದ್ರ ಮೋದಿಯವರಿಗಿಂತ ರೋಲ್ ಮಾಡೆಲ್ ಇನ್ನೊಬ್ಬರಿಲ್ಲ. ಸಮರ್ಥ ವ್ಯಕ್ತಿತ್ವ, ಸ್ಪಷ್ಟ ನಿಲುವು, ಧೈರ್ಯ, ಸಮರ್ಪಣಾ ಭಾವಗಳು ಒಬ್ಬರೇ ನಾಯಕರಲ್ಲಿ ಹೇಗೆ ಅರಳಬಲ್ಲದು ಎಂಬುದನ್ನು ಅವರು ಯುವಜನತೆಗೆ ತೋರಿಸಿಕೊಟ್ಟಿದ್ದಾರೆ.

ಮೂಲ:Original Link – Read Here

– ಅಲೋಖಾ

Editor Postcard Kannada:
Related Post