X

ಬಿಜೆಪಿ ಅಭ್ಯರ್ಥಿಯ ವಿಚಾರಕ್ಕೆ ತಲೆಹಾಕಿದ ಪ್ರಕಾಶ್ ರಾಜ್ ನ್ನು ಝಾಡಿಸಿದ ಚಕ್ರವರ್ತಿ..! ಟ್ವಿಟ್ಟರ್ ನಲ್ಲಿ ನಡೆಯಿತು ಧರ್ಮ ಯುದ್ಧ..!

ಪದೇ ಪದೇ ಹಿಂದೂಗಳ ವಿರುದ್ಧ, ಹಿಂದೂ ಧರ್ಮದ ವಿರುದ್ಧ ಮಾತಾಡುತ್ತಾ ರಾಜ್ಯ ಸರಕಾರದಿಂದ ಸೈಟ್ ಪಡೆಯಲು ಹೊಂಚು ಹಾಕುತ್ತಿರುವ ನಟ ಎನಿಸಿಕೊಂಡು , ಸದ್ಯ ತಾನೊಬ್ಬನೇ ದೇಶಪ್ರೇಮಿ ಎಂದು ಊರೆಲ್ಲಾ ಸುತ್ತಿಕೊಂಡು ಬೊಗಳೆ ಬಿಡುತ್ತಿರುವ ಪ್ರಕಾಶ್ ರಾಜ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕೇವಲ ನಟನೆ ಮಾಡಿ ಸುಮ್ಮನಿರಬೇಕಾಗಿದ್ದ ಈತ ತನ್ನ ಹೆಸರು ಇನ್ನೂ ಸ್ವಲ್ಪ ಎಲ್ಲೆಡೆ ಕೇಳಿ ಬರಲಿ ಎಂಬ ನಿಟ್ಟಿನಲ್ಲಿ ಪ್ರಧಾನಿ ಮೋದಿ , ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಕೀಳಾಗಿ ಮಾತನಾಡುತ್ತಾ ತನ್ನ ಛಪಲ ತೀರಿಸಿಕೊಂಡು , ಸಿದ್ದರಾಮಯ್ಯ ಸರಕಾರದಿಂದ ಏನಾದರೂ ಎಂಜಲು ಸಿಗುತ್ತದೆಯೇ ಎಂದು ಹೊಂಚು ಹಾಕಿಕೊಂಡು ಕಾಯುತ್ತಿದ್ದ ಪ್ರಕಾಶ್ ರಾಜ್ ಗೆ ಕರ್ನಾಟಕದ ಯುವಕರ ಪಾಲಿಗೆ ಆದರ್ಶ, ಪ್ರಖರ ವಾಗ್ಮಿ, ಖ್ಯಾತ ಅಂಕಣಕಾರ, ಯುವ ಬ್ರಿಗೇಡ್ ಮಾರ್ಗದರ್ಶಕರಾದಂತಹ ಶ್ರೀ ಚಕ್ರವರ್ತಿ ಸೂಲಿಬೆಲೆ ತನ್ನ ಶೈಲಿಯಲ್ಲೇ ತಕ್ಕ ಉತ್ತರ ನೀಡಿ ಬಾಯಿ ಮುಚ್ಚಿಸಿದ್ದಾರೆ..!

ಬಿಜೆಪಿ ಅಭ್ಯರ್ಥಿಯ ಪತ್ನಿಗೆ ನಿಂದಿಸಿದ ಪ್ರಕಾಶ್ ರಾಜ್..!

ಪ್ರಕಾಶ್ ರಾಜ್ ತನಗೆ ಎಲ್ಲಿ ಪ್ರಚಾರ ಸಿಗುತ್ತದೆ ಎಂದು ಕಾಗೆಯ ರೀತಿ ಕಾಯುತ್ತಿರುವ ಒಬ್ಬ ಬುದ್ದಿಜೀವಿ ಅಷ್ಟೇ. ಈತನ ಕೈಯಲ್ಲಿ ಯಾವುದೇ ರಾಜಕೀಯ ಅಧಿಕಾರ ಇಲ್ಲ. ನಟನೆಯಲ್ಲೂ ಖಳನಾಯಕನಾಗಿಯೇ ಇದ್ದ ಈತ ನಿಜ ಜೀವನದಲ್ಲೂ ಅದೇ ರೀತಿ ಎಂಬುದು ಸದ್ಯ ಎಲ್ಲರಿಗೂ ತಿಳಿದಿರುವ ವಿಚಾರ.

ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಕ್ಕಾಗಿ ಎಲ್ಲಾ ಪಕ್ಷಗಳ ತಯಾರಿಯೂ ಭರ್ಜರಿಯಾಗಿ ನಡೆಯುತ್ತಿದ್ದು, ಮಂಗಳೂರು ಅದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಅವರ ಪರವಾಗಿ ಅವರ ಪತ್ನಿ ಪ್ರಚಾರ ಮಾಡಲು ಮನೆ ಮನೆಗೆ ತೆರಳಿ ಮತ ಯಾಚಬೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಇವರು “ಹಿಂದುತ್ವ ಉಳಿಯಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರಲೇಬೇಕು” ಎಂದು ಹೇಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಆದರೆ ಇದನ್ನೇ ಟೀಕೆ ಮಾಡಲು ಹೋದ ಪ್ರಕಾಶ್ ರಾಜ್ ಟ್ವಿಟ್ಟರ್ ನಲ್ಲಿ “ಇದೇನಾ ನಿಮ್ಮ ಹಿಂದುತ್ವ , ಬಿಜೆಪಿ ಅಭ್ಯರ್ಥಿಯ ಪತ್ನಿ ಧರ್ಮದ ಆಧಾರವಾಗಿ ಜನರ ಬಳಿ ಓಟು ಕೇಳುತ್ತಿದ್ದಾರೆ, ಇದೇನಾ ನಿಮ್ಮ ಸಬ್ ಕಾ ಸಾಥ್ – ಸಬ್ ಕಾ ವಿಕಾಸ್” ಎಂದು ಕೇವಡಿ ಮಾಡಿಕೊಂಡಿದ್ದರು. ಇದಕ್ಕೆ ತಕ್ಕ ಉತ್ತರಗಳು ತಕ್ಷಣ ಟ್ವಿಟ್ಟರ್ ನಲ್ಲಿ ಪ್ರಕಾಶ್ ರಾಜ್ ಗೆ ಸಿಕ್ಕಿತ್ತು.!

ಪ್ರಕಾಶ್ ರಾಜ್ ಗೆ ಚಕ್ರವರ್ತಿಯಿಂದ ಕಪಾಳಮೋಕ್ಷ..!

ಚಕ್ರವರ್ತಿ ಸೂಲಿಬೆಲೆ ಅಪ್ಪಟ ದೇಶಪ್ರೇಮಿ. ಇವರ ಮಾತು ಕೇಳುತ್ತಿದ್ದಂತೆ ಬಿಸಿ ರಕ್ತದ ಯುವಕರು ಮತ್ತಷ್ಟು ಜಾಗ್ರತರಾಗುವುದು ಖಂಡಿತ. ಇದೇ ರೀತಿ ಹಿಂದೂ ಧರ್ಮದ ವಿರುದ್ಧವಾಗಿ ಯಾರಾದರು ಮಾತನಾಡಿದರೆ ಅದಕ್ಕೆ ಕೂಡಲೇ ಪ್ರತಿಕ್ರಿಯೆ ನೀಡುವ ಹವ್ಯಾಸವನ್ನೂ ಚಕ್ರವರ್ತಿ ರೂಢಿಸಿಕೊಂಡಿದ್ದಾರೆ.

ಅದೇ ರೀತಿ ಪ್ರಕಾಶ್ ರಾಜ್ ಗೆ ಟ್ವಿಟ್ಟರ್ ನಲ್ಲೇ ತಕ್ಕ ಉತ್ತರ ನೀಡಿದ ಚಕ್ರವರ್ತಿ, ” ಪ್ರಕಾಶ್ ರಾಜ್ ಅವರೇ, ವೇದವ್ಯಾಸ ಕಾಮತ್ ಅವರ ಪತ್ನಿ ಹೇಳಿರುವುದರಲ್ಲಿ ತಪ್ಪೇನಿದೆ.? ಸಿದ್ದರಾಮಯ್ಯನವರು ಕಳೆದ ೫ ವರ್ಷದಲ್ಲಿ ಹಿಂದೂಗಳನ್ನು ಮುಗಿಸಲು ಎಲ್ಲಾ ರೀತಿಯ ಪ್ರಯೋಗಗಳನ್ನು ಮಾಡಿದ್ದಾರೆ. ಹಿಂದೂ ಕಾರ್ಯಕರ್ತರನ್ನು ಕೊಂದ ಪಿ.ಎಫ್.ಐ ಸಂಘಟನೆಗೆ ಬೆಂಬಲವಾಗಿ ನಿ ತರು. ಪ್ರತ್ಯೇಕ ಧರ್ಮಕ್ಕಾಗಿ ಲಿಂಗಾಯತರನ್ನು ಪ್ರೇರೇಪಿಸಿದರು,ಹಾಗಾಗಿ ಧರ್ಮ ಉಳಿಯಬೇಕಾದರೆ ಈ ಮುಖ್ಯಮಂತ್ರಿ ತೊಲಗಲೇಬೇಕು” ಎಂದು ಖಡಕ್ ತಿರುಗೇಟು ನೀಡಿದ್ದಾರೆ.

ಇದರಿಂದ ಕಂಗಾಲಾದ ಪ್ರಕಾಶ್ ರಾಜ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈವರೆಗೂ ಪ್ರಕಾಶ್ ರಾಜ್ ರಾಜ್ಯ ಸರಕಾರವನ್ನು ಮೆಚ್ಚಿಸಲೆಂದೇ ಕೆಲವೊಂದು ಹೇಳಿಕೆ ನೀಡಿದ್ದಲ್ಲದೇ ಇದೀಗ ಬಿಜೆಪಿ ಅಭ್ಯರ್ಥಿಗಳ ವಿಚಾರದಲ್ಲೂ ಮೂಗು ತೂರಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾನೆ. ಆದರೆ ಅದಕ್ಕೆ ಬೇಕಾದ ತಕ್ಕ ಉತ್ತರ ನೀಡಿದಾಗ ಈವಯ್ಯ ಮಾತ್ರ ನಾಪತ್ತೆ..!

–ಅರ್ಜುನ್

 

Editor Postcard Kannada:
Related Post