X

ನರೇಂದ್ರ ಮೋದಿಯವರ ವಿದೇಶಿ ಪ್ರವಾಸವನ್ನು ಟೀಕಿಸುವವರಿಗೆ ಇಲ್ಲಿದೆ ತಕ್ಕ ಉತ್ತರ!! ಮೋದಿಯ ವಿದೇಶಿ ಪ್ರವಾಸದ ಹಿಂದಿರುವ ಗುಟ್ಟೇನು ಗೊತ್ತೇ?

ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸನ್ನು ಸಹಿಸಲಾಗದೇ ಅವರನ್ನು ದೂಷಿಸುತ್ತಲೇ ಬರುತ್ತಿದ್ದ ಪ್ರತಿಪಕ್ಷಗಳು ಮೊದಲಿನಿಂದಲೂ ನರೇಂದ್ರ ಮೋದಿ ಅವರು ವಿದೇಶಕ್ಕೆ ತೆರಳುತ್ತಾರೆ, ವಿದೇಶದಲ್ಲೇ ಜಾಸ್ತಿ ಇರುತ್ತಾರೆ ಎಂದು ಟೀಕಿಸುತ್ತಲೇ ಬರುತ್ತಿದ್ದ ವಿಚಾರ ತಿಳಿದೇ ಇದೆ. ಆದರೆ ವಿದೇಶ ಪ್ರವಾಸಗಳನ್ನು ಟೀಕಿಸುವವರಿಗೆ ಸಮರ್ಪಕವಾದ ಉತ್ತರವೊಂದು ಇದೀಗ ಸಿಕ್ಕಿದ್ದು, ಪ್ರತಿಪಕ್ಷಗಳ ಟೀಕೆಗೆ ಬ್ರೇಕ್ ಬೀಳಲಿರುವುದು ಮಾತ್ರ ಖಂಡಿತಾ…

ಮೋದಿಯವರ ವಿದೇಶಿ ಪ್ರವಾಸದ ಬಗ್ಗೆ ಟೀಕೆಗಳ ಸುರಿಮಳೆಯನ್ನೇ ಹರಿಸುತ್ತಿರುವ ಪ್ರತಿಪಕ್ಷಗಳು, ಮೋದಿಯವರ ವಿದೇಶಿ ಪ್ರವಾಸದಿಂದಾಗಿ ಭಾರತವನ್ನು ಹೇಗೆ ಅಭಿವೃದ್ಧಿಗೊಳಿಸುತ್ತಿದ್ದಾರೆ, ಯಾವ ರೀತಿ ವಿದೇಶಿ ಬಂಡವಾಳವನ್ನು ಹೂಡಿಕೆ ಮಾಡುತ್ತಿದ್ದಾರೆ ಎಂಬುದನ್ನು ಯಾವತ್ತೂ ಕೂಡ ಹೇಳಿದ್ದೇ ಇಲ್ಲ!! ಆದರೆ, ಜನವರಿ 26ರ ಗಣರಾಜ್ಯೋತ್ಸವದ ವೈಭವವನ್ನು ಭಾರತ ಬಿಡಿ ವಿಶ್ವವೇ ಬೆರಗಾಗಿ ನೋಡಿತು. ಅಷ್ಟೇ ಅಲ್ಲದೇ, ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಆಸಿಯಾನ್ ರಾಷ್ಟ್ರಗಳ ನಾಯಕರನ್ನು ಭಾರತಕ್ಕೆ ಕರೆಸಿ ಭಾರತದ ಶಕ್ತಿ ಏನೆಂಬುವುದನ್ನು ವಿಶ್ವಕ್ಕೆ ತೋರಿಸಿಕೊಟ್ಟರೂ ಕೂಡ ನಮ್ಮ ಪ್ರತಿಪಕ್ಷದ ನಾಯಕರು ಮೌನವರೆಸಿದರೇ ಹೊರತು ಟೀಕೆ ಮಾಡುವುದನ್ನು ನಿಲ್ಲಿಸಿಲ್ಲ!!

ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಳ್ಳುವ ವಿದೇಶ ಪ್ರವಾಸಗಳನ್ನು ಟೀಕಿಸುವವರಿಗೆ, ಇತ್ತಿಚೆಗಷ್ಟೇ ಮೋದಿ ಅವರು ಕೈಗೊಂಡ ಸೌದಿ ಅರೇಬಿಯಾ ಪ್ರವಾಸದಿಂದಾಗಿ ಸಮರ್ಪಕವಾದ ಉತ್ತರವೊಂದು ಸಿಕ್ಕಿದೆ. ಹೌದು, ನರೇಂದ್ರ ಮೋದಿಯವರು ಸೌದಿ ಅರೇಬಿಯಾ ರಾಜಕುಮಾರನನ್ನು ಭೇಟಿಯಾಗಿ, ದ್ವಿಪಕ್ಷೀಯ ಮಾತುಕತೆ ನಡೆಸಿದ ಬೆನ್ನಲ್ಲೇ, ಸೌದಿ ಅರೇಬಿಯಾ ಭಾರತದಲ್ಲಿ ಅಪಾರ ಬಂಡವಾಳ ಹೂಡಲು ಬಯಸಿದೆ.

ಮುಂದಿನ ನಾಲ್ಕರಿಂದ ಐದು ವರ್ಷದ ಅವಧಿಯಲ್ಲಿ, ಭಾರತದ ಭದ್ರತೆ, ಸರಕು ಸಾಗಣೆ ಸೇರಿ ಹಲವು ಕ್ಷೇತ್ರಗಳಲ್ಲಿ ಸುಮಾರು 300 ಬಿಲಿಯನ್ ಡಾಲರ್, ಅಂದರೆ 19 ಲಕ್ಷ ಕೋಟಿ ರೂಪಾಯಿಗಿಂತ ಅಧಿಕ ಹಣ ಭಾರತದಲ್ಲಿ ಹೂಡಲು ಸೌದಿ ನಿರ್ಧರಿಸಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಬ್ ಕಾಂತ್ ತಿಳಿಸಿದ್ದಾರೆ.

ಮೋದಿ ವಿದೇಶಿ ಪ್ರವಾಸಗಳನ್ನು ಮಾಡುತ್ತಾ ದೇಶ ಸುತ್ತುತ್ತಿದ್ದಾರೆ ಎಂದು ಟೀಕಿಸುವ ಮಂದಿಗೆ ಮೋದಿ ಅವರು ಬರೀ ವಿದೇಶ ಪ್ರವಾಸ ಮಾಡುತ್ತಿಲ್ಲ, ಅವರನ್ನೂ ನಮ್ಮ ದೇಶಕ್ಕೆ ಕರೆಸುತ್ತಿದ್ದಾರೆ ಎಂಬುದಕ್ಕೆ ಗಣರಾಜ್ಯೋತ್ಸವವೇ ಸಾಕ್ಷಿ. ಅದರ ಮುಂದುವರೆದ ಭಾಗ ಎಂಬಂತೆ ಮೋದಿ ಅವರು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಅದೆನೆಂದರೆ ಇರಾನ್ ಅಧ್ಯಕ್ಷ ಹಸನ್ ರೌಹಾನಿಯವರು ಭಾರತಕ್ಕೆ ಆಗಮಿಸಲಿದ್ದು, ಪ್ರಧಾನಿ ಮೋದಿ ಅವರ ಜತೆ ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿ, ದ್ವಿಪಕ್ಷೀಯ ಮಾತುಕತೆ, ಒಪ್ಪಂದ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿಯನ್ನು ನೀಡಿದೆ.

ಅಷ್ಟೇ ಅಲ್ಲದೆ, ಕಳೆದ ವರ್ಷ ಇರಾನ್ ಚಬಹಾರ್ ಬಂದರು ಆರಂಭಿಸುವ ಮೂಲಕ ಭಾರತಕ್ಕೆ ತಾಂತ್ರಿಕತೆ ಹಾಗೂ ಆರ್ಥಿಕವಾಗಿ ಅನುಕೂಲ ಮಾಡಿಕೊಟ್ಟಿದ್ದು ಹಾಗೂ ಅದರ ಮರುವರ್ಷವೇ ಇರಾನ್ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡುತ್ತಿರುವುದು ಭಾರತದ ನಿರೀಕ್ಷೆ ಹೆಚ್ಚಿದೆ ಹಾಗೂ ಈ ಭೇಟಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಆದರೆ ಇದೀಗ ಮೋದಿ ಸೌದಿ ಅರೇಬಿಯಾ ರಾಜಕುಮಾರನನ್ನು ಭೇಟಿಯಾಗಿ, ದ್ವಿಪಕ್ಷೀಯ ಮಾತುಕತೆ ನಡೆಸಿದ ಬೆನ್ನಲ್ಲೇ, ಸೌದಿ ಅರೇಬಿಯಾ ಭಾರತದಲ್ಲಿ ಅಪಾರ ಬಂಡವಾಳ ಹೂಡಲು ಬಯಸಿದೆ.

ಈ ಬಗ್ಗೆ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಬ್ ಕಾಂತ್ ಹೇಳುವ ಪ್ರಕಾರ, ಭಾರತದ ಭದ್ರತೆ, ಸರಕು ಸಾಗಣೆ ಸೇರಿ ಹಲವು ಕ್ಷೇತ್ರಗಳಲ್ಲಿ ಸುಮಾರು 300 ಬಿಲಿಯನ್ ಡಾಲರ್, ಅಂದರೆ 19 ಲಕ್ಷ ಕೋಟಿ ರೂಪಾಯಿಗಿಂತ ಅಧಿಕ ಹಣ ಭಾರತದಲ್ಲಿ ಹೂಡಲು ಸೌದಿ ನಿರ್ಧರಿಸಲು ಮುಂದಾಗಿದೆಯಲ್ಲದೇ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಎರಡು ಬಾರಿ ಸೌದಿ ಅರೇಬಿಯಾಗೆ ಭೇಟಿ ನೀಡಿದ್ದು, ಆ ರಾಷ್ಟ್ರದ ಜತೆಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಸೌದಿ ಅರೇಬಿಯಾ ಸಹ ಭಾರತದಲ್ಲಿ ಹೂಡುವ ಪ್ರಮುಖ ರಾಷ್ಟ್ರವಾಗುವ ಇರಾದೆ ವ್ಯಕ್ತಪಡಿಸಿದ್ದು, ಅದರ ಭಾಗವಾಗಿ ಬಂಡವಾಳ ಹೂಡಲು ಮುಂದಾಗಿದೆ ಎಂದು ಕಾಂತ್ ವಿವರಿಸಿದ್ದಾರೆ.

ಅಷ್ಟೇ ಅಲ್ಲದೇ, 30-45 ದಿನಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ “ನೂತನ ಸಾಮರ್ಥ್ಯ ನೀತಿ” ಪ್ರಕಟಿಸಲಿದ್ದು, ಭಾರತ ಗ್ಯಾಸ್ ಉತ್ಪಾದನೆಯ ಪ್ರಮುಖ ತಾಣವಾಗಿ ಮಾರ್ಪಡಿಸುವ ಯೋಜನೆ ಇದಾಗಿದೆ. ಈ ದಿಸೆಯಲ್ಲಿ ಸೌದಿ ಅರೇಬಿಯಾದ ಬಂಡವಾಳ ಹೂಡಿಕೆ ಆಶಾದಾಯಕವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈಗಾಗಲೇ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಬಡವರು, ರೈತರು, ಮಹಿಳೆಯರು ಮತ್ತು ಮಕ್ಕಳಿಗೆ ಸಾಮಾಜಿಕ ಭದ್ರತೆ ನೀಡುವ ಯೋಜನೆಗಳನ್ನು ಜಾರಿಗೊಳಿಸಿರುವ ಮೂಲಕ ವಿಶೇಷ ಸಾಧನೆಯನ್ನು ಮಾಡಿದ್ದು, ವಿಶ್ವದೆಲ್ಲೆಡೆ ಭಾರತ ದೇಶವನ್ನು ಉನ್ನತ ದರ್ಜೆಗೆ ಕೊಂಡೊಯ್ಯುವಲ್ಲಿ ಕಾರಣಕರ್ತರಾಗಿದ್ದಾರೆ. ಬಡ ರಾಷ್ಟ್ರವೆಂದು ಹೀಯಾಳಿಸಿ ಮೂಲೆಗೆ ತಳ್ಳುತ್ತಿದ್ದ ರಾಷ್ಟ್ರಗಳೆಲ್ಲ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ ಈಡೀ ವಿಶ್ವವೇ ಮೋದಿಯವರನ್ನು ಕೊಂಡಾಡುತ್ತಿದ್ದು, ಭಾರತದೊಂದಿಗೆ ಸ್ನೇಹ ಬೆಳೆಸಲು ನಾ ಮುಂದು ತಾ ಮುಂದು ಎಂದು ಸಾಲು ಸಾಲಾಗಿ ಬರುತ್ತಿರುವುದುನ್ನ ಕಂಡರೆ ನಿಜಕ್ಕೂ ಕೂಡ ಹೆಮ್ಮೆಯೆಂದೆನಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ವಿಶ್ವವನ್ನೇ ಮೋಡಿಗೊಳಿಸಿದ್ದಾರೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದ್ದು, ಮೋದಿ ಅವರು ದುಬೈಗೆ ತೆರಳಿದ ಬೆನ್ನಲ್ಲೇ ದುಬೈ ರಾಜಕುಮಾರ ಜೈ ಶ್ರೀ ರಾಮ್ ಎಂದು ಭಾಷಣ ಆರಂಭಿಸಿದ್ದು!! ಹೌದು, ಅಬುದಾಬಿ ರಾಜಕುಮಾರ ಮೊಹಮ್ಮದ್ ಬಿನ್ ಜಾಯೆಡ್ ಅಲ್ ನೆಹ್ಯಾನ್ ಅವರು ಜೈ ಶ್ರೀರಾಮ್ ಎನ್ನುವ ಮೂಲಕ ಭಾಷಣ ಆರಂಭಿಸಿದ್ದು, ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಿಷ್ಟೇ ಅಲ್ಲದೇ ತಮ್ಮ ಭಾಷಣದ ಮೂಲಕ ಇಡೀ ವಿಶ್ವವನ್ನೇ ತನ್ನೆಡೆಗೆ ಸೆಳೆಯುತ್ತಿರುವ ನರೇಂದ್ರ ಮೋದಿಯವರು ಯೂತ್ ಐಕಾನ್ ಆಗಿ ಹೊರಹೊಮ್ಮಿದ ಹೆಗ್ಗಳಿಕೆಯೂ ಇವರದ್ದಾಗಿದೆ.

ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಳ್ಳುತ್ತಿರುವ ವಿದೇಶ ಪ್ರವಾಸಗಳಿಂದ ಭಾರತದ ಘನತೆ, ಶಕ್ತಿ ಜಾಗತಿಕವಾಗಿ ಬೆಳೆಯುತ್ತಿರುವ ಜತೆಗೆ ಭಾರತಕ್ಕೆ ಅಪಾರ ಪ್ರಮಾಣದ ಬಂಡವಾಳ ಸಹ ಹರಿದುಬರುತ್ತಿರುವುದು ದೇಶದ ಅಭಿವೃದ್ಧಿಗೆ ಸಹಾಯಕವಾಗಲಿದೆ. ಹಾಗಾಗಿ ನರೇಂದ್ರ ಮೋದಿಯವರನ್ನು ಟೀಕೆಸುವ ಮುನ್ನ ದೇಶಕ್ಕಾಗಿ ನರೇಂದ್ರ ಮೋದಿಯವರ ಮಾಡಿರುವ ಸಾಧನೆಗಳೇನು ಎಂಬುವುದನ್ನು ತಿಳಿದುಕೊಳ್ಳುವುದು ಅತೀ ಮುಖ್ಯ!!

– ಅಲೋಖಾ

 

Editor Postcard Kannada:
Related Post