X

ಮೇಡಮ್ ಜಿ ಬಲಗೈ ಬಂಟ, ಕೈ ಕಮಾಂಡಿನ ಮಾಸ್ಟರ್ ಮೈಂಡ್ ಮೇಲೆ ED ಗಧಾ ಪ್ರಹಾರ!! 5000 ಕೋಟಿ ರುಪಾಯಿಗಳ ಬೇನಾಮಿ ಆಸ್ತಿ ಜಪ್ತಿ!! ಕಾಂಗ್ರೆಸಿನ ಹಗರಣಗಳ ಮೂಟೆಗೆ ಇನ್ನೊಂದು ಕಟ್ಟು ಸೇರ್ಪಡೆ!

ಅಧಿಕಾರ ಕಳೆದುಕೊಂಡು ನಾಲ್ಕು ವರ್ಷಗಳೆ ಕಳೆದು ಹೋದವು, ಆದರೆ ಕಾಂಗ್ರೆಸಿನ ಮೂಟೆಯಿಂದ ಹಗರಣಗಳು ಹೊರಬರುವುದು ನಿಲ್ಲುತ್ತಲೆ ಇಲ್ಲ!! ಹತ್ತು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ನಡೆಸಿರುವ ಹಗರಣಗಳ ಪರಿ ನೋಡಿದರೆ ಬ್ರಿಟಿಷರು ಕೂಡಾ ದಂಗಾಗಿರುವರು. ನಾವು ಇನ್ನೂರು ವರ್ಷಗಳಲ್ಲಿ ಕೊಳ್ಳೆ ಹೊಡೆಯಲಾಗದ್ದನ್ನು ಮೇಡಮ್ ಜಿ ಮತ್ತಾಕೆಯ ಬಂಟರು ಕೇವಲ ಹತ್ತು ವರ್ಷಗಳಲ್ಲೆ ಕೊಳ್ಳೆ ಹೊಡೆದರಲ್ಲಾ ಎಂದು ತಲೆ ತಿರುಗಿ ಬೀಳುವರು!! ನಲ್ವತ್ತೆಂಟು ವರ್ಷಗಳಿಂದ ಭಾರತವನ್ನು ಕೊಳ್ಳೆಹೊಡೆದ ಮೇಲೂ ಹೊಟ್ಟೆ ತುಂಬಿಲ್ಲ “ಸ್ಕಾಮ್ ಗ್ರೆಸ್”ನ ಮೇಡಮ್ ಜಿ ಮತ್ತಾಕೆಯ ಗುಲಾಮರಿಗೆ.

ಮೇಡಮ್ ಜಿ ಕರೆದರೆ ಮಧ್ಯ ರಾತ್ರಿಯಲ್ಲಿ ಓಡುವ ಬಲಗೈ ಬಂಟ, ಉಗ್ರರ ನೆಂಟ ಅಹಮದ್ ಪಟೇಲ್. ಕಾಂಗ್ರೆಸಿನಲ್ಲಿ ನಂ-2 ಎಂದೆ ಕರೆಸಿಕೊಳ್ಳಲಾಗುವ ಅಹ್ಮದ್ ಪಟೇಲ್ ಮೇಡಮ್ ಜಿ ಯ ಮಾಸ್ಟರ್ ಮೈಂಡ್ ಎಂದೆ ಹೆಸರುವಾಸಿ. ಈತನ ಅಣತಿ ಇಲ್ಲದೆ ಮೇಡಮ್ ಜಿ ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಒಂದು ರೀತಿಯಲ್ಲಿ “ಕೈ ಕಮಾಂಡಿನ ಹೈ ಕಮಾಂಡ್” ಅಹ್ಮದ್ ಪಟೇಲ್. ದೇಶದಲ್ಲಿ ಉಗ್ರರನ್ನು ಪೋಷಿಸುವ ದೇಶದ್ರೋಹಿ ಮೇಲೆ ಮೋದಿ ಸರಕಾರ ಸರಿಯಾದ ಗಧಾ ಪ್ರಹಾರವನ್ನೇ ಮಾಡಿದೆ. ಮೋದಿಯವರ ಬೇನಾಮಿ ಆಸ್ತಿ ಕಾನೂನಿನನ್ವಯ ಕಾಂಗ್ರೆಸಿನ ಈ ಭಾರೀ ಕುಳ ಬಲೆಗೆ ಬಿದ್ದಿದೆ.

ಮೋಡಮ್ ಜಿ ಬಲಗೈ ಬಂಟನ ಮೇಲೆಯೆ ಪ್ರಹಾರವಾಗಿರುವುದರಿಂದ ಕಾಂಗ್ರೆಸಿನ ಜಂಘಾಬಲವೇ ಉಡುಗಲಿದೆ ಎನ್ನುವ ವಿಷಯ ರಾಜಕೀಯ ಪಾಳಯದಲ್ಲಿ ಕೋಲಾಹಲ ಎಬ್ಬಿಸಿದೆ. ನೀರವ್ ಮೋದಿ ಹಗರಣದ ನಂತರ ED ಇದುವರೆಗು ನಡೆಸಿರುವ ದಾಳಿಯಲ್ಲಿ ಎರಡನೆ ಅತಿ ದೊಡ್ಡ ದಾಳಿ ಇದೆ ಎಂದು ಹೇಳಲಾಗುತ್ತಿದೆ. ವಡೋದರಾ ಮೂಲದ ಸ್ಟರ್ಲಿಂಗ್ ಬಯೋಟೆಕ್ ಗ್ರೂಪ್ ಬ್ಯಾಂಕ್ ಠೇವಣಿ ವಂಚನೆಯ ಪ್ರಕರಣದಲ್ಲಿ ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ (ಇಡಿ) ₹ 5000 ಕೋಟಿಗಿಂತ ಹೆಚ್ಚು ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಲಗತ್ತಿಸಿದೆ. ಸ್ಟೆರ್ಲಿಂಗ್ ಬಯೋಟೆಕ್ ಲಿಮಿಟೆಡ್ ಪ್ರವರ್ತಕರಾದ ನಿತಿನ್, ಚೇತನ್ ಸಂದೇಶಾರಾ ಮತ್ತು ಇತರರ ಮೇಲೆ ಮನಿ ಲಾಂಡರಿಂಗ್ ಆರೋಪದಡಿ 2017 ರ ಅಕ್ಟೋಬರಿನಲ್ಲಿ ಎಫ್ ಐ ಆರ್ ದಾಖಲಿಸಲಾಗಿತ್ತು. ತನಿಖೆಯ ಭಾಗವಾಗಿ ಇಡಿ ದಾಳಿ ನಡೆಸಿ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.

ಮುಟ್ಟುಗೋಲು ಹಾಕಲಾದ ಆಸ್ತಿ ವಿವರ:

  • ಸುಮಾರು 4,000 ಎಕರೆಗಳಷ್ಟು ಸ್ಥಿರಾಸ್ತಿ
  • ಉದ್ಯಮಕ್ಕೆ ಸಂಬಂಧ ಪಟ್ಟ ಯಂತ್ರೋಪಕರಣಗಳು
  • ಪ್ರವರ್ತಕರ ಮತ್ತು ವಿವಿಧ ಕಂಪನಿಗಳ ಸುಮಾರು 200 ಬ್ಯಾಂಕ್ ಖಾತೆಗಳು
  • ₹ 6.67 ಕೋಟಿ ಮೌಲ್ಯದ ಷೇರುಗಳು
  • ವಿವಿಧ ಉನ್ನತ ಮಟ್ಟದ ಐಷಾರಾಮಿ ಕಾರುಗಳು.

ಈ ಹಗರಣದಲ್ಲಿ ಅಹಮದ್ ಪಟೇಲ್ ಮತ್ತು ಆತನ ಮಕ್ಕಳ ಹೆಸರು ಮೇಲಿಂದ ಮೇಲೆ ಕೇಳಿಬರುತ್ತಿದೆ ಎಂದು ವರದಿಗಳು ತಿಳಿಸುತ್ತಿವೆ. ಸಂದೇಶಾರಾ ಸಹೋದರರು 300 ಬೋಗಸ್ ಕಂಪನಿಗಳ ನಕಲಿ ದಾಖಲೆ ಪತ್ರಗಳನ್ನು ತೋರಿಸಿ ಆಂಧ್ರ ಬ್ಯಾಂಕ್ ಮತ್ತು ಯುಕೋ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾಗಳಿಂದ ₹5,383 ಕೋಟಿ ರುಪಾಯಿಗಳ ಸಾಲವನ್ನು ತೆಗೆದುಕೊಂಡಿದ್ದರು ಮತ್ತು ಈ ಸಾಲಗಳನ್ನು ಮರು ಪಾವತಿ ಮಾಡದ್ದರಿಂದ ಅದು NPA ಆಗಿ ಬದಲಾಗಿತ್ತು. ಮೋದಿಯವರ ಬೇನಾಮಿ ಆಸ್ತಿ ಕಾನೂನಿನ್ವಯ ಈ ಹಗರಣ ಬೆಳಕಿಗೆ ಬಂದಿದೆ. ಮೋದಿ ವಿದೇಶದಿಂದ ಕಪ್ಪು ಹಣ ತಂದರೇ? ಎಂದು ಭಿಕ್ಷೆ ಬೇಡುವವರಿಗೆ ಮೋದಿ ದೇಶದಲ್ಲಿ ಎಷ್ಟು ಕಪ್ಪು ಕುಳಗಳ ಕತ್ತು ಹಿಸುಕಿದರು ಎನ್ನುವುದು ಕಾಣುವುದೇ ಇಲ್ಲ!!

ಸ್ಟರ್ಲಿಂಗ್ ಬಯೋಟೆಕ್, ಸ್ಟರ್ಲಿಂಗ್ ಪೋರ್ಟ್ ಲಿಮಿಟೆಡ್, ಪಿಎಂಟಿ ಮೆಷಿನ್ಸ್ ಲಿಮಿಟೆಡ್, ಸ್ಟರ್ಲಿಂಗ್ ಸೆಝ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮತ್ತು ಸ್ಟರ್ಲಿಂಗ್ ಆಯಿಲ್ ರಿಸೋರ್ಸಸ್ ಲಿಮಿಟೆಡ್ ಸೇರಿದಂತೆ ಸ್ಟರ್ಲಿಂಗ್ ಗ್ರೂಪಿನ ವಿವಿಧ ಬಾಕಿ ಸಾಲಗಳನ್ನು ಬ್ಯಾಂಕ್ ಗಳು ​​ವಂಚನೆ ಪ್ರಕರಣ ಎಂದು ಘೋಷಿಸಿವೆ. ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ದಾಖಲಾಗಿದೆ ಮತ್ತು ಜಾಮೀನು ರಹಿತ ವಾರಂಟ್ ಜಾರಿಯಾಗಿದೆ. ದೆಹಲಿಯ ಮೂಲದ ಉದ್ಯಮಿ, ಗಗನ್ ಧವನ್, ಆಂಧ್ರ ಬ್ಯಾಂಕ್ (ಚಾರ್ಟರ್ಡ್ ಅಕೌಂಟೆಂಟ್) ನ ಮಾಜಿ ನಿರ್ದೇಶಕ ಅನುಪ್ ಗರ್ಗ್ ಮತ್ತು ಸ್ಟರ್ಲಿಂಗ್ ಬಯೋಟೆಕ್ನ ನಿರ್ದೇಶಕ ರಾಜ್ ಭೂಷಣ್ ದೀಕ್ಷಿತ್ ಸೇರಿದಂತೆ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಮುಖ್ಯ ಆರೋಪಿಗಳು ಈಗಾಗಲೆ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತವಾಗಿದೆ.

ಮೋದಿ ಸರಕಾರದ ದಿಟ್ಟ ನಿರ್ಧಾರಗಳಿಂದ ಬ್ಯಾಂಕ್ ಗಳಿಗಾಗುತ್ತಿದ್ದ ನಷ್ಟಗಳನ್ನು ಸರಿದೂಗಿಸಲಾಗುತ್ತಿದೆ. ದೇಶದ ತೆರಿಗೆದಾತರ ಬಿಲಿಯಗಟ್ಟಲೆ ರುಪಾಯಿಗಳು ಕಳ್ಳರ ಪಾಲಾಗುವುದು ನಿಂತಿದೆ. ದೇಶದ ಕಪ್ಪುಕುಳಗಳು ವಿಲವಿಲ ಒದ್ದಾಡುತ್ತಿವೆ. ಈಗ ಬಲೆಗೆ ಬಿದ್ದಿರುವುದು ಭಾರಿ ದೊಡ್ಡ ಮೀನು. ಇನ್ನೇನಿದ್ದರೂ ಮೇಡಮ್ ಜಿ ಎಂಬ ತಿಮಿಂಗಿಲವೊಂದು ಬಲೆಗೆ ಬೀಳುವುದು ಬಾಕಿ. ಮೇಡಮ್ ಜಿ ತಾನೂ ತಿನ್ನುತ್ತಿದ್ದರು, ಇತರರರಿಗೂ ತಿನ್ನಲು ಬಿಡುತ್ತಿದ್ದರು. ಆದರೆ ಮೋದಿ ಜಿ ತಾವೂ ತಿನ್ನುವುದಿಲ್ಲ ಮತ್ತು ಇತರರಿಗೂ ತಿನ್ನಲು ಬಿಡುವುದಿಲ್ಲ, ಅದರ ಮೇಲೆ ಹದಿನೆಂಟು ಘಂಟೆ ಕೆಲಸ ಮಾಡಿಸಿ, ಈ ಹಿಂದೆ ತಿಂದು ಮುಕ್ಕಿದ್ದನ್ನೂ ಕರಗಿಸುತ್ತಿದ್ದಾರೆ!! ಒಮ್ಮೆ ಮೋದಿ ಹೋದರೆ ಸಾಕು, ಮತ್ತೆ ತಿಂದು ತೇಗುತ್ತೇವೆ ಎಂದು ಕಳ್ಳರು ಕಾಯುತ್ತಿದ್ದಾರೆ. ಹಾಗಾಗಲು ಬಿಡಬಾರದು, ಮೋದಿ ಇನ್ನು ಹತ್ತು ಹಲವು ವರ್ಷ ನಮ್ಮ ಪ್ರಧಾನಿಯಾಗಿ ಮುಂದುವರಿಯಬೇಕು. ಭಾರತ ವಿಶ್ವಗುರುವಾಗಬೇಕು.

-ಶಾರ್ವರಿ

Editor Postcard Kannada:
Related Post