X

ಮೈ ಗಾಡ್! ಸಿಎಂ ಸಂಪುಟದ ಸಚಿವರ ವಿದ್ಯಾರ್ಹತೆ ಕೇಳಿದರೆ ಬೆಚ್ಚಿ ಬೀಳುತ್ತೀರಿ..! ಯಾರೆಲ್ಲ ಎಷ್ಟು ಕಲಿತಿದ್ದಾರೆ ಗೊತ್ತಾ..?

“ನಾನು ಈ ಕಾಲೇಜಿನಲ್ಲಿ ಲಾಸ್ಟ್ ಬೆಂಚ್ ಸ್ಟೂಡೆಂಟ್. ಕಲಿಯುವುದರಲ್ಲಿ ತುಂಬಾನೇ ಹಿಂದೆ ಇದ್ದೆ. ಆದರೆ ಇದೀಗ ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿದ್ದೇನೆ” ಇದು ನಮ್ಮ ನೂತನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕಲಿತ ನಾಷನಲ್ ಕಾಲೇಜಿನಲ್ಲಿ ನುಡಿದ ಮಾತುಗಳು. ಆವಾಗ್ಲೆ ಅಂದುಕೊಂಡಿದ್ದೇವೆ… ಪುಣ್ಯಾತ್ಮ ಇವರೇ ಹೀಗೆ ಇನ್ನು ಇವರ ಮಂತ್ರಿ ಮಂಡಲ ಇನ್ನಾವ ರೀತಿಯಲ್ಲಿರಬಹುದೆಂದು‌. ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಂತ್ರಿ ಮಂಡಲ ಬಹಿರಂಗಗೊಂಡಿದೆ. ಈ ಮಂಡಲದ ಮಂತ್ರಿಗಳ ವಿದ್ಯಾರ್ಹತೆ ನೋಡಿದರೆ ದಂಗಾಗುವುದು ಗ್ಯಾರಂಟಿ.

ಸಿಎಂ ಕುಮಾರಸ್ವಾಮಿ ಅವರ ಸಂಪುಟದ ಸಚಿವರುಗಳ ವಿದ್ಯಾರ್ಹತೆ ಈ ರೀತಿ ಇದೆ…

ಹೆಚ್.ಡಿ. ರೇವಣ್ಣ-೧೦ನೇ ತರಗತಿ
ಜಿಟಿ ದೇವೇಗೌಡ-೮ನೇ ತರಗತಿ
ಜಯಮಾಲ-ಹೈಸ್ಕೂಲ್
ರಾಜಶೇಖರ ಪಾಟೀಲ್-ಪಿಯುಸಿ
ಸಿಎಸ್ ಪುಟ್ಟರಾಜು-ಪಿಯುಸಿ
ಕೆಜೆ ಜಾರ್ಜ್-ಪಿಯುಸಿ
ವೆಂಕಟರಮಣಪ್ಪ-೧೦ನೇ ತರಗತಿ
ಆರ್ ಶಂಕರ್ -೧೦ನೇ ತರಗತಿ
ಎಂ‌.ಸಿ.ಮನುಗೋಳಿ-೧೦ನೇ ತರಗತಿ
ಜಮೀರ್ ಅಹ್ಮದ್-೯ನೇ ತರಗತಿ
ಪ್ರಿಯಾಂಕ್ ಖರ್ಗೆ-ಪಿಯುಸಿ

ಇದು ನಮ್ಮ ಮಂತ್ರಿ ಮಂಡಲದ ಮಂತ್ರಿ ದಿಗ್ಗಜರ ವಿದ್ಯಾರ್ಹತೆಯ ಒಂದು ನೋಟ. ಕನಿಷ್ಠ ಐಟಿಐ ಕಲಿಯದ ಲೋಕ ಸಭಾ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಪ್ರಿಯಾಂಕ್ ಖರ್ಗೆಯವರಿಗೆ ಐಟಿ ಬಿಟಿ ಸಚಿವಾಲಯ. ಕೇವಲ ೧೦ನೇ ತರಗತಿ ಕಲಿತ ರೇವಣ್ಣನಿಗೆ ೨ ಸ್ಥಾನಗಳು ಬೇಕಂತೆ. ರಾಜ್ಯದ ಮಾಜಿ ಗೃಹ ಸಚಿವ ಸಹಿತ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದ ಕೆಜೆ ಜಾರ್ಜ್ ಕಲಿತಿದ್ದು ಕೇವಲ ಪಿಯುಸಿ. ಸದಾ ವಿವಾದಾತ್ಮಕ ನುಡಿಗಳಿಂದ ಫೇಮಸ್ ಆಗಿರುವ ಹೊಲಸು ಬಾಯಿಯ ಆಂಗ್ಲ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಜಮೀರ್ ಅಹ್ಮದ್ ಕಲಿತಿದ್ದು ಕೇವಲ ೯ನೇ ತರಗತಿ.

ಇದಿಷ್ಟೇ ಅಲ್ಲದೆ ಇನ್ನೂ ಹಲವಾರು ಮಂತ್ರಿಗಳು ಪದವಿ ಪಡೆಯದವರಿದ್ದಾರೆ‌. ಪದವೀಧರ ಚುನಾವಣೆಯನ್ನು ಓಟ್ ಮಾಡುವ ಯೋಗ್ಯತೆ ಇಲ್ಲದ ಈ ಮಂತ್ರಿಗಳು ಮುಖ್ಯಮಂತ್ರಿಗಳ ಸಂಪುಟದಲ್ಲಿ ಇದ್ದಾರೆ ಎಂದರೆ ಇನ್ನು ಈ ರಾಜ್ಯ ಶಿಕ್ಷಿತರ ಹಾಗೂ ಬುದ್ಧಿವಂತರ ರಾಜ್ಯ ಅಂತ ಕರೆಸಿಕೊಳ್ಳುವುದು ಹೇಗೆ?
ಕೇವಲ ಮಾತನ್ನೇ ಬಂಡವಾಳವನ್ನಾಗಿರಿಸಿಕೊಂಡು ರಾಜಕೀಯ ಮಾಡಿ,ಮಂತ್ರಿ ಸ್ಥಾನಕ್ಕಾಗಿ ಲಾಬಿ ಮಾಡಿ ಸ್ಥಾನ ಗಿಟ್ಟಿಸಿಕೊಳ್ಳುವ ಈ ನಾಯಕರಿಂದ ಏನು ನಿರೀಕ್ಷಿಸಲು ಸಾಧ್ಯ? ಒಂದಲ್ಲಾ ಎರಡಲ್ಲಾ, ಬರೋಬ್ಬರಿ ೧೧ ಮಂದಿ ಮಂತ್ರಿಗಳು ಪಿಯುಸಿ ಪಾಸಾಗಿಲ್ಲ ಎಂದರೆ ಅತೀದೊಡ್ಡ ವಿಪರ್ಯಾಸವೇ ಸರಿ.

-ಸುನಿಲ್ ಪಣಪಿಲ

Editor Postcard Kannada:
Related Post