X

ಫೈನಲ್ ಆಯ್ತು ಡಿಸಿಎಂ ಸ್ಥಾನ..! ಲಿಂಗಾಯತರಿಗೆ ಮಹಾ ಮೋಸ ಮಾಡಿದ ಕಾಂಗ್ರೆಸ್..!

ಅಂತೂ ಕಾಂಗ್ರೆಸ್ ಪಕ್ಷ ಲಿಂಗಾಯತರನ್ನು ಯಾವ ರೀತಿ ಬಳಿಸಿಕೊಂಡಿದೆ ಎಂಬುವುದನ್ನು ಸಮಾಜದ ಮುಂದೆ ಬಿತ್ತರಿಸಿಯೇ ಬಿಟ್ಟಿದೆ. ಪಕ್ಷದ ಲಾಭಕ್ಕಾಗಿ ಲಿಂಗಾಯತರನ್ನು ಒಡದು ಆಳುವ ನೀತಿಗೆ ಮುಂದಾಗಿದ್ದ ಹಿಂದಿನ ಕಾಂಗ್ರೆಸ್ ಸರ್ಕಾರ ಇದೀಗ ಅದೇ ಲಿಂಗಾಯತರಿಗೆ ಭಾರೀ ಮೋಸ ಮಾಡಿದೆ. ಕಳೆದೆರಡು ದಿನಗಳಿಂದ ಭಾರೀ ಪೈಪೋಟಿಯೇ ಏರ್ಪಟ್ಟಿದ್ದ ಉಪಮುಖ್ಯಮಂತ್ರಿ ಹುದ್ದೆಗೆ ಲಿಂಗಾಯತರೇತರರನ್ನು ಕಾಂಗ್ರೆಸ್ ಪಕ್ಷ ಆಯ್ಕೆ ಮಾಡಿದೆ.

ಪರಂಗೆ ಪಕ್ಕಾ ಆಯ್ತು ಡಿಸಿಎಂ ಹುದ್ದೆ..!

ಭಾರೀ ಕುತೂಹಲ ಕೆರಳಿಸಿದ್ದ ಉಪಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಕಾಂಗ್ರೆಸ್‍ನ ನಡೆ ಇಂದು ಹೊರ ಬಿದ್ದಿದೆ. ಕೆಪಿಸಿಸಿ ಅಧ್ಯಕ್ಷ  ಹಾಗೂ ಮಾಜಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‍ಗೆ ಉಪಮುಖ್ಯಮಂತ್ರಿ ಹುದ್ದೆಯನ್ನು ಕಾಂಗ್ರೆಸ್ ಪಕ್ಕಾ ಮಾಡಿದೆ. ಈ ಹಿಂದೆ ದಲಿತ ಕಾರ್ಡ್ ಉಪಯೋಗಿಸಿಕೊಂಡು ಅದೆಷ್ಟು ಲಾಬಿ ಮಾಡಿದರೂ ದಕ್ಕದ ಉಪಮುಖ್ಯಮಂತ್ರಿ ಸ್ಥಾನ ಇದೀಗ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ದಕ್ಕಿದೆ.

ಲಿಂಗಾಯತರಿಗೆ ದೋಖಾ..!

ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಭಾರೀ ಪೈಪೋಟಿಗಿಳಿದಿದ್ದ ವೀರಶೈವ ಲಿಂಗಾಯತ ನಾಯಕರಿಗೆ ಕಾಂಗ್ರೆಸ್ ಮೋಸ ಮಾಡಿದೆ. ಬರೋಬ್ಬರಿ 16 ಲಿಂಗಾಯತ ಶಾಸಕರನ್ನು ಒಳಗೊಂಡಿದ್ದ ಕಾಂಗ್ರೆಸ್ ಪಕ್ಷ ಡಿಸಿಎಂ ಹುದ್ದೆ ನೀಡುವುದಾಗಿ ಚಿಂತಿಸಿತ್ತು. ಈ ಬಗ್ಗೆ ಚರ್ಚೆಯೂ ಆಗಿತ್ತು. ಆದರೆ ಅದರ ಮಧ್ಯೆ ಲಿಂಗಾಯತ ಶಾಸಕರಲ್ಲೇ ಒಡಕು ಮೂಡಿತ್ತು.

ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶ್ಯಾಮನೂರ್ ಶಿವಶಂಕರಪ್ಪನವರು ಡಿಸಿಎಂ ಹುದ್ದೆಗೆ ಲಾಬಿ ಮಾಡಿದ್ದರು. ಮಾತ್ರವಲ್ಲದೆ ಉಳಿದ ಕೆಲ ಲಿಂಗಾಯತ ಶಾಸಕರೂ ಶ್ಯಾಮನೂರ್‍ಗೆ ಬೆಂಬಲ ನೀಡಿದ್ದರು. ಆದರೆ ಎಂಬಿ ಪಾಟೀಲ್ ತನಗೂ ಉಪಮುಖ್ಯಮಂತ್ರಿ ಹುದ್ದೆ ಬೇಕು ಎಂದು ಪಟ್ಟು ಹಿಡಿದಿದ್ದರು. ಇದರಿಂದ ಕೋಪಗೊಂಡ ಶ್ಯಾಮನೂರ್ ಎಂಬಿ ಪಾಟೀಲ್‍ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದ್ದೇ ಆದಲ್ಲಿ ನಾವು ಎಲ್ಲಾ ಲಿಂಗಾಯತ ಶಾಸಕರೂ ರಾಜೀನಾಮೆ ನೀಡುತ್ತೇವೆ ಎಂದು ಗಂಟಾಘೋಷವಾಗಿ ಹೇಳಿದ್ದರು. 

ಈ ಮಧ್ಯೆ ಹೆಚ್.ಕೆ.ಪಾಟೀಲ್‍ಗೂ ಸಚಿವ ಸ್ಥಾನ ನೀಡಿದ್ರೆ ನಾವು ರಾಜೀನಾಮೆ ನೀಡುತ್ತೇವೆ ಎಂದು ಮಾಜಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ. ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆ ಕೆಪಿಸಿಸಿ ಅಧ್ಯಕ್ಷ  ಜಿ.ಪರಮೇಶ್ವರ್ ಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದೆ.

ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದ ಸಂದರ್ಭದಲ್ಲಿ ಮುಂದಿನ ಚುನಾವಣೆಯಲ್ಲಿ ಲಿಂಗಾಯತ ಮತಗಳ ಓಲೈಕೆಗಾಗಿ ಧರ್ಮ ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ಆದರೆ ಇದೀಗ ಕಾಂಗ್ರೆಸ್‍ನ 16 ಲಿಂಗಾಯತ ಶಾಸಕರಿಗೆ ಕಾಂಗ್ರೆಸ್ ಮೋಸ ಮಾಡಿದೆ.

-ಸುನಿಲ್ ಪಣಪಿಲ

 

Editor Postcard Kannada:
Related Post