X

ಮೇಕ್ ಇನ್ ಇಂಡಿಯಾಗೆ ಜನಪ್ರಿಯ ಜಾಗತಿಕ ಸಂಸ್ಥೆಗಳಿಂದ ಶ್ಲಾಘನೆ!! ಮತ್ತೆ ಮೋಡಿ ಮಾಡಿದ ಮೋದಿ!!

ವಿದೇಶಿ ನೇರ ಬಂಡವಾಳ ಹೂಡಿಕೆ ಸ್ನೇಹಿ ವಾತಾವಾರಣವನ್ನು ನಿರ್ಮಿಸಿದರೆ, ಸಹಜವಾಗಿ ಬಂಡವಾಳ ಹರಿದು ಬರುತ್ತದೆಯಲ್ಲದೇ ಇದರಿಂದ ನಿರುದ್ಯೋಗದ ಸಮಸ್ಯೆಯ ನಿವಾರಣೆಯೂ ಸಾಧ್ಯವಾಗುತ್ತದೆ ಎನ್ನುವ ದೃಷ್ಟಿಯಿಂದ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಅನುಷ್ಠಾನಗೊಳಿಸಿರುವ ನರೇಂದ್ರ ಮೋದಿಜೀ ಸರಕಾರವು ನಿರೀಕ್ಷೆಗಿಂತಲೂ ಯಶಸ್ಸನ್ನು ಸಾಧಿಸುವುದು ಅಕ್ಷರಶಃ ನಿಜ. ದೇಶವನ್ನು ಜಗತ್ತಿನ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸಿ, ಆ ಮೂಲಕ ಅಭಿವೃದ್ಧಿ ದರ(ಜಿಡಿಪಿ)ವನ್ನು ಹೆಚ್ಚಿಸುವ ನರೇಂದ್ರ ಮೋದಿ ಸರ್ಕಾರದ ಮಹತ್ತರವಾದ ಕನಸಿಗೆ ಇದೀಗ ಮತ್ತೊಂದು ಬಲ ಬಂದಂತಾಗಿದೆ.

ಆರ್ಥಿಕತೆಯನ್ನು ಜಾಗತಿಕ ಮಟ್ಟದಲ್ಲಿ ಉನ್ನತೀಕರಿಸುವುದು ಹಾಗೂ ಭಾರತೀಯರಿಗೆ ಮಿಲಿಯನ್ ಗಟ್ಟಲೇ ಉದ್ಯೋಗವಕಾಶ ಕಲ್ಪಿಸುವ ಸಲುವಾಗಿ ಭಾರತವನ್ನು ಜಾಗತಿಕ ಉತ್ಪದನಾ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರ “ಮೇಕ್ ಇನ್ ಇಂಡಿಯಾ” ಯೋಜನೆಯನ್ನು ಜಾರಿಗೊಳಿಸಿ ವಿದೇಶಿ ವಸ್ತುಗಳಿಗೆ ಭಾರತದಲ್ಲಿ ನೆಲೆ ಕಾಣದಂತೆ ಮಾಡಿದ್ದು ಗೊತ್ತೇ ಇದೆ!! ಹಾಗಾಗಿ ಇದೀಗ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ವಿಫಲಗೊಂಡಿದೆ ಎಂದು ಹೇಳುವವರಿಗೆ ಶಾಕಿಂಗ್ ಸುದ್ದಿಯೊಂದು ಕಾದಿದೆ!!

ಮೇಕ್ ಇನ್ ಇಂಡಿಯಾಗೆ ಜನಪ್ರಿಯ ಜಾಗತಿಕ ಸಂಸ್ಥೆಗಳಿಂದ ಶ್ಲಾಘನೆ!!

ಎಫ್ -16 ಜೆಟ್ ಯುದ್ಧ ವಿಮಾನಗಳನ್ನು ಸ್ವದೇಶಿಯವಾಗಿ ಸಿದ್ಧಪಡಿಸುವ ಮೂಲಕ ಭಾರತದ ವಿಶ್ವದ ನಾನಾ ದೇಶಗಳಿಗೆ ಯುದ್ಧ ವಿಮಾನಗಳನ್ನು ರಫ್ತು ಮಾಡುವ ಮಳಿಗೆಯಾಗಿ ಪರಿವರ್ತನೆಯಾಗಲಿದೆ ಎಂದು ಜನಪ್ರಿಯ ಜಾಗತಿಕ ಎರೋಸ್ಪೇಸ್ ಸಂಸ್ಥೆ ಲೋಕ್ ಹೀಡ್ ಸಂಸ್ಥೆ ಶ್ಲಾಘನೆ ವ್ಯಕ್ತಪಡಿಸಿದೆ. ಭಾರತ ಈ ಮೂಲಕ ಲಾಭದಾಯಕ ಮಾರುಕಟ್ಟೆಯಾಗಿ ಪರಿವರ್ತನೆಯಾಗಲಿದ್ದು, ವಿಶ್ವಕ್ಕೆ ಜೆಟ್ ಏರ್ ವೇಸ್ ವಿಮಾನಗಳನ್ನು ಪೂರೈಸುವ ಕೇಂದ್ರ ಸ್ಥಾನವಾಗಲಿದೆ. ಇದಕ್ಕೆ ಮೆಕ್ ಇನ್ ಇಂಡಿಯಾ ಕಲ್ಪನೆ ಪೂರಕವಾಗಲಿದೆ ಎಂದು ಲೋಕ್ ಹೀಡ್ ಸಂಸ್ಥೆ ತಿಳಿಸಿದೆ. ಭಾರತದ ನೂತನ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದುವ ಮೂಲಕ ವಿಶ್ವಾಸಾರ್ಹ ಸಾಧನೆಗಳನ್ನು ಉತ್ಪಾದಿಸುವ ಸಾಮಥ್ರ್ಯ ಬೆಳೆಸಿಕೊಂಡಿದೆ. ಭಾರತಕ್ಕೆ ಎಫ್ -16 ಯುದ್ಧ ವಿಮಾನಗಳನ್ನು ಸಿದ್ಧಪಡಿಸುವ ಸಾಮಥ್ರ್ಯ ಹೊಂದಿದೆ. ಆದ್ದರಿಂದ ಇತರ ರಾಷ್ಟ್ರಗಳು ಭಾರತದಿಂದ ಎಫ್ -16 ಯುದ್ಧ ವಿಮಾನ ಖರೀದಿಗೆ ಮುಂದಾಗುತ್ತಿವೆ ಎಂದು ಲೋಕ್ ಹೀಡ್ ಸಂಸ್ಥೆ ಉಪಾಧ್ಯಕ್ಷ ವಿವೇಕ್ ಲಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಶ್ವದಾದ್ಯಂತ ಎಫ್-16 ಯುದ್ಧ ವಿಮಾನಗಳಿಗೆ ಭಾರಿ ಬೇಡಿಕೆಯಿದ್ದು, ಭಾರತ ಎಲ್ಲ ರಾಷ್ಟ್ರಗಳ ಬೇಡಿಕೆಯನ್ನು ಪೂರೈಸುವ ತಾಕತ್ತು ಹೊಂದಿದೆ. ಅಲ್ಲದೇ ಅತ್ಯಾಧುನಿಕ ಫೈಟರ್ ರಾಡಾರ್ ತಂತ್ರಜ್ಞಾನ, ಎಫ್ -22, ಎಫ್ 35 ಎಇಎಸ್ ಎ ಸರಣಿಯ ಮಟ್ಟದ ಉನ್ನತ ತಂತ್ರಜ್ಞಾನವನ್ನು ಹೊಂದಿದೆ. ಭಾರತದಲ್ಲಿ ಉತ್ಪಾದಿಸಲಾಗುತ್ತಿರುವ ಯುದ್ಧ ವಿಮಾನಗಳು ವಿಶೇಷ ಸಾಮಥ್ರ್ಯವನ್ನು ಹೊಂದಿವೆ ಎಂದು ಲಾಲ್ ತಿಳಿಸಿದ್ದಾರೆ. ಇದು ಭವಿಷ್ಯದಲ್ಲಿ ಭಾರತಕ್ಕೆ ಭಾರಿ ಆದಾಯ ತಂದು ಕೊಡುವ ಉದ್ಯಮವಾಗಲಿದೆ!!

ಹೀಗೆ ಪ್ರಧಾನಿ ನರೇಂದ್ರ ಮೋದೀಜೀಯವರ ಸರಕಾರಕ್ಕೆ ಕೇವಲ ನಾಲ್ಕು ವರ್ಷ ಕಳೆದರೂ ಮಾಡಿರುವ ಸಾಧನೆಗಳು ಮಾತ್ರ ಅಪಾರ!! ಮೋದೀಜೀ ಅಧಿಕಾರ ಸ್ವೀಕರಿಸಿದಾಗಿನಿಂದ ಮಾಡಿದ ಅಭಿವೃದ್ಧಿ ಕಾರ್ಯ ಒಂದಾ ಎರಡಾ? ಕೆಲ ಜನರು ಇವರ ಅಧಿಕಾರದ ವರ್ಚಸ್ಸನ್ನು ನೋಡಿ ಸುಖಾಸುಮ್ಮನೆ ಬಾಯಿಗೆ ಬಂದ ರೀತಿಯಲ್ಲಿ ಜರಿದ್ದದ್ದೇ ಜರಿದದ್ದು!! ಈ ಮೋದಿಜೀ ಮುಂದೆ ವಿರೋಧ ಪಕ್ಷದ ಯಾವನೂ ನಿಲ್ಲಲೂ ಸಾಧ್ಯವಿಲ್ಲ ಎಂಬುವುದನ್ನು ಈಗಾಗಲೇ ಮೋದೀಜೀ ತನ್ನ ಕೆಲಸದ ಮೂಲಕ ತೋರಿಸಿಕೊಟ್ಟಿದ್ದಾರೆ!! ಜೈ ಮೋದೀಜಿ!!

source:

economictimes.indiatimes.com

tulunad news

  • ಪವಿತ್ರ
Editor Postcard Kannada:
Related Post