X

ಸಿದ್ದರಾಮಯ್ಯರ ಜಾತಿಯ ಮಹಿಳೆಯನ್ನು ಕುರಿ ಮಾಡಿದರಾ ಎಂ.ಬಿ.ಪಾಟೀಲ್..?! ಸಿಡಿದೆದ್ದ ಕುರುಬ ಮಹಿಳೆ!!

ಚುನಾವಣೆಗೆ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇದ್ದು, ಇಡೀ ದೇಶದ ಕಣ್ಣು ಕರ್ನಾಟಕ ವಿಧಾನ ಸಭಾ ಚುನಾವಣೆಯ ಮೇಲಿದೆ!! ಆದರೆ ಕಾಂಗ್ರೆಸ್‍ನಲ್ಲಿ ಮಾತ್ರ ಇನ್ನೂ ಕಚ್ಚಾಟ ಮುಗಿದಿಲ್ಲ!! ಬೇರೆ ಪಕ್ಷದವರ ಜೊತೆ ಬಿಡಿ ತನ್ನದೇ ಪಕ್ಷದಲ್ಲಿ ಒಮ್ಮತದ ಅಭಿಪ್ರಾಯವಿಲ್ಲ!! ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಮದ ಏರಿದೆ ಎಂದರೆ ಯಾವ ರೀತಿ ಬೇಕಾದರೂ ಒಬ್ಬ ಮನುಷ್ಯನ್ನು ವ್ಯಂಗ್ಯವಾಗಿ ನೋಡುವುದಕ್ಕೆ ತಯಾರಾಗಿರುತ್ತಾರೆ!! ಇದೀಗ ಮತ್ತೊಬ್ಬ ಕಾಂಗ್ರೆಸ್ ಸಚಿವನ ದುರಹಂಕಾರ ಬಯಲಾಗಿದೆ!! ಕಾಂಗ್ರೆಸ್ ಪಕ್ಷದಲ್ಲಿಯೇ ಸ್ವತಃ ಒಗ್ಗಟ್ಟಿಲ್ಲದೆ ಭಿನ್ನಮತ ಸ್ಫೋಟವಾಗಿದ್ದು ನೋಡುತ್ತಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸೋಲು ಖಚಿತ ಎಂಬುವುದು ಇಲ್ಲೇ ಸ್ಪಷ್ಟವಾಗಿ ಅರ್ಥವಾಗುತ್ತದೆ!!

ಎಂ.ಬಿ ಪಾಟೀಲರಿಂದ ಕುರುಬ ಮಹಿಳೆಗೆ ಅವಮಾನ!!

ಕಾಂಗ್ರೆಸ್‍ಗೆ ತನ್ನ ಪಕ್ಷದಲ್ಲೇ ಇದ್ದವರನ್ನು ಅವಮಾನ ಮಾಡುವುದೇನು ಇದೇ ಹೊಸತೇನಲ್ಲ!! ಕಾಂಗ್ರೆಸ್‍ನವರು ತನ್ನ ಪಕ್ಷದವರನ್ನೇ ಕೇರ್ ಮಾಡೋರಲ್ಲ!! ಅಷ್ಟು ದೊಡ್ಡ ಮಹಾನ್ ವ್ಯಕ್ತಿ ಅಂಬೇಡ್ಕರ್‍ರವರನ್ನೇ ಬಿಟ್ಟಿಲ್ಲ!! ಇನ್ನು ಸಾಮಾನ್ಯ ಜನರನ್ನು ಇವರು ಅವಮಾನಿಸದೆ ಇರುವರೇ?! ಕುರುಬ ಜಾತಿಗೆ ಸೇರಿದ ಮಹಿಳೆಯೊಬ್ಬರನ್ನು ಟಿಕೆಟ್ ನೀಡುವಂತೆ ಆಮಿಷ ತೋರಿಸಿ ಇದೀಗ ಟಿಕೆಟ್ ನೀಡದೆ ತೀವ್ರ ಅವಮಾನಕ್ಕೊಳಪಡಿಸಿದ್ದಾರೆ!!

ಜಿಲ್ಲೆಯು ಸಚಿವ ಎಂ.ಬಿ ಪಾಟೀಲ ಅವರ ಹಿಡಿತದಲ್ಲಿರ ಬೇಕು ಎಂಬ ಉದ್ಧೇಶದಿಂದ ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಸಚಿವರು ಏಕ ಪಕ್ಷೀಯ ನಿರ್ಣಯ ತೆಗೆದುಕೊಂಡರೆ ವೀಕ್ಷಕರ, ಗುಪ್ತಚರ, ಪೊಲೀಸ್ ಇಲಾಖೆ ವರದಿ ಪಡೆಯುವ ಅವಶ್ಯಕತೆ ಏನಿತ್ತು ಎಂದು ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಡಾ. ಮಂಜುಳಾ ಗೋವರ್ಧನ ಮೂರ್ತಿ ಗಂಭೀರವಾಗಿ ಪ್ರಶ್ನಿಸಿದ್ದು, ಕಾಂಗ್ರೆಸ್ ಪಕ್ಷದ ಜೊತೆ ತೀವ್ರವಾಗಿ ಕಿಡಿಕಾರಿದ್ದಾರೆ!!

ಎಂ.ಬಿ ಪಾಟೀಲರ ವಿರುದ್ಧ ಕಿಡಿಕಾರಿದ ಮಂಜುಳಾ ಗೋವರ್ಧನ್!!

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಡಾ. ಮಂಜುಳಾ ಗೋವರ್ಧನ ಮೂರ್ತಿ ರಾಜ್ಯದಿಂದಲೇ ವಲಸಿಗರಿಗೆ ಟಿಕೆಟ್ ಅವಕಾಶವಿಲ್ಲ ಎಂದು ಸಂದೇಶ ನೀಡಬಹುದಿತ್ತು ಆದರೆ ರಾಜ್ಯದಲ್ಲಿ ಕುರುಬ ಸಮಾಜದಿಂದ ಏಕೈಕ ಮಹಿಳೆಯಾಗಿ ಟಿಕೆಟ್ ಆಕಾಂಕ್ಷಿಯಾಗಿದ್ದು ಅವರಿಗೆ ಯಾವುದೇ ಟಿಕೆಟ್ ನೀಡದೆ ಅವಮಾನ ಮಾಡಿರುವುದು ನಿಜಕ್ಕೂ ಖಂಡನೀಯ!! ಹೋರಾಟದ ಮನೋಭಾವವಿರುವ ಒಬ್ಬ ಉತ್ಸಾಹಿ ಮಹಿಳೆಗೆ ಟಿಕೆಟ್ ನೀಡದೆ ಒಬ್ಬ ಕುರುಬ ಮಹಿಳೆಯನ್ನು ಈ ರೀತಿ ಅನ್ಯಾಯ ಮಾಡಿರುವುದು ನಿಜವಾಗಿಯೂ ವಿಷಾದನೀಯ!!

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯದ ಪ್ರತೀಯೊಬ್ಬ ಪ್ರಜೆ ಸಾಮಥ್ರ್ಯವಿದ್ದ ಕಡೆ ಸ್ಪರ್ಧಿಸಬಹುದು ಅಲ್ಲದೆ ಗೆಲ್ಲುವವರಿಗೆ ಟಿಕೆಟ್ ನೀಡಿ ಎನ್ನುವ ಹೈ ಕಮಾಂಡ್ ಆದೇಶವಿದೆ ಆದರೆ ವಲಸಿಗರಿಗೆ ಟಿಕೆಟ್ ಕೊಡಬೇಡಿ ಎನ್ನುವುದು ಜಿಲ್ಲಾ ಉಸ್ತುವರಿ ಸಚಿವ ಎಂ.ಬಿ ಪಾಟೀಲರ ಮಾತು ಸರಿಯಲ್ಲ!!

ಅದಲ್ಲದೆ ಸಿಎಂ ಸಿದ್ದರಾಮಯ್ಯನವರು ಕೂಡಾ ಬಾದಾಮಿಯಿಂದ ಸ್ಪರ್ಧಿಸಿರುವು ವಲಸಿಗತನವಲ್ಲವೇ? ನಾನೊಬ್ಬ ಮಾತ್ರ ಮಾತ್ರವಲ್ಲವಲ್ಲ!! ಸಿಂದಂಗಿ ಮತಕ್ಷೇತ್ರದಲ್ಲಿ ಸುಮಾರು ಮೂರುವರೆ ವರ್ಷಗಳಿಂದ ಕಾರ್ಯಕರ್ತರ ಪರವಾಗಿ ನಾನು ಕೆಲಸ ಮಾಡಿದ್ದೇನೆ ಯಾವ ನಾಯಕರೂ ನನ್ನನ್ನು ನಾಯಕಿಯನ್ನಾಗಿ ಸ್ವೀಕರಿಸಿಲ್ಲ!! ಕಾರ್ಯಕರ್ತರು ನನ್ನನ್ನು ನಾಯಕಿಯನ್ನಾಗಿ ಸ್ವೀಕರಿಸಿದ್ದಾರೆ.. ಅವರ ಸೇವೆ ಮಾಡಲು ನಾನು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.. ಒಮ್ಮೆಯಾದರೂ ಈ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾಗಿಯೇ ತೀರುತ್ತೇನೆ ಎಂದು ಎಂ.ಬಿ ಪಾಟೇಲರ ಜೊತೆ ಪಣ ತೊಟ್ಟಿದ್ದಾರೆ!!

ಅದಲ್ಲದೆ ಸಚಿವ ಎಂ. ಬಿ ಪಾಟೀಲರು ಅವರು ಬಿಟ್ಟು ಇವರು ಬಿಟ್ಟು ಇವರ್ಯಾರು ಎಂದು ಮಕ್ಕಳು ಕಣ್ಣಾ ಮುಚ್ಚಾಲೆ ಆಡುವ ರೀತಿಯಲ್ಲಿ ದಿನಾಲು ಒಬ್ಬರ ಹೆಸರನ್ನು ಹೇಳುತ್ತಾರೆ!! ಕೊನೆ ಹಂತದಲ್ಲಿ ಮಲ್ಲಣ್ಣ ಸಾಲಿ ಅವರ ಹೆಸರು ಘೋಷಿಸಿ ಕುರುಬರನ್ನು ಕುರಿಗಳನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆಯುವವಳಲ್ಲ.. ನಾನು ಕಾಂಗ್ರೆಸ್‍ನಲ್ಲಿಯೇ ಇದ್ದು ಸಿಂದಗಿ ಕ್ಷೇತ್ರದಲ್ಲಿ ಮನೆ ಮಾಡಿ ಈ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.. ನಾನು ವಲಸಿಗಳು ಎಂಬ ಅಲ್ಲ ಎಂಬ ಪ್ರಯತ್ನಕ್ಕೆ ತೆರೆ ಎಳೆಯುತ್ತೇನೆ ಎಂದರು!!

ಹೀಗೆ ಕಾಂಗ್ರೆಸ್‍ನ ಬುದ್ಧಿಯೇ ಇಷ್ಟು!! ಯಾವ ಸಮಯದಲ್ಲಿ ತಮಗೆ ಬೇಕೋ ಅಷ್ಟು ಉಪಯೋಗಿಸಿ ಬೇಡವೆಂದಾಗ ಅವರನ್ನು ದೂರ ತಳ್ಳುವುದು ಇದು ಕಾಂಗ್ರೆಸ್ಸಿಗೆ ಅಂಟಿದ ರೋಗ!! ಇದೇ ರೀತಿ ಚುನಾವಣೆ ಸಮಯದಲ್ಲಿ ತಮ್ಮ ಪಕ್ಷದಲ್ಲೇ ಈ ರೀತಿಯಾಗಿ ಭಿನ್ನಮತ ಸ್ಫೋಟವಾದರೆ ಸಿದ್ದರಾಮಯ್ಯ ಸರಕಾರಕ್ಕೆ ಸೋಲು ಖಚಿತ!!

ಪವಿತ್ರ

Editor Postcard Kannada:
Related Post