X

ಹಿಂದೂಗಳ ಜನಸಂಖ್ಯೆ ಹೆಚ್ಚಳ ಮಾಡಲು ಮುಸಲ್ಮಾನ ಹಿರಿಯರ ಸಲಹೆ ಏನು ಗೊತ್ತೇ?

ಮುಸಲ್ಮಾನರು ಅನುಸರಿಸುವ ಫಾರ್ಮುಲಾವನ್ನೇ ಹಿಂದೂಗಳೂ ಅನುಸರಿಸಿದಲ್ಲಿ ಅವರ ಜನಸಂಖ್ಯೆ ಹೆಚ್ಚುತ್ತದೆ. ಮುಸಲ್ಮಾನರ ಹಾಗೆ ಹಿಂದೂಗಳು ಕೂಡಾ ಸಣ್ಣ ವಯಸ್ಸಿನಲ್ಲಿಯೇ ಮದುವೆ ಆಗಬೇಕು. ಆಗ ಹಿಂದೂಗಳ ಜನಸಂಖ್ಯೆ ಸಹ ಹೆಚ್ಚುತ್ತದೆ. ಮುಸಲ್ಮಾನ‌ರಲ್ಲಿ ಪುರುಷರು 20 ರಿಂದ 22 ವರ್ಷದ ಒಳಗೆ ಮದುವೆ ಆಗುತ್ತಾರೆ. ಮಹಿಳೆಯರು 18 ವರ್ಷಕ್ಕೆ ಮದುವೆ ಆಗುತ್ತಾರೆ ಅಂತ ಅಸ್ಸಾಂ‌ನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ.

ಹಿಂದೂ‌ಗಳ ಜನಸಂಖ್ಯೆ ಹೆಚ್ಚಾದಲ್ಲಿ ಮಾತ್ರ ಈ ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತ‌ರಾಗಿ ಉಳಿಯೋದು ಸಾಧ್ಯ ಅನ್ನೋದಿಕ್ಕೆ ಇವರ ಸಲಹೆಯನ್ನು ಆಕ್ಸೆಪ್ಟ್ ಮಾಡೋಣ ಅಂತ ಇಟ್ಖೊಳ್ಳೋಣ. ಆದ್ರೆ ಇಷ್ಟು ಹೇಳಿ ಸುಮ್ಮನೆ ಕೂರದ ಈ ಪುಣ್ಯಾತ್ಮ ‘ಇರಲಾರದೆ ಇರುವೆ ಬಿಟ್ಕೊಂಡ’ ಅನ್ನೋ ಹಾಗೆ ವಿವಾದ ಸೃಷ್ಟಿಸೋ ಅಂತ ಹೇಳಿಕೆಗಳನ್ನು ಕೂಡಾ ನೀಡೋ ಮೂಲಕ ಸುಸಂಸ್ಕೃತ ಹಿಂದೂಗಳ ಕೆಂಗಣ್ಣಿಗೆ ಗುರಿ ಆಗಿದ್ದಾರೆ.

ಇವರು ಬೇರೇನು ಹೇಳಿದ್ದಾರೆ ಅಂತ ಕೇಳಿದ್ರಾ, ಅದಕ್ಕೆ ಉತ್ತರ ಇಲ್ಲಿದೆ. ತನ್ನ ಮಾತನ್ನು ಮುಂದುವರೆಸಿದ ಈ ಮುಸಲ್ಮಾನ ನಾಯಕ, ಹಿಂದೂಗಳು ಮದುವೆಗೆ ಮುಂಚೆ ಎರಡು ಮೂರು ಅಕ್ರಮ ಪತ್ನಿಯರನ್ನು ಹೊಂದಿರುತ್ತಾರೆ. ಅವರು ಮಕ್ಕಳಿಗೆ ಜನ್ಮ ನೀಡೋದಿಕ್ಕೆ ಅಲ್ಲ. ಅವರ ಜೊತೆಗೆ ಎಂಜಾಯ್ ಮಾಡಿ ಆಮೇಲೆ ಬೇರೆ ಮದುವೆ ಆಗ್ತಾರೆ. ಇದರಿಂದ ಹಿಂದೂಗಳ ಜನಸಂಖ್ಯೆ ಹೆಚ್ಚಾಗ್ತಾ ಇಲ್ಲ ಅಂತ ಹೇಳುವ ಮೂಲಕ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದಾರೆ.

ಅಲ್ಲೊಂದು ಇಲ್ಲೊಂದು ಎಂಬಂತೆ ಈ ವ್ಯಕ್ತಿ ಹೇಳಿದ ರೀತಿ ಬದುಕೋರು ಇರ್ಬಹುದು. ಇದು ಕೇವಲ ಹಿಂದೂ ಧರ್ಮದ‌ಲ್ಲಿ ಮಾತ್ರ ಅಲ್ಲ. ಮುಸಲ್ಮಾನ‌ರಲ್ಲಿಯೂ ನಡೆಯುತ್ತೆ. ಇದಕ್ಕೆ ತಾಜಾ ಸಾಕ್ಷಿ ಲವ್ ಜಿಹಾದ್‌ನಿಂದ ಪ್ರಿಯಕರ ಅಂದುಕೊಂಡವನಿಂದಲೇ ಹತ್ಯೆಯಾಗಿ, ಸೂಟ್ಕೇಸ್ ಒಳಗೆ ತಣ್ಣಗೆ ಮಲಗಿದ ಶ್ರದ್ಧಾ ವಾಕರ್, ಕೆಳ ದಿನಗಳ ಹಿಂದಷ್ಟೇ ಮಾಧ್ಯಮ‌ಗಳಲ್ಲಿ ಸುದ್ದಿಯಾದ ‘ಇಬ್ಬರು ಅನ್ಯಧರ್ಮದ (ಇಸ್ಲಾಂ) ಯುವಕರ ಜೊತೆಗೆ ಬಾಡಿಗೆ ಮನೆಯಲ್ಲಿ ಪತ್ತೆಯಾದ ಯುವತಿ’ ಇತ್ಯಾದಿ.. ಇತ್ಯಾದಿ..

ಮುಸಲ್ಮಾನ‌ರೆಲ್ಲರನ್ನು ಭಯೋತ್ಪಾದಕರು ಎಂದು ಹೇಳುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಾ, ಆದರೆ ಉಗ್ರಗಾಮಿಗಳೆಲ್ಲಾ ಮುಸಲ್ಮಾನ‌ರೇ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಾ, ಬದ್ರುದ್ದೀನ್ ಅವರೇ, ಎಷ್ಟು ಮಕ್ಕಳನ್ನು ಹುಟ್ಟಿಸುತ್ತೇವೆ ಎನ್ನುವುದು ಮುಖ್ಯವಲ್ಲ, ಅವರಿಗೆ ಎಂತಹ ಶಿಕ್ಷಣ ನೀಡುತ್ತೇವೆ, ಅವರನ್ನು ಸಮಾಜದ ಎಂತಹ ಪ್ರಜೆಗಳಾಗಿ ರೂಪಿಸುತ್ತೇವೆ ಎನ್ನುವುದು ಸಹ ಮುಖ್ಯ ಆಗುತ್ತೆ. ಜನಸಂಖ್ಯೆ ಹೆಚ್ಚಿಸೋದಿಕ್ಕೆ ಮಕ್ಕಳನ್ನು ಮಾಡೋ ನೀವುಗಳು, ಹೆಣ್ಣನ್ನು ಹೆರಿಗೆ ಮಷಿನ್ ಅಂತ ಅಂದುಕೊಂಡಿರಬಹುದು. ಆದರೆ ಹಿಂದೂ ಧರ್ಮದಲ್ಲಿ ಹೆಣ್ಮಕ್ಕಳಿಗೆ ದೇವತೆಯ ಸ್ಥಾನ ಇದೆ. ಅವರನ್ನು ಮಕ್ಕಳು ಹೆರುವ ಯಂತ್ರದ ಹಾಗೆ ನೋಡುವ ಬದಲು ಮನುಷ್ಯ ಎಂಬುದಾಗಿಯೇ ನೋಡಲಾಗುತ್ತೆ. ಇರೋದು ಎರಡೇ ಮಕ್ಕಳಾದ್ರೂ ಹಿಂದೂಗಳಲ್ಲಿ ಹೆಚ್ಚಿನವರು ಅವರನ್ನು ದೇಶದ ಸತ್ಪ್ರಜೆಗಳನ್ನಾಗಿ ಮಾಡೋ ನಿಟ್ಟಿನಲ್ಲಿ‌ಯೇ ಶಿಕ್ಷಣ ಕೊಡ್ತಾರೆ ಅನ್ನೋದನ್ನು ಸಾಲು ಸಾಲು ಮಕ್ಕಳು ಮಾಡುವ ನೀವೊಮ್ಮೆ ಗಮನಿಸಿದಲ್ಲಿ ಉತ್ತಮ.

ನಾಲಿಗೆ ಹೊರಳುತ್ತೆ ಅಂತ ಮಾತನಾಡೋದಲ್ಲ. ನಾವು ಮಾತನಾಡಿದ್ದರಲ್ಲಿ ಏನಾದರೂ ಹುರುಳಿದೆಯಾ ಅನ್ನೋದನ್ನ ಅರಿತು ಮಾತಾಡಿದಲ್ಲಿ ಉತ್ತಮ. ಇಲ್ಲವಾದರೆ ಇದೇ ರೀತಿ ವಿವಾದದ ಸುಳಿಗೆ ಸಿಲುಕ್ಬೇಕಾಗುತ್ತೆ. ಇನ್ನಾದರೂ ಮಾತನಾಡುವ ಮುನ್ನ ಆಲೋಚಿಸಿ.

ಹಾಗೆಯೇ ಹಿಂದೂ ಸಹೋದರ/ರಿಯರೇ, ನಮ್ಮ ಜನಸಂಖ್ಯೆ ಹೀಗೆಯೇ ಕಡಿಮೆ ಆಗ್ತಾ ಹೋದ್ರೆ ನಾವೇ ಅಲ್ಪಸಂಖ್ಯಾತ‌ರಾಗಿ ಬಿಡುವ ಸಾಧ್ಯತೆ ಇದೆ. ಹಾಗಾಗಿ ನಾವು ಬಹುಸಂಖ್ಯಾತ‌ರಾಗುವ ಬಗೆಗೂ ನಮ್ಮ ಆಲೋಚನೆಗಳಿರಲಿ. ಇಲ್ಲವಾದರೆ 2035 ಕ್ಕೆ ಬ್ರಿಟನ್‌ನಲ್ಲಿ ಮುಸಲ್ಮಾನ‌ರೇ ಬಹುಸಂಖ್ಯಾತ‌ರಾಗುವ ಹಾಗೆ ಭಾರತದಲ್ಲಿಯೂ ಆದೀತು. ಎಚ್ಚರ…

Post Card Balaga:
Related Post